ಎನ್ ಡಿ ಟಿವಿ ಸಮೀಕ್ಷೆ: ಒಂದು ವೇಳೆ ಈ ತಕ್ಷಣಕ್ಕೆ ಮಧ್ಯಂತರ ಮಹಾಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮುಂದಿನ ಅಧಿಕಾರ |
ಪ್ರಕಟಿಸಿದ ದಿನಾಂಕ : 2012-09-01
NDTV brings you a massive opinion poll in a special show with Dr Prannoy Roy. NDTV commissioned Ipsos, a leading market research agency, to conduct fieldwork for this poll from a sample size of almost 30,000, covering 125 out of the 543 Lok Sabha seats in the 18 big states

ಬೆಂಗಳೂರು, ಸೆ.1: ಮೊನ್ನೆ NDTV ಯವರು ಕರ್ನಾಟಕ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನಿವಾರ್ಯ ಎಂದು ಹೇಳಿದ್ದೇ ತಡ, ಹೌದು ನಮ್ಮ ನಾಯಕನಿಗೆ ತಕ್ಷಣ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹಳೆಯ ಕ್ಯಾತೆ ತೆಗೆದಿರುವ ಸಂದರ್ಭದಲ್ಲೇ ಆಂಗ್ಲ ಸುದ್ದಿವಾಹಿನಿ NDTV ಮತ್ತೊಂದು ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ.
ಒಂದು ವೇಳೆ ಈ ತಕ್ಷಣಕ್ಕೆ ಮಧ್ಯಂತರ ಮಹಾಚುನಾವಣೆ ನಡೆದರೆ ಯಾವೆಲ್ಲ ಪಕ್ಷಗಳಿಗೆ ಲಾಭ-ನಷ್ಟವುಂಟಾಗಲಿದೆ ಎಂಬ ಲೆಕ್ಕಾಚಾರವಿಟ್ಟುಕೊಂಡು NDTV ಈ ಸಮೀಕ್ಷೆ ನಡೆಸಿದೆ.
ಸಮೀಕ್ಷೆಯ ವಿವರ ಹೀಗಿದೆ:

ಅಕಸ್ಮಾತ್ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿ ನಿಶ್ಚಿತವಾಗಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. NDA ಕೂಟಕ್ಕೆ ಸರಕಾರ ರಚನೆ ಮಾಡುವಸಾಧ್ಯತೆಗಳು ಅಧಿಕವಾಗಿವೆ. ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗಿಂತ ಕಡಿಮೆ ಸ್ಥಾನ ದಕ್ಕಲಿದೆ.
ಕಾಂಗ್ರೆಸ್ಸಿನ ನಷ್ಟ ಬಿಜೆಪಿಗೆ ಲಾಭವಾಗಿ ಪರಿವರ್ತನೆಯಾಗಲಿದೆ ಎಂಬುದಕ್ಕಿಂತ ಪ್ರಾದೇಶಿಕ ಪಕ್ಷಗಳಿಗೇ ಲಾಭದಾಯಕವಾಗಲಿದೆ ಎಂಬುದು ಸಮೀಕ್ಷೆಯ ಸಾರ. 2009ರ ಚುನಾವಣೆಯಲ್ಲಿ 116 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ ಮಧ್ಯಂತರ ಚುನಾವಣೆಯಲ್ಲಿ 143ಕ್ಕೆ ಜಿಗಿಯಲಿದೆ.
ಇದರ ಜತೆಜತೆಗೆ 209ರಲ್ಲಿ 162 ಸ್ಥಾನ ಗಳಿಸಿಕೊಂಡಿದ್ದ NDA ಕೂಟ ಈ ಬಾರಿ 207ರಲ್ಲಿ ಗೆಲುವು ಸಾಧಿಸಲಿದೆ. ಲೋಕಸಭೆಯಲ್ಲಿ 543 ಸ್ಥಾನಗಳಿದ್ದು ಬಹುಮತಕ್ಕಾಗಿ 272 ಸ್ಥಾನಗಳು ಬೇಕಾಗುತ್ತವೆ.

ಇನ್ನು, 264 ಸ್ಥಾನ ಗೆದ್ದಿದ್ದ UPA ಮೈತ್ರಿಕೂಟ ಸಮೀಕ್ಷೆಯ ಪ್ರಕಾರ 185 ಸ್ಥಾನ ಗಳಿಸಲಷ್ಟೇ ಶಕ್ತವಾಗಲಿದೆ. ಅಂದರೆ ಆಗ 206 ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್, ಈಗ 127ಕ್ಕೆ ಕುಸಿಯಲಿದೆ. ಅಂದರೆ ಬರೋಬ್ಬರಿ 79 ಸ್ಥಾನಗಳು ಗೋತಾ. ದಾಖಲಾರ್ಹವೆಂದರೆ 2009ರಲ್ಲಿ 117 ಸ್ಥಾನಗಳಲ್ಲು ದಕ್ಕಿಸಿಕೊಂಡಿದ್ದ ಸಣ್ಣ, ಪ್ರಾದೇಶಿಕ ಪಕ್ಷಗಳು 151 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿವೆ.
ವರದಿಯ ವಿವರಗಳು |
 |
ಕೃಪೆ : one india ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-01
|
|
|