ಅಖಿಲ ಭಾರತ ತುಳು ಒಕ್ಕೂಟ (ರಿ.) ನೂತನ ಅಧ್ಯಕ್ಷರಾಗಿ ಧರ್ಮಪಾಲ್ ಯು.ದೇವಾಡಿಗ ಆಯ್ಕೆ |
ಪ್ರಕಟಿಸಿದ ದಿನಾಂಕ : 2012-09-02
ಮೂಡಬಿದ್ರಿ: ಅಖಿಲ ಭಾರತ ತುಳು ಒಕ್ಕೂಟ (ರಿ.)ಇದರ ೨೦೧೨-೧೫ರ ನೂತನ ಅಧ್ಯಕ್ಷರಾಗಿ ಮುಂಬಯಿ ಅಲ್ಲಿನ ಉದ್ಯಮಿ, ವಿಶ್ವತುಳು ಸಮ್ಮೇಳನೋ ಸಮಿತಿಯ ಉಪಾಧ್ಯಕ್ಷ ಧರ್ಮಪಾಲ್ ದೇವಾಡಿಗ ಅವರು ಸರ್ವಾನುಮತದಿಂದ ಆಯ್ಕೆಯಾದರು.
ಇಂದಿಲ್ಲಿ ಶನಿವಾರ ಸಂಜೆ ಮೂಡಬಿದ್ರಿಯ ಸಮಾಜ ಮಂದಿರದ ಸಭಾಗೃಹದಲ್ಲಿ ಜರುಗಿದ ಅಖಿಲ ಭಾರತ ತುಳು ಒಕ್ಕೂಟ (ರಿ.)ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಲ| ದಿವಾಕರ್ ಎಸ್.ಶೆಟ್ಟಿ ಸಾಂಗ್ಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾಸಭೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ದಿವಾಕರ ಎಸ್.ಶೆಟ್ಟಿ ಸಾಂಗ್ಲಿ ಮತ್ತು ದಾಮೋದರ ನಿಸರ್ಗ ಮಂಗಳೂರು (ಗೌರವಾಧ್ಯಕ್ಷರುಗಳು),ರತ್ನ ಕುಮಾರ್ ಎಂ. (ಕಾರ್ಯದರ್ಶಿ),ಜಯಕರ ಶೆಟ್ಟಿ ಇಂದ್ರಾಳಿ (ಕೋಶಾಧಿಕಾರಿ),ರೋನ್ಸ್ ಬಂಟ್ವಾಳ್ (ಸಹ ಕಾರ್ಯದರ್ಶಿ),ನಿಟ್ಟೆ ಶಶಿಧರ್ ಶೆಟ್ಟಿ,ಚಂದ್ರಹಾಸ ದೇವಾಡಿಗ ಬೆದ್ರ,ಶ್ರೀನಿವಾಸ ಮಂಕುಡೆ ಸಾಂಗ್ಲಿ,ವಿಜಯಕುಮಾರ್ ಕುಲಶೇಖರ ಮತ್ತು ಶ್ರೀಮತಿ ಜಯಂತಿ ಎಸ್.ಬಂಗೇರಾ (ಸಂಘಟನಾ ಕಾರ್ಯದರ್ಶಿಗಳು)ಇವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬಂಟ್ವಾಳ್ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-02
|
|
Shekar Moily Padebettu, Udipi/India | 2012-09-02 | ಅಖಿಲ ಭಾರತ ತುಳು ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಮ್ಮ ಆತ್ಮೀಯ ಬಂಧು ಮತ್ತು ಆಪ್ತ ಮಿತ್ರರಾಗಿರುವ ಶ್ರೀಮಾನ್ ಧರ್ಮಪಾಲ್ ದೇವಾಡಿಗನವರೆ ಇದೋ ನಮ್ಮ ಹಾರ್ದಿಕ ಶುಭಾಶಯಗಳು.ಶ್ರೀಮತಿ ಮತ್ತು ಶ್ರೀಮಾನ್ ಶೇಕರ್ ಮೊಯಿಲಿ ಸಂಸಾರ.ಗಂಪ ಹೌಸ್,ಪಡುಬಿದ್ರಿ. |
ರಫೀಕ್ ದಲ್ಕಾಜೆ , ಕೋಲ್ಪೆ | 2012-09-02 | ಅಖಿಲ ಭಾರತ ತುಳು ಒಕ್ಕೂಟಕ್ಕೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡ ಧರ್ಮಪಾಲ್ ಯು.ದೇವಾಡಿಗರವರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಅಭಿನಂದನೆಗಳು.
|
Sudhakar , Thumbay | 2012-09-02 | "CONGRATS" Mr,Dharmapal Devadiga & All Members of Akhila Bharatha Tulukoota. be half all members of ''Shri Shanaishchara Seva Samiti-DUBAI |
|