ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಗುಜರಾತ್ ಹತ್ಯಾಕಾಂಡ ಸಂತ್ರಸ್ತರಿಗೆ ಧ್ವನಿಯಾದವರಿವರು...: ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ನ್ಯಾಯಕ್ಕಾಗಿ ಹೋರಾಡಿದ ರಿಯಲ್ ಹೀರೊಗಳು

ಭಾರತದ ಇತಿಹಾಸದ ಕರಾಳ ಅಧ್ಯಾಯವಾದ 2002ರ ಗುಜರಾತ್ ಹಿಂಸಾಚಾರ ನಡೆದು ಹತ್ತು ವರ್ಷಗಳೇ ಕಳೆದಿವೆ. ಆದರೆ ಈ ಭೀಕರ ಘಟನೆಯು ಈಗಲೂ ಭಾರತದ ರಾಜಕಾರಣದ ಕೇಂದ್ರ ಬಿಂದುವಾಗಿ, ಚರ್ಚೆಗೊಳಗಾಗುತ್ತಿದೆ. ಈ ಗಲಭೆಯ ಕುರಿತಾದ ನ್ಯಾಯಾಂಗ ಪ್ರಕ್ರಿಯೆ ಕೂಡಾ ನಿಧಾನವಾಗಿಯಾದರೂ, ದೃಢವಾಗಿ ಮುನ್ನಡೆಯುತ್ತಾ ಸಾಗುತ್ತಿದೆ. ಹಿಂಸಾಚಾರದಲ್ಲಿ ಬಲಿಯಾದ ನೂರಾರು ಅಮಾಯಕರಿಗೆ, ಸಂತ್ರಸ್ತರಿಗೆ ನ್ಯಾಯ ಒದಗಿಸುವ ಈ ಹೋರಾಟವು ನಿರಂತರ ವಾಗಿ ಸಾಗುತ್ತಿರುವುದರ ಶ್ರೇಯಸ್ಸು ಭಾರತೀಯ ಜನಸಮುದಾಯಕ್ಕೆ ಸೇರಬೇಕಾಗಿದೆ.


ಅನೇಕ ಮಂದಿ ಮುಸ್ಲಿಮೇತರರು,ಜಾತ್ಯತೀತ ಹಿಂದುಗಳು, ಸಿಖ್ಖರು, ಕ್ರೈಸ್ತರು ಹಾಗೂ ಜೈನರು ತಮಗೆದುರಾದ ಜೀವಬೆದರಿಕೆಯನ್ನು ಲೆಕ್ಕಿಸದೆ ಭಾರತೀಯ ಮುಸ್ಲಿಮರ ಪರವಾಗಿ ಹೋರಾಟ ನಡೆಸಿದ್ದಾರೆ. ಅವರಲ್ಲಿ ಹಲವಾರು ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಹಾಗೂ ಅವರ ಹಕ್ಕುಗಳನ್ನು ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

 

ಗುಜರಾತ್ ಗಲಭೆ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹಗಲಿರುಳು ಹೋರಾಡಿದವರಲ್ಲಿ ಪತ್ರಕರ್ತರದು ದೊಡ್ಡ ಪಾಲಿದೆ. ಮಾರುವೇಷದಲ್ಲಿ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಅಪರಾಧಿಗಳನ್ನು ಕಾನೂನಿನ ಬಲೆಗೆ ಬೀಳಿಸುವ ಮೂಲಕ ಪತ್ರಿಕಾ ಧರ್ಮವನ್ನು ಎತ್ತಿಹಿಡಿದಿದ್ದಾರೆ. ಹಲವಾರು ನ್ಯಾಯವಾದಿಗಳು ಕೂಡಾ ಜೀವಬೆದರಿಕೆ ಹಾಗೂ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿ, ಹತ್ಯಾಕಾಂಡ ಸಂತ್ರಸ್ತರ ಬೆಂಬಲಕ್ಕೆ ನಿಂತು ಹೋರಾಡಿದ್ದಾರೆ.


ಗುಜರಾತ್ ಗಲಭೆಗಳು ಭಾರತದ ವರ್ಚಸ್ಸಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಆದರೆ ಗಲಭೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಡೆದ ಹೋರಾಟವು ಮಾತ್ರ ಸ್ವತಂತ್ರ ಭಾರತಕ್ಕೆ ಹೆಮ್ಮೆ ತರುವಂತಹ ವಿಷಯ. ಗಲಭೆ ಸಂತ್ರಸ್ತರ ಪರವಾಗಿ ಅಹರ್ನಿಶಿ ಹೋರಾಡಿದ ಮಾನವಹಕ್ಕು ಕಾರ್ಯಕರ್ತರ ವಿರುದ್ಧ ಸಮಾಜದ ಒಂದು ದೊಡ್ಡ ವರ್ಗವು ಅಸಮಾಧಾನ ತಾಳಿದೆಯೆಂಬುದನ್ನು ಅಲ್ಲಗಳೆಯಲಾರದು. ಆದರೆ ಈ ವರ್ಗದಲ್ಲಿರುವ ಬಹುತೇಕ ಮಂದಿ ಕೋಮುವಾದಿ ಮನೋಭಾವದ ಮಧ್ಯಮವರ್ಗದವರಾಗಿದ್ದಾರೆ. ಅಂತಹವರು ಪ್ರತಿಯೊಂದು ದೇಶದಲ್ಲಿ, ಪ್ರತಿಯೊಂದು ಕಾಲಾವಸ್ಥೆಗಳಲ್ಲಿ ಕಾಣಸಿಗುತ್ತಾರೆ. ಹೀಗಿರುವಾಗ ಭಾರತ ಕೂಡಾ ಅದಕ್ಕೆ ಹೊರತಲ್ಲ.


ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದುಗಳು, ಅಹ್ಮದಿಯಾಗಳು ಅಥವಾ ಕ್ರೈಸ್ತ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಧ್ವನಿಯೆತ್ತುವ ಮಾನವಹಕ್ಕು ಕಾರ್ಯಕರ್ತರ ಬಗ್ಗೆ ಅಸಮಾಧಾನಹೊಂದಿರುವ ಒಂದು ವಿಶಾಲ ಜನಸಮುದಾಯ ಅಲ್ಲಿಯೂ ಇದೆ. ಈ ಮಾನವಹಕ್ಕು ಕಾರ್ಯಕರ್ತರು, ವಿನಾಕಾರಣ ಬೊಬ್ಬೆ ಹೊಡೆಯುವವರು ಎಂದು ಜರೆಯುವ ಈ ಮಂದಿ, ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ಗಳಲ್ಲಿ ತಮ್ಮ ಧ್ವೇಷವನ್ನು ಕಾರುತ್ತಿರುತ್ತಾರೆ.

ವಿಶೇಷವಾಗಿ ಸರಕಾರದಿಂದಲೇ ವಿರೋಧವಿದ್ದಾಗ ಅನ್ಯ ಸಮುದಾಯಕ್ಕೆ ಸೇರಿದ ಓರ್ವ ಪೀಡಿತ ಅಥವಾ ವ್ಯಕ್ತಿಯ ಪರ ನಿಂತು ಹೋರಾಡುವುದು ತುಂಬಾ ಸುಲಭದ ಕೆಲಸವೇನಲ್ಲ. ಪ್ರಾಮಾಣಿಕವಾಗಿ ಹೇಳಬೇಕಾದರೆ, ಗುಜರಾತ್ ಗಲಭೆಯ ಪೀಡಿತರ ಪರವಾಗಿ ನ್ಯಾಯಾಂಗ ಹೋರಾಟವನ್ನು ಹೇಗೆ ಆರಂಭಿಸುವುದೆಂಬ ಬಗ್ಗೆ ಮುಸ್ಲಿಂ ಸಮುದಾಯದ ಬಹುತೇಕ ಮಂದಿಗೆ ಅರಿವಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಬಹುತೇಕ ಪ್ರಜ್ಞಾವಂತ ಮುಸ್ಲಿಮೇತರರು ಮುಂದೆ ಬಂದು ಗುಜರಾತಿ ಮುಸ್ಲಿಮರ ಪರವಾಗಿ ನ್ಯಾಯಾಂಗ ಹೋರಾಟಕ್ಕಿಳಿದರು.


ಗುಜರಾತ್ ಗಲಭೆಯ ಹಿನ್ನೆಲೆಯಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಹರ್ಷ್ ಮಂಧೇರ್ ರಾಜೀನಾಮೆ ನೀಡಲು ಕಾರಣವೇನು ಗೊತ್ತೇ?. ಹಿಂಸಾಚಾರ ನಡೆಯುತ್ತಿದ್ದ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಗಲಭೆಯನ್ನು ಹತ್ತಿಕ್ಕುವಂತೆ ತಾನು ನೀಡಿದ ಆದೇಶವನ್ನು ಸಹೋದ್ಯೋಗಿಗಳು ಪಾಲಿಸದಿರುವುದರಿಂದ ಬೇಸತ್ತು ತಾನು ರಾಜೀನಾಮೆ ನೀಡಿದ್ದಾಗಿ ಮಂಧೇರ್ ಹೇಳಿದ್ದರು.


ರಾಜೀನಾಮೆಯ ಬಳಿಕ ಮಂಧೇರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಈಗಲೂ ಕೂಡಾ ಅವರು ಗಲಭೆ ಸಂತ್ರಸ್ತರ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇನ್ನು ಗಲಭೆ ಪೀಡಿತರ ಪರವಾಗಿ ನಿರಂತರ ಕಾನೂನು ಹೋರಾಟ ನಡೆಸಿದ ತೀಸ್ತಾ ಸೆಟಲ್ವಾಡ್ ದಿಟ್ಟತನದ ಸಂಕೇತವಾಗಿದ್ದಾರೆ. ಆದರೆ ಬಲಪಂಥೀಯ ಕೋಮುವಾದಿಗಳಿಗೆ ಮಾತ್ರ ಆಕೆಯ ಮೇಲೆ ಬದ್ಧದ್ವೇಷ.

ನಿಜಕ್ಕೂ ಸೆಟಲ್ವಾಡ್ ಬಡ ಮುಸಲ್ಮಾನರ ಪಾಲಿಗೆ ಅಪದ್ಭಾವಂಧವರಾಗಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟವರಿಗೆ, ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಕೆ ಹಲವಾರು ಅಪಾಯ, ಅಪಮಾನಗಳನ್ನು ಎದುರಿಸಿದ್ದಾರೆ. ಆದರೂ ಸೆಟಲ್ವಾಡ್ ಇವ್ಯಾವುದಕ್ಕೂ ಮಣಿಯದೆ ತನ್ನ ಹೋರಾಟವನ್ನು ಮುನ್ನಡೆಸಿದ್ದಾರೆ.


ಇನ್ನು ಜನ ಸಂಘರ್ಷ ಸಮಿತಿಯ ನಾಯಕ ಮುಕುಲ್ ಸಿನ್ಹಾ (ಜೆಎಸ್‌ಎಂ)ರನ್ನು ಮರೆಯುವ ಹಾಗಿಲ್ಲ. ಜನಸಂಘರ್ಷ ಸಮಿತಿಯು ಭಾರೀ ಕಷ್ಟಪಟ್ಟು, ಗಲಭೆಗೆ ಸಂಬಂಧಿಸಿದ ನೂರಾರು ಮಹತ್ವದ ಸಾಕ್ಷಗಳನ್ನು, ದಾಖಲೆಗಳನ್ನು ಸಂಗ್ರಹಿಸಿತ್ತು. ಅವರ ಹೋರಾಟದ ಫಲವೋ ಎಂಬಂತೆ ಇಂದು ಹಿಂಸಾಚಾರದ ಅನೇಕ ಪಾತಕಿಗಳು ಜೈಲು ಕಂಬಿಗಳನ್ನೆಣಿಸುವಂತಾಗಿದೆ.

ಮಾನವಹಕ್ಕುಗಳ ಪ್ರಬಲ ಹೋರಾಟಗಾರ ಪ್ರಶಾಂತ್ ಭೂಷಣ್, ಪ್ರತಿಯೊಂದು ಮಾನವಹಕ್ಕು ಹಾಗೂ ಕಾನೂನು ವೇದಿಕೆಗಳಲ್ಲೂ ಗಲಭೆ ಸಂತ್ರಸ್ತರ ಪರ ಧ್ವನಿಯೆತ್ತಿದರು. ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿರುವ ಪ್ರಶಾಂತ್ ಭೂಷಣ್ ಜಾತ್ಯತೀತತೆಯ ಸಂರಕ್ಷಣೆಗೆ ಪ್ರಬಲ ಕಳಕಳಿಯನ್ನು ಹೊಂದಿದ್ದಾರೆ.

ಸರಕಾರದಲ್ಲಿ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ಆರ್.ಬಿ. ಶಿವಕುಮಾರ್ ವ್ಯವಸ್ಥೆಯನ್ನೇ ಎದುರುಹಾಕಿಕೊಂಡು ಹೋರಾಟ ನಡೆಸಿದುದನ್ನು ಮರೆಯುವ ಹಾಗಿಲ್ಲ. ಗುಜರಾತ್‌ನಲ್ಲಿ ನಡೆದ ಮಾರಣಹೋಮವನ್ನು ಕಂಡು ಹತಾಶರಾದ ಶಿವಕುಮಾರ್, ಮಾನವೀಯತೆ ಹಾಗೂ ಅನುಕಂಪದೊಂದಿಗೆ ಹೋರಾಟಕ್ಕಿಳಿದರು.

2002ರಿಂದೀಚೆಗೆ ಪ್ರತಿಯೊಂದು ವೇದಿಕೆಯಲ್ಲೂ ಅವರು ಗುಜರಾತ್ ಹಿಂಸಾಚಾರದ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯತೊಡಗಿದರು. ಗುಜರಾತ್ ಹಿಂಸಾಚಾರದಲ್ಲಿ ರಾಜಾರೋಷವಾಗಿ ಅಮಾಯಕರ ಬರ್ಬರ ಹತ್ಯಾಕಾಂಡ ನಡೆಸುತ್ತಿದ್ದ ಗಲಭೆಕೋರರ ಜೊತೆ ಪೊಲೀಸರು ಹಾಗೂ ರಾಜಕಾರಣಿಗಳು ಶಾಮೀಲಾಗಿರುವುದನ್ನು ಎಳೆಎಳೆಯಾಗಿ ಅವರು ಅನಾವರಣಗೊಳಿಸಿದರು.

ಇನ್ನೋರ್ವ ಐಪಿಎಸ್ ಅಧಿಕಾರಿ ಸಂಜೀವ್ ಭಟ್, ತನ್ನ ಇಡೀ ವೃತ್ತಿ ಬದುಕನ್ನು ಒತ್ತೆಯಿಟ್ಟು ನ್ಯಾಯಕ್ಕಾಗಿ ಹೋರಾಡಿದರು. ಗುಜರಾತ್ ಹಿಂಸಾ ಚಾರದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯ ಪ್ರಮುಖ ಪಾತ್ರವಿತ್ತೆಂಬುದನ್ನು ಅವರು ಪದೇ ಪದೇ ಸಾರಿದರು. ಗಲಭೆ ಸ್ಫೋಟಿಸಿದ ಹಿಂದಿನ ದಿನ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ತಾನು ಕೂಡಾ ಪಾಲ್ಗೊಂಡಿದ್ದೆ. ಸಭೆಯಲ್ಲಿ ಮೋದಿ ಗಲಭೆನಿರತರ ಬಗ್ಗೆ ಮೃದುವಾಗಿ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ದ್ದರೆಂದು ಸಂಜೀವ್ ಭಟ್ ಬಹಿರಂಗಪಡಿಸಿದ್ದರು. ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಬೇಕಾದರೆ ಯಾರಿಗೂ ಕೂಡಾ ಅಸಾಧಾರಣವಾದ ಧೈರ್ಯ ಬೇಕಾಗುತ್ತದೆ. ಸಂಜಯ್ ಭಟ್ ನಿರ್ಭೀತಿಯಿಂದ ಈ ಕಾರ್ಯವನ್ನು ನಡೆಸಿದ್ದಾರೆ. ಆದರೆ ಇದಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಯಿತು. ಮೋದಿ ಸರಕಾರದ ನಿರಂತರ ಕಿರುಕುಳದಿಂದಾಗಿ ಉನ್ನತ ಪೊಲೀಸ್ ಅಧಿಕಾರಿ ಹುದ್ದೆಯಿಂದಲೇ ಅವರು ನಿರ್ಗಮಿಸಬೇಕಾಯಿತು. ಕೆಲವು ಸಮಯ ಜೈಲುವಾಸವನ್ನೂ ಅನುಭವಿಸು ವಂತಾಯಿತು.


2002ರ ಗಲಭೆಯ ವೇಳೆ ಮೇಲಧಿಕಾರಿಗಳ ಆದೇಶವನ್ನು ಲೆಕ್ಕಿಸದೆ ಸಂತ್ರಸ್ತರ ರಕ್ಷಣೆಗೆ ನಿಂತು ಕರ್ತವ್ಯ ನಿಷ್ಠೆ ಮೆರೆದ ರಾಹುಲ್ ಶರ್ಮಾರಂತಹ ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಭಾವನಗರ ದಲ್ಲಿ ಸುಮಾರು 300 ಮಂದಿ ಮಕ್ಕಳು ನೆಲೆಸಿದ್ದ ಮದ್ರಸಾವೊಂದಕ್ಕೆ ಬೆಂಕಿ ಹಚ್ಚಲು ಮುಂದಾದ ಗಲಭೆಕೋರರ ಗುಂಪಿನ ಮೇಲೆ ಗುಂಡು ಹಾರಿಸುವಂತೆ ಆದೇಶಿಸುವ ಮೂಲಕ ಒಂದು ದೊಡ್ಡ ಹತ್ಯಾಕಾಂಡವನ್ನು ತಪ್ಪಿಸಿದ್ದರು.

ಗಲಭೆಕೋರರ ಜೊತೆ ರಾಜಕಾರಣಿಗಳ ಅಪವಿತ್ರ ನಂಟಿನ ಬಗ್ಗೆ ರಾಹುಲ್ ಶರ್ಮಾಗೆ ಮೊದಲೇ ಮಾಹಿತಿಯಿತ್ತು. ಅಪರಾಧಿಗಳನ್ನು ಹಿಡಿದು ದಂಡಿಸಬೇಕಾದ ಸರಕಾರ ಅವರ ವಿರುದ್ಧವೇ ದೋಷಾರೋಪಪಟ್ಟಿಯನ್ನು ಸಿದ್ಧಪಡಿಸಿತ್ತು.

ಸಂಜಯ್‌ಭಟ್, ರಾಹುಲ್ ಶರ್ಮಾರಂತಹ ದಕ್ಷ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಬದಲು ಸರಕಾರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ಗುಜರಾತ್ ಹಿಂಸಾಚಾರದಲ್ಲಿ ಅಪಾರವಾದ ಸಾವುನೋವು ಸಂಭವಿಸಿರುವುದೇನೂ ಹೌದು. ಆದರೆ ರಾಹುಲ್‌ಶರ್ಮಾರಂತಹ ಸಮರ್ಥ ಹಾಗೂ ಕರ್ತವ್ಯನಿಷ್ಠ ಅಧಿಕಾರಿಗಳಿಲ್ಲದೆ ಹೋಗಿದ್ದಲ್ಲಿ, ಸಂಭವಿಸಬಹುದಾಗಿದ್ದ ಸಾವುನೋವುಗಳನ್ನು ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲ.

ಗುಜರಾತ್ ಸಂತ್ರಸ್ತರ ಪರವಾಗಿ ಹೋರಾಡಿದ ಹರ್ಷ್ ಮಂಧೇರ್ ಸಿಖ್ಖ್ ಧರ್ಮೀಯರು. ಮಲ್ಲಿಕಾ ಸಾರಾಭಾಯಿ ಜೈನ ಕುಟುಂಬಕ್ಕೆ ಸೇರಿದವರು. ಗಲಭೆಯಲ್ಲಿ ನೊಂದು ಬೆಂದ ಹಲವಾರು ಮುಸ್ಲಿಮರಿಗೆ ನ್ಯಾಯವನ್ನು ಒದಗಿಸುವ ಕಾರ್ಯದಲ್ಲಿ ಕ್ರೈಸ್ತ ಧಾರ್ಮಿಕ ಮುಖಂಡರೂ ಶ್ರಮಿಸಿದ್ದರು. ಜಾತ್ಯತೀತ ಭಾರತದ ನಿರ್ಮಾಣಕ್ಕೆ ಭಾರತೀಯ ಸಂವಿಧಾನವು ತೋರಿದ ಬದ್ಧತೆಯನ್ನು ಮರೆಯಲು ಸಾಧ್ಯವೇ ಇಲ್ಲ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-03

Tell a Friend

ಪ್ರತಿಸ್ಪಂದನ
SHAMEEM, MANGALORE
2012-09-03
ನಮ್ಮ ದೇಶ ಈವತ್ತಿಗೂ ಜಾತ್ಯತೀತ ರಾಷ್ಟ್ರವಾಗಿ ಉಳಿದಿದ್ದರೆ ಅದು ಈ ದೇಶದ ಬಹುತೇಕ ಜಾತ್ಯತೀತ ಹಿಂದೂ ಸಹೋದರರಿಂದ ಎನ್ನುದು ಸಂಘಪರಿವಾರ ಅರ್ಥ ಮಾಡಿಕೊಳ್ಳಬೇಕಾಗಿದೆ.
ಜಾತ್ಯತೀತ , ಮಂಗಳೂರು
2012-09-03
ಎಲ್ಲರು ತಿಳಿಯಬೇಕಾದದ್ದು ಶೇಖಡ 80 % ರಷ್ಟು ಹಿಂದೂಗಳು ಸಂಘ ಪರಿವಾರದವರಲ್ಲ, ಇವರೇ ದೇಶದ ಹೆಮ್ಮೆಯ ಮಕ್ಕಳು.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri