ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ ಅವರಿಂದ ಪ್ರಗತಿ ಪರಿಶೀಲನೆ - ಆದೇಶದ ಮಾರ್ಗಸೂಚಿಗಳಲ್ಲೇ ಸಮಸ್ಯೆಗಳಿಗೆ ಪರಿಹಾರವಿದೆ:ಮೀನ

ಮಂಗಳೂರು,ಸೆಪ್ಟೆಂಬರ್.01:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಕಾರ್ಡ್ ವಿತರಣೆ ವ್ಯವಸ್ಥೆಯನ್ನು ಸುಗಮವಾಗಿಸಲು ತಾಂತ್ರಿಕ ಪರಿಣತಿ ಹೊಂದಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಿದರೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾರವರು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಸಂಬಂಧ ತೊಡರುಗಳ ಮಾಹಿತಿ ಪಡೆದುಕೊಂಡ ಸಂದರ್ಭ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ ಮಾತನಾಡುತ್ತಿದ್ದರು.

ಜಿಲ್ಲೆಯ ಪಡಿತರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು, ಆನ್ ಲೈನ್ ಮೂಲಕ ಈಗಾಗಲೇ 46,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 13,000 ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕರಿಸಲಾಗಿದ್ದು, ಅರ್ಜಿಗಳ ಪರಿಶೀಲನೆಯ ಬಳಿಕ 6,972 ಬಿಪಿಎಲ್ ಕಾರ್ಡುಗಳನ್ನು ನೀಡಲಾಗಿದೆ. ನಗರ ಪ್ರದೇಶದಲ್ಲಿ ಆನ್ ಲೈನ್ ವ್ಯವಸ್ಥೆ ಸುಗಮವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 80 ಪ್ರಗತಿಯಾಗಿದೆ.ಸರ್ವರ್ ಸಮಸ್ಯೆಯಿಂದ ಪಡಿತರ ಕಾರ್ಡು ಪ್ರಕ್ರೀಯೆಗೆ ಇಲಾಖೆಗೆ ಸಮಸ್ಯೆಯಾಗಿದೆಯೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಗಮನ ಸೆಳೆದರು. ಸರ್ವರ್ ಸಮಸ್ಯೆಯನ್ನು ಪರಿಹರಿಸಲು ಇಲಾಖೆ ಎನ್ ಐ ಸಿ ಯ ನೆರವನ್ನು ಕೋರಿದ್ದು,ಸಮಸ್ಯೆ ಪರಿಹರಿಸುವಲ್ಲಿ ನಿರತವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ವಿತರಿಸಲಾಗಿದ್ದು, ಬೆಳೆ ಹಾನಿಗೂ ಪರಿಹಾರ ನೀಡಲಾಗಿದೆ. ಆದರೆ ಬೆಳೆ ಹಾನಿ ವಿತರಣೆ ಬಗ್ಗೆ ರೈತರಲ್ಲಿ ಅಸಮಾಧಾನವಿದ್ದು, ತಾಂತ್ರಿಕ ಕಾರಣಗಳಿಂದ ಅವರಿಗೆ ಪೂರಕವಾಗಿ ಕ್ರಮಕೈಗೊಳ್ಳಲಾಗಿಲ್ಲ. ಈ ಬಗ್ಗೆ ರೈತರ ಸಮಸ್ಯೆಗೆ ಸ್ಪಂದಿಸಲು ಬೆಳೆ ಹಾನಿ ಬಗ್ಗೆ ವಿಶೇಷ ಸಮೀಕ್ಷೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಬಿತ್ತನೆ ಸುಗಮವಾಗಿದ್ದು, ಸಾಕಷ್ಟು ರಸಗೊಬ್ಬರದ ದಾಸ್ತಾನಿದೆ ಆದರೆ ಸುಫಲಾ ಗೊಬ್ಬರದ ಅಗತ್ಯವಿದೆ. ಪ್ರತೀ ತಿಂಗಳಿಗೆ 1000 ಟನ್ ಗೊಬ್ಬರ ಅಗತ್ಯವಿದೆಯೆಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ ಅವರು ನೀಡಿದರು. ಜಿಲ್ಲೆಯಲ್ಲಿ 122 ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 75 ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. 42 ಕಾಮಗಾರಿಗೆ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯುಟಿವ್ ಇಂಜಿನಿಯರ್ ಮಾಹಿತಿ ನೀಡಿದರು. ಕೆರೆ ಅಭಿವೃದ್ಧಿ ಪ್ರಕಿಯೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಟೆಂಡರ್ ಬಾರದೆ ಇರುವ ಕಾಮಗಾರಿಗಳನ್ನು ಪ್ಯಾಕೇಜ್ ರೂಪದಲ್ಲಿ ಆರಂಭಿಸಿ ಎಂಬ ಸಲಹೆಯನ್ನು ಕಾರ್ಯದರ್ಶಿಗಳು ನೀಡಿದರು.

ಕೇರಳ ಮಾದರಿ ಭತ್ತದಕೃಷಿಯನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಮಹಾತ್ಮಗಾಂಧಿ ಗ್ರಾಮೀಣ ಖಾತರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಅಳವಡಿಸಲು ಸೂಚಿಸಲಾಗಿದ್ದು,ಸದ್ಬಳಕೆ ಮಾಡಿ ಎಂದು ಸಲಹೆ ಮಾಡಿದರು.

ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕ ನಿವೇಶನ ನೀಡುವ ಬದಲು ಮೂಡಾದ ಬಳಿ ಇರುವ ಜಮೀನಿನಲ್ಲಿ ಪ್ರಥಮ ಹಂತದಲ್ಲಿ 10 ಎಕರೆ ಜಮೀನಿನಲ್ಲಿ ಬಹುಮಹಡಿ ಮನೆಗಳನ್ನು ಕಟ್ಟಿ ಉತ್ತಮ ಗುಣಮಟ್ಟದ ಅಗ್ಗದ ಮನೆಗಳನ್ನು ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರಿಗೆ ನೀಡಲು ಕ್ರಮಕೈಗೊಳ್ಳಿ ಎಂದು ಮೂಡಾ ಆಯುಕ್ತರಿಗೆ ಸಲಹೆ ಮಾಡಿದರು. ಈಗಾಗಲೇ ಇಂತಹ ಮಾದರಿಗಳನ್ನು ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಎಲ್ಲಾ ಯೋಜನೆಗಳನ್ನು ಪ್ಯಾಕೇಜ್ ಮೂಲಕ ಸರ್ಕಾರವೇ ಮಾಡದೆ. ಆಸಕ್ತ ವ್ಯಕ್ತಿಗಳನ್ನು ಆರಿಸಿ ಎಂದ ಅವರು, ಹಸಿ ತ್ಯಾಜ್ಯ ವಿಲೇವಾರಿಯಂತಹ ಸಮಸ್ಯೆಗಳನ್ನು ನಿಭಾಯಿಸಲು ವೈಯಕ್ತಿಕ ಗುರಿ ನಿಗಧಿಪಡಿಸಿ ತರಕಾರಿ ಹಣ್ಣು ಮಾರುಕಟ್ಟೆಗಳಲ್ಲಿರುವ ಆಸಕ್ತ ವ್ಯಾಪಾರಿಗಳಿಗೆ ಕಸದಿಂದ ರಸ ಉತ್ಪಾದಿಸಲು ಪ್ರೋತ್ಸಾಹ ನೀಡಿ ಗೊಬ್ಬರ ತಯಾರಿಸಲು ಮಾಹಿತಿ ನೀಡಿ. ಸಣ್ಣ ಸಣ್ಣ ಇಂತಹ ಘಟಕಗಳು ತ್ಯಾಜ್ಯ ವಿಲೇಯಂತಹ ಗಂಭೀರ ಸಮಸ್ಯೆಯನ್ನು ಸರಳ ಗೊಳಿಸಲಿದೆ ಎಂದರು. ಬೆಂಗಳೂರಿನ ಮಲ್ಲೇಶ್ವರಂನ ಹೂವಿನ ಮಾರುಕಟ್ಟೆಯಲ್ಲಿ ಇಂತಹ ವೈಯಕ್ತಿಕ ಉತ್ತಮ ಮಾದರಿಗಳಿವೆ ಎಂದರು.

ನಗರಗಳಲ್ಲಿ ರಸ್ತೆಗಳನ್ನು ನೀಡುವಾಗ ವಾರ್ಡುವಾರು ರಸ್ತೆ ನಿರ್ಮಿಸದೆ ಹೊಸ ಸಂಪರ್ಕ ಕಲ್ಪಿಸುವಂತಹ ಸಮಗ್ರ ರಸ್ತೆಗಳನ್ನು ನಿರ್ಮಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಘನ ತ್ಯಾಜ್ಯ ವಿಲೇವಾರಿಗೆ ಮಹಾನಗರಪಾಲಿಕೆ ಕ್ರಮ ಕೈಗೊಂಡಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ನಗರದಲ್ಲಿ ಮೀನು ಮಾರ್ಕೆಟ್, ವಧಾಗೃಹಗಳಿಗೆ ಜಾಗ ಲಭ್ಯವಿದ್ದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಜಂಟಿ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.

ನಗರದ ಪ್ರಮುಖ ಬೇಡಿಕೆಗಳಾದ ರೈಲ್ವೇ ಅಂಡರ್ ಪಾಸ್ ನಿರ್ಮಾಣ, ತುಂಬೆ ವೆಂಟೆಡ್ ಡ್ಯಾಮ್, ನಿವೇಶನ ರಹಿತರಿಗೆ ಮನೆ ನೀಡುವ ಬಗ್ಗೆ, ಎಂಡೋಸಲ್ಫಾನ್ ಪೀಡಿತರಿಗೆ ನೆರವು ನೀಡುವ, ಪಾಲನಾ ಕೇಂದ್ರ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ರಂಗಮಂದಿರ, ಅಂಬೇಡ್ಕರ್ ಭವನ ನಿರ್ಮಾಣ, ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆಯೂ ಚರ್ಚೆಯಾಯಿತು. 08-09ನೇ ಸಾಲಿನಲ್ಲಿ ಬಾಕಿ ಇರುವ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಗೂ ಕ್ರಮಕೈಗೊಳ್ಳಲಾಗುವುದು ಎಂದು ಮೀನಾ ತಿಳಿಸಿದರು.

ಮಂಗಳೂರು ಮಲೇರಿಯಾ ತಡೆಗೆ ಸಮಗ್ರ ಹಾಗೂ ನಿರಂತರವಾಗಿರುವ ಯೋಜನೆಯನ್ನು ರೂಪಿಸಲು ಹಾಗೂ ಅದಕ್ಕೆ ಅಗತ್ಯ ಮಾನವಸಂಪನ್ಮೂಲ ಒದಗಿಸಲು ಸಭೆಗೆ ಉಸ್ತುವಾರಿ ಕಾರ್ಯದರ್ಶಿಗಳು ಮಾರ್ಗದರ್ಶನ ನೀಡಿದರು.
ತೋಟಗಾರಿಕಾ ಇಲಾಖೆಯ ಸಮಸ್ಯೆಗಳನ್ನು ಇಲಾಖಾಧಿಕಾರಿಗಳು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2012-09-01

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri