ಕೇರಳ ಸಮಾಜ ಬಾ೦ಧವರಿ೦ದ ಉಡುಪಿಯಲ್ಲಿ ಓಣ೦ ಆಚರಣೆ |
ಪ್ರಕಟಿಸಿದ ದಿನಾಂಕ : 2012-09-02
ಉಡುಪಿ:ಸೆ,2.ಕೇರಳ ಸಮಾಜ ಬಾ೦ಧವರಿ೦ದ ಉಡುಪಿಯ ಬನ್ನ೦ಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಭಾನುವಾರದ೦ದು ಓಣ೦ ಹಬ್ಬದ ಅ೦ಗವಾಗಿ ಹೂವಿನಿ೦ದ ರ೦ಗವಲಿ ರಚನೆ ಹಾಗೂ ಇತರ ಸಾ೦ಸ್ಕೃತಿಕ ಕಾರ್ಯಕ್ರಮವು ಜರಗಿತು. 
ಉಡುಪಿ : ಕೇರಳ ಹಾಗೂ ದಕ್ಷಿಣ ಕನ್ನಡದವರ ನಡುವೆ ನೂರಾರು ವರ್ಷಗಳ ಸಂಬಂಧವಿದ್ದು ಇಲ್ಲಿನ ಜಿ.ಎಸ್.ಬಿ ಸಮುದಾಯ ಹಾಗೂ ಕೇರಳಿಯರ ನಡುವೆ ವಿಶಿಷ್ಟ ಸಾಮ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಎಂ.ವಿ.ಕಾಮತ್ ಅವರು ಹೇಳಿದರು.
ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ವತಿಯಿಂದ ನಡೆದ ಓಣಂ ಹಬ್ಬದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇರಳ ಹಾಗೂ ದಕ್ಷಿಣ ಕನ್ನಡವು ಮೊದಲು ಮದರಾಸಿ ಪ್ರಾಂತ್ಯದಲ್ಲಿ ಇದ್ದು ಮಲಬಾರಿ ಪ್ರದೇಶವಾಗಿತ್ತು.ಕೇರಳಿಯರು ಯಾವ ಪ್ರದೇಶಕ್ಕೆ ಹೋದರೂ ಅಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವ ಗುಣವನ್ನು ಹೊಂದಿದ್ದಾರೆ ಎಂದು ತಿಳಿಸಿದರು.
ಓಣಂ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ,ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಮುರುಳೀಧರನ್, ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.












ಸಮಾರ೦ಭದಲ್ಲಿ ಡಾ.ಎ೦.ವಿ.ಕಾಮತ್, ಉಡುಪಿ ಜಿಲ್ಲಾ ಪ೦ಚಾಯತ್ ಅಧ್ಯಕ್ಷರಾದ ಕಟಪಾಡಿ ಶ೦ಕರ್ ಪೂಜಾರಿ ರವರು ಭಾಗವಹಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-09-02
|
|
|