ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು

ಈ ಜಾಲದಿಂದ ಸುಮಾರು 500ಕ್ಕೂ ಹೆಚ್ಚು ಮಂದಿ ನಕಲಿ ವೈದ್ಯ ಪದವಿ ಪಡೆದು ವೈದ್ಯರಾಗಿದ್ದಾರೆ.

ಬೆಂಗಳೂರು : ವೈದ್ಯರಾಗಲು ಲಕ್ಷ ಲಕ್ಷ ಹಣ ಸುರಿದು ಪ್ರತಿಷ್ಠಿತ ಕಾಲೇಜು ಸೇರಬೇಕಿಲ್ಲ. ವರ್ಷಗಟ್ಟಲೇ ಶ್ರಮಪಟ್ಟು ಓದಬೇಕಿಲ್ಲ. ಕೇವಲ ಒಂದೇ ದಿನದಲ್ಲಿ ವೈದ್ಯರಾಗುವ ದಾರಿಯೂ ಇದೆ. ಇದಕ್ಕೆ ನಿಮಗಿರಬೇಕಾದ ಅರ್ಹತೆ ಎಸ್ಸೆಸ್ಸೆಲ್ಸಿಯೋ ಅಥವಾ ಪಿಯುಸಿಯಲ್ಲೋ ಫೇಲ್‌ ಆದ ಸರ್ಟಿಫಿಕೆಟ್‌ ಹಾಗೂ ಜೇಬು ತುಂಬಾ ಹಣ ಇರಬೇಕು. ಇಷ್ಟಿದ್ದರೆ ನಿಮಗೆ ಎಂಬಿಬಿಎಸ್‌ ಅಷ್ಟೆ ಏಕೆ ಎಂಎಸ್‌ ಡಿಗ್ರಿಯ ಪ್ರಮಾಣ ಪತ್ರ ಲಭಿಸುತ್ತದೆ.

ಹೌದು, ಇಂತಹದೊಂದು ವೈದ್ಯ ಪದವಿ ನೀಡುವ ವಂಚಕ ಜಾಲವನ್ನು ಬಯಲಿಗೆ ತರಲಾಗಿದೆ. ನಗರದ ಮಡಿವಾಳದಲ್ಲಿ ಖಾಲ್ಸ ಇನ್ಸ್‌ಟ್ಯೂಟ್‌ ಅಫ್ ಮೆಡಿಕಲ್‌ ಸ್ಕೂಲ್‌ ಈ ಜಾಲದ ಕೇಂದ್ರ. ಪಂಜಾಬ್‌ನ ಅಮರೇಂದರ್‌ ಸಿಂಗ್‌ ಜಾಲದ ರೂವಾರಿ. ಈ ವಂಚಕ ಜಾಲ ಕೇವಲ 80 ಸಾವಿರ ರೂ. ನಿಂದ ಒಂದೂವರೆ ಲಕ್ಷ ರೂ.ಗೆ ನಕಲಿ ಎಂಬಿಬಿಎಸ್‌ ಡಿಗ್ರಿ ನೀಡುತ್ತಿತ್ತು. ಪ್ರಸಕ್ತ ಸಾಲಿನಲ್ಲೇ ಈ ಜಾಲದಿಂದ ಸುಮಾರು 500ಕ್ಕೂ ಹೆಚ್ಚು ಮಂದಿ ನಕಲಿ ವೈದ್ಯ ಪದವಿ ಪಡೆದು ವೈದ್ಯರಾಗಿದ್ದಾರೆ.

ಇದೇ ಜಾಲದಿಂದ ನಕಲಿ ಪ್ರಮಾಣ ಪತ್ರ ಪಡೆದು ನಕಲಿ ವೈದ್ಯಕೀಯ ದಂಧೆ ನಡೆಸುತ್ತಿದ್ದ ಜಕ್ಕೂರು ನಿವಾಸಿ ಶೈಲಾ ಎಂಬಾಕೆಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿರುವ ಬಗ್ಗೆ ಆ.31ರಂದು 'ಉದಯವಾಣಿ' ವರದಿ ಮಾಡಿತ್ತು¤. ಅಲ್ಲದೆ, ಈ ಜಾಲದ ಬಗ್ಗೆ ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಟಿವಿ 9 ಚಾನೆಲ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಜಾಲದ ಮತ್ತಷ್ಟು ವಿವರ ಹೊರಬಿದ್ದಿದೆ.

ಜಕ್ಕೂರಿನ ಶೈಲಾ ಮಾತ್ರವಲ್ಲದೆ, ಮಾಗಡಿ ರಸ್ತೆಯಲ್ಲಿ ಕ್ಲಿನಿಕ್‌ ನಡೆಸುತ್ತಿರುವ ಅಣ್ಣಪ್ಪ ಶೆಟ್ಟಿ, ಪ್ರಸನ್ನ, ಹಾಗೂ ಸಂತೋಷಿನಿ ಎಂಬುವವರು ಸಹ ನಕಲಿ ಪ್ರಮಾಣ ಪತ್ರ ಪಡೆದು ವೈದ್ಯಕೀಯ ವೃತಿ ನಡೆಸುತ್ತಿರುವುದು ಪತ್ತೆಯಾಗಿದೆ. ಇವರನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಅಣ್ಣಪ್ಪ ಶೆಟ್ಟ, ಪ್ರಸನ್ನ ಮತ್ತು ಸಂತೋಷಿನಿ ಆಯುಷ್‌ ವಿದ್ಯಾರ್ಥಿಗಳಾಗಿದ್ದು, ಬಿಎಎಂಎಸ್‌ ವಿದ್ಯಾಭ್ಯಾಸ ಮಾಡಿದ್ದಾರೆ. ಕಾನೂನಿನ ಪ್ರಕಾರ ಇವರು ಅಲೋಪತಿ ವೈದರು. ಇಂಗ್ಲೀಷ್‌ ಔಷಧ ನೀಡುವ ಅಧಿಕಾರ ಇವರಿಗಿಲ್ಲ. ಆದರೆ ನಕಲಿ ಎಂಬಿಬಿಎಸ್‌ ವೈದ್ಯ ಡಿಗ್ರಿ ಪಡೆದು ಸ್ಟಿರಾಯ್ಡಗಳನ್ನು ರೋಗಿಗಳಿಗೆ ನೀಡಿ ವಂಚಿಸುತ್ತಿದ್ದರು.

ವಂಚಕ ಜಾಲ:

ಭಾರತೀಯ ವೈದ್ಯಕೀಯ ಮಂಡಳಿ ನೀಡುವ ಪ್ರಮಾಣ ಪತ್ರದಂತೆ ನಕಲಿ ವೈದ್ಯರಿಗೆ ಪ್ರಮಾಣ ಪತ್ರ ಲಭ್ಯವಾಗುವುದು ನಗರದ ಮಡಿವಾಳದಲ್ಲಿ. ಇಲ್ಲಿನ ಖಾಲ್ಸ ಇನ್ಸ್‌ಟ್ಯೂಟ್‌ ಅಫ್ ಮೆಡಿಕಲ್‌ ಸ್ಕೂಲ್‌ ಮೂಲಕ ನಕಲಿ ಪ್ರಮಾಣ ಪತ್ರವನ್ನು ಹಣಕ್ಕಾಗಿ ಹಂಚುವ ಕಾರ್ಯ ನಿರ್ವಹಿಸುತ್ತಿತ್ತು.

ಪಂಜಾಬ್‌ ಮೂಲದ ಅಮರೇಂದರ್‌ ಸಿಂಗ್‌ ಜಾಲದ ರೂವಾರಿಯಾಗಿದ್ದು, ಸಿಸಿಬಿ ಪೊಲೀಸರ ಜಾಲಕ್ಕೆ ಸಿಲುಕಿದ್ದು, ಈ ಬಂಧಿಯಾಗಿದ್ದಾನೆ. ಹಲವು ವರ್ಷಗಳಿಂದ ಈ ದಂಧೆ ನಡೆಸಿಕೊಂಡು ಬರುತ್ತಿರುವ ಆರೋಪಿ ಅಮರೇಂದರ್‌ ಸಿಂಗ್‌, ಪ್ರಸಕ್ತ ವರ್ಷದಲ್ಲಿಯೇ ಸುಮಾರು 500 ಮಂದಿಗೆ ನಕಲಿ ಪ್ರಮಾಣ ಪತ್ರ ನೀಡಿದ್ದಾನೆ ಎಂಬ ಅಂಶ ಸಿಸಿಬಿ ಪೊಲೀಸರೊಂದಿಗೆ ಟಿವಿ 9 ಚಾನೆಲ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.

ನಕಲಿ ಪ್ರಮಾಣ ಪತ್ರಕ್ಕಾಗಿ 80 ಸಾವಿರ ರೂ. ನಿಂದ ಒಂದೂವರೆ ಲಕ್ಷ ರೂ. ಪಡೆಯುವ ಆರೋಪಿ ಕೇವಲ ಎಸ್‌ಎಸ್‌ಎಲ್‌ ಅಂಕಪಟ್ಟಿ ಹಿಡಿದುಕೊಂಡು ಹೋದರೆ ಸಾಕು ಒಂದೇ ದಿನದಲ್ಲಿ ವೈದ್ಯರ ಪ್ರಮಾಣ ಪತ್ರವನ್ನು ಕೈಗಿಟ್ಟು ಕಳುಹಿಸುತ್ತಾನೆ. ಮಡಿವಾಳದಲ್ಲಿರುವ ಈತನ ಕೇಂದ್ರಕ್ಕೆ ಪೊಲೀಸರು ಭೇಟಿ ನೀಡಿದಾಗ ರಾಶಿ ರಾಶಿ ನಕಲಿ ಪ್ರಮಾಣಪತ್ರಗಳು ಪತ್ತೆಯಾಗಿವೆ. ಅಲ್ಲದೆ, ಆನೇಕಲ್‌ನ ತಹಶೀಲ್ದಾರ್‌ ಅವರ ಸೀಲ್‌ ಜತೆಗೆ ಇನ್ನಿತರ ನಕಲಿ ಮುದ್ರೆಗಳು ಕೂಡ ಲಭ್ಯವಾಗಿವೆ.

ಸಚಿವರೇ ಸುಸ್ತು!:

ನಕಲಿ ಪ್ರಮಾಣ ಪತ್ರ ಜಾಲದ ಬಗ್ಗೆ ತಿಳಿದ ವೈದ್ಯಕೀಯ ಸಚಿವ ರಾಮದಾಸ್‌ ದಂಗಾಗಿದ್ದಾರೆ. ನಕಲಿ ವೈದ್ಯರ ಜಾಲದ ಬಗ್ಗೆ ಮತ್ತೂಮ್ಮೆ ಪರೀಕ್ಷೆ ನಡೆಸಲು ಸರ್ಕಾರಿ ನೌಕರರೊಬ್ಬರನ್ನು ಕಳುಹಿಸಿ ದೃಢಪಡಿಸಿಕೊಂಡಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿ ನೀಡುವ ಮಾದರಿಯಲ್ಲಿಯೇ ನಕಲಿ ಪ್ರಮಾಣ ಪತ್ರ ವಿತರಣೆಯಾಗಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿ, ನಕಲಿ ಜಾಲದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಧಿಕಾರಿಗಳಿಂದಲೇ ಕುಮ್ಮಕ್ಕು :

ಸರ್ಕಾರಿ ಅಧಿಕಾರಿಗಳೇ ಇಂತಹ ಅಕ್ರಮ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ. ಆರೋಪಿ ಅಮರೇಂದ್ರ ಸಿಂಗ್‌ಗೆ ಆಯುಷ್‌ ಇಲಾಖೆಯಿಂದಲೇ ಕಾಲೇಜ್‌ ಆರಂಭಕ್ಕೆ ಅನುಮತಿ ನೀಡಿದೆ. ಆಮರೇಂದ್ರ ಸಿಂಗ್‌ ಇದೇ ದಂಧೆಯಲ್ಲಿ ಎರಡು ಬಾರಿ ಜೈಲು ಪಾಲಾಗಿ ಬಂದಿರುವ ವಿಷಯ ತಿಳಿದಿದ್ದರೂ ಆಯುಷ್‌ ಇಲಾಖೆ ಅಧಿಕಾರಿಯಾಗಿದ್ದ ಶರ್ಮಾ ಎಂಬುವವರು ಅನುಮತಿ ನೀಡಿದ್ದರು ಎಂದು ಇಲಾಖೆ ಸಿಬ್ಬಂದಿಯೊಬ್ಬರು ಬಾಯ್ಬಿಟ್ಟಿದ್ದಾರೆ.

ಹಣದಾಸೆಗಾಗಿ ಅನುಮತಿ ನೀಡಿದ್ದು, ಇದರಲ್ಲಿ ಹಲವರು ಭಾಗಿಯಾಗಿದ್ದಾರೆ. ಇದಕ್ಕೆ ವೈದ್ಯಕೀಯ ಸಚಿವರು, ಇಲಾಖಾ ಅಧಿಕಾರಿಗಳು ಸೇರಿ ಕಟ್ಟುನಿಟ್ಟಿನ ಕಾಯ್ದೆಯೊಂದನ್ನು ಜಾರಿ ಮಾಡಬೇಕಾದ ಅನಿವಾರ್ಯ ಇದೆ. ಇಲ್ಲವಾದಲ್ಲಿ ಇಂತಹ ದಂಧೆ ತಡೆಯಲು ಸಾಧ್ಯವಿಲ್ಲ ಎಂಬ ಸತ್ಯಾಂಶವನ್ನು ಅವರು ತಿಳಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri