ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಮೈಕಾಲದ ಅಹ್ಮದ್ ನೂರಿ ಇನ್ನಿಲ್ಲ: *ಪ್ರಪ್ರಥಮವಾಗಿ ಕುರ್‌ಆನ್‌ನ್ನು ಕನ್ನಡಕ್ಕೆ ಅನುವಾದಿಸಿದ ವಿದ್ವಾಂಸ

ಬೆಂಗಳೂರು, ಸೆ.2: ಪವಿತ್ರ ಕುರ್‌ಅನ್‌ಅನ್ನು ಪ್ರಪ್ರಥಮ ಬಾರಿಗೆ ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿದ ಹಿರಿಯ ವಿದ್ವಾಂಸ, ಭಾಷಾ ತಜ್ಞ, ಪತ್ರಕರ್ತ, ಕನ್ನಡ ಹಾಗೂ ಸಂಸ್ಕೃತಿಗಾಗಿ ಎಲೆ ಮರೆಯ ಕಾಯಿಯಂತೆ ಹೋರಾಟ ನಡೆಸಿದ್ದ ಕನ್ನಡಾಭಿಮಾನಿ ಅಹ್ಮದ್ ನೂರಿ ಇಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಮೂವರು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧು ಬಳಗ, ಅಭಿಮಾನಿ ವರ್ಗವನ್ನು ಅಗಲಿದ್ದಾರೆ. ಮಂಗಳೂರು ಮೂಲದವರಾದ ಅವರು ಪ್ರಸಕ್ತ ಬೆಂಗಳೂರಿನಲ್ಲಿ ಮಗಳು ಹಾಗೂ ಅಳಿಯನೊಂದಿಗೆ ವಾಸಿಸುತ್ತಿದ್ದರು. 1978ರಲ್ಲಿ ನೂರಿ ಪವಿತ್ರ ಕುರ್‌ಆನ್‌ಅನ್ನು ‘ದಿವ್ಯ ಕುರ್‌ಆನ್’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಅವರು ಇದಕ್ಕಾಗಿ ಸತತ 7 ವರ್ಷಗಳ ಕಾಲ ಕೆಲಸ ಮಾಡಿದ್ದರು. 1960ರ ವರೆಗಿನ ದಕ್ಷಿಣ ಕನ್ನಡದ ಬ್ಯಾರಿ ಜನಾಂಗದ ಕಿರು ಚರಿತ್ರೆಯನ್ನೊಳಗೊಂಡ ‘ಮೈಕಾಲ’ ಎಂಬ ಸಂಶೋಧನಾ ಗ್ರಂಥವನ್ನು ರಚಿಸಿದ್ದರು.

ಬ್ಯಾರಿಸಂಸ್ಕೃತಿಯ ಕುರಿತಂತೆ ಬೆಳಕು ಚೆಲ್ಲಿದ, ಆ ಕುರಿತ ಚಟುವಟಿಕೆಗಳಿಗೆ ಮೊದಲ ಅಡಿಗಲ್ಲು ಹಾಕಿದ ವಿದ್ವಾಂಸ ನೂರಿ ಅವರಾಗಿದ್ದಾರೆ.ಇದಲ್ಲದೆ ನೂರಿ, ವಿವಿಧ ಭಾಷೆಗಳ 20ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು ಹಾಗೂ ಕೆಲವು ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.ಇವರ ‘ಹಿಜರಿ ಸಂಸ್ಕರಣ ಸಂಚಿಕೆ’ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟವಾಗಿದೆ. ಫಾದರ್ ಮುಲ್ಲರ‍್ಸ್‌ರ ‘ದಿ ಗೈಡ್ ಹೆಲ್ತ್’ ಕೃತಿಯನ್ನು ಉರ್ದು ಭಾಷೆಗೆ ಅನುವಾದಿಸಿದ್ದಾರೆ. ಹಮ್‌ದರ್ದ್ ಕನ್ನಡ ವಾರಪತ್ರಿಕೆ, ಸದಾಕತ್ ಇಂಗ್ಲಿಷ್ ವಾರ ಪತ್ರಿಕೆಯ ಉಪಸಂಪಾದಕ, ಪ್ರಭಾ, ಕಂಠೀರವ, ಸ್ವದೇಶಾಭಿಮಾನಿ, ಜೀವನ, ಬಡವರ ಬಂಧು, ಉದಯಚಂದ್ರ, ಶಾಂತಿ ಸಂದೇಶ, ನವಶಕ್ತಿ, ಅಮಾನತ್ ಪತ್ರಿಕೆಗಳಲ್ಲಿ ಇವರು ಪತ್ರಕರ್ತ ರಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2009ನೆ ಸಾಲಿನ ಗೌರವ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ೧೯೯೮ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಇವರನ್ನು ಸನ್ಮಾನ ಮಾಡಲಾಗಿತ್ತು. 50ವರ್ಷಗಳ ಹಿಂದೆಯೇ ಬ್ಯಾರಿ ಹಾಡುಗಳನ್ನು ರಚಿಸಿ ಸ್ವತಃ ರಾಗ ಸಂಯೋಜಿಸಿ ಹಾಡುತ್ತಿದ್ದರು. ಅವರ ಕಾಲದಲ್ಲಿ ಕೆಲವು ಮುಸಲ್ಮಾನರು ಕನ್ನಡ ಬಳಸುವುದನ್ನು ವಿರೋಧಿಸುತ್ತಿದ್ದರು. ಇದರಿಂದಾಗಿ ಮುಸ್ಲಿಮರಲ್ಲಿ ಶೈಕ್ಷಣಿಕ ಹಿನ್ನಡೆಯುಂಟಾಯಿತೆಂಬ ಖಚಿತ ಅಭಿಪ್ರಾಯವನ್ನು ಶ್ರದ್ಧಾವಂತ ಮುಸಲ್ಮಾನನಾಗಿದ್ದ ನೂರಿ ಹೊಂದಿದ್ದರು. ಮದ್ರಸಗಳಲ್ಲಿ ಬೋಧನಾ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಬೇಕು.

ಈ ಬಗ್ಗೆ ಇಸ್ಲಾಂ ಧಾರ್ಮಿಕ ವಿದ್ವಾಂಸರಿಗೆ ತಿಳುವಳಿಕೆ ಮೂಡಿಸಬೇಕೆಂದು ನೂರಿ ಪತ್ರಿಕೆಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬ್ಯಾರಿ ಭಾಷಿಕ ಕುಟುಂಬದಿಂದ ಬಂದಿದ್ದ ಅವರು ಉರ್ದು, ಫಾರ್ಸಿ, ಅರಬಿ, ಹಿಂದಿ, ಮಲಯಾಳಂ, ತುಳು ಹಾಗೂ ತಮಿಳು ಭಾಷೆಗಳಲ್ಲಿ ಪ್ರಭುತ್ವ ಪಡೆದು ಈ ಭಾಷೆಗಳ ಶ್ರೀಮಂತ ಸಾಹಿತ್ವ ಸಂಪತ್ತನ್ನು ಕನ್ನಡಕ್ಕೆ ಅನುವಾದಿಸಿದ್ದರು.

ಪತ್ರಿಕಾರಂಗ, ಸಾಹಿತ್ಯ, ಅಧ್ಯಾಪನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು ಬಹುಮುಖ ಕರ್ಮಯೋಗಿಯಾಗಿದ್ದರು. ಸ್ವಲ್ಪ ಕಾಲ ಕೇರಳ ಹಾಗೂ ಕರ್ನಾಟಕಗಳಲ್ಲಿ ಅಧ್ಯಾಪನ ವೃತ್ತಿಯನ್ನೂ ನಡೆಸಿದ್ದರು. ದಿವಂಗತ ನೂರಿ ಆರು ದಶಕಗಳ ಕಾಲ ಕನ್ನಡ ಹಾಗೂ ಸಂಸ್ಕೃತಿಗಾಗಿ ಹೋರಾಟ ನಡೆಸಿದ್ದರೂ, ಸರಕಾರ ಅವರನ್ನು ಗುರುತಿಸದಿರುವುದು ದುರ್ದೈವದ ಸಂಗತಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-03

Tell a Friend

ಪ್ರತಿಸ್ಪಂದನ
Abbas munchoor, Bahrain
2012-09-03
Innalillahi wainnailaihi Rajivoon May allah rest his soul in peace.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri