ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ

‘ಬೆಸೆದು ಭದ್ರಗೊಂಡ ಭಾವನೆಗಳ ಬೀಳ್ಕೊಡುಗೆ ಮುಗ್ಧ ಮನಸ್ಸುಗಳಿಗೆ ಮನೋಯಾತನೆ’ ಎಂಬ ಮಾತು ತುಳುಕೂಟ ಕುವೈಟ್‌ನ ಬೀಳ್ಕೊಡುಗೆ ಸಮಾರಂಭದಲ್ಲಿ ಅಕ್ಷರಶ: ನಿಜವಾಯಿತು. ತಾ| 24/08/2012 ರ ಶುಕ್ರವಾರ ಸ್ಥಳೀಯ ಸಾಲ್ಮಿಯಾ ಪ್ಲೇ ಸ್ಕೂಲ್‌ನಲ್ಲಿ ಜರುಗಿದ ಸಮಾರಂಭದಲ್ಲಿ  ತುಳುಕೂಟದ ಸ್ಥಾಪಕ ಸದಸ್ಯರಾಗಿ, ಕಾರ್ಯಕಾರಿ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ ಕೂಟದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿ, ಕರ್ತವ್ಯ ಪಾಲನೆಗೋಸ್ಕರ ತಾಯ್ನಾಡಿಗೆ ಹೊರಟಿರುವ ಶ್ರೀ ಶಾಂತಿಯಂಗಡಿ ಮೂಸಪ್ಪ ಫರೂಕ್ ಇವರನ್ನು ಹೃದಯಾಂತರಾಳದಿಂದ ಹಾರೈಸಿ ಬೀಳ್ಕೊಡಲಾಯಿತು. ಕೂಟದ ಅಧ್ಯಕ್ಷ ಶ್ರೀ ರಮೇಶ್ ಕಿದಿಯೂರ್ ಹಾಗೂ ತುಳುಕೂಟದ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಸುಧಾಕರ್ ಶೆಟ್ಟಿ ಮತ್ತು ಶ್ರೀಮತಿ ಸ್ವರ್ಣಾ ಶೆಟ್ಟಿ ಇವರು ವಿದಾಯ ಸಮಾರಂಭದಲ್ಲಿ ಶ್ರೀ ಎಸ್. ಎಮ್. ಫರೂಕ್ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯಿತ್ತು ಸಮ್ಮಾನಿಸಿದರು.




ಕೂಟದ ಅಧ್ಯಕ್ಷರಾದ ಶ್ರೀ ರಮೇಶ್ ಕಿದಿಯೂರ್ ಅವರು ಮಾತನಾಡುತ್ತಾ, ಶ್ರೀ ಫರೂಕ್ ತುಳುಕೂಟದ ಅನರ್ಘ್ಯ ಮುತ್ತು, ಬೆಲೆಬಾಳುವ ಈ ಮುತ್ತು ತುಳುಕೂಟದ ಹಾರದಿಂದ ಬೇರ್ಪಡುತ್ತಿರುವುದು ಕೂಟಕ್ಕೆ ತುಂಬಲಾರದ ನಷ್ಟವೆಂದು ವರ್ಣಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೂಟದ ಪ್ರಥಮ ಅಧ್ಯಕ್ಷ ಹಾಗೂ ಪ್ರಸ್ತುತ ಸಲಹೆಗಾರರಾದ ಶ್ರೀ ಸುಧಾಕರ್ ಶೆಟ್ಟಿ, ಹೆತ್ತವರ ಆರೈಕೆ ಮಾಡಿ ಅವರ ಆಶೀರ್ವಾದ, ಹಾರೈಕೆಯಿಂದ ಬಾಳಲು ತವರೂರಿಗೆ ಹೊರಟಿರುವ ಶ್ರೀ ಫರೂಕ್ ಅವರ ನಿರ್ಧಾರ ಹೆಮ್ಮೆ ಎನಿಸುತ್ತಿದೆ, ಭಗವಂತ ಅವರಿಗೆ ಒಳಿತನ್ನು ಮಾಡಲೆಂದು ಹಾರೈಸಿದರು. ಕೂಟದ ಪ್ರಥಮ ಮಹಿಳಾ ಅಧ್ಯಕ್ಷೆ, ಪ್ರಸ್ತುತ ಸಲಹಾ ಸಮಿತಿಯ ಸದಸ್ಯೆ ಶ್ರೀಮತಿ ಸ್ವರ್ಣಾ ಶೆಟ್ಟಿ ತಮ್ಮ ಮಾತುಗಳಲ್ಲಿ ಒಬ್ಬ ಸಹೋದರನಾಗಿ, ನಿಷ್ಠಾವಂತ ಸ್ನೇಹಿತನಾಗಿ, ಉತ್ತಮ ಕಾರ್ಯಕರ್ತನಾಗಿ ಸಹಕರಿಸಿದ ಶ್ರೀ ಫರೂಕ್ ಅವರ ಕಾರ್ಯವೈಖರಿ ಅಭಿನಂದನಾರ್ಹವೆಂದು ಎಂದು ಭಾವುಕರಾಗಿ ಬಣ್ಣಿಸಿದರು.

ಸಮಿತಿ ಸದಸ್ಯರಾದ ಶ್ರೀ ಸುರೇಶ್ ಸಾಲ್ಯಾನ್, ಶ್ರೀ ಚಂದ್ರಹಾಸ ಶೆಟ್ಟಿ, ಶ್ರೀ ಯದುನಾಥ್ ಆಳ್ವ, ಶ್ರೀ ಸತ್ಯನಾರಾಯಣ ಸಾಲ್ಯಾನ್ ಮತ್ತು ಶ್ರೀ ಹರೀಶ್ ಭಂಡಾರಿ ಇವರುಗಳು ಮಾತನಾಡುತ್ತಾ ಸಮಾಜ ಸೇವೆಯೇ ತನ್ನ ಧ್ಯೇಯವೆಂದು ಪರಿಗಣಿಸಿ, ಈ ನಿಟ್ಟಿನಲ್ಲಿ ಸದಾ ಕಾರ್ಯಮಗ್ನರಾದ ಶ್ರೀ ಫರೂಕ್, ಇಂದು ಯುವ ಜನಾಂಗಕ್ಕೆ ಮಾದರಿಯಾಗುವಂತಹ ಕಾರ್ಯವೆಸಗುತ್ತಿರುವರು, ಆವರ ಶೃದ್ಧೆ, ಔದಾರ್ಯ, ತ್ಯಾಗ ಮತ್ತು ಸೇವಾಮನೋಭಾವ ಶ್ಲಾಘನೀಯವೆಂದು ಕೊಂಡಾಡಿದರು. ಸತ್ಕಾರಕ್ಕೆ ಪಾತ್ರರಾದ ಶ್ರೀ ಎಸ್. ಎಮ್. ಫರೂಕ್ ಜಾತ್ಯಾತೀತ ಸಂಘವಾದ ತುಳುಕೂಟದಲ್ಲಿ ಸೇವೆಗೈದು ಸಂತೃಪ್ತನಾದೆನೆಂದು ತಮ್ಮ ಮನದಾಳದ ಅನಿಸಿಕೆಗಳನ್ನು ಹೊರಚೆಲ್ಲುತ್ತಾ, ಭವಿಷ್ಯದಲ್ಲೂ ತುಳುಕೂಟದ ನೆರಳಲ್ಲಿ ಮತ್ತಷ್ಟು ಘನಕಾರ್ಯಗಳು ಘಟಿಸಲೆಂದು ಶುಭ ಹಾರೈಸಿದರು.


ಉಪಾಧ್ಯಕ್ಷ ಶ್ರೀ ತಾರೇಂದ್ರ ಪಿ. ಶೆಟ್ಟಿಗಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಸಾಲ್ಯಾನ್ ವಂದನಾರ್ಪಣೆಗೈದರು. ಶ್ರೀ ಫರೂಕ್ ಅವರ ಸಹೋದರ ಹಾಗೂ ಉತ್ತಮ ವಾಗ್ಮಿ ಶ್ರೀ ಎಸ್.ಎಮ್. ಬಶೀರ್ ಹಾಗೂ ಅವರ ಕುಟುಂಬ ಸದಸ್ಯರು ವಿದಾಯ ಸಮಾರಂಭದಲ್ಲಿ ಉಪಸ್ಥಿತರಿದ್ದರು.



‘ಹೋಗುವುದು, ಬರುವುದು ಎಲ್ಲವೂ ನೇಪಥ್ಯ, ಆದರೆ ಭದ್ರ ಸಂಬಂಧಗಳ ಬುನಾದಿಯಲ್ಲಿ ಸ್ನೇಹ-ಪ್ರೀತಿ ಸಾರಥ್ಯ’  ಎಂಬ ನುಡಿಯನ್ನು ಸ್ತುತಿಸುತ್ತಾ, ತಾಯ್ನಾಡಿನಲ್ಲಿ ಶ್ರೀ ಫರೂಕ್ ಅವರ ಮುಂದಿನ ಜೀವನ ಸುಖದ ಸೋಪಾನವಾಗಲಿ, ಬಾಳು ಬಂಗಾರವಾಗಲೆಂದು ಸರ್ವಸಮಿತಿ ಸದಸ್ಯರು ಹಾರೈಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : mohandas kamath
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-01

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ತುಳುಕೂಟ ಕುವೈಟ್ ಶ್ರೀ ಎಸ್. ಎಮ್. ಫರೂಕ್‌ರಿಗೆ ಪ್ರೀತಿಪೂರ್ವಕ ಬೀಳ್ಕೊಡುಗೆ
»ತುಳುಕೂಟ ಕುವೈಟ್ ಉಚಿತ ವೈದ್ಯಕೀಯ ತಪಾಸಣಾ ಮತ್ತು ಸಲಹಾ ಶಿಬಿರ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ದಕ್ಷಿಣ ಕನ್ನಡ ಘಟಕ ವತಿಯಿಂದ ಎಸ್ ಎಂ ಫಾರೂಕ್ ರವರಿಗೆ ವಿದಾಯ ಕೂಟ.
»ಜಿ.ಎಸ್.ಬಿ.ಸಭಾ ಕುವೈತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಸ್ತಮಿ ಆಚರಣೆ .
»ಕುವೈತ್ನಲ್ಲಿ ಮೊದಲ ಬಾರಿಗೆ-" ವಿ’ಬೆಳ್ಮಣ್ ಕ್ರಿಯೇಷನ್ಸ್ ನ-ವಿ’ಶೇಷ್ "
»ಕುವೈತ್: ಮಂಗಳೂರಿನ ಇಬ್ಬರು ತರುಣರ ದಾರುಣ ಮೃತ್ಯು
»ತುಳುಕೂಟ ಕುವೈಟ್: ಶ್ರೀ ವಿವೇಕ್ ರಾವ್‌ರಿಗೆ ಮನ್ನಣೆಯ ಬೀಳ್ಕೊಡುಗೆ
»ರಾಹುಲ್ ಗಾಂಧಿ ಕುವೈತ್ ದೊರೆ ಭೇಟಿ
»ಇನ್ನು ಮುಂದೆ ಆನ್ ಲೈನ್ ವಿಸಾ-ಐಡೆಂಟಿಟಿ ಕಾರ್ಡ್- ಡ್ರೈವಿಂಗ್ ಲೈಸೆನ್ಸ್
»ತುಳುಕೂಟ ಕುವೈಟ್ - ಮನೋರಂಜನೀಯ ರಸಮಂಜರಿ 2012
»ಕುವೈತ್ ವಿಮಾನ ನಿಲ್ದಾಣ ಅಭಿವೃದ್ದಿಗೆ $6 ಬಿಲಿಯನ್
»ಕುವೈತ್ ಕನ್ನಡ ಕೂಟದಿಂದ ಮರಳ ಮಲ್ಲಿಗೆ ದಿನಾಚರಣೆ
»ಇಸ್ಲಾಮಿಕ್ ಕಾನೂನು ತಿದ್ದುಪಡಿ ಪ್ರಸ್ತಾವನೆ ತಡೆಹಿಡಿದ ಕುವೈತ್ ಸರಕಾರ
»ಮತ್ತೆ ಏರ‍್ ಇಂಡಿಯಾ ಪೈಲೆಟ್ ಮುಷ್ಕರ : ಕುವೈತ್ ವಿಮಾನ ಸಂಚಾರ ಮೊಟಕು !
»ಕುವೈಟ್‌ನಲ್ಲಿ ಅಪಘಾತ: ಉಡುಪಿಯ ಪೌಲ್‌ ಸಂತೋಷ್‌ ಸಾವು
»ಅದ್ದೂರಿಯಿಂದ ಜರುಗಿದ ಕುವೈಟ್ ಇಂಡಿಯಾ ಫೆಟರ್ನಿಟಿ ಫೋರಂನ ಆರೋಗ್ಯ ಜಾಗ್ರತಿ ವಿಚಾರಗೋಷ್ಠಿ.
»Islamists plot against Gulf: Dubai police chief
»ತುಳುಕೂಟ ಕುವೈತ್-’ ಕುಟುಂಬ ಹೊರಾಂಗಣ ವಿಹಾರ’
»ಕೆ ಕೆ ಎಂ ಎ ವತಿಯಿಂದ ಮಂಗಳೂರಿಗೆ ಹತ್ತನೇ ಕಿಡ್ನಿ ಡಯಾಲಿಸಿಸ್ ಕೇಂದ್ರ (KDC) ಘೋಷನೆ
»ಕುವೈಟ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
»ಪರಿಚಾರಿಕೆಯನ್ನು ರಸ್ತೆಗೆ ಬಿಸಾಡಿ..ಕಾರು ಓಡಿಸಿ ಕೊಂದ ದಂಪತಿಗೆ ಮರಣ ಶಿಕ್ಷೆ
»ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
»ತುಳುಕೂಟದ ‘ತುಳುಸಿರಿ’ : ಕುವೈಟ್‌ನಲ್ಲಿ ತುಳು ಶಾಲೆ ಆರಂಭ
»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri