ನರಮೇಧ: ಬಿಜೆಪಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಹಾಗೂ ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಸೇರಿದಂತೆ ಎಲ್ಲಾ 32 ಆರೋಪಿಗಳಿಗೆ ಜೀವಾವಧಿ ಶಿಕ್ಷೆ |
ಪ್ರಕಟಿಸಿದ ದಿನಾಂಕ : 2012-08-31
ಅಹಮದಾಬಾದ್, ಆ.31: ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಹಿಂಸಾಚಾರ ಪ್ರಕರಣವಾದ ನರೋಡಾ ಪಾಟಿಯಾ ಹತ್ಯಾಕಾಂಡ ಕೇಸಿಗೆ ಸಂಬಂಧಿಸಿದಂತೆ 32 ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಅಹಮದಾಬಾದಿನ ವಿಶೇಷ ನ್ಯಾಯಾಲಯ ಶುಕ್ರವಾರ(ಆ.31) ಮಧ್ಯಾಹ್ನ ಪ್ರಕಟಿಸಲಾಗಿದೆ.
ನರೋಡಾ ಪಾಟಿಯಾ ಹತ್ಯಾಕಾಂಡ ಘಟನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಮಾಯಾ ಕೊಡ್ನಾನಿ ಹಾಗೂ ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಹಾಗೂ ಇತರರು ಸೇರಿದಂತೆ 32 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ನ್ಯಾ ಜ್ಯೋತ್ಸ್ನಾ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಮಾಯಾಬೆನ್ ಕೊಡ್ನಾನಿ ಅವರಿಗೆ ಒಟ್ಟಾರೆ 28 ವರ್ಷ ಶಿಕ್ಷೆ ಪ್ರಮಾಣ ಘೋಷಿಸಲಾಗಿದೆ. ಬಾಬು ಬಜರಂಗಿ ಅವರಿಗೆ ಸಾಯುವ ತನಕ ಜೈಲಿನಲ್ಲಿರುವ ಶಿಕ್ಷೆ ನೀಡಲಾಗಿದೆ. ಉಳಿದ ಆರೋಪಿಗಳಿಗೆ (10 +21) 31 ವರ್ಷ ಶಿಕ್ಷೆ ಪ್ರಮಾಣ ನೀಡಲಾಗಿದೆ.
ನರೋಡಾ ಪ್ರಾಂತ್ಯದಿಂದ ಮೂರು ಬಾರಿ ಆಯ್ಕೆಯಾಗಿದ್ದ ಮಾಯಾ ಅವರು ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗೆ ಸಂಬಂಧಿಸಿದಂತೆ ಶಿಕ್ಷೆ ಪಡೆಯುತ್ತಿರುವ ಮೊದಲ ಮಹಿಳಾ ಶಾಸಕಿಯಾಗಿದ್ದಾರೆ.
ನರೋಡಾ ಪಾಟಿಯಾ ಹತ್ಯಾಕಾಂಡ ಘಟನೆಯಲ್ಲಿ 97 ಮುಸ್ಲಿಮರ ಹತ್ಯೆಯಾಗಿತ್ತು. ಘಟನೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು.
ಹೆಚ್ಚುವರಿ ಮುಖ್ಯ ನ್ಯಾಯಾಧೀಶೆ ಜ್ಯೋತ್ಸ್ನಾ ಯಾಜ್ಞಿಕ್ ಅವರು ಕಳೆದ ತಿಂಗಳು ವಿಚಾರಣೆಯನ್ನು ಪೂರ್ತಿಗೊಳಿಸಿದ್ದು, ತೀರ್ಪನ್ನು ಬುಧವಾರ(ಆ.29) ಪ್ರಕಟಿಸಿ, 32 ಜನ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿತ್ತು.
ಮೋದಿ ಸರ್ಕಾರ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಹಾಗೂ ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದರು.
ಗೋಧ್ರಾ ಹತ್ಯಾಕಾಂಡದ ಬಳಿಕ ನಡೆದ ಹಿಂಸಾಚಾರದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ವಿಚಾರಣೆ 2009ರ ಆಗಸ್ಟ್ ನಲ್ಲಿ ಪ್ರಾರಂಭವಾಗಿತ್ತು. ಗೋಧ್ರಾ ರೈಲು ದುರಂತದ ಮರು ದಿನ ನಗರದ ನರೋಡಾ ಪಾಟಿಯಾ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ 97 ಜನರನ್ನು ಉದ್ರಿಕ ಗುಂಪೊಂದು ಹತ್ಯೆ ಮಾಡಿತ್ತು. ಸಬರಮತಿ ರೈಲು ದುರಂತ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಬಂದ್ಗೆ ಕರೆ ನೀಡಿದ್ದ ವೇಳೆಯಲ್ಲಿ ಈ ಹತ್ಯಾಕಾಂಡ ನಡೆದಿತ್ತು.
94 ಮೃತ ದೇಹಗಳಲ್ಲಿ 84 ಶವಗಳ ಗುರುತು ಪತ್ತೆಯಾಗಿತ್ತು. ಉಳಿದ ಶವಗಳ ಪತ್ತೆಯಾಗಿರಲಿಲ್ಲ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(SIT)ಗೆ ವಹಿಸಲಾಗಿತ್ತು. ಒಟ್ಟು 8 ಛಾರ್ಜ್ ಶೀಟ್ ಗಳನ್ನು ಈ ಪ್ರಕರಣದಲ್ಲಿ ಸಲ್ಲಿಸಲಾಗಿದೆ.
ಈ ಪ್ರಕರಣದ ಆರೋಪಿಗಳಾಗಿದ್ದ ತೇಜಸ್ ಪಾಠಕ್ ಹಾಗೂ ಮೋಹನ್ ನೇಪಾಳಿ ಅವರು ಜಾಮೀನಿನ ಮೇಲೆ ಹೊರಬಿದ್ದಿದ್ದಾರೆ. ವಿಚಾರಣಾ ಅವಧಿಯಲ್ಲಿ 8 ಆರೋಪಿಗಳು ಮೃತಪಟ್ಟಿದ್ದಾರೆ. ಒಬ್ಬನ ಖುಲಾಸೆಯಾಗಿದ್ದು ಹಾಗೂ ವಿನೋದ್ ಮರಾಠೆ ಎಂಬ ಆರೋಪಿ ನಾಪತ್ತೆಯಾಗಿದ್ದಾನೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-31
|
|
Anas, Mangalore | 2012-09-01 | ಶಿಕ್ಷೆ ಯಾತಕ್ಕಾಗಿರಬಹುದು..! ಛೇ ಸುಮ್ಮನೆ ಅಂತು ಕೊಡಲಿಕ್ಕಿಲ್ಲ...! ಪ್ರಮುಖ ರೂವಾರಿ ಪ್ರಧಾನಿ ಪಟ್ಟದ ಕನಸು ಕಾಣುತ್ತಿದ್ದಾನೆ...ನಮ್ಮ ಕಾನೂನು ಸರಿಯಿರುತ್ತಿದ್ದಲ್ಲಿ ಖಂಡಿತ ಜೈಲಿನ ಪ್ರಧಾನಿಯಾದರು ಆಗುತ್ತಿದ್ದ..! |
SHAMEEM, MANGALORE | 2012-08-31 | ನಮ್ಮ ದೇಶದಲ್ಲಿ ನ್ಯಾಯ ಇನ್ನು ಜೀವಂತವಾಗಿದೆ ಅನ್ನೋದಕ್ಕೆ ಇದು ಜ್ವಲಂತ ಸಾಕ್ಷಿಯಾಗಿದೆ.
ಇದೆ ರೀತಿ ಪಡಿಲ್ ಹೋಂ ಸ್ಟೆಯ್ ದಾಳಿಯ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲಿ.
ಜೈ ಹಿಂದ್ ಜೈ ಕರ್ನಾಟಕ್ |
|