ಉಡುಪಿ ನಗರ ಟ್ರಾಫಿಕ್ಗೂ ಸಿಸಿಟಿವಿ.... |
ಪ್ರಕಟಿಸಿದ ದಿನಾಂಕ : 2012-09-04
ಉಡುಪಿ: ಅಪಘಾತ, ಅಪರಾಧಗಳ ಪತ್ತೆ, ನಿಯಂತ್ರಣಕ್ಕೆ ಅನುಕೂಲವಾಗಲು, ರಸ್ತೆ ಸಂಚಾರ ಸುಗಮಗೊಳಿಸಲು ಉಡುಪಿ ನಗರ ವ್ಯಾಪ್ತಿಯ ಲ್ಲಿಯೂ ಸಿಸಿಟಿವಿ ಮತ್ತು ಸರ್ವೆಲೆನ್ಸ್ ಕೆಮರಾ ಗಳನ್ನು ಅಳವಡಿಸುವ ಯೋಜನೆಗೆ ಜಿಲ್ಲಾ ಪೊಲೀಸ್ ಮುಂದಾಗಿದೆ. ಒಟ್ಟು 15-20 ಕೇಂದ್ರ (ಪಾಯಿಂಟ್) ಗಳನ್ನು ಗುರುತಿಸಿ ಅಲ್ಲಿನ ಜಂಕ್ಷನ್ ಮತ್ತು ಜನಸಂದಣಿ ನಿರಂತರವಿರುವ ಸ್ಥಳಗಳಲ್ಲಿ ಇಂತಹಕೆಮರಾಗಳನ್ನು ಹಾಕಿ ಅಪಘಾತ, ಅಪರಾಧ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಯೋಜನೆಯನ್ನು ಮುಂದಿನ 3 - 4 ತಿಂಗಳಲ್ಲಿ ಕಾರ್ಯಗತಗೊಳಿಸಲು ರೂಪುರೇಷೆ ಸಿದ್ಧವಾಗುತ್ತಿದೆ.
ಟ್ರಾಫಿಕ್ ಸಿಗ್ನಲ್ ಸಂಖ್ಯೆ ಹೆಚ್ಚಳ?
ನಗರದ ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ವಾಹನದಟ್ಟಣೆ ಹೆಚ್ಚಾಗಿ ಸಂಚಾರ ಸುವ್ಯವಸ್ಥೆಯ ಸಮಸ್ಯೆ ಉಂಟಾದುದರಿಂದ ಈಗಾಗಲೇ ನಗರದ ಕರಾವಳಿ ಬೈಪಾಸ್ ಮತ್ತು ಡಯಾನ ಸರ್ಕಲ್ ಬಳಿ ಸಿಗ್ನಲ್ ಲೈಟ್ಗಳನ್ನು ಅಳವಡಿಸಲಾಗಿದೆ. ಬುಧವಾರದಂದು ಶಿರಿಬೀಡು ಜಂಕ್ಷನ್ ಬಳಿ ಕೂಡ ಸಿಗ್ನಲ್ ಲೈಟ್ಗಳ ಜೋಡಣೆ ನಡೆದಿದೆ.
ಮಣಿಪಾಲ - ಉಡುಪಿ ರಸ್ತೆ ಚತುಷ್ಪಥಗೊಂಡ ಅನಂತರ ಶಿರಿಬೀಡು ಜಂಕ್ಷನ್ ಕೂಡ ಅಪಾಯ ಕಾರಿಯಾಗುತ್ತಿದೆ. ಇಲ್ಲಿ ಸಿಗ್ನಲ್ ಲೈಟ್ ಜೋಡಣೆ ಯಾಗಿದ್ದರೂ ಅದನ್ನು ಕೂಡಲೇ ಕಾರ್ಯಗತ ಗೊಳಿಸುವುದಿಲ್ಲ. ಈ ಜಂಕ್ಷನ್ನ್ನು ಸೇರುವ ವಾಹನಗಳು ಸಿಗ್ನಲ್ ಲೈಟ್ ಅಳವಡಿಕೆ ನೋಡಿ ವೇಗ ತಗ್ಗಿಸಿ ಜಾಗರೂಕತೆಯಿಂದ ಸಂಚಾರ ಮಾಡಲಿ ಎಂಬ ಉದ್ದೇಶದಿಂದ ಸಿಗ್ನಲ್ ಲೈಟ್ಕಂಬಗಳನ್ನು ಹಾಕಲಾಗಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ಸುವ್ಯವಸ್ಥೆಗೆ ಒಂದು ಕೋಟಿ ರೂ.
ಸಂಚಾರ ಸುವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವು ದಕ್ಕಾಗಿ ಉಡುಪಿ ನಗರಸಭೆ ಒಂದು ಕೋ.ರೂ.ಗಳನ್ನು ಈಗಾಗಲೇ ಪೊಲೀಸ್ ಇಲಾಖೆಗೆ ಒದಗಿಸಿದ್ದು ಇದರ ಜತೆಗೆ ಇತರ ಅನುದಾನಗಳನ್ನು ಬಳಸಿಕೊಂಡು ರಸ್ತೆಯಲ್ಲಿ ಸೂಚನಾ ಫಲಕ, ಝೀಬ್ರಾ ಕ್ರಾಸ್ ಗುರುತು, ಇತರೆ ಸಂಚಾರಿ ತಿಳಿವಳಿಕಾ ಫಲಕಗಳನ್ನು ಹಾಕುವ ಯೋಜನೆಯೂ ಸಿದ್ದವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ವರ್ಷಗಳ ಹಿಂದೊಮ್ಮೆ ಮಿನುಗಿದ್ದ ಸಿಗ್ನಲ್
ಲೈಟ್ಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದ್ದವು. ಕಳೆದ 1 ವರ್ಷದ ಹಿಂದೆ ಮತ್ತೆ ಅಳವಡಿಸಲಾಗಿತ್ತು. "ಟ್ರಾಫಿಕ್ ಜಾಮ್ ಆಗಲು ಸಿಗ್ನಲ್ಗಳು ಕಾರಣವಾ ಗುತ್ತಿವೆ’ ಎಂಬ ಕೆಲವರ ಟೀಕೆಯ ನಡುವೆಯೂ ಸಿಗ್ನಲ್ ಲೈಟ್ಗಳು ಯಶಸ್ವಿಯಾಗಿವೆ. ಮುಂದೆ ಸಿಸಿಟಿವಿ ಅಳವಡಿಕೆಯೊಂದಿಗೆ ಸಂಚಾರ ವ್ಯವಸ್ಥೆ ಮತ್ತಷ್ಟು ಸುಗಮ, ಸುರಕ್ಷವಾಗಲಿದೆ ಎಂಬ ನಿರೀಕ್ಷೆ ಇದೆ.
ಮಣಿಪಾಲ ರಸ್ತೆಗೆ ಏನು ಪರಿಹಾರ?
ಚತುಷ್ಪಥಗೊಂಡಿರುವ ಉಡುಪಿ - ಮಣಿಪಾಲ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅವಘಡಗಳು ವಾಹನ ಚಾಲಕರಲ್ಲಿ ಭೀತಿ ಹುಟ್ಟಿಸಿವೆ. ಈ ರಸ್ತೆಯ ಕೆಲವು ಭಾಗದ ಡಿವೈಡರ್ಗಳ ನಡುವೆ ಇರುವ ಅಂತರವನ್ನು ಸರಿಪಡಿಸುವುದು, ಡಿವೈಡರ್ನ್ನು ವಿಸ್ತರಿಸುವುದು, ಈ ರಸ್ತೆಯಲ್ಲಿ ಸಂಚ ರಿಸುವ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸುವುದು, ಈ ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್ನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು, ಯಾವ ದಿಕ್ಕಿನಿಂದ ಓವರ್ಟೇಕ್ ಮಾಡುವುದೆಂಬ ಮಾಹಿತಿ ನೀಡುವುದು, ಮುಖ್ಯರಸ್ತೆ ಸಂಪರ್ಕಿಸುವ ಒಳರಸ್ತೆಗಳಿಗೆ ಹಂಪ್ಸ್ ಹಾಕುವುದು ಇವೇ ಮೊದಲಾದ ಪರಿಹಾರೋಪಾಯಗಳನ್ನು ಪೊಲೀಸರು, ಸ್ಥಳೀಯ ಜನಪ್ರತಿನಿಧಿಗಳು, ವಾಹನ ಚಾಲಕರು ಮುಂದಿರಿಸಿದ್ದು ಇವುಧಿಗಳಲ್ಲಿ ಯಾವುದು ಪರಿಣಾಮಕಾರಿಯೋ ಅದರ ಕಾರ್ಯಗತ ಅತೀ ಶೀಘ್ರವಾಗಬೇಕಿದೆ. ಸುಂದರ ರಸ್ತೆ ಭಯಾನಕವಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-04
|
|
|