ಸೋಮವಾರ, 17-02-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿರುವ ೧೧ ಮಂದಿ ಶಂಕಿತ ಉಗ್ರರು ಆಂಧ್ರಪ್ರದೇಶದಲ್ಲೂ ವಿಧ್ವಂಸಕ ಕೃತ್ಯ ಎಸಗಲು ಸಂಚು ನಡೆಸಿದ್ದ ಆತಂಕಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.

ಈ ಸಂಬಂಧ ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದು, ಇನ್ನೂ ಐವರು ಆರೋಪಿಗಳು ಈ ಜಾಲದಲ್ಲಿ ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳ ಪ್ರಾಥಮಿಕ ವಿಚಾರಣೆಯಿಂದ ಬೆಳಕಿಗೆ ಬಂದ ಸಂಗತಿಗಳ ಆಧಾರದ ಮೇಲೆ ಆಂಧ್ರಪ್ರದೇಶದಲ್ಲಿ ಇನ್ನೂ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಪೊಲೀಸರು ಈ ವಿಚಾರವನ್ನು ಇನ್ನೂ ದೃಢೀಕರಿಸಿಲ್ಲ.

ಈ ಮಧ್ಯೆ ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಪತ್ರಕರ್ತ ಮುತಿ- ಉರ್-ರೆಹಮಾನ್ ಸಿದ್ದಿಕಿ ಸೇರಿದಂತೆ ೧೧ ಶಂಕಿತ ಉಗ್ರರನ್ನು ಬೆಂಗಳೂರಿನಲ್ಲಿರುವ ೮ನೇ ಎಸಿ‌ಎಂಎಂ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಗಿದ್ದು, ಅವರನ್ನು ೧೪ ದಿನಗಳ ಕಾಲ ಪೊಲೀಸ್ ವಶಕ್ಕೆ ಹೆಚ್ಚಿನ ವಿಚಾರಣೆಗಾಗಿ ಒಪ್ಪಿಸಲಾಗಿದೆ.

ಗಣ್ಯರ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆದ ಭಯೋತ್ಪಾದನೆ ಸಂಚಿನ ಮಾಸ್ಟರ್ ಮೈಂಡ್ ಈ ಸಿದ್ಧಿಕಿಯದಾಗಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈತನ ಬಳಿ ವಿದೇಶಿ ಕರೆನ್ಸಿ ಹಾಗೂ ಬ್ಯಾಂಕ್ ಅಕೌಂಟ್ ಲಭ್ಯವಾಗಿದ್ದು, ಸಾಗರೋತ್ತರ ಹಣಕಾಸು ವ್ಯವಹಾರ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲಾ ಆರೋಪಿಗಳಿಗೂ ಹಣಕಾಸು ವ್ಯವಸ್ಥೆ ಮಾಡುತ್ತಿದ್ದ ಉದ್ಯಮಿಯೊಬ್ಬನನ್ನು ಶೀಘ್ರದಲ್ಲಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಗುಂಪಿನ ಜೊತೆ ಇನ್ನೂ ಹಲವರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಆರೋಪಿ ಸಿದ್ಧಿಕಿ ಬಳಿ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಅಂಕಣಕಾರ ಪ್ರತಾಪ್ ಸಿಂಹ ಅವರು ಇರುವ ಫೋಟೋ ಪತ್ತೆಯಾಗಿವೆ. ಸಿದ್ದಿಕಿಗೆ ಸೇರಿದ ಕಂಪ್ಯೂಟರ್ ಅನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.

ವಕೀಲರಿಗೂ ಇತ್ತೇ ಬೆದರಿಕೆ : ಇದರ ಜತೆಗೆ ಈ ಉಗ್ರರು ಬೆಂಗಳೂರಿನ ಇನ್ನೊಬ್ಬ ಪ್ರಮುಖ ರಾಜಕಾರಣಿಯ ಹತ್ಯೆಗೂ ಸಂಚು ನಡೆಸಿದ್ದು, ಅವರ ಭಾವಚಿತ್ರ ಆರೋಪಿಗಳ ಬಳಿ ಲಭ್ಯವಾಗಿವೆ. ಮಾತ್ರವಲ್ಲ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಸಂಘ ಪರಿವಾರದ ಪರವಾಗಿ ವಾದಮಾಡುತ್ತಿದ್ದ ಇಬ್ಬರು ಪ್ರಮುಖ ನ್ಯಾಯವಾದಿಗಳನ್ನು ಹತ್ಯೆ ಮಾಡುವುದಕ್ಕೂ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಈ ನಡುವೆ ಡಿ‌ಆರ್‌ಡಿ‌ಒದಲ್ಲಿ ಕಿರಿಯ ವಿಜ್ಞಾನಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಜಾಜ್ ಅಹಮದ್ ಮಿರ್ಜಾ ಅವನಿಗೆ ಸಂಬಂಧಿಸಿದ ಕಂಪ್ಯೂಟರ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆತ ಕಿರಿಯರ ವಿಭಾಗದಲ್ಲಿ ರಿಸರ್ಚ್ ಫೆಲೋ ಆಗಿ ಕೆಲವು ತಿಂಗಳುಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಆದರೆ, ಹೆಚ್ಚಿನ ಕೆಲಸಗಳಲ್ಲಿ ಭಾಗಿಯಾಗುತ್ತಿರಲಿಲ್ಲ ಎಂದು ಡಿ‌ಆರ್‌ಡಿ‌ಓ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೆಚ್ಚುವರಿ ಆಯುಕ್ತ ಸುನಿಲ್‌ಕುಮಾರ್ ತಿಳಿಸಿದ್ದಾರೆ.

ಕ್ಯಾಸಲ್‌ರಾಕ್ ಅರಣ್ಯದಲ್ಲಿ ಟಾರ್ಗೆಟ್ ಪ್ರಾಕ್ಟಿಸ್!

ಹುಬ್ಬಳ್ಳಿ: ಮಾಧ್ಯಮದ ಪ್ರಮುಖರು, ರಾಜಕಾರಣಿಗಳು ಮತ್ತು ಹಿಂದೂ ಪರ ಸಂಘಟನೆಯ ಪ್ರಮುಖರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲು ಹೋಗಿ ಬೆಂಗಳೂರು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ೧೧ ಶಂಕಿತ ಉಗ್ರರಲ್ಲಿ ಕೆಲವರು ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್ ಅರಣ್ಯದಲ್ಲಿ‘ಟಾರ್ಗೆಟ್ ಪ್ರಾಕ್ಟಿಸ್’ ನಡೆಸುತ್ತಿದ್ದರಂತೆ!
ಹುಬ್ಬಳ್ಳಿಯಲ್ಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಶಂಕಿತ ಉಗ್ರರು, ವಾರದಲ್ಲಿ ಎರಡ್ಮೂರು ಬಾರಿ ಕ್ಯಾಸಲ್‌ರಾಕ್ ಅರಣ್ಯದಲ್ಲಿ ಒಟ್ಟುಗೂಡಿ ಮರಗಳಿಗೆ ರಟ್ಟಿನ ಅಂಕಿಗಳ ಗುರುತು ಕಟ್ಟಿ ಗುಂಡು ಹೊಡೆದು ಗುರಿ ಸಾಧನೆ ಮಾಡುತ್ತಿದ್ದರಂತೆ. ಎತ್ತ ನೋಡಿದರತ್ತ ದಟ್ಟ ಕಾಡು. ಪಟ್ಟಣ-ಹಳ್ಳಿಗಳಿಂದ ದೂರ, ರೈಲು ಹಳಿ ಬಿಟ್ಟರೆ ಸುಸ್ಥಿತಿಯಲ್ಲಿರುವ ಬೇರೆ ರಸ್ತೆಯೂ ಇಲ್ಲದಿರುವ ಈ ಪ್ರದೇಶ ಒಗ್ಗೂಡುವಿಕೆಗೆ ಪ್ರಶಸ್ತ ಸ್ಥಳವಾಗಿದೆ. ಹಾಗಾಗಿ ಗುಂಡಿನ ಗುರಿ ಸಾಧನೆ, ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ತರಬೇತಿ, ಮಾಹಿತಿ ಹಂಚಿಕೊಳ್ಳುವುದು, ಒಟ್ಟುಗೂಡಿ ಚರ್ಚೆ, ಮುಂದಿನ ಯೋಜನೆ ರೂಪಿಸಲು ಈ ಸ್ಥಳ ಆಯ್ಕೆ ಮಾಡಿಕೊಂಡಿದ್ದರು. ಬಂಧಿತರಲ್ಲಿ ಒಬ್ಬ ಸಿಸಿಬಿ ಪೊಲೀಸರಿಗೆ ಈ ಮಾಹಿತಿ ಬಾಯಿ ಬಿಟ್ಟಿದ್ದರಿಂದ ಈ ಗುಂಡಿನ ಜಾಡು ಹಿಡಿದು ಶೋಧಿಸುವ ಹೊಣೆ ಈಗ ಹುಬ್ಬಳ್ಳಿ ಮತ್ತು ಬೆಳಗಾವಿ ಪೊಲೀಸರ ಹೆಗಲಿಗೆ ಬಿದ್ದಿದೆ. ಈ ಕುರಿತಂತೆ ಯಾವುದೇ ಅಧಿಕಾರಿ ಖಚಿತಪಡಿಸುತ್ತಿಲ್ಲ. ಆದರೆ, ಕ್ಯಾಸಲ್‌ರಾಕ್ ಅರಣ್ಯದೆಡೆ ಪೊಲೀಸ್ ಜೀಪುಗಳು ಮಾತ್ರ ಓಡಾಡಲು ಶುರು ಮಾಡಿವೆ. ಇಷ್ಟರಲ್ಲಿಯೇ ಆ ಶಂಕಿತರನ್ನು ಈ ಅರಣ್ಯ ಪ್ರದೇಶಕ್ಕೆ ಕರೆದು ತರುವ ಸಾಧ್ಯತೆಗಳೂ ಇವೆ.

ಬದಲಾದ ತರಬೇತಿ ಸ್ಥಳ: ನಾಲ್ಕು ವರ್ಷಗಳ ಹಿಂದೆ ಇಂಥದೇ ದುಷ್ಕೃತ್ಯಕ್ಕೆ ಕೈ ಹಾಕಿ, ಸದ್ಯ ಹಿಂಡಲಗಾ ಜೈಲಿನಲ್ಲಿರುವ ೧೭ ಶಂಕಿತ ಉಗ್ರರೂ ಕಲಘಟಗಿ ಪಟ್ಟಣದ ಹಿಂದಿರುವ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ‘ಟಾರ್ಗೆಟ್ ಪ್ರಾಕ್ಟಿಸ್’ ಮಾಡಿದ್ದನ್ನು ಬಂಧಿತರಲ್ಲಿ ಒಬ್ಬನಾದ ಡಾ. ಮಿರ್ಜಾ ಬೇಗ್ ತನಿಖೆ ನಡೆಸುತ್ತಿದ್ದ ಸಿ‌ಒಡಿ ಪೊಲೀಸ್ ತಂಡಕ್ಕೆ ಸ್ವತಃ ತೋರಿಸಿದ್ದ ಎನ್ನುವುದು ಇಲ್ಲಿ ಗಮನೀಯ. ಮರಗಳ ರೆಂಬೆಗಳಿಗೆ ಗುಂಡು ತಾಗಿರುವುದು, ದಪ್ಪ ಬೊಡ್ಡೆಯನ್ನು ಕಾಲಿನಿಂದ ವೇಗವಾಗಿ ಏರಿದ್ದ, ರೆಂಬೆಗಳಿಗೆ ನೇತಾಡಿ ನೆಲಕ್ಕೆ ಜಿಗಿದಿದ್ದ, ನೆಲದೊಳಗೆ ಅಡಗಿ ಕುಳಿತಿದ್ದ (ಬಂಕರ್), ಜಿಂಕೆ ಮರಿಯನ್ನು ಇಡಿಯಾಗಿ ಬೇಯಿಸಿ ತಿಂದಿದ್ದ ಕುರುಹುಗಳು ಈ ಟಾರ್ಗೆಟ್ ಪ್ರಾಕ್ಟಿಸ್ ಪ್ರದೇಶದಲ್ಲಿ ಲಭ್ಯವಾಗಿವೆ ಎನ್ನುವುದನ್ನು ಸಿ‌ಒಡಿ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ.

ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು, ಅಣೆಕಟ್ಟೆಗಳನ್ನು ಉಡಾಯಿಸುವುದು ಇವರ ಗುರಿಯಾಗಿತ್ತು. ಅದೃಷ್ಟ ಕೈಕೊಟ್ಟು ೨೧ರಲ್ಲಿ ೧೭ ಶಂಕಿತರು ಜೈಲು ಪಾಲಾಗಿದ್ದರಿಂದ ಇನ್ನುಳಿದವರ ಟಾರ್ಗೆಟ್ ಪ್ರಾಕ್ಟಿಸ್ ಸ್ಥಳ ಕಲಘಟಗಿ ಅರಣ್ಯದಿಂದ ಕ್ಯಾಸಲ್‌ರಾಕ್ ಅರಣ್ಯಕ್ಕೆ ಬದಲಾಗಿದೆ.

ಅಳಿಸದ ಉಗ್ರರ ನೆರಳು: ಸದ್ಯ ಹಿಂಡಲಗಾ ಜೈಲಿನಲ್ಲಿರುವ ಅಸಾದುಲ್ಲಾ ಅಬೂಬಕ್ಕರ್ ಮತ್ತು ಮೊಹ್ಮದ್ ಆಸೀಫ್ ದುಷ್ಕೃತ್ಯಕ್ಕಾಗಿ ಬಳಸಲೆಂದೇ ಹುಬ್ಬಳ್ಳಿಯಲ್ಲಿ ಕದಿಯಲಾಗಿದ್ದ ಬೈಕ್‌ನಲ್ಲಿ ತುಮಕೂರಿನ ಹೊನ್ನಾಳಿ ಬಳಿ ವೇಗವಾಗಿ ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ನ್ಯಾಯಾಲಯದ ಇವರ ಹಾವಭಾವಗಳನ್ನು ಕಂಡು,‘ಇದು ಮೇಲ್ನೋಟಕ್ಕೆ ಬೈಕ್ ಕಳ್ಳತನ ಅನಿಸಿದ್ದರೂ ಆಂತರ್ಯದಲ್ಲಿ ಬೇರೆನೋ ಇದೆ ಎನ್ನುವ ಅನುಮಾನವಿದೆ, ಶೋಧಿಸಿ ನೋಡಿ’ ಎಂದು ಪೊಲೀಸರಿಗೆ ನಿರ್ದೇಶಿಸಿದ್ದು ಉತ್ತರ ಕರ್ನಾಟಕದಲ್ಲಿ ಹೆಣೆದುಕೊಂಡಿದ್ದ ಉಗ್ರರ ಜಾಲ ಬಯಲಾಗುವಂತೆ ಮಾಡಿತ್ತು. ಅಬ್ಬಾ ಉಗ್ರರು ಹಿಂಡಲಗಾ ಜೈಲು ಪಾಲಾದರು ಎಂದು ನಿಟ್ಟುಸಿರು ಬಿಡುವ ವೇಳೆಗೆ ಈಗ ಮತ್ತೆ ಅವರು ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಅದೂ ಈ ರಾಜ್ಯದ ದೊರೆ ಜಗದೀಶ್ ಶೆಟ್ಟರ್ ಮನೆಯ ಆಸುಪಾಸಿನಲ್ಲಿ! ಉಗ್ರರ ನೆರಳು ಈಗ ಮಗ್ಗಲು ಬದಲಿಸಿದೆ!

ಮತ್ತೊಬ್ಬ ’ಉಗ್ರನ ’ ಸೆರೆ

ಬುಧವಾರ ೧೧ ಮಂದಿ ಶಂಕಿತ ಉಗ್ರನನ್ನು ಬಂಧಿಸಿದ್ದ ಪೊಲೀಸರು, ಆಂಧ್ರದಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಒಬೇದುಲ್ಲಾ ರೆಹಮಾನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಎಂಬಿ‌ಎ ಪದವೀಧರನಾಗಿದ್ದು, ಎಲ್‌ಇಟಿ ಹಾಗೂ ಹುಜಿ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ. ಆತನಿಂದ ಪ್ರಮುಖ ದಾಖಲೆ ಹಾಗೂ ಕೆಲವು ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಬಂಧಿಸಿರುವ ೧೧ ಮಂದಿಯ ಸಂಪರ್ಕ ಕೂಡ ಇತ್ತು ಎನ್ನಲಾಗಿದೆ.

ಶಂಕಿತ ಉಗ್ರರಿಗೆ ಭಟ್ಕಳ ನಂಟು?

ಹುಬ್ಬಳ್ಳಿ: ಎಲ್ಲರ ಚಿತ್ತ ಈಗ ಭಟ್ಕಳನತ್ತ ನೆಟ್ಟಿದೆ...!
ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಂಕಿತ ಉಗ್ರರ ಪ್ರಮುಖ ಯೋಜನಾ ಸ್ಥಳವಾಗಿತ್ತು. ಅಲ್ಲದೇ ಬಂಧಿತರ ಪೈಕಿ ಕೆಲವರು ಭಟ್ಕಳ ಮೂಲಕವಾಗಿಯೇ ಉಗ್ರವಾದಿ ಸಂಘಟನೆಯೊಂದಿಗೆ ನಂಟು ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಈ ಸಂದೇಹಕ್ಕೆ ಪುಷ್ಟಿ ಸಿಗುವಂತೆ ಮಾಡಲು ೨೦೦೮ರಲ್ಲಿ ನಡೆದ‘ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ’ ಪ್ರಕರಣ ಎದ್ದು ನಿಲ್ಲುತ್ತದೆ.
ಸರಣಿ ಬಾಂಬ್ ಸ್ಫೋಟ ನಡೆದಾಗ ರಿಯಾಜ್ ಭಟ್ಕಳ ಈ ಪ್ರಕರಣದ ಪ್ರಮುಖ ಆರೋಪಿ ಎಂಬುದು ತನಿಖೆಯ ವೇಳೆ ಸಾಬೀತಾಗಿತ್ತು. ಪ್ರಕರಣದ ತನಿಖೆ ನಡೆಯುವ ಹೊತ್ತಿಗಾಗಲೇ ಭಟ್ಕಳದ ನಿವಾಸಿಯಾಗಿದ್ದ ರಿಯಾಜ್ ಭಟ್ಕಳ ಆಗಲೇ ಕರಾಚಿಯಲ್ಲಿ ಬೀಡು ಬಿಟ್ಟಿದ್ದಾನೆಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆದರೆ, ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ ಪೊಲೀಸರು, ರಿಯಾಜ್ ಭಟ್ಕಳ ಹುಬ್ಬಳ್ಳಿಯ ಕೆಲವರಿಂದ ನೆರವು ಪಡೆದಿದ್ದ ಎಂಬ ಸಂದೇಹದ ಮೇಲೆ ಹುಬ್ಬಳ್ಳಿಗೂ ಬಂದು ತನಿಖೆ ನಡೆಸಿದ್ದರು. ಆದರೆ, ತನಿಖೆಯ ಸಂದರ್ಭ ಪೂರಕ ಮಾಹಿತಿ ಸಿಗದಾಗಿದ್ದರಿಂದ ಪೊಲೀಸರು ಇಲ್ಲಿ ಯಾರನ್ನೂ ಬಂಧಿಸಿರಲಿಲ್ಲ.

ಸಂದೇಹಕ್ಕೂ ಕಾರಣವಿದೆ: ಪ್ರಸ್ತುತ ಬಂಧನಕ್ಕೊಳಗಾಗಿರುವ ಕೆಲವರು ಭಟ್ಕಳ ನಂಟು ಹೊಂದಿದ್ದಾರೆ ಎಂಬುದಕ್ಕೂ ಸಕಾರಣವಿದೆ. ಮೊದಲನೆಯದಾಗಿ ಅಹಮದಾಬಾದ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ರಿಯಾಜ್ ಭಟ್ಕಳ ಮತ್ತು ಹಾಲಿ ಬಂಧಿತ ಆರೋಪಿಗಳು ಒಂದೇ ಸಂಘಟನೆಯವರಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಟ್ಕಳ ನಂಟು ಇಲ್ಲಿ ಬಲವಾಗಿರುವುದು ಸಾಬೀತಾಗುತ್ತದೆ. ಎರಡನೇಯದಾಗಿ ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಹುಬ್ಬಳ್ಳಿ ಮಂಟೂರ ರಸ್ತೆಯ ನಿವಾಸಿ ಸಾಧಿಕ್ ಲಷ್ಕರಿಯ ಮೊದಲನೇ ಪತ್ನಿ ರಮೀಜಾ ನೀಡುವ ಹೇಳಿಕೆ.

ರಮೀಜಾ ಪತ್ರಿಕೆಗೆ ಹಾಗೂ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ‘ಕಳೆದ ಕೆಲ ತಿಂಗಳ ಹಿಂದೆ ಸಾಧಿಕ್, ಭಟ್ಕಳದ ಯುವತಿಯೊಂದಿಗೆ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದ. ಆಕೆಯನ್ನು ಭಟ್ಕಳದಿಂದ ಕರೆ ತಂದು ಹುಬ್ಬಳ್ಳಿಯ ಕೌಲಪೇಟೆಯಲ್ಲಿ ಮನೆ ಮಾಡಿಸಿಟ್ಟಿದ್ದ. ಆ ಬಳಿಕ ಆಕೆಯನ್ನು ಕೌಸ್ತುಬಾನಗರದಲ್ಲಿ ಮನೆ ಮಾಡಿಟ್ಟು. ಎರಡನೇ ಹೆಂಡತಿ ಇಲ್ಲಿದ್ದಾಗಿಯೂ ಎಲೆಕ್ಟ್ರಿಶಿಯನ್, ಸೆಂಟ್ರಿಂಗ್ ಕೆಲಸವಿದೆ ಎಂದು ಮೇಲಿಂದ ಮೇಲೆ ಭಟ್ಕಳಕ್ಕೆ ಹೋಗುತ್ತಿದ್ದ. ಈ ನಡುವೆ ಬೈಕ್‌ನಲ್ಲಿ ಓಡಾಡುತ್ತಿದ್ದ (ಕೆ‌ಎ-೧೭ ಯು-೮೯೩) ಸಾಧಿಕ್ ಕಳೆದ ೧೫ ದಿನಗಳ ಹಿಂದೆಯೇ ಕಾರೊಂದನ್ನು ಖರೀದಿಸಿದ್ದ (ಕೆ‌ಎ-೦೪ ಎನ್-೮೩೫)’ ಎಂದಿದ್ದಾಳೆ.
ಇದನ್ನು ಗಮನಿಸಿದರೆ ಸಾಧಿಕ್ ಸೇರಿದಂತೆ ಬಂಧಿತ ಮತ್ತೆ ಕೆಲವರು ಭಟ್ಕಳ ಮೂಲಕವಾಗಿಯೇ ಉಗ್ರರೊಂದಿಗೆ ನಂಟು ಬೆಳೆಸಿರುವ ಸಾಧ್ಯತೆಯನ್ನು ಪುಷ್ಟಿಕರಿಸುತ್ತದೆ.

ಆತಂಕ ದೂರವಾಗಿಲ್ಲ...

ಶಂಕಿತ ಉಗ್ರರನ್ನು ಬಂಧಿಸಿದರೂ ಹುಬ್ಬಳ್ಳಿಯಲ್ಲಿ ಮಾತ್ರ ಆತಂಕ ಇನ್ನೂ ಮನೆ ಮಾಡಿದೆ. ಪೊಲೀಸರ ಚಲನವಲನ, ವಿಚಾರಣೆ ತೀವ್ರಗೊಂಡಿರುವುದರಿಂದ ಏನಾಗಬಹುದು ಎಂಬ ಕುತೂಹಲವೂ ಮೂಡಿದೆ. ಶಂಕಿತ ಉಗ್ರರ ಬಂಧನದಿಂದಾಗಿ ಸಹಜವಾಗಿ ಹುಬ್ಬಳ್ಳಿಯಲ್ಲಿ ಇದೇ ವಿಷಯವಾಗಿ ಚರ್ಚೆ ನಡೆಯುತ್ತಿದೆ.

ಜಾಫರ್ ಕುಟುಂಬ ಕಾಣೆ: ಶಂಕಿತ ಉಗ್ರ ಡಾ. ಜಾಫರ್ ಕುಟುಂಬ ಹುಬ್ಬಳ್ಳಿ ತೊರೆದು ಬೆಂಗಳೂರಿಗೆ ತೆರಳಿದೆ ಎನ್ನಲಾಗಿದೆ. ಇಲ್ಲಿನ ಬದಾಮಿ ನಗರದಲ್ಲಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸದಿಂದ ಕೂಗಳತೆಯ ದೂರದಲ್ಲಿ ಬಂಧಿತ ಜಾಫರ್‌ನ ಮನೆ ಇದೆ. ಗುರುವಾರ ರಾತ್ರಿ ೧೦ರ ಬಳಿಕ ಈ ಮನೆಗೆ ಬೀಗ ಹಾಕಲಾಗಿದೆ.

ಮನೆಗಳಲ್ಲಿ ಶೋಧ: ಶುಕ್ರವಾರ ಬೆಳಗ್ಗೆ ಪೊಲೀಸರು ಶಂಕಿತ ಉಗ್ರರ ಮನೆಗಳಲ್ಲಿ ಶೋಧ ನಡೆಸಿದ್ದಾರೆ. ಶಂಕಿತ ಉಗ್ರ ಮೆಹಬೂಬನ ಸಹೋದರಿ ಜಹೀದಾಬೇಗಂ ಹಳೇಹುಬ್ಬಳ್ಳಿ ಸೋನಿಯಾ ಗಾಂಧಿನಗರದಲ್ಲಿ ಬಾಡಿಗೆಗೆ ನೀಡಿದ್ದ ಮನೆ ಹಾಗೂ ಸಾಧಿಕ್ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಸಾಧಿಕ್ ಮನೆ ಎದುರಿದ್ದ ಕಾರಿನ ತಪಾಸಣೆ ಮಾಡಿದ್ದಾರೆ. ಆತನ ಪತ್ನಿ ರಮೀಜಾ ಅವರ ಹೇಳಿಕೆ ಪಡೆದಿದ್ದಾರೆ.

ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಉಗ್ರರು

ಬೆಂಗಳೂರು: ಕನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಅಂಕಣಕಾರ ಪ್ರತಾಪ ಸಿಂಹ ಅವರ ಹತ್ಯೆಗೆ ಉಗ್ರಗಾಮಿಗಳು ರೂಪಿಸಿದ್ದ ಸಂಚು ಏನಾಗಿತ್ತು?

‘ರಮೇಶನ ಮದುವೆ’ ಆಗಿದಿದ್ದರೆ ಏನಾಗುತ್ತಿತ್ತು?

ವಿಶ್ವೇಶ್ವರ ಭಟ್ ಮತ್ತು ಪ್ರತಾಪ್ ಸಿಂಹ ಅವರನು ಹತ್ಯೆ ಮಾಡಲು ಬಂಧಿತ ಉಗ್ರರು ಇಂದು ನಿನೆಯಲ್ಲ ಕಳೆದ ಎರಡು ವರ್ಷಗಳಿಂದ ಸಂಚು ರೂಪಿಸಿದ್ದರು ಎನುವ ಆತಂಕಕಾರಿ ಅಂಶ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕನಡಪ್ರಭ ಕಚೇರಿಗೂ ಭೇಟಿ: ಈ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಕೆಲವರು ಕಳೆದ ಮೂರು ತಿಂಗಳಲ್ಲಿ ಒಟ್ಟು ನಾಲ್ಕು ಬಾರಿ ಕನಡಪ್ರಭ ಕಚೇರಿಗೆ ಭೇಟಿ ನೀಡಿದ್ದಾರೆ. ಹಾಗೂ ಮೂರು ಬಾರಿ ಸುವರ್ಣ ನ್ಯೂಸ್ ಚಾನೆಲ್ ಕಚೇರಿಗೂ ಭೇಟಿ ಕೊಟ್ಟಿದ್ದಾರೆ.
ವಿಶ್ವೇಶ್ವರ ಭಟ್ ಹಾಗೂ ಪ್ರತಾಪ ಸಿಂಹ ಅವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಿನಿಂದಲೂ ಉಗ್ರರ ಕಣ್ಣು ಇವರ ಮೇಲಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಇಬ್ಬರ ಚಲನವಲನಗಳನು ಉಗ್ರರು ತೀವ್ರವಾಗಿ ಗಮನಿಸುತ್ತಿದ್ದರು.

ವಿಶ್ವೇಶ್ವರ ಭಟ್ ಅವರು ಕನಡಪ್ರಭ ಹಾಗೂ ಸುವರ್ಣ ನ್ಯೂಸ್ ಕಚೇರಿಗೆ ಬರುವ ಮತ್ತು ಹೊರಗೆ ಹೊರಡುವ ಸಮಯಯನು ತಿಳಿದುಕೊಳ್ಳುತ್ತಿದ್ದರು. ಇದೇ ರೀತಿ ಪ್ರತಾಪ ಸಿಂಹ ಅವರ ಚಲನವಲನದ ಮೇಲೆ ನಿಗಾ ಇಡುತ್ತಿದ್ದರು. ಇಬ್ಬರೂ ಎಲ್ಲಿಗೇ ಹೋದರು ಹಿಂಬಾಲಿಸುತ್ತಿದ್ದರು. ಮನೆ, ಅವರು ಓಡಾಡುವ ಸ್ಥಳಗಳು, ಸಂಬಂಧಿಕರು, ಸೇಹಿತರ ಮನೆಗಳನು ಉಗ್ರರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಹೆಚ್ಚಾಗಿ ನ್ಯೂಸ್ ಕಚೇರಿಯಲ್ಲಿ ಇರುತ್ತಿದ್ದುದ್ದನು ಉಗ್ರರು ವಿಶೇಷವಾಗಿ ಗಮನಿಸಿದ್ದರು.

ವಿಶ್ವೇಶ್ವರ ಭಟ್ ಅವರು ಒಂದು ವಾರದ ಹಿಂದಷ್ಟೇ ವಿದೇಶ ಪ್ರವಾಸ ಕೈಗೊಂಡಿದ್ದರು. ಹೀಗಾಗಿ ಅವರನು ಕೊಲ್ಲುವ ಉಗ್ರರ ಸಂಚು ಕೈಗೂಡಿರಲಿಲ್ಲ. ಕಳೆದ ಬುಧವಾರ ಪ್ರತಾಪ ಸಿಂಹ ಬಸವೇಶ್ವರ ನಗರದ ತಮ್ಮ ಸೇಹಿತರ ಮನೆಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಉಗ್ರರು ತಮ್ಮ‘ರಮೇಶನ ಮದುವೆ’ ಮಾಡಿ ಮುಗಿಸುವವರಿದ್ದರು. ಉಗ್ರರ ಕೋಡ್ ವರ್ಕ್ ಪ್ರಕಾರ ರಮೇಶ್ ಎಂದರೆ ಪ್ರತಾಪ್ ಸಿಂಹ. ಮದುವೆ ಎಂದರೆ ಹತ್ಯೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗೆ ವಿಶ್ವೇಶ್ವರ ಭಟ್, ಪ್ರತಾಪ್‌ಸಿಂಹ ಅವರು ತೆಗೆಸಿಕೊಂಡಿರುವ ಪೋಟೋಗಳು ಹಾಗೂ ಅವರು ಬರೆಯುತ್ತಿದ್ದ ಲೇಖನಗಳು ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದವು. ಇನು ಇಂತಹ ದೊಡ್ಡ ದುಷ್ಕೃತ್ಯದ ಸಂಚಿನ ಹಿಂದೆ ಇದ್ದ ವಿದೇಶಿ ಕೈಗಳಿಗೆ ಕನಡ ಬರುತ್ತಿರಲಿಲ್ಲ. ಆದರೆ ಅಂಗ್ಲ ದಿನಪತ್ರಿಕೆಯ ಪತ್ರಕರ್ತ ಮುತಿ ಉರ್ ರೆಹಮಾನ್ ಸಿದ್ದಿಕ್ ಈ ಎಲ್ಲಾ ವಿಚಾರಗಳನು ವಿದೇಶದಲ್ಲಿರುವ ತನ ಮುಖ್ಯಸ್ಥರಿಗೆ ಹಾಗೂ ಇತರರಿಗೆ ತಿಳಿಸುತ್ತಿದ್ದ. ಇದೇ ಕಾರಣಕ್ಕಾಗಿ ಬಂಧಿತ ಉಗ್ರರ ಲ್ಯಾಪ್ ಟಾಪ್‌ಗಳಲ್ಲಿ ವಿಶ್ವೇಶ್ವರ ಭಟ್ ಹಾಗೂ ಪ್ರತಾಪ ಸಿಂಹ ಅವರು ನರೇಂದ್ರ ಮೋದಿಯವರ ಜತೆ ಇರುವ ಪೋಟೋಗಳು ಸಿಕ್ಕಿವೆ.

ಬೆನ ಹಿಂದೆ ಪೊಲೀಸರು: ಉಗ್ರರು ಒಂದೆಡೆ ದುಷ್ಕೃತ್ಯದ ಸಂಚು ರೂಪಿಸುತ್ತಾ ವಿಶ್ವೇಶ್ವರ ಭಟ್ ಮತ್ತು ಪ್ರತಾಪ್ ಸಿಂಹ ಅವರ ಬೆನು ಬಿದ್ದಿದ್ದರು. ಆದರೆ ಸಿಸಿಬಿ ಪೊಲೀಸರು ಉಗ್ರರ ಹಿಂದೇಯೇ ಇದ್ದರು. ಪೊಲೀಸರು ತಮ್ಮ ಹಿಂದಿರುವ ಬಗ್ಗೆ ಉಗ್ರರಿಗೆ ಸುಳಿವೇ ಇರಲಿಲ್ಲ. ಸಂಚುಗಳು ಬಲವಾಗುತ್ತಾ ಹೋದಂತೆ ಸಿಸಿಬಿ ಪೊಲೀಸರಿಗೆ ಉಗ್ರರ ಅದರ ಸಾಕ್ಷಿಗಳು ದೊರೆಯುತ್ತಿದ್ದವು. ಇನೇನು ತಮ್ಮ ಅಪರೇಷನ್ ಮುಗಿಸಬೇಕು ಎಂದು ಉಗ್ರರು ತಯಾರಾಗುವಷ್ಟರಲ್ಲಿ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟರು. ಆತ್ಯಂತ ಚಾಣಾಕ್ಷತನದಿಂದ ಉಗ್ರರ ಜಾಲ ಬೇಧಿಸುವಲ್ಲಿ ಯಶಸ್ವಿಯಾದರು.

ಏಜಾಜ್ ಅಹ್ಮದ್ ಮಿರ್ಜಾ ವಿರುದ್ಧ ಶಿಸ್ತು ಕ್ರಮ: ಡಿ‌ಆರ್‌ಡಿ‌ಓ

ನವದೆಹಲಿ/ಬೆಂಗಳೂರು: ಲಷ್ಕರ್-ಎ-ತೋಯ್ಬಾ ಮತ್ತು ಹುಜಿ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತನಾಗಿರುವ ಕಿರಿಯ ವಿಜ್ಞಾನಿ, ಸಂಶೋಧಕ ಏಜಾಜ್ ಅಹ್ಮದ್ ಮಿರ್ಜಾ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಡಿ‌ಆರ್‌ಡಿ‌ಓ) ತಿಳಿಸಿದೆ. ಡಿ‌ಆರ್‌ಡಿ‌ಒದ ಯಾವುದೇ ಸೂಕ್ಷ್ಮ ಕೆಲಸಗಳಲ್ಲಿ ಮಿರ್ಜಾ ತೊಡಗಿಕೊಂಡಿರಲಿಲ್ಲ. ಹಾಗೂ ಆತನೊಂದಿಗೆ ಅಂತಹ ಯಾವುದೇ ಸೂಕ್ಷ್ಮ ವಿಷಯ, ವಿಚಾರಗಳನು ಹಂಚಿಕೊಂಡಿರಲಿಲ್ಲ ಎಂದು ಸಂಸ್ಥೆ ತಿಳಿಸಿದೆ. ಆದರೂ ಭಾರತ ಸರ್ಕಾರದ ನಿಯಮಗಳ ಪ್ರಕಾರ ಮಿರ್ಜಾ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ವಕ್ತಾರ ರವಿ ಗುಪ್ತಾ ತಿಳಿಸಿದ್ದಾರೆ. ಮಿರ್ಜಾನನು ಕೆಲ ತಿಂಗಳ ಹಿಂದಷ್ಟೇ ಸೆಂಟರ್ ಫಾರ್ ಏರ್‌ಬೋರ್ನ್ ಪ್ರಯೋಗಾಲಯದಲ್ಲಿ ಕಿರಿಯ ಸಂಶೋಧಕ ವಿದ್ಯಾರ್ಥಿಯಾಗಿ (ಜೆ‌ಆರ್‌ಎಫ್) ನೇಮಿಸಿಕೊಳ್ಳಲಾಗಿತ್ತು. ಈ ಕೇಂದ್ರದಲ್ಲಿ ವೈಮಾನಿಕ ದಾಳಿಯ ಎಚ್ಚರಿಕೆ ಮತ್ತು ದಾಳಿ ನಿಯಂತ್ರಿಸುವ ಸ್ವದೇಶಿ ನಿರ್ಮಿತ ಉಪಕರಣಗಳು ಸೇರಿದಂತೆ ಸೇನೆಯಲ್ಲಿ ಬಳಕೆಯಾಗುವ ಕಣ್ಗಾವಲು ಸಾಧನಗಳನು ಉತ್ಪಾದಿಸಲಾಗುತ್ತಿತ್ತು. ಇನು ಸಂಶೋಧಕ ವಿದ್ಯಾರ್ಥಿಯಾಗಿ ಯಾರನೇ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕೆಂದರೂ ಆತನ ಪೂರ್ವಾಪರ ಹಾಗೂ ಪೊಲೀಸರಿಂದ ಪರಿಶೀಲನೆ ಕೂಡಾ ನಡೆಸಲಾಗುತ್ತದೆ ವಕ್ತಾರ ತಿಳಿಸಿದ್ದಾರೆ. 

 ಶಂಕಿತ ಉಗ್ರರಿಂದ ಶಾಂತಿ ಭಂಗ ಸಂಚು


ಬೆಂಗಳೂರು: ನಗರದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಹಾಗೂ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಭಯೋತ್ಪಾದನಾ ಸಂಘಟನೆಯ ಹನ್ನೊಂದು ಮಂದಿ ಶಂಕಿತ ಉಗ್ರರು ಗಣೇಶ ಹಬ್ಬದ ವೇಳೆ ಕೋಮುಗಳ ನಡುವೆ ಗಲಭೆ ಸೃಷ್ಟಿಸಿ ರಾಜ್ಯದ ಶಾಂತಿ ಕದಡಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

‘ಬಂಧಿತರನ್ನು ಗುರುವಾರ ರಾತ್ರಿ ನಗರದ ಒಂದನೇ ಎಸಿ‌ಎಂಎಂ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದೆವು. ಬಂಧಿತರನ್ನು ಸೆ.13ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು‘ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ. ದಯಾನಂದ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಬಂಧಿತರು ವಿಚಾರಣೆ ವೇಳೆ ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮುಗಳ ನಡುವೆ ದ್ವೇಷ ಹುಟ್ಟು ಹಾಕಿ ರಾಜ್ಯದಲ್ಲಿ ತೀವ್ರತರದ ಗಲಭೆ ಸೃಷ್ಟಿಸುವ ಹುನ್ನಾರ ಹೊಂದಿದ್ದರು. ಅಲ್ಲದೇ, ಹುಬ್ಬಳ್ಳಿ ಮತ್ತು ಬೆಂಗಳೂರಿನ ಪ್ರಮುಖ ಚಿನ್ನಾಭರಣ ಮಳಿಗೆಗಳಲ್ಲಿ ದರೋಡೆ ಮಾಡಲು ಯೋಜನೆ ರೂಪಿಸಿಕೊಂಡಿದ್ದರು. ಸುಶಿಕ್ಷಿತರಾದ ಶಂಕಿತ ಉಗ್ರರು ಆನ್‌ಲೈನ್ ಮೂಲಕ ಕೆಲ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ, ಜಾಲ ವಿಸ್ತರಣೆಗೂ ಅಗತ್ಯ ತಯಾರಿ ನಡೆಸಿದ್ದರು‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಂಧಿತರಿಂದ ವಶಪಡಿಸಿಕೊಂಡಿರುವ ಲ್ಯಾಪ್‌ಟಾಪ್‌ನಲ್ಲಿ ಗೋಧ್ರಾ ಹತ್ಯಾಕಾಂಡದ ವಿಡಿಯೊ ತುಣುಕುಗಳು ಸಿಕ್ಕಿವೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಸ್‌ಐಬಿ ಕಣ್ಗಾವಲು:
‘ಆಂಧ್ರಪ್ರದೇಶದ ಗುಪ್ತಚರ ದಳದ (ಎಸ್‌ಐಬಿ) ಅಧಿಕಾರಿಗಳು ದೇಶದಲ್ಲಿನ ಭಯೋತ್ಪದನಾ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದರು. ಬಂಧಿತರು ಅಫ್ಘಾನಿಸ್ತಾನ, ಇಸ್ಲಾಮಾಬಾದ್ ಮತ್ತು ಸೌದಿ ಅರೇಬಿಯಾಕ್ಕೆ ನಿರಂತರವಾಗಿ ಮೊಬೈಲ್ ಕರೆ ಮಾಡುತ್ತಿದ್ದರು. ಈ ಬಗ್ಗೆ ಎಸ್‌ಐಬಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಆಗಮಿಸಿ ಎಸ್‌ಐಬಿ ಅಧಿಕಾರಿಗಳು ಒಂದೂವರೆ ತಿಂಗಳಿನಿಂದ ಶಂಕಿತರ ಚಲನವಲನಗಳನ್ನು ಗಮನಿಸುತ್ತಿದ್ದರು‘ ಎಂದು ಮೂಲಗಳು ಹೇಳಿವೆ.

ಮತ್ತೊಬ್ಬನ ಬಂಧನ

‘ಬಂಧಿತರು ನೀಡಿದ ಮಾಹಿತಿ ಆಧರಿಸಿ ಆಂಧ್ರದ ಹೈದರಾಬಾದ್‌ನಲ್ಲಿ ಹುಜಿ ಭಯೋತ್ಪಾದನಾ ಸಂಘಟನೆಯ ಶಂಕಿತ ಉಗ್ರ ಮಹಮ್ಮದ್ ಇರ್ಷಾದ್ ಅಲಿಯಾಸ್ ರೆಹಮಾನ್ ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ.

ಎಲ್‌ಇಟಿ, ಹುಜಿ ಸಂಘಟನೆಗಳಿಂದ :ವಿಧ್ವಂಸಕ ಕೃತ್ಯ ಅನುಷ್ಠಾನಕ್ಕೆ ಆನ್‌ಲೈನ್ ‘ಪಾಠ’

ಹುಬ್ಬಳ್ಳಿ: ‘ಅಂತರರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಹಾಗೂ ಹರ್ಕತ್- ಉಲ್- ಜಿಹಾದ್ ಅಲ್ ಇಸ್ಲಾಮಿ (ಹುಜಿ) ‘ಧಾರ್ಮಿಕ ಮೂಲಭೂತವಾದಿ‘ ಯುವಕರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ‘ಸಂಪರ್ಕ ಕೊಂಡಿ‘ಯನ್ನು ವಿಸ್ತರಿಸಿಕೊಂಡಿದೆ.

ಸುಶಿಕ್ಷಿತರನ್ನೇ ಆಯ್ಕೆ ಮಾಡಿಕೊಂಡು ಇಂಟರ್‌ನೆಟ್ ಮೂಲಕ ವಿಧ್ವಂಸಕ ಕೃತ್ಯಗಳನ್ನು ಕಾರ್ಯರೂಪಕ್ಕಿಳಿಸುವ ಪಾಠ ಮಾಡಲು ಈ ಸಂಘಟನೆಗಳು ಸಿದ್ಧತೆ ನಡೆಸಿದ್ದವು ಎಂಬ ಆತಂಕಕಾರಿ ಮಾಹಿತಿಯನ್ನು ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ ಶಂಕಿತ ಉಗ್ರರು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಕೆಲ ಮಹತ್ವದ ಮಾಹಿತಿಗಳನ್ನು ಈಗಾಗಲೇ ಕಲೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸುವುದು, ಶಸ್ತ್ರಾಸ್ತ್ರ ಬಳಕೆ, ಬಾಂಬ್ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳಿಗೆ ಸ್ಥಳ ಆಯ್ಕೆ ಮುಂತಾದ ವಿಷಯಗಳನ್ನು ಹಂಚಿಕೊಳ್ಳಲು ಶಂಕಿತ ಉಗ್ರರು ಆನ್‌ಲೈನ್ ತಂತ್ರಜ್ಞಾನದ ಮೊರೆ ಹೋಗಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ಜಾಲ ವಿಸ್ತರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡ ಬಗ್ಗೆಯೂ ಮಾಹಿತಿ ಸಿಕ್ಕಿದೆ‘ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ಶಂಕಿತ ಉಗ್ರರ ಪೈಕಿ ಪ್ರಮುಖನಾದ, ಉತ್ತರಪ್ರದೇಶ ಮೂಲದ ಮುತೀವುರ್ ರೆಹಮಾನ್ ಸಿದ್ದಿಕಿ, ನೆರೆಯ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದಲ್ಲಿ ಹೊಂದಿರಬಹುದಾದ ಸಂಪರ್ಕ ಕುರಿತ ಮಾಹಿತಿ ಸಂಗ್ರಹ, ಬಂಧಿತರಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್, ಹಾರ್ಡ್ ಡಿಸ್ಕ್‌ಗಳಲ್ಲಿರುವ ಮಾಹಿತಿ ಪಡೆಯುವುದು ಹಾಗೂ ಅವರು ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿರುವ ಸಂಪರ್ಕ ಕುರಿತು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಕಾರ್ಯದಲ್ಲಿ ಕೇಂದ್ರ ಗೃಹ ಇಲಾಖೆಯೂ ರಾಜ್ಯ ಪೊಲೀಸರೊಂದಿಗೆ ಕೈಜೋಡಿಸಲಿದ್ದು, ರಾಷ್ಟ್ರೀಯ ತನಿಖಾ ಏಜಿನ್ಸಿ (ಎನ್‌ಐ‌ಎ) ಸಹ ಶಂಕಿತರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮತ್ತು ಇಂಟಲಿಜೆನ್ಸ್ ಬ್ಯೂರೊ (ಐಬಿ) ಬೇಹುಗಾರಿಕಾ ಸಂಸ್ಥೆಗಳು ಕೇಂದ್ರ ಗೃಹ ಇಲಾಖೆಗೆ ಕೆಲವು ತಿಂಗಳ ಹಿಂದೆ ನೀಡಿದ ವರದಿಯಲ್ಲಿ, ಕರ್ನಾಟಕದಲ್ಲಿ ಆನ್‌ಲೈನ್ ಮೂಲಕ ಭಯೋತ್ಪಾದನಾ ತರಬೇತಿ ನೀಡುತ್ತಿರುವ ಕುರಿತು ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಇದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ, ಎಚ್ಚರ ವಹಿಸುವಂತೆ ಎಲ್ಲ ರಾಜ್ಯಗಳಿಗೆ ಸಂದೇಶ ರವಾನಿಸಿತ್ತು ಎಂದು ತಿಳಿದುಬಂದಿದೆ.

‘ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ಮಂಗಳೂರು, ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ಭಯೋತ್ಪಾದನೆ ತರಬೇತಿ ನೀಡುವ ಸುಶಿಕ್ಷಿತರು ನೆಲೆಸಿದ್ದಾರೆ. ಗುಪ್ತಚರ ಮೂಲಗಳು ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಇಂಥಹವರ ಶೋಧಕ್ಕೆ ಮುಂದಾಗಿರುವ ಪೊಲೀಸರು, ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಶಂಕಿತರನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಲಾಗಿದೆ.

‘ಗೋಪ್ಯತೆ ಕಾಪಾಡುವುದು ಅನಿವಾರ್ಯ‘

ನಗರದಲ್ಲಿ ಶಂಕಿತ ಉಗ್ರರ ಚಲನವಲನ, ಚಟುವಟಿಕೆ ನಡೆಸುತ್ತಿರುವುದು ಅವರ ಬಂಧನದಿಂದ ಬಹಿರಂಗಗೊಂಡಿದ್ದರೂ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ, ‘ವಿಧ್ವಂಸಕ ಕೃತ್ಯದ ಸಂಚು ರೂಪಿಸಿದ್ದ ಆರೋಪಿಗಳ ಮಾಹಿತಿ ಇದ್ದರೂ ಗೋಪ್ಯತೆ ಕಾಪಾಡುವ ದೃಷ್ಟಿಯಿಂದ ಎಲ್ಲ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಶಂಕಿತರ ತನಿಖೆಯನ್ನು ಸಿಸಿಬಿ ಮುಂದುವರಿಸಲಿದೆ‘ ಎಂದರು.

‘ಶಂಕಿತರ ಬಂಧನದ ಹಿನ್ನೆಲೆಯಲ್ಲಿ ನಗರದಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಉದ್ದೇಶದಿಂದಲೇ ಗುರುವಾರ ಸಂಜೆ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸ್ಥಿತಿಗತಿಯ ಅವಲೋಕನ ನಡೆಸಲಾಗಿದೆ ಎಂದರು.

ಅಲ್ಲದೇ ಮಂಗಳೂರು, ಉಡುಪಿ, ಶಿವಮೊಗ್ಗದಲ್ಲೂ ಕೆಲವರನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ‘ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಹಿಂದೂಪರ ಸಂಘಟನೆಗಳ ಪ್ರಕರಣಗಳ ವಕಾಲತ್ತು ವಹಿಸುತ್ತಿದ್ದ ಪ್ರಮುಖ ವಕೀಲರೊಬ್ಬರ ಹತ್ಯೆಗೂ ಸಂಚು ರೂಪಿಸಿದ್ದರು. ಸೌದಿ ಅರೇಬಿಯಾದಿಂದ ಸಾಕಷ್ಟು ಹಣಕಾಸು ನೆರವು ಬಂದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಮುತಿವುರ್ ರೆಹಮಾನ್ ಸಿದ್ದಿಕಿ ಮತ್ತು ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರ ಹಣಕಾಸು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಶಂಕಿತ ಉಗ್ರ ಜಾಫರ್ ನಿವಾಸ ಖಾಲಿ:‘ಹಿಟ್‌ಲಿಸ್ಟ್’ ಗಣ್ಯರಿಗೆ ಬಿಗಿ ಭದ್ರತೆ


ಹುಬ್ಬಳ್ಳಿ: ಭಯೋತ್ಪಾದನಾ ಚಟುವಟಿಕೆಯ ಹಿನ್ನೆಲೆಯಲ್ಲಿ ಶಂಕಿತ ಉಗ್ರರ ಹಿಟ್‌ಲಿಸ್ಟ್‌ನಲ್ಲಿರುವ ಎಲ್ಲ ಗಣ್ಯರಿಗೆ  ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶನಿವಾರ ನಗರಕ್ಕೆ ಭೇಟಿ ನೀಡಲಿದ್ದು ಬಿಗಿ ಭದ್ರತೆಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.


ಶಂಕಿತ ಉಗ್ರರ ಬಂಧನದ ವಿಷಯ ಗುರುವಾರ ಸಂಜೆ ಅಧಿಕೃತವಾಗಿ ಪ್ರಕಟವಾಗುತ್ತಿದ್ದಂತೆಯೇ ಈ ಭಾಗದ ಗಣ್ಯರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಗೃಹ ಇಲಾಖೆಯಿಂದ ಆದೇಶ ಬಂದಿದೆ ಎನ್ನಲಾಗಿದೆ.

‘ಮುಖ್ಯಮಂತ್ರಿಗಳಿಗೆ ಹೆಚ್ಚಿನ ಭದ್ರತೆ ನೀಡುತ್ತಿರುವುದು ನಿಜ. ಉಗ್ರರ ಹಿಟ್‌ಲಿಸ್ಟ್‌ನಲ್ಲಿರುವ ವಿ‌ಐಪಿಗಳಿಗೂ ಭದ್ರತೆ ನೀಡಲಾಗುವುದು. ಆದರೆ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಬಹಿರಂಗಪಡಿಸಲು ಆಗದು‘ ಎಂದು  ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ  ತಿಳಿಸಿದರು.

ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಉದ್ಯಮಿ ವಿಜಯ ಸಂಕೇಶ್ವರ್ ಅವರ ನಿವಾಸಕ್ಕೆ ದಿನದ 24 ತಾಸು ಭಾರಿ ಭದ್ರತೆ ನೀಡಲಾಗುತ್ತಿದೆ. ಒಬ್ಬರು ಇನ್‌ಸ್ಪೆಕ್ಟರ್, ಒಬ್ಬರು ಕಾನ್‌ಸ್ಟೆಬಲ್ ಒಳಗೊಂಡ ಎಸ್ಕಾರ್ಟ್ ಸೇವೆಯನ್ನು ಅವರಿಗೆ ನೀಡಲಾಗಿದೆ.  ಸಂಸದ ಪ್ರಹ್ಲಾದ ಜೋಶಿ ನಿವಾಸಕ್ಕೆ ಒದಗಿಸಿರುವ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಜಾಫರ್ ಮನೆ ಖಾಲಿ: ಮುಖ್ಯಮಂತ್ರಿಗಳ ನಿವಾಸದ ಸಮೀಪವಿರುವ, ಆರೋಪಿ ಡಾ. ಜಾಫರ್ ಇಕ್ಬಾಲ್ ಸೊಲ್ಲಾಪುರ ನಿವಾಸದಲ್ಲಿದ್ದ ಕುಟುಂಬದ ಸದಸ್ಯರು ಗುರುವಾರ ರಾತ್ರಿಯೇ ಮನೆ ಖಾಲಿ ಮಾಡಿದ್ದಾರೆ. ಮನೆಯ ಗೇಟಿಗೆ ಬೀಗ ಹಾಕಲಾಗಿದೆ.

‘ಜಾಫರ್ ಮನೆಗೆ ಹಾನಿಯಾಗದಂತೆ ನೋಡಿಕೊಳ್ಳಲು, ಸಾಕ್ಷ್ಯಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಲು ಈ ಮನೆಗೆ ಕಾವಲು ವ್ಯವಸ್ಥೆ ಮಾಡಲಾಗಿದೆ. ಪಾಳಿ ಮೇರೆಗೆ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ನಿಯೋಜಿಸಲಾಗಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಸಾದಿಕ್ ಮನೆ ತಪಾಸಣೆ: ಬಂಧಿತ ಶಂಕಿತ ಉಗ್ರರ ಪೈಕಿ ಒಬ್ಬರಾದ ಸಾದಿಕ್ ಲಷ್ಕರಿಯ ಮನೆಯನ್ನು ಘಂಟಿಕೇರಿ ಠಾಣೆ  ಪೊಲೀಸರು ಶುಕ್ರವಾರ ತಪಾಸಣೆ ನಡೆಸಿದರು.ಇಲ್ಲಿನ ಕಸ್ತೂರಬಾ ನಗರದಲ್ಲಿರುವ ಕೃಪಾ ಕಾಲೊನಿಯ ಮಸೀದಿ ಹಿಂಭಾಗದಲ್ಲಿರುವ ಸಾದಿಕ್ ನಿವಾಸಕ್ಕೆ ಮಧ್ಯಾಹ್ನ ತೆರಳಿದ ಇನ್‌ಸ್ಪೆಕ್ಟರ್ ರವೀಂದ್ರ ಶಿರೂರ ನೇತೃತ್ವದ ತಂಡ ಮನೆಯಲ್ಲಿನ ದಾಖಲೆಗಳು, ಸಾದಿಕ್ ಬಳಸುತ್ತಿದ್ದ ಕಾರನ್ನು ಪರಿಶೀಲಿಸಿತು.

ಈ ಸಂದರ್ಭದಲ್ಲಿ ಸಾದಿಕ್ ಮೊದಲ ಪತ್ನಿ ರಮೀಜಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.
‘ಮನೆಗೆ ಅವರು ಯಾರನ್ನೂ ಕರೆ ತರುತ್ತಿರಲಿಲ್ಲ. ಅವರ ಸ್ನೇಹಿತರ ಬಗ್ಗೆ ನನಗೆ ಮಾಹಿತಿಯೂ ಇಲ್ಲ. ಮದುವೆಯಾಗಿ ಎರಡು ವರ್ಷ ಆಗಿದೆ. ಮಕ್ಕಳಾಗದ ಕಾರಣಕ್ಕೆ ವರ್ಷದ ಹಿಂದೆ ಭಟ್ಕಳದ ಫಾತಿಮಾ ಎಂಬುವವಳನ್ನು ಎರಡನೇ ಮದುವೆಯಾಗಿದ್ದಾರೆ.

ಆಕೆ ಸಾದಿಕ್ ತಂದೆ-ತಾಯಿಯೊಂದಿಗೆ ಕೌಲಪೇಟೆಯಲ್ಲಿ ವಾಸವಾಗಿದ್ದಾಳೆ. ಫಾತಿಮಾ ಈಗ ಏಳು ತಿಂಗಳ ಗರ್ಭಿಣಿ‘ ಎಂದು ರಮೀಜಾ ಪೊಲೀಸರಿಗೆ ಮಾಹಿತಿ ನೀಡಿದರು. ಪಕ್ಕದ ಮನೆಯ ನಿವಾಸಿ ವಿಕ್ಟೋರಿಯಾ ಮಾತನಾಡಿ, ‘ಸಾದಿಕ್ ಕುಟುಂಬ ಇಲ್ಲಿಗೆ ಬಂದು ಕೇವಲ ಇಪ್ಪತ್ತು ದಿನಗಳಾಗಿವೆ. ಅವರು ಯಾರೊಂದಿಗೂ ಬೆರೆಯುತ್ತಿರಲಿಲ್ಲ‘ ಎಂದರು.

 ಪತ್ರಕರ್ತನ ಉಗ್ರ ಅಧ್ಯಾಯ, ಮನೆಯಲ್ಲಿ ಮೌನ


ಹುಬ್ಬಳ್ಳಿ: ಶಂಕಿತ ಉಗ್ರ, ಪತ್ರಕರ್ತ ಮುತಿ-ಉರ್ ರೆಹಮಾನ್ ಸಿದ್ದಿಕಿ ಬಂಧನದ ಸುದ್ದಿ ತಿಳಿದು ಇಲ್ಲಿನ ಹಳೇಹುಬ್ಬಳ್ಳಿ ಮಕಾನದಾರ ಗಲ್ಲಿಯ ಆತನ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸಂಬಂಧಿಕರು, ಅಕ್ಕ-ಪಕ್ಕದವರ ಪ್ರಶ್ನೆಗೆ ಉತ್ತರಿಸಲಾಗದೆ ಕುಟುಂಬದ ಸದಸ್ಯರು ಮೌನಕ್ಕೆ ಶರಣಾಗಿದ್ದಾರೆ.

ಗಲ್ಲಿಯಲ್ಲಿ ತನ್ನ ವಾರಿಗೆಯ ಹುಡುಗರಿಗಿಂತ ಹೆಚ್ಚು ಓದಿದ್ದರಿಂದ ಹಾಗೂ ‘ಪತ್ರಕರ್ತ‘ನಾಗಿ ಕೆಲಸ ಮಾಡುತ್ತಿದ್ದುದರಿಂದ ಸ್ಥಳೀಯರಿಂದ ಹೆಚ್ಚಿನ ಮನ್ನಣೆ ಪಡೆದಿದ್ದ ಸಿದ್ದಿಕಿ, ‘ಹುಬ್ಬಳ್ಳಿ ಭಾಗದಲ್ಲಿ ಭವಿಷ್ಯದ ಭಯೋತ್ಪಾದನೆ ಚಟುವಟಿಕೆಗಳ ‘ಮಾಸ್ಟರ್ ಮೈಂಡ್‘ ಆಗಿದ್ದ ಎಂಬ ಪೊಲೀಸರ ಹೇಳಿಕೆ ಕುಟುಂಬದವರಲ್ಲಿ ದಿಗಿಲು ಉಂಟು ಮಾಡಿದೆ.

ಉತ್ತರ ಪ್ರದೇಶದ ರಾಯಬರೇಲಿಯಿಂದ 70ರ ದಶಕದಲ್ಲಿ ಸುಗಂಧ ದ್ರವ್ಯ ಮಾರಾಟಕ್ಕೆಂದು ಇಲ್ಲಿಗೆ ವಲಸೆ ಬಂದು ನೆಲೆಸಿದ್ದ ಮಹಮ್ಮದ್ ಸಿದ್ದಿಕಿ ತಬೀಬ್‌ಲ್ಯಾಂಡ್‌ನಲ್ಲಿ ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಅವರ ಆರು ಮಕ್ಕಳಲ್ಲಿ ಮುತಿ-ಉರ್ ಸಿದ್ದಿಕಿ ಮೂರನೆಯವನು.

ಆರು ವರ್ಷಗಳ ಹಿಂದೆ ಮಹಮ್ಮದ್ ಸಿದ್ದಿಕಿ ಹೃದಯಾಘಾತದಿಂದ ಹಾಗೂ ವರ್ಷದ ಹಿಂದಷ್ಟೇ ತಾಯಿ ಸಾಯಿರಾ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.‘ಇಲ್ಲಿನ ತಬೀಬ್ ಲ್ಯಾಂಡ್ ನೆಹರೂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ ಮುತಿ-ಉರ್, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿದ್ದ.

ಮುಂದೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮ ವಿಷುದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮುಗಿಸಿ ಅಲ್ಲಿಯೇ ಪತ್ರಕರ್ತನಾಗಿ ಕೆಲಸ ಆರಂಭಿಸಿದ್ದ‘ ಎಂದು ಆತನ ಸಹೋದರಿ ಶಂಶಾದ್ ಬೇಗಂ ‘ಪ್ರಜಾವಾಣಿ‘ಗೆ ತಿಳಿಸಿದರು.

ಬಡತನದ ಬೇಗೆ: ‘ಮುತಿ-ಉರ್‌ನ ಇಬ್ಬರು ಸಹೋದರರು ತಂದೆಯ ಸುಗಂಧ ದ್ರವ್ಯದ ಅಂಗಡಿ ನೋಡುಕೊಳ್ಳುತ್ತಿದ್ದಾರೆ. ಅದರಿಂದ ಅಷ್ಟಾಗಿ ಆದಾಯವಿಲ್ಲ. 8ನೇ ತರಗತಿಗೆ ಓದು ಬಿಟ್ಟಿರುವ ತಮ್ಮ ಬೇರೆಯವರ ಅಂಗಡಿಯಲ್ಲಿ ಕೆಲಸಕ್ಕೆ ಇದ್ದಾನೆ. ಇಬ್ಬರು ಸಹೋದರಿಯರು ಮನೆಯಲ್ಲಿ ಇದ್ದಾರೆ. ರಮ್ಜಾನ್ ಹಬ್ಬಕ್ಕೆ ಎಂಟು ದಿನ ರಜೆ ಹಾಕಿ ಬಂದವನು ಕಳೆದ ವಾರವಷ್ಟೇ ಮರಳಿದ್ದ.

ತಮ್ಮನ ಬಂಧನದ ಬಗ್ಗೆ ಮನೆಯವರಿಗೆ ಪೊಲೀಸರು ಮಾಹಿತಿ ನೀಡಿಲ್ಲ. ಮನೆಯಲ್ಲಿ ಟಿ.ವಿ ಇಲ್ಲದ ಕಾರಣ ಪಕ್ಕದ ಮನೆಯವರು ಬಂದು ಹೇಳಿದಾಗಲೇ ತಿಳಿಯಿತು. ಮುತಿ-ಉರ್ ಕೆಲಸಕ್ಕೆ ಸೇರಿದ ಮೇಲೆ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು. ಪ್ರತಿ ತಿಂಗಳು ಆತ ಕಳುಹಿಸುತ್ತಿದ್ದ ಹಣದಲ್ಲಿಯೇ ಮನೆಯ ಐವರು ಸದಸ್ಯರ ಬದುಕು ಸಾಗುತ್ತಿತ್ತು.ಮುಂದೇನು ಎಂಬುದೇ ತೋಚದಂತಾಗಿದೆ‘ ಎಂದು ಶಂಶಾದ್ ಅಳಲು ತೋಡಿಕೊಂಡರು.

ಸದಾ ಅಂತರ್ಮುಖಿ: ‘ಕಾಲೇಜು ದಿನಗಳಲ್ಲಿ ಮನೆಯ ಹಿಂಭಾಗದ ಇಸ್ಲಾಮಿಕ್ ಸೆಂಟರ್‌ನಲ್ಲಿರುವ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಕಚೇರಿಯಲ್ಲಿ ದಿನದ ಹೆಚ್ಚು ಹೊತ್ತು ಕಳೆಯುತ್ತಿದ್ದ ಆತ ಸಂಘಟನೆಗಳ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಎಂದು ಹೇಳಲಾಗಿದೆ.

‘ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದ ನಂತರ ಸಿದ್ದಿಕಿ ಹುಬ್ಬಳ್ಳಿಗೆ ಹೆಚ್ಚಾಗಿ ಬರುತ್ತಿರಲಿಲ್ಲ. ಸದಾ ಅಂತರ್ಮುಖಿಯಾಗುತ್ತಿದ್ದ. ಮನೆಗೆ ಬಂದರೆ ಓದಲು ಅಟ್ಟ ಸೇರಿಕೊಳ್ಳುತ್ತಿದ್ದ. ನಮಾಜ್‌ಗೆ ಮಾತ್ರ ಕೆಳಗೆ ಬರುತ್ತಿದ್ದ. ಗಲ್ಲಿ ಎದುರಿನ ಮಟನ್ ಅಂಗಡಿ ಇಟ್ಟುಕೊಂಡಿರುವ ಅಬ್ದುಲ್ ಘನಿ ಬೆಫಾರಿ ಅವರೊಂದಿಗೆ ಮಾತ್ರ ಸಲುಗೆಯಿಂದ ಮಾತನಾಡುತ್ತಿದ್ದ‘ ಎಂದು ಎಂದು ಬಾಲ್ಯದ ಸಹಪಾಠಿ ಮೈನುದ್ದೀನ್ ಬ್ಯಾಹಟ್ಟಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಎಂದೂ ತರಗತಿ ತಪ್ಪಿಸುತ್ತಿರಲಿಲ್ಲ. ಓದಿನಲ್ಲಿ ಚುರುಕಾಗಿದ್ದ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉರ್ದು  ಪ್ರೊ.ಎಸ್.ಎ.ಹುಸೇನ್ ನೆನಪಿಸಿಕೊಳ್ಳುತ್ತಾರೆ.

ಹುಜಿ ನೇಮಕಾತಿ ಘಟಕ ...

‘ಪತ್ರಕರ್ತ ಮುತಿ-ಉರ್ ರೆಹಮಾನ್ ಸಿದ್ದಿಕಿ ಉತ್ತರ ಕರ್ನಾಟಕ ಭಾಗದಲ್ಲಿ ಹುಜಿ ಉಗ್ರಗಾಮಿ ಸಂಘಟನೆಗೆ ಯುವಕರನ್ನು ನೇಮಿಸುವ ಕಾರ್ಯದಲ್ಲಿ ತೊಡಗಿದ್ದ‘ ಎಂಬ ಸ್ಫೋಟಕ ಮಾಹಿತಿಯನ್ನು ಬೆಂಗಳೂರಿನ ಸಿಸಿಬಿ ತಂಡದ ತನಿಖೆಗೆ ಸ್ಥಳೀಯವಾಗಿ ಸಹಕರಿಸುತ್ತಿರುವ ಪೊಲೀಸರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಡಾ. ಜಾಫರ್ ಇಕ್ಬಾಲ್ ಸೊಲ್ಲಾಪುರ ಹಾಗೂ ಉಬೇದುಲ್ಲಾ ಇಮ್ರಾನ್ ಬಹದ್ದೂರ್ ಎಸ್‌ಐ‌ಒ ಸಂಘಟನೆಯಿಂದ ಆತನಿಗೆ ಪರಿಚಯವಾಗಿದ್ದರೆ, ಕೆಲಸ ಇಲ್ಲದೆ ತಿರುಗುತ್ತಿದ್ದ ಎಂಬಿ‌ಎ ಪದವೀಧರ ವಾಹಿದ್ ಹುಸೇನ್ 2010ರಲ್ಲಿ ಬೆಂಗಳೂರಿನ ನೀಲಸಂದ್ರದ ವಿವೇಕಾನಂದ ನಗರದಲ್ಲಿರುವ ಮೆಕ್ಕಾ ಮಸೀದಿ ಕಾಂಪ್ಲೆಕ್ಸ್ ನಲ್ಲಿ ಸಿದ್ದಿಕಿಯ ಸಂಪರ್ಕಕ್ಕೆ ಬಂದಿದ್ದಾನೆ.

ಅನಕ್ಷರಸ್ಥನಾದ ಸಾದಿಕ್ ಲಷ್ಕರಿ ಕಸ್ತೂರಿಬಾ ನಗರದ ಮಸೀದಿಯಲ್ಲಿ ಅವನಿಗೆ ಪರಿಚಯವಾಗಿದ್ದಾನೆ. ತನ್ನ ಸಂಪರ್ಕ ಬಳಸಿಯೇ ಉಬೇದುಲ್ಲಾ ಇಮ್ರಾನ್‌ಗೆ ಎರಡು ತಿಂಗಳು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸೈಬರ್ ತಂತ್ರಜ್ಞಾನ ಬಳಕೆಯ ತರಬೇತಿ ಕೊಡಿಸಿದ್ದ.

ಬೆಂಗಳೂರಿನಲ್ಲಿದ್ದರೂ ಹುಬ್ಬಳ್ಳಿಯ ಮುಸ್ಲಿಂ ವಿದ್ಯಾರ್ಥಿ ಹಾಗೂ ಧಾರ್ಮಿಕ ಸಂಘಟನೆಗಳೊಂದಿಗೆ ನಿರಂತರ ಒಡನಾಟದಲ್ಲಿದ್ದ. ಸಿದ್ದಿಕಿಯ ಸ್ಥಳೀಯ, ಹೊರಗಿನ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ‘ ಎನ್ನುತ್ತಾರೆ ಅವರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ | ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-01

Tell a Friend
ಇತರ ಸಂಭಂದಪಟ್ಟ ವರದಿಗಳು
»ಬಂಧಿತರು ಉಗ್ರವಾದಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ;ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಸ್ಪಷ್ಟನೆ
»ಮಾಹಿತಿ ನೀಡುತ್ತಿಲ್ಲ: ಶಂಕಿತ ಉಗ್ರರ ತಂದೆ ಅಳಲು | ಮಾಹಿತಿಗೆ ಇಂಟರ್‌ಪೋಲ್ ನೆರವು' - ಅಶೋಕ್
»`ಉಗ್ರರ ಮಾಹಿತಿಗೆ ಇಂಟರ್‌ಪೋಲ್ ನೆರವು'
»ಎಲ್‌ಇಟಿ, ಹುಜಿ ನಂಟು; ಗಣ್ಯರ ಹತ್ಯೆಗೆ ಸಂಚು: ಬೆಚ್ಚಿಬಿದ್ದನಗರ: ಶಂಕಿತ ಉಗ್ರರಲ್ಲಿ ವೈದ್ಯ, ಎಂಜಿನಿಯರ್, ಗುತ್ತಿಗೆದಾರ, ಪತ್ರಕರ್ತ ಹಾಗೂ ಗಾರೆ ಕಾರ್ಮಿಕ! | ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ
»

ಪ್ರತಿಸ್ಪಂದನ
saleem, dubai
2012-09-01
ಇಧು ಅರ ಎಸ್ ಎಸ್ ಅವರ ಗುಪ್ತ ಅಜೆಂಡಾ
Adit, Mangalore
2012-09-01
One of the worst police force is in Hyderabad, they have arrested many Muslim youths on Mecca Masjid blast till Aseemananda confess his crime. This is our Intelligence and Police force.
ಜಾತ್ಯತೀತ , ಉಡುಪಿ
2012-09-01
ನರೇಂದ್ರ ಮೋದಿಯ ಚಿತ್ರ, ಲ್ಯಾಪ್ ಟಾಪ್ ಮತ್ತು ಮುಸ್ಲಿಮನೆಂಬ ಹೆಣೆ ಪಟ್ಟಿ ಇದ್ದಾರೆ ಸಾಕು ನಪುಂಸಕ ಪೊಲೀಸರಿಗೆ ಯಾರನ್ನು ಬೇಕಾದರೂ ಬಂಧಿಸಲು ಮತ್ತು ಉಗ್ರ ಎಂದು ಘೋಷಿಸಲು. ಈ ನಪುಂಸಕ ಪೋಲಿಸಿಗೆ ಸೇರಲು IAS, IPS ಕಲೀಬೇಕಿಲ್ಲ, ಸಂಘ ಪರಿವಾರದ 3 ಶಾಖೆಯಲ್ಲಿ ಹಾಜರಾದರೆ ಸಾಕು.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri