ಪ್ರಕಟಿಸಿದ ದಿನಾಂಕ : 2012-09-02
ಬೆಂಗಳೂರು, ಸೆ.2: ಉಗ್ರರ ಜಾಡು ಹಿಡಿದು ಹೊರಟಿರುವ ಕರ್ನಾಟಕದ ಪೊಲೀಸರು ಭಯೋತ್ಪಾದನಾ ಜಾಲವನ್ನು ತುಂಡರಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸಿಸಿಬಿ ಪೊಲೀಸರ ಮತ್ತೊಂದು ತಂಡ ಬಂಧಿತ ಉಗ್ರರಿಂದ ಮಾಹಿತಿ ಕಲೆ ಹಾಕಿದ್ದು, ವಿಚಾರಣೆ ವೇಳೆ ಹೊರ ಬಿದ್ದ ಮಾಹಿತಿ ಆತಂಕಕಾರಿಯಾಗಿದೆ. ಪ್ರಮುಖ ಕಂಪನಿಗಳು, ದೇಗುಲಗಳು, ಗಣ್ಯಾತಿಗಣ್ಯರು ಉಗ್ರರ ಟಾರ್ಗೆಟ್ ಹಿಟ್ ಲಿಸ್ಟ್ ನಲ್ಲಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆಯ ಗಣತಿಯಂತೆ ಒಟ್ಟು 17 ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಸಂಚು ಹಾಗೂ ಟಾರ್ಗೆಟ್ ಅಸಮಗ್ರ ಪಟ್ಟಿ ಇಲ್ಲಿದೆ.
ಟಾರ್ಗೆಟ್ ಕಂಪನಿಗಳು, ಸೌಧಗಳು, ತಾಣಗಳು: * ಡಿಆರ್ ಡಿಒ * ಎಚ್ ಎಎಲ್ * ಇಸ್ರೋ * ಐಐಎಸ್ ಇ * ವಿಧಾನಸೌಧ * ಬಿಐಎಎಲ್ * ವಿಕಾಸಸೌಧ * ಚಿನ್ನಸ್ವಾಮಿ ಕ್ರೀಡಾಂಗಣ * ಇಸ್ಕಾನ್ * ಎಲೆಕ್ಟ್ರಾನಿಕ್ಸ್ ಸಿಟಿ ಇನ್ಫೋಸಿಸ್ * ವಿಪ್ರೋ * ಐಬಿಎಂ
ದೇಗುಲಗಳು: * ಧರ್ಮಸ್ಥಳ ಮಂಜುನಾಥಸ್ವಾಮಿ ದೇಗುಲ * ಕೊಲ್ಲೂರು ಮೂಕಾಂಬಿಕಾ ದೇಗುಲ * ಉಡುಪಿ ಶ್ರೀಕೃಷ್ಣ ಮಠಗಳು * ಮಂಗಳೂರಿನ ಗೋಕರ್ಣನಾಥೇಶ್ವರ ದೇಗುಲ, ಕುದ್ರೋಳಿ ದೇಗುಲ
* ಕೈಗಾ ಅಣು ವಿದ್ಯುತ್ ಸ್ಥಾವರ * ಕಾರಾವಾರದ ಸೀ ಬರ್ಡ್ ನೌಕಾನೆಲೆ * ಮೈಸೂರು ಅರಮನೆ, ಅಣೆಕಟ್ಟುಗಳು
ಎಷ್ಟು ಜನ ಇದ್ದಾರೆ?: ಸುಮಾರು 20 ಜನರ ತಂಡಕ್ಕೆ ತರಬೇತಿ ನೀಡಲಾಗಿದ್ದು, ಎಲ್ಲರೂ ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಕ್ ಸಂಘಟನೆ ಸಂಪರ್ಕಿತರು. ಎಲ್ಲೆಲ್ಲಿ ಕಾರ್ಯಾಚರಣೆ: ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದಾರೆ.
ಆರ್ಥಿಕ ನೆರವು : ಉಗ್ರರಿಗೆ ಬೇಕಾದ ಆರ್ಥಿಕ ನೆರವು ಒದಗಿಸಲು ಸಿಮಿ ಸಂಘಟನೆ ಸಂಪರ್ಕ ಹೊಂದಿರುವ ಹೋಟೆಲ್ ಉದ್ಯಮಿಯೊಬ್ಬರನ್ನು ಬಳಸಿಕೊಳ್ಳಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ನೆಲೆಸಿರುವ ಈತನ ಬಗ್ಗೆ ಸುಳಿವು ಇನ್ನೂ ಸಿಕ್ಕಿಲ್ಲ. ಬಂಧಿತ ಶಂಕಿತ ಉಗ್ರರಿಗೆ ಬೇಕಾದ ಸಕಲ ವ್ಯವಸ್ಥೆಯ ಜವಾಬ್ದಾರಿಯನ್ನು ಈ ವ್ಯಕ್ತಿ ಹೊತ್ತಿದ್ದ. ಶಸ್ತ್ರಾಸ್ತ್ರಗಳಿಂದ ಹಿಡಿದು ಕಾಲೇಜು ಸೀಟು ದೊರೆಕಿಸಿಕೊಡುವುದರ ತನಕ ಈತನ ಕೈಚಾಚಿದೆ ಎನ್ನಲಾಗಿದೆ.
ಅಲ್ ಖೈದಾ ಪ್ರೇರಣೆ: ಸಿಸಿಬಿ ಪೊಲೀಸರು, RAW ತಂಡದಿಂದ ವಿಚಾರಣೆಗೆ ಒಳಗಾಗಿರುವ 11 ಜನ ಶಂಕಿತರು ತಮ್ಮ ಈ ಕಾರ್ಯಾಚರಣೆಗೆ ಇಂಟರ್ನೆಟ್ ನಲ್ಲಿ ಲಭ್ಯವಿರುವ ಲಷ್ಕರ್ ಇ ಯೊಯ್ಬಾ, ಅಲ್ ಖೈದಾ ಸಂಘಟನೆಯ ಪ್ರಚೋದನಾಕಾರಿ ಭಾಷಣಗಳು ಪ್ರೇರಣೆ ನೀಡಿತು ಎಂದಿದ್ದಾರೆ. ಅಮೆರಿಕ, ಭಾರತ, ಇಸ್ರೇಲ್ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಶಸ್ತ್ರ ಸಜ್ಜಿತ ಯುದ್ಧ ನಡೆಸುವುದು ಹೇಗೆ ಎಂಬುದು ಈ ವೆಬ್ ಮ್ಯಾಗಜೀನ್ ನಲ್ಲಿ ಇದೆ ಎಂದು ಸಿಕ್ಕಿ ಬಿದ್ದಿರುವ ಶಂಕಿತ ಉಗ್ರ ಬಾಯ್ಬಿಟ್ಟಿದ್ದಾನೆ.
ಯಾವ ಸಮಯ ನಿಗದಿ: ಪತ್ರಕರ್ತರು, ರಾಜಕಾರಣಿ ಹಾಗೂ ಹಿಂದೂ ಸಂಘಟನೆ ಮುಖಂಡರ ಹತ್ಯೆ ಆ.31ರೊಳಗೆ ಮುಗಿಯಲು ಸ್ಕೆಚ್ ಹಾಕಲಾಗಿತ್ತು. ಉಳಿದಂತೆ ಸರಣಿ ಸ್ಫೋಟ, ದೇಗುಲ ಧ್ವಂಸ, ಜನನಿಬಿಡ ಪ್ರದೇಶಗಳಲ್ಲಿ ಕೋಲಾಹಾಲ ಎಬ್ಬಿಸುವ ಕೃತ್ಯಕ್ಕೆ ಗಣೇಶ ಚತುರ್ಥಿ, ದೀಪಾವಳಿ ವೇಳೆ ಹಂತ ಹಂತವಾಗಿ ಕಾರ್ಯಚರಣೆ ಮಾಡಲು ಸಂಚು ರೂಪಿಸಲಾಗಿತ್ತು
ವರದಿಯ ವಿವರಗಳು |
 |
ಕೃಪೆ : ಒನ್ ಇಂಡಿಯಾ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-02
|
|
Ronald, Udupi | 2012-09-03 | ಈ ಸುದ್ದಿ ಸತ್ಯವಾದರೆ, ಇವರಿಗೆ ಹಗಲಿನ ಬೆಳಕು ನೋಡಲು ಸಿಗಬಾರದು! ಇನ್ನುಳಿದ ಕನಿಷ್ಠ ನೂರು ಜನರಿಗೂ ಇದೆ ಶಿಕ್ಷೆ ಸಿಗಬೇಕು! ನಮ್ಮ ಊರಿನ ನೈತಿಕ ಪೊಲೀಸರಿಗೂ ಇದೆ ಶಿಕ್ಷೆ ವಿಧಿಸಬೇಕು! ಆಗ ನಮ್ಮ ರಾಜ್ಯ ಅಬಿವ್ರಿದ್ಧಿ ಹಾದಿ ಹಿಡಿಯುವುದು ಖಂಡಿತ! |
|