ಸೋಮವಾರ, 17-02-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
‘ಉಗ್ರ’ರ ಕುರಿತಂತೆ ಮಾಧ್ಯಮಗಳಿಂದ ವದಂತಿ ಕಡಿವಾಣ ಹಾಕಲು ಸಂಪಾದಕರಿಗೆ ಮಿರ್ಜಿ ಮನವಿ

ಬೆಂಗಳೂರು, ಸೆ.3: ಶಂಕಿತ ಉಗ್ರರಿಗೆ ಸಂಬಂಧಿಸಿದಂತೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಬಿತ್ತರಿಸುತ್ತಿರುವ ತಪ್ಪು ಸಂದೇಶಗಳು, ಊಹಾಪೋಹ, ಗಾಳಿ ಸುದ್ದಿ, ವದಂತಿಗಳಿಂದಾಗಿ ಸಮಾಜದಲ್ಲಿ ಅಶಾಂತಿ, ಭಯದ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿಂದು ರಾಜ್ಯ ಹಾಗೂ ರಾಷ್ಟ್ರೀಯ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮುಖ್ಯಸ್ಥರ ಸಭೆ ಕರೆದು, ಸಭೆಯಲ್ಲಿ ಎಲ್ಲ ಮಾಧ್ಯಮದವರಿಗೆ ಇನ್ನು ಮುಂದೆ ಇಂಥ ಸುದ್ದಿಯನ್ನು ನಿಲ್ಲಿಸಿ ಎಂದು ವಿನಂತಿಸಿದರು.

ಇತ್ತೀಚೆಗೆ ನಗರದಲ್ಲಿ ಹಾಗೂ ಹುಬ್ಬಳ್ಳಿಯಲ್ಲಿ ಬಂಧಿಸಿರುವ ಶಂಕಿತ ಉಗ್ರರಿಗೆ ಸಂಬಂಧಿಸಿದಂತೆ ಹೆಚ್ಚಿನ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳು ಊಹಾಪೋಹ, ಗಾಳಿ ಸುದ್ದಿಗಳನ್ನೆ ನೈಜ ಸುದ್ದಿಗಳಂತೆ ಬಿತ್ತರಿಸುತ್ತಿವೆ. ಇದರಿಂದ ಸಮಾಜದಲ್ಲಿ ತಪ್ಪು ಸಂದೇಶ ಹೋಗುತ್ತಿವೆ. ಜೊತೆಗೆ ಇದು ಅಶಾಂತಿಯ ವಾತಾವರಣ ಸೃಷ್ಟಿಸಲು ಕಾರಣವಾಗುತ್ತಿದೆ ಎಂದು ಮಿರ್ಜಿ ಕಳವಳ ವ್ಯಕ್ತಪಡಿಸಿದರು.

ವದಂತಿ, ಗಾಳಿ ಸುದ್ದಿಗಳಿಗೆ ರೆಕ್ಕೆಪುಕ್ಕ ನೀಡಿ ಮಾಧ್ಯಮಗಳಲ್ಲಿ ಪ್ರಕಟಿಸುವ ಸುದ್ದಿಗಳನ್ನು ಮೂಲಗಲಿಂದ ತಿಳಿದು ಬಂದಿದೆ ಎಂದು ತಿಳಿಸಲಾಗುತ್ತಿದೆ. ಖಚಿತ, ದೃಢಪಟ್ಟಿರದ ಸುದ್ದಿಗಳನ್ನು ಪ್ರಕಟಿಸುವುದರಿಂದ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ. ಸಮಾಜದಲ್ಲಿ ಗೊಂದಲವನ್ನು ಅಶಾಂತಿಯನ್ನು ಸೃಷ್ಟಿಸುವ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಹಿತ ಕಾಪಾಡುವಂಥ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಸಮಾಜಮುಖಿಯಾಗಿ ಮಾಧ್ಯಮಗಳು ಮುಂದುವರಿಯಬೇಕು ಎಂದರು.

ಭಯೋತ್ಪಾದನೆ, ಗಲಭೆಯಂಥ ಸುದ್ದಿಗಳನ್ನು ಪೊಲೀಸರಿಂದ ದೃಢಪಡಿಸಿಕೊಂಡು ಪ್ರಕಟಿಸಿ, ಅದು ಬಿಟ್ಟು ಅಶಾಂತಿಯನ್ನು ಉಂಟು ಮಾಡುವಂಥ ಸುದ್ದಿಯನ್ನು ಪ್ರಕಟಿಸಬೇಡಿ. ಸುದ್ದಿಯ ನೈಜತೆಯನ್ನು ಅರಿತು ಪ್ರಕಟಿಸಿ, ಜೊತೆಗೆ ಆ ಸುದ್ದಿಯನ್ನು ಖಾತ್ರಿಪಡಿಸಿದ ಅಧಿಕಾರಿಗಳ ಹೆಸರನ್ನು ಪ್ರಕಟಿಸಿ. ಇದರಿಂದ ಸಮಾಜದ ಸ್ವಾಸ್ಥತೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಈಗಾಗಲೇ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಭಯವನ್ನು ಸೃಷ್ಟಿಸುವಂಥ ಸುದ್ದಿಗಳನ್ನು, ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ.

ಶೃಂಗೇರಿಯ ಶಾರದ ಪೀಠವನ್ನು ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ತಮಗೆ ಅನಿಸಿದನ್ನೆಲ್ಲ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ. ಇದನ್ನು ಯಾವ ಪೊಲೀಸ್ ಅಧಿಕಾರಿಗಳು ಕೂಡಾ ಖಾತ್ರಿಪಡಿಸಿಲ್ಲ. ತಮಗೆ ಬಂದ ಇಂಥ ಸುದ್ದಿಯನ್ನು ದೃಢಪಡಿಸಿಕೊಳ್ಳದೆಯೇ ಪ್ರಕಟಿಸಲಾಗುತ್ತಿದೆ.

ಜೊತೆಗೆ ಚಿಕ್ಕಮಗಳೂರಿನಲ್ಲಿ ಓರ್ವ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಸುಳ್ಳು ವರದಿ ಪ್ರಕಟಿಸಲಾಗಿದೆ. ಇದನ್ನೆಲ್ಲ ಮಾಧ್ಯಮಗಳಿಗೆ ನೀಡುವವರಾರು ಎಂದು ಪ್ರಶ್ನಿಸಿದ ಮಿರ್ಜಿ, ಪೊಲೀಸರು ದೃಢಪಡಿಸದೆ ಈ ರೀತಿ ಸುದ್ದಿ ಪ್ರಕಟಿಸಿ ಭಯಪೀಡಿತ ವಾತಾವರಣವನ್ನು ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಂಡರು.

ಉಗ್ರರ ಬಗ್ಗೆಯಾಗಲಿ, ಇನ್ನಿತರ ಯಾವುದೇ ಅಪರಾಧ ಚಟುವಟಿಕೆಗಳಿಗೆ ಸಂಬಂದಿಸಿದ ಸುದ್ದಿಯಾಗಲಿ, ಅದನ್ನು ನಾವೇ ಮಾಧ್ಯಮಗಳ ಮುಂದೆ ದೃಢಪಡಿಸುತ್ತೇವೆ. ಜೊತೆಗೆ ಈ ಕುರಿತು ಎಲ್ಲ ಮಾಹಿತಿಯನ್ನು ಕೂಡಾ ನೀಡುತ್ತೇವೆ. ಆದರೆ ಸುಳ್ಳು ಸುದ್ದಿ ಮಾತ್ರ ಪ್ರಕಟಿಸಬೇಡಿ ಎಂದರು.

ಇನ್ನು ಮುಂದೆ ಅಪರಾಧಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ನಾವು ಸುದ್ದಿಗೋಷ್ಠಿಗಳನ್ನು ಕರೆದು ಮಾಧ್ಯಮದ ಮುಂದಿಡುತ್ತೇವೆ. ಇಲ್ಲದಿದ್ದರೆ ಪೊಲೀಸ್ ಬ್ಲಾಗ್‌ಗಳಲ್ಲಿ ಹಾಕುತ್ತೇವೆ. ಇದನ್ನು ಆಧರಿಸಿ ಮಾಧ್ಯಮಗಳು ಸುದ್ದಿಗಳನ್ನು ಪ್ರಕಟಿಸಲಿ ಎಂಬುದು ನಮ್ಮ ಅಭಿಪ್ರಾಯ ಎಂದರು.

ಕೆಲವು ಸುದ್ದಿಗಳನ್ನು ಪೊಲೀಸ್ ಇಲಾಖೆಯಲ್ಲಿರುವವರೇ ಸೋರಿಕೆ ಮಾಡುತ್ತಾರೆ. ಇದಕ್ಕೂ ಇನ್ನು ಮುಂದೆ ಕಡಿವಾಣ ಹಾಕಲಾಗುವುದು. ತನಿಖೆ ನಡೆಯುತ್ತಿರುವ ಹಂತದಲ್ಲಿ ಈ ರೀತಿ ತಪ್ಪು ಸಂದೇಶಗಳನ್ನು ಮಾಧ್ಯಮಗಳು ಹರಡುವಂತೆ ಮಾಡುವುದರಿಂದ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ಮಿರ್ಜಿ ಹೇಳಿದರು.

ದೃಶ್ಯ ಮಾಧ್ಯಮಗಳಲ್ಲಿ ತಪ್ಪು, ಗಾಳಿ ಸುದ್ದಿಗಳು, ವದಂತಿಗಳು ಬಂದರೆ ಎಲ್ಲ ಮಾಧ್ಯಮಗಳಿಗೆ ಎಸ್‌ಎಂಎಸ್ ಮೂಲಕ ಅದರ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಮಾಧ್ಯಮಗಳ ಮುಖ್ಯಸ್ಥರು ಕೆಲವು ಸಲಹೆ, ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ರಾಜ್ಯದ ಎಲ್ಲ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಸಂಪಾದಕರು, ಮುಖ್ಯಸ್ಥರು, ರಾಷ್ಟ್ರೀಯ ಸುದ್ದಿ ವಾಹಿನಿಗಳ ಮುಖ್ಯಸ್ಥರು ಹಾಜರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-04

Tell a Friend
ಇತರ ಸಂಭಂದಪಟ್ಟ ವರದಿಗಳು
»'ಸಿಸಿಬಿ ಬೇಟೆ ': ಮೆಡಿಕೋ ನಯೀಮ್ ಸಿದ್ದಿಖಿ ಸೆರೆ; ಬಂಧಿತರ ಸಂಖ್ಯೆ 18ಕ್ಕೆ
»ಉಗ್ರರ ಸ್ಕೆಚ್‌: ಮಾಸ್ಟರ್‌ ಮೈಂಡ್‌ ಯಾರು? ನಾಪತ್ತೆ!: ಕಾರ್ಯಾಚರಣೆ ಚುರುಕುಗೊಳಿಸಿದ ರಾಜ್ಯ ಪೊಲೀಸರು | ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆ ದಾಳಿಯ ಸಂಚು: ಅಲ್ಲಗಳೆದ ಮಿರ್ಜಿ
»ಉಗ್ರರ ಟಾರ್ಗೆಟ್ ಲಿಸ್ಟ್...
»ನಾಟ್ಯ ಗೃಹದಲ್ಲಿ ನಮ್ಮ ಶಾಸಕರ ಮೋಜು!: ಅಧ್ಯಯನಕ್ಕೆಂದು ಅರ್ಜೆಂಟೈನಾಕ್ಕೆ ತೆರಳಿರುವ ಜನಪ್ರತಿನಿಧಿಗಳಿಂದ‘ಟ್ಯಾಂಗೋ ಹೌಸ್’ಗಳಿಗೆ ಭೇಟಿ
»ವಿಚಾರಣೆ ವಿಶೇಷ ತಂಡ: ನೆರೆರಾಜ್ಯಗಳಲ್ಲೂ ಉಗ್ರರ ಬೇಟೆ ಬಂಧಿತರ ಸಂಖ್ಯೆ 16| ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು? | ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳ ಹೊಸ ಅಸ್ತ್ರ: ಪೊಲೀಸರಿಂದ ಮಾಹಿತಿ ಬಯಲು
»ಬಂಧಿತ ಶಂಕಿತ ಉಗ್ರರ ಪೋಷಕರಿಂದ ದೂರು, ಪಚಾವೋ, ಮಿರ್ಜಿಗೆ ಗೌರ್ನರ್ ಬುಲಾವ್
»ಆಂಧ್ರ, ಮಹಾರಾಷ್ಟ್ರಕ್ಕೂ ಕರ್ನಾಟಕ 'ಉಗ್ರ'ರ ಲಿಂಕ್; ಹಲವರ ಬಂಧನ
»ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
»ಬಂಧಿತರು ಉಗ್ರವಾದಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ;ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಸ್ಪಷ್ಟನೆ
»ಮಾಹಿತಿ ನೀಡುತ್ತಿಲ್ಲ: ಶಂಕಿತ ಉಗ್ರರ ತಂದೆ ಅಳಲು | ಮಾಹಿತಿಗೆ ಇಂಟರ್‌ಪೋಲ್ ನೆರವು' - ಅಶೋಕ್
»`ಉಗ್ರರ ಮಾಹಿತಿಗೆ ಇಂಟರ್‌ಪೋಲ್ ನೆರವು'
»ಎಲ್‌ಇಟಿ, ಹುಜಿ ನಂಟು; ಗಣ್ಯರ ಹತ್ಯೆಗೆ ಸಂಚು: ಬೆಚ್ಚಿಬಿದ್ದನಗರ: ಶಂಕಿತ ಉಗ್ರರಲ್ಲಿ ವೈದ್ಯ, ಎಂಜಿನಿಯರ್, ಗುತ್ತಿಗೆದಾರ, ಪತ್ರಕರ್ತ ಹಾಗೂ ಗಾರೆ ಕಾರ್ಮಿಕ! | ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ
»

ಪ್ರತಿಸ್ಪಂದನ
Sshine, Mangalore
2012-09-04
ಪ್ರಿಯ ಮಿರ್ಜಿಯವರೇ ನಿಮ್ಮ ಹೇಳಿಕೆಯು ಸತ್ಯವೇ. ನಮ್ಮ ಇಲಾಖೆಯು ಕ್ಷಿಪ್ರಗತಿಯಲ್ಲಿ ಕೈಗೊಂಡ ಕಾರ್ಯಚರಣೆಯಿಂದಾಗಿ ಭ್ರಯೋತ್ಪದಕರಿಂದಾಗಿ ಉಂಟಾಗುವ ದೊಡ್ಡ ಅನಾಹುತವನ್ನು ತಪ್ಪಿಸಿದಿರಿ. ಸಮಾಜವು ನಿಮ್ಮೊಂದಿಗೆ/ಇಲಾಖೆಯೊಂದಿಗೆ ಕೈಜೋಡಿಸುವುದು ಎಲ್ಲರ ಕರ್ತವ್ಯ. ಆದರೆ ಸುದ್ದಿವಾಹಿನಿ /ಮಾದ್ಯಮದವರ ವರ್ತನೆಯಿಂದ ತೊಂದರೆಯಗುವುದರೊಂದಿಗೆ ಸಮಾಜದಲ್ಲಿಯೂ ಅಶಾಂತಿಯಾಗುವುದು ಜಾಸ್ತಿ. ಇದಕ್ಕಾಗಿ ವಾರ್ತಾ/ಮಾಧ್ಯಮ ಕಾನುನಿನಲ್ಲಿ ತಿದ್ದುಪಡಿ ತರುವುದು ಒಳಿತು. ಮಾಧ್ಯಾಮಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮದವರು ತಮಗೆ ಪತ್ರಿಕಾ ಸ್ವಾತಂತ್ರವಿದೆ ಎಂದು ಬೇಕಾಬೆಟ್ಟಿ ಇಲ್ಲ ಸಲ್ಲದ ವರದಿಯನ್ನು ನೀಡಿ ತಮ್ಮ ಬೇಳೆಯನ್ನು ಬೇಯಿಸಿ ಸಮಾಜದಲ್ಲಿ ಅಂತಕವೆರ್ಪಡಿಸುತಾರೆ ನಿರಪರಾದಿತ್ವವನ್ನು ಅಪರಾದಿತ್ವದೊಂದಿಗೆ ಸಾಬೀತು ಪಡಿಸಿ ಸಮಾಜದಲ್ಲಿ ಇನ್ನಷ್ಟು ಗೊಂದಲ ಸ್ರಸ್ಟಿಸುವುದು ಇವರ ಚಾಳಿ.

ಉದಾಹರಣೆಗೆ ನಾನು ಗಲ್ಫು ಕನ್ನಡಿಗದ ವಾರ್ತೆಯನ್ನು ಮೆಚ್ಚುವವ. ಆದರೆ ಇ ಕಳೆದ ದಿವಸದಿಂದ ಬರುವ ವಾರ್ತೆಗಳನ್ನು ಓದಿದರೆ ಸೋಜಿಗವೆನಿಸುತದೆ, ಇವರು ಸತ್ಯವನ್ನು ಮರೆತಿದ್ದಾರೆ ಇದರಿಂದಾಗಿ ಬೇಸರವಾಗುತದೆ.

ಇದಕ್ಕಾಗಿ ನಮ್ಮ ರಕ್ಷಾಣ ಇಲಾಖೆಗೆ ಸಂಬಂದಿಸಿದ ಎಲ್ಲಾ ಇಲಾಖೆಯವರು ಯಾವುದೇ ವಿವರವನ್ನು ಸೂಕ್ಷ್ಮವಾಗಿ ಕಂಡುಹಿಡಿದು ನಂತರವೇ ಸುದ್ದಿವಾಹಿನಿ, ಮಾದ್ಯಮಕ್ಕೆ ತಿಳಿಸಬೇಕು, ಹಾಗು ಅವರಿಗೆ ಇಲ್ಲ ಸಲ್ಲದ ವಿವರವನ್ನು ನೀಡದ ಬಗ್ಗೆ ಎಚ್ಚರಿಕೆಯನ್ನು ಕೊಡಬೇಕು ಇದರಿಂದ ಇಲಾಖೆಗೂ ಸಹಾಯಾವಾದಿತು. ಇ ಬಗ್ಗೆ ಚಿಂತಿಸಿ ಮುಂದಿನದನ್ನು ಕೈಗೊಳ್ಳುವಿರಾ ಮಿರ್ಜಿರವರೆ.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri