ಮಲ್ಪೆ ಬಂದರಿನಲ್ಲಿ ಬೋಟ್ಗಳ ಒತ್ತಡ-ಬಾಪುತೋಟ ಸಮೀಪ ನಿಲುಗಡೆ ಅವಕಾಶ;5.5 ಕೋ. ರೂ. ವೆಚ್ಚದಲ್ಲಿ ಹೊಳೆ ಡ್ರೆಜ್ಜಿಂಗ್:ಸಚಿವ ಕೋಟ ಎಸ್ಪಿ |
ಪ್ರಕಟಿಸಿದ ದಿನಾಂಕ : 2012-09-05
ಮಲ್ಪೆ:ಸೆ,05. ಮಲ್ಪೆ ಬಂದರಿನಲ್ಲಿ ಈಗಿರುವ ಬೋಟ್ಗಳ ಒತ್ತಡವನ್ನು ಕಡಿಮೆ ಮಾಡಲು ಬಾಪುತೋಟ ಸಮೀಪ ಉದ್ಯಾವರ ಹೊಳೆಯಲ್ಲಿ ಹೂಳೆತ್ತಲಾಗುವುದು (ಡ್ರೆಜ್ಜಿಂಗ್). ಸರಕಾರದಿಂದ ಇದಕ್ಕೆ 5.5 ಕೋಟಿ ರೂ. ಮಂಜೂರಾಗಿದ್ದು ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳವಾರ ಇಲಾಖಾಧಿಕಾರಿಗಳ ಜತೆ ಮಲ್ಪೆ ಬಂದರಿನ 3ನೇ ಹಂತದ ಯೋಜನೆಯ ಪ್ರದೇಶವನ್ನು ವೀಕ್ಷಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಯೋಜನೆಯ ತಾಂತ್ರಿಕ ಅನುಮೋದನೆಯನ್ನು ಕಳುಹಿಸಿಕೊಡಲು ಬಂದರು ನಿರ್ದೆಶಕರಿಗೆ ಈಗಾಗಲೇ ಸೂಚಿಸಲಾಗಿದ್ದು ಯೋಜನಾ ನಕ್ಷೆ ಬಂದ ಬಳಿಕ ಟೆಂಡರ್ ಕರೆದು ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಸುಮಾರು 37.15 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಮಲ್ಪೆ ಬಂದರಿನ 3ನೇ ಹಂತದ ಯೋಜನೆ ಕಾಮಗಾರಿ ಜಿಲ್ಲೆಯ ಇತರ ಬಂದರಿಗಿಂತ ಪ್ರಗತಿಯಲ್ಲಿದ್ದು 2014ರೊಳಗೆ ಪೂರ್ಣಗೊಳ್ಳಲಿದೆ ಎಂದರು.
ಶಾಸಕ ಕೆ. ರಘುಪತಿ ಭಟ್, ಬಂದರು ಎಕ್ಸಿಕ್ಯೂಟಿವ್ ಎಂಜಿನಿಯರ್ ಎಂ.ಎನ್. ಖಾರ್ವಿ, ಮೀನುಗಾರಿಕಾ ಉಪ ನಿರ್ದೇಶಕ ಸುರೇಶ್ ಕುಮಾರ್, ಯೋಜನಾ ಸಮನ್ವಯಾಧಿಕಾರಿ ವಿ.ಕೆ. ಶೆಟ್ಟಿ, ಸಹಾಯಕ ನಿರ್ದೇಶಕಿ ಅಂಜನಾ ದೇವಿ, ಸವಿತಾ ಖಾದ್ರಿ, ವಿಜಯ ಕುಮಾರ್ ಸಚಿವರ ಜತೆಗಿದ್ದರು.
ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಮೀನುಗಾರ ಮುಖಂಡರಾದ ಯಶ್ಪಾಲ್ ಎ. ಸುವರ್ಣ, ಸಾಧು ಸಾಲಿಯಾನ್, ಗುಂಡು ಬಿ. ಅಮೀನ್, ಗೋಪಾಲ ಕುಂದರ್, ರಮೇಶ್ ಕೋಟ್ಯಾನ್, ಸೋಮನಾಥ್ ಕಾಂಚನ್, ಸತೀಶ್ ಕುಂದರ್, ಸುಧಾಕರ ಕುಂದರ್, ನಾರಾಯಣ ಕರ್ಕೇರ, ವಾಸುದೇವ ಸಾಲಿಯಾನ್, ಕಿಶೋರ್ ಪಡುಕರೆ, ಸುರೇಶ್ ಬಿ. ಕುಂದರ್, ರಾಮ ಕಾಂಚನ್, ಯೋಜಕದ ಬಿ.ಎಸ್. ಶೆಟ್ಟಿ, ಭಾಸ್ಕರ ಸುವರ್ಣ, ರಾಮಚಂದ್ರ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
1,500 ಬೋಟ್ಗಳಿಗೆ ಅವಕಾಶ;- ಉದ್ಯಾವರ ಹೊಳೆಯ ಬಾಪುತೋಟ ಬಬ್ಬರ್ಯಪಾದೆ ಅಣೆಕಟ್ಟು ಭಾಗದಲ್ಲಿ ಡ್ರೆಜ್ಜಿಂಗ್ ನಡೆಸುವುದರಿಂದ ಸುಮಾರು 1,400ರಿಂದ 1,500 ಬೋಟ್ಗಳನ್ನು ನಿಲ್ಲಿಸಬಹುದಾಗಿದೆ. ಈಗಿರುವ ಬೋಟ್ಗಳ ಒತ್ತಡ ಕಡಿಮೆಯಾಗುತ್ತದೆ ಮಾತ್ರವಲ್ಲದೆ ತೂಫಾನ್ ಅಥವಾ ಇನ್ನಿತರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹೊರಬಂದರಿನ ಬೋಟ್ಗಳಿಗೂ ಇಲ್ಲಿನ ಸುರಕ್ಷಿತವಾಗಿ ನಿಲ್ಲಲು ಅವಕಾಶ ಕಲ್ಪಿಸಿದಂತಾಗುತ್ತದೆ. ಕೆ. ರಘುಪತಿ ಭಟ್, ಶಾಸಕರು
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-09-05
|
|
|