ಬಂಧಿತ ಶಂಕಿತ ಉಗ್ರರ ಪೋಷಕರಿಂದ ದೂರು, ಪಚಾವೋ, ಮಿರ್ಜಿಗೆ ಗೌರ್ನರ್ ಬುಲಾವ್ |
ಪ್ರಕಟಿಸಿದ ದಿನಾಂಕ : 2012-09-01
ಬೆಂಗಳೂರು: ಕಳೆದ ಗುರುವಾರ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ೧೧ ಶಂಕಿತ ಉಗ್ರರ ಪೊಷಕರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಶನಿವಾರ ರಾಜ್ಯಪಾಲರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬುಲಾವ್ ನೀಡಿದ್ದರು.

ರಾಜ್ಯಪಾಲರ ಕರೆ ಹಿನ್ನೆಲೆಯಲ್ಲಿ ಇಂದು ರಾಜ್ಯಭವನಕ್ಕೆ ತೆರಳಿದ ಪೊಲೀಸ್ ಮಾಹಾ ನಿರ್ದೇಶಕ ಲಾಲ್ರುಕುಮ್ ಪಚಾವೋ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಬಂಧಿತರ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು. ಈ ವೇಳೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಅಧಿಕಾರಿಗಳೊಂದಿಗೆ ರಾಜ್ಯಪಾಲರು ಚರ್ಚಿಸಿದರು ಎನ್ನಲಾಗಿದೆ.


ತಮ್ಮ ಮಕ್ಕಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಬಂಧಿತ ಶಂಕಿತ ಉಗ್ರರ ಪೋಷಕರು ರಾಜ್ಯಪಾಲರಿಗೆ ದೂರು ನೀಡಿದ್ದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-01
|
|
|