ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಹುಚ್ಚಿನಲ್ಲೂ ಒಂದು ತರ್ಕವಿರಬಹುದೇ?: ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಈದ್ ನಮಾಝ್ ಸಲ್ಲಿಸಲು ಯತ್ನಿಸಿದ ವಿದ್ಯಮಾನ ಸೃಷ್ಟಿಸಿದ ಸಂಚಲನ

ಹೊಸದಿಲ್ಲಿ, ಸೆ. 1: ಮುಸ್ಲಿಮರ ಅತ್ಯಂತ ದೊಡ್ಡ ಹಬ್ಬ ಈದ್ ಬಳಿಕ ಈಶಾನ್ಯ ಭಾರತದ ಜನರ ಮೆಲೆ ದಾಳಿ ನಡೆಸಲಾಗುತ್ತದೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಬೆಂಗಳೂರು, ಹೈದರಾಬಾದ್, ಮುಂಬೈಗಳಲ್ಲಿ ಹರಿದಾಡಿದ ಹೊರತಾಗಿಯೂ ಈ ಹಬ್ಬ ಶಾಂತಿಯುತವಾಗಿ ನಡೆದುಹೋಯಿತು. ಅಷ್ಟೇ ಅಲ್ಲ, ಅನನ್ಯವೆಂದು ಹೇಳಬಹುದಾದ ಬಾಂಧವ್ಯವೊಂದಕ್ಕೂ ಈ ಬಾರಿಯ ಹಬ್ಬ ಸಾಕ್ಷಿ ಯಾಯಿತು. ಈ ಬಾಂಧವ್ಯ ಘಟನೆಯ ಕೇಂದ್ರ ಸ್ಥಾನದಲ್ಲಿದ್ದದ್ದು ಒಂದು ಸಾಮಾನ್ಯೇತರ ವ್ಯಕ್ತಿತ್ವ.

ಈದ್ ದಿನದಂದು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳ ಮುಸ್ಲಿಮರನ್ನು ಅಭಿನಂದಿಸಲು ಮುಖ್ಯಮಂತ್ರಿಗಳಾದ ತರುಣ್ ಗೊಗೊಯ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಈದ್ಗಾಗಳಿಗೆ ಬಂದರು. ಜೊತೆಗೆ, ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಕೂಡ ಹಬ್ಬದ ದಿನ ಭೋಪಾ ್ನಲ್ಲಿನ ಆರ್‌ಎಸ್‌ಎಸ್ ಕಚೇರಿಯಲ್ಲಿರುವ ತನ್ನ ನಿವಾಸದಿಂದ ಹೊರಟು ಬಂದರು. ಅವರು ಬಂದದ್ದು ಮುಸ್ಲಿಮರನ್ನು ಕೇವಲ ಅಭಿನಂದಿಸಲು ಮಾತ್ರವಲ್ಲ, ತಾಜುಲ್ ಮಸೀದಿಯಲ್ಲಿ ಈದ್ ನಮಾಝ್ ಕೂಡ ನಿರ್ವಹಿಸಲು ಬಯಸಿದ್ದರು.

ಇದು ಮಧ್ಯಪ್ರದೇಶದ ಬಿಜೆಪಿ ಸರಕಾರಕ್ಕೆ ಮುಜುಗರಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿತು. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಬಾಬುಲಾಲ್ ಗೌರ್ ಅಲ್ಲಿಗೆ ಧಾವಿಸಿ ಬಂದು ಪ್ರಾರ್ಥನೆಯ ಅವಧಿ ಮುಗಿದಿರುವುದರಿಂದ ನಮಾಝ್ ಸಲ್ಲಿಸುವ ಯೋಜನೆಯನ್ನು ಕೈಬಿಡುವಂತೆ ಕೇಳಿಕೊಂಡರು. ಬದಲಿಗೆ ಈದ್ ಸಂದರ್ಭದಲ್ಲಿ ಮುಸ್ಲಿಮರನ್ನು ಅಭಿನಂದಿಸುವಂತೆ ಕೇಳಿಕೊಂಡರು. ಸುದರ್ಶನ್‌ರ ವಾಹನಗಳ ಸಾಲನ್ನು ಮಸೀದಿಯವರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಡಲು ಅದಾಗಲೇ ಸಮಯ ಮೀರಿತ್ತು ಎಂದು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ವಿಜಯ್ ಯಾದವ್ ಸುದ್ದಿಗಾರರಿಗೆ ಹೇಳಿದರು.

ಇದು 81 ವರ್ಷ ಪ್ರಾಯದ ವ್ಯಕ್ತಿಯ ಅರುಳು ಮರುಳಿನ ಕೃತ್ಯ ಎಂದು ವಿವರಣೆ ನೀಡಬಹು ದಾದ ವ್ಯಕ್ತಿಗಳಿಗೆ ಸಂಘ ಪರಿವಾರದಲ್ಲೇನೂ ಕೊರತೆಯಿಲ್ಲ. ಕೆಲವೇ ದಿನಗಳ ಮೊದಲು ಸುದರ್ಶನ್ ಮೈಸೂರಿನಲ್ಲಿ ತನ್ನ ಸಹೋದರನ ಮನೆಯಲ್ಲಿ ತಂಗಿದ್ದ ವೇಳೆ ಬೆಳಗ್ಗಿನ ವಾಕಿಂಗ್‌ಗೆ ಹೋಗಿದ್ದಾಗ ದಾರಿ ತಪ್ಪಿ ನಾಪತ್ತೆಯಾಗಿದ್ದರು. ಸುದರ್ಶನ್ 2010ರ ನವೆಂಬರ್‌ನಲ್ಲಿ ಸೋನಿಯಾ ಗಾಂಧಿ ವಿರುದ್ಧ ಆರೋಪ ಮಾಡುವ ಮೂಲಕ ಸಂಘ ಪರಿವಾರ ಮತ್ತು ಬಿಜೆಪಿಯನ್ನು ಯಾವ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಸಿಹಾಕಿದ್ದರು ಎಂಬ ಉದಾಹರಣೆಯನ್ನೂ ಈ ವ್ಯಕ್ತಿಗಳು ನೀಡಬಹುದು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಐಎ ಏಜೆಂಟ್, ಆಗಿನ ಪ್ರಧಾನಿ ಹಾಗೂ ತನ್ನ ಅತ್ತೆ ಇಂದಿರಾ ಗಾಂಧಿ, ತನ್ನ ಗಂಡ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಸೋನಿಯಾ ಕೊಲ್ಲಿಸಿದ್ದು ಎಂಬುದಾಗಿ ಸುದರ್ಶನ್ ಆರೋಪಿಸಿದ್ದರು.

ಹಿಂದೆ ಎರಡು ಸಂದರ್ಭಗಳಲ್ಲಿ ಸುದರ್ಶನ್ ತನ್ನ ನಾಲಗೆಯನ್ನು ಸಡಿಲ ಬಿಟ್ಟಿದ್ದರು. ಅದಕ್ಕಾಗಿ ಅವರು ಸಂಘ ಪರಿವಾರದ ತನ್ನ ಮಿತ್ರರಿಂದಲೇ ಟೀಕೆಗೊಳಗಾಗಿದ್ದರು. ಆದರೆ, ಈದ್ ದಿನದ ಅವರ ಕೃತ್ಯ ತೀರಾ ಬೇರೆಯೇ ಆಗಿದೆ. ಅದು ಮುದುಕನೊಬ್ಬನ ಅರುಳುಮರುಳನ್ನು ಸೂಚಿಸು ತ್ತಿದ್ದರೂ, ಅದು ವಿಲಿಯಂ ಶೇಕ್ಸ್‌ಪಿಯರ್ ಹೇಳಿದಂತೆ, ‘‘ಹುಚ್ಚಿನಲ್ಲೂ ಒಂದು ತರ್ಕವಿದೆ’’. ಅವರ ಈ ಹುಚ್ಚುತನದ ಕೃತ್ಯಗಳೇ ಹೆಚ್ಚು ನೈಜವಾಗಿವೆ. ಉದಾಹರಣೆಗೆ, ‘ಕಿಂಗ್ ಲಿಯರ್’ ನಾಟಕದಲ್ಲಿ ವೃದ್ಧ ಕಿಂಗ್ ಲಿಯರ್‌ನಂತೆ.

ಸುದರ್ಶನ್‌ರಲ್ಲಿ ದೊಡ್ಡ ಮಟ್ಟದಲ್ಲಿ ಹೃದಯ ಪರಿವರ್ತನೆಯಾಗಿದೆಯೋ ಇಲ್ಲವೋ ಬೇರೆ ವಿಷಯ. ಇಲ್ಲಿ ಯಾವುದು ಪ್ರಶ್ನಾರ್ಹ ಅಲ್ಲವೆಂದರೆ ಈದ್ ಮುಂತಾದ ಹಬ್ಬಗಳ ಮಹತ್ವ. ಇಂಥ ಹಬ್ಬಗಳು ಬೆಸುಗೆಯ ಕಾರ್ಯವನ್ನು ಮಾಡುತ್ತವೆಯೇ ಹೊರತು, ಒಂದು ವಾರದ ಹಿಂದೆ ಕೆಲವು ವ್ಯಕ್ತಿಗಳು ಮಾಡಿದಂತೆ ವಿಭಜನೆಯ ಕಾರ್ಯವನ್ನು ಮಾಡಲಾರವು.

ತನ್ನ ನಿವಾಸದಿಂದ ತಾಜುಲ್ ಮಸೀದಿಗೆ ತಲುಪಲು ಸುದರ್ಶನ್ ಪ್ರಯಾಣಿಸಿದ್ದು ಕೇವಲ ಒಂದು ಕಿಲೋಮೀಟರ್. ಆದರೆ, ಅದು ಒಂದು ಸಿದ್ಧಾಂತದಿಂದ ಇನ್ನೊಂದು ಸಿದ್ಧಾಂತಕ್ಕೆ ತಲುಪಿದ ಅತಿ ದೊಡ್ಡ ಪ್ರಯಾಣವಾಗಿತ್ತು. ಇದಕ್ಕಾಗಿಯೇ ಸುದರ್ಶನ್ ಸುದ್ದಿಯಾದರು. ಅವರು ಮತ ಬ್ಯಾಂಕ್ ರಾಜಕಾರಣ ಮಾಡುತ್ತಾರೆ ಅಥವಾ ಈ ಮಾದರಿಯ ಇತರ ಕೃತ್ಯಗಳನ್ನು ಮಾಡುತ್ತಾರೆ ಎಂದು ದೂರಲು ಸಾಧ್ಯವಿಲ್ಲ. ಸೋನಿಯಾ ಗಾಂಧಿ ವಿರುದ್ಧ ಅವರು ನೀಡಿದ ಹೇಳಿಕೆಗಳಿಗಾಗಿ ಅವರನ್ನು ಖಂಡಿಸಲಾಗಿತ್ತು.

ಆದರೆ, ಈ ಬಾರಿ ಅಂಥಾದ್ದು ಏನೂ ಆಗಿಲ್ಲ. ಅಸ್ಸಾಂ ಹಿಂಸಾಚಾರ ಹಾಗೂ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈಗಳಿಂದ ಈಶಾನ್ಯ ಭಾರತೀಯರ ವಲಸೆಯಿಂದಾಗಿ ದೇಶಾದ್ಯಂತ ನೆಲೆಸಿದ್ದ ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿಯ ಸಮಯದಲ್ಲಿ ಮಸೀದಿಯಲ್ಲಿ ನಮಾಝ್ ನಿರ್ವಹಿಸಲು ಸುದರ್ಶನ್ ಮುಂದಾಗಿದ್ದು ಗಮನಾರ್ಹ. ಅದೇ ವೇಳೆ, ಭಾರತದಲ್ಲಿ ಲಕ್ಷಾಂತರ ಸುದರ್ಶನ್‌ಗಳಿದ್ದಾರೆ. ಬೇರೆ ಧರ್ಮಗಳ ಜನರೊಂದಿಗೆ ಬೆರೆಯಲು ಅವರಿಗೆ ಸಮಸ್ಯೆಯಿಲ್ಲ. ಗುಂಪು ಎಸ್‌ಎಂಎಸ್‌ಗಳ ಮೇಲೆ ನಿರ್ಬಂಧ ವಿದ್ದರೂ, ಈದ್‌ನಂದು ತಮ್ಮ ಮುಸ್ಲಿಂ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸಲು ಅವರಿಗೆ ಅಡಚಣೆಯಾಗಿಲ್ಲ. ಈ ಸಂದರ್ಭದಲ್ಲಿ ಅಸಂಖ್ಯಾತ ಮಂದಿ ಮುಸ್ಲಿಮರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ಹಂಚಿದರು. ಅಸ್ಸಾಂನ ಸುದೀರ್ಘ ಹಿಂಸಾಚಾರ ಹಾಗೂ ದಾಳಿ ಕುರಿತು ಎಚ್ಚರಿಕೆ ನೀಡುವ ಎಸ್‌ಎಂಎಸ್‌ಗಳ ರವಾನೆ ಸಮುದಾಯ ಗಳ ನಡುವೆ ಗೋಡೆ ಕಟ್ಟಲು ಪ್ರಯತ್ನಿಸಿತ್ತು. ಆದರೆ, ಆ ಗೋಡೆ ತುಂಬಾ ಚಿಕ್ಕದಾಗಿತ್ತು ಹಾಗೂ ಅದನ್ನು ಮಾನವರು ದಾಟಿ ಬಂದರು.

ಈ ವಾಸ್ತವವನ್ನು ಸುದರ್ಶನ್ ಅರ್ಥ ಮಾಡಿಕೊಂಡಂತೆ, ಪರಿವಾರದಲ್ಲಿರುವ ಇತರರೂ ಶೀಘ್ರವೇ ಅರ್ಥ ಮಾಡಿಕೊಳ್ಳಬಹುದು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-02

Tell a Friend

ಪ್ರತಿಸ್ಪಂದನ
SHAMEEM, MANGALORE
2012-09-02
ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ ಭಟ್ ಇವರೆಲ್ಲರೂ ಮುಂದೊಂದುದಿನ ಈದ್ ನಮಾಜ್ ಮಾಡಲು ಬರಲೆಂದು ಆಶಿಸೋಣ. ದೇವರ ಆಟ ಬಲ್ಲವರಾರು ?
Anivaasi, Kuwait
2012-09-02
ಇವನಿಗೂ ಹಿದಾಯ ಸಿಗಲಿ...ಎಲ್ಲರಿಗೂ ಗೊತ್ತಿದೆ ಆದರೆ ಕೆಲವು ಷಡ್ಯಂತ್ರ ಮತ್ತು ಒತ್ತಡಗಳಿಂದ ಸತ್ಯದಡೆಗೆ ಬರಲು ಹಿಂಜರಿಯುತ್ತಾರೆ.
Mohd Aziz, Mangalore
2012-09-02
ದೇವರು ಯಾರ ಮನಸ್ಸು , ಯಾವಾಗ ಬೇಕಾದರೂ ಪರಿವರ್ತಿಸಬಲ್ಲ ಇದು ಶ್ರಷ್ಟಿ ಕರ್ತನ ಮೇಲೆ ಬಿಟ್ಟ ವಿಚಾರವಾಗಿದೆ ಆದರೆ ನಾವು ಸುದರ್ಶನ್ ಅವರು ಮಾಡಿದ ಪ್ರಯತ್ನವನ್ನು ಶ್ಲಾಗಿಸ ಬೇಕೇ ವಿನಃ ಅವರಿಗೆ ಅವರು ಮಾಡಿದ ಕ್ರತ್ಯ ವನ್ನು ಅರುಳು ಮರುಳಿನ ಕೃತ್ಯ ಎನ್ನಬಾರದು.. ಯಾಕೋ ಹಿರಿಯರು ಬಹುಶ ತಮ್ಮನ್ನು ತಾವು ಪರವರ್ತಿಸುವ ಯತ್ನ ಮಾಡ್ತಾ ಇದ್ದಾರೆ ಎಂದನಿಸುತ್ತಿದೆ. ಅವರನ್ನು ನಾವು ಗೌರವಿಸ ಬೇಕೇ ವಿನಃ ಅವರನ್ನು ಟಿಕಿಸಬಾರದು ಹಾಗೇನೆ ಹಿಂದೂ ಮುಸ್ಲಿಂ ಸಿಖ್ ಇಸಾಯಿ ಎಲ್ಲ ಸೇರಿಕೊಂಡು ದೇಶದ ಒಗ್ಗಟ್ಟಿಗಾಗಿ ಪ್ರಯತ್ನಿಸುವ "ಮೇರ ಭಾರತ್ ಮಹಾನ್"
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri