ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
11 ಮಂದಿ ಶಂಕಿತ ಉಗ್ರರ ಬಂಧನ: *ಹತ್ಯೆಗೆ ಸಂಚು, ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಆರೋಪ *ಬಂಧಿತರಲ್ಲಿ ಓರ್ವ ಪತ್ರಕರ್ತ (updated news)

ಶಂಕಿತ ಉಗ್ರರಾದ ಶೋಹಿಬ್ ಅಹ್ಮದ್ ಮಿರ್ಝಾ ಹಾಗೂ ಏಜಾಝ್ ಅಹ್ಮದ್ ಮಿರ್ಝಾರ ತಂದೆ ಅಬ್ದುಲ್ ರವೂಫ್ ಮಿರ್ಝಾ

ಬೆಂಗಳೂರು,ಆ.30:ಹತ್ಯೆಗೆ ಸಂಚು ರೂಪಿಸಿರುವ ಹಾಗೂ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ 11ಮಂದಿ ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.ವಶಕ್ಕೆ ತೆಗೆದುಕೊಂಡಿರುವ11ಮಂದಿಗೂ ನಿಷೇಧಿತ ಲಷ್ಕರೆ ತಯ್ಯಿಬ(ಎಲ್‌ಇಟಿ) ಹಾಗೂ ಹರ್ಕತುಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಸಂಘಟನೆಯೊಂದಿಗೆ ನಂಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖುಮ ಪಚಾವೋ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಶುಐಬ್ ಅಹ್ಮದ್ ಮಿರ್ಝಾ ಅಲಿಯಾಸ್ ಚೋಟು (24),ಆತನ ಸಹೋದರ ಏಜಾಝ್ ಅಹ್ಮದ್ ಮಿರ್ಝಾ (25),ಅಬ್ದುಲ್ಲಾ ಅಲಿಯಾಸ್ ಅಬ್ದುಲ್ ಹಕೀಂ ಜಮಾದಾರ್ (25), ಮುಹಮ್ಮದ್ ಯೂಸುಫ್ ನಲಬಂದ್ (28), ರಿಯಾಝ್ ಅಹ್ಮದ್ ಬ್ಯಾಹಟ್ಟಿ (28),ಮತೀಉರಹ್ಮಾನ್ ಸಿದ್ದೀಕ್(26)ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹುಬ್ಬಳ್ಳಿ ನಗರದಲ್ಲಿ ಒಬೇದುಲ್ಲಾ ಇಮ್ರಾನ್ ಬಹದೂರ್(24), ಮುಹಮ್ಮದ್ ಸಾದಿಕ್ ಲಕ್ಷರ್(28), ವಾಹಿದ್ ಹುಸೈನ್(26), ಮೆಹಬೂಬ್ ಬಾಗಲಕೋಟೆ (26) ಹಾಗೂ ಡಾ.ಜಾಫರ್ ಇಕ್ಬಾಲ್ ಶೂಲಾಪುರ್ (27)ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಚಾವೋ ವಿವರಿಸಿದರು. ರಾಜ್ಯದ ಕೆಲವು ಶಾಸಕರು, ಸಂಸದರು,ಪತ್ರಕರ್ತರು ಹಾಗೂ ಸಂಘಪರಿವಾರದ ಮುಖಂಡರನ್ನು ಗುರಿಯನ್ನಾಗಿಸಿಕೊಂಡು ಹತ್ಯೆಮಾಡಲು ಸಂಚು ರೂಪಿಸಿದ್ದ ಇವರು,ಲಷ್ಕರೆ ತಯ್ಯಿಬ ಹಾಗೂ ಹರ್ಕತುಲ್ ಜಿಹಾದ್ ಅಲ್ ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಲಾಲ್ ರುಖುಮ ಪಚಾವೋ ಸ್ಪಷ್ಟಪಡಿಸಿದರು.

ಬಂಧಿತರಿಂದ ವಿದೇಶಿ ನಿರ್ಮಿತ 7.65ಎಂಎಂ ಪಿಸ್ತೂಲು,7ಮದ್ದುಗುಂಡು ಸೇರಿದಂತೆ ಇತರ ಸಾಧನ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಬೆಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತಂಡ ಹಲವು ದಿನಗಳಿಂದ ಗುಪ್ತ ಮಾಹಿತಿ ಸಂಗ್ರಹಿಸಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಇದೇ 29ರಂದು ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದರು.ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಎಲ್‌ಇಟಿ ಹಾಗೂ ಹುಜಿ ಸಂಘಟನೆಗಳ ಆಣತಿಯ ಮೇರೆಗೆ ಬಂಧಿತರು ಎರಡು,ಮೂರು ತಿಂಗಳಿಂದ ಕಾರ್ಯ ಪ್ರವೃತ್ತರಾಗಿದ್ದರು. ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿ, 123ಎ, 307, 379 ಅಡಿ ಅಪರಾಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಪ್ರಾಥಮಿಕ ವಿಚಾರಣೆಯಿಂದ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆ ಸಂಘಟನೆಯ ಜಾಲವಾಗಿದ್ದು,ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಇದೇ ರೀತಿಯ ಗುಪ್ತ ಜಾಲಗಳನ್ನು ಸೃಷ್ಟಿಸಿರಬಹುದಾದ ಸಾಧ್ಯತೆಗಳಿವೆ.

ವಿಚಾರಣೆ ವೇಳೆ ಇತ್ತೀಚೆಗೆ ದೇಶಾದ್ಯಂತ ಸುಳ್ಳು ಎಂಎಂಎಸ್ ಹಾಗೂ ಎಸ್‌ಎಂಎಸ್ ಮಾಹಿತಿಗಳನ್ನು ರವಾನೆ ಮಾಡಿ ಅಭದ್ರತೆ ಸೃಷ್ಟಿಸಿದ್ದ ಜಾಲದ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, ಉತ್ತರ ಪ್ರದೇಶದ ಪೊಲೀಸರು ಇಲ್ಲಿಗೆ ಬಂದಿಲ್ಲ.ಬೆಂಗಳೂರು ಸಿಸಿಬಿ ಪೊಲೀಸರ ನೇತೃತ್ವದಲ್ಲಿ ಬಂಧಿಸಲಾಗಿದೆ ಎಂದರು.

ಬಂಧನ ರಾಜಕೀಯ ಪ್ರೇರಿತವೆ?

ಭಯೋತ್ಪಾದಕ ಸಂಘಟನೆಯೊಂದಿಗಿನ ನಂಟಿನ ಹಿನ್ನೆಲೆಯಲ್ಲಿ ಬಂಧಿತರಾಗಿರುವ 11ಜನರ ಪೈಕಿ ಓರ್ವ ‘ಡೆಕ್ಕನ್ ಹೆರಾಲ್ಡ್’ ಆಂಗ್ಲ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.ಮತೀಉರಹ್ಮಾನ್ ಸಿದ್ದೀಕ್‌ನನ್ನು ನಿನ್ನೆ ಬಂಧಿಸಲಾಗಿದೆ.

ಆದರೆ ಇದು ಪರಿಸರದ ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ.ಬಂಧನ ರಾಜಕೀಯ ಪ್ರೇರಿತ ಮತ್ತು ಪತ್ರಕರ್ತರ ಹತ್ಯೆ ಸಂಚು ಪೊಲೀಸರು ಹೆಣೆದ ಕತೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಉಗ್ರರು ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಗುರುತಿಸಿರುವ ಪತ್ರಕರ್ತ ಆರೆಸ್ಸೆಸ್ ಹಿನ್ನೆಲೆಯವನಾಗಿದ್ದು,ಇದು ಬಿಜೆಪಿ ಸರಕಾರವೇ ಹೆಣೆದ ಸಂಚು ಎಂದು ಪತ್ರಕರ್ತರೂ ಸೇರಿದಂತೆ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.ಬಂಧಿತ ಆಂಗ್ಲ ಪತ್ರಿಕೆಯ ಪತ್ರಕರ್ತನೊಂದಿಗೆ ವಾಸವಾಗಿದ್ದ ಇತರ ಐದು ಮಂದಿಯನ್ನೂ ಪೊಲೀಸರು ಹತ್ಯೆಗೆ ಸಂಚು ಹಾಗೂ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧವಿದೆ ಎಂಬ ಆರೋಪದ ಮೇರೆಗೆ ಬಂಧಿಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಮತೀ ಉರ್ ರಹ್ಮಾನ್ ಸಿದ್ದೀಕ್ ಕಳೆದ 4ವರ್ಷಗಳಿಂದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕ್ರೈಂ ರಿಪೋರ್ಟರ್‌ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಇತ್ತೀಚೆಗಷ್ಟೇ ಆತ ಶಿಕ್ಷಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ನಗರದ ಜೆಸಿ ನಗರದಲ್ಲಿನ ಮುನಿರೆಡ್ಡಿಪಾಳ್ಯದಲ್ಲಿ ವಾಸವಾಗಿದ್ದ ಈ ಆರು ಮಂದಿಯನ್ನು ಪೊಲೀಸರು ನಿನ್ನೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇವರು ವಾಸವಾಗಿರುವ ಮನೆಯ ಸುತ್ತಮುತ್ತಲ ಜನರು ಇವರ ಬಂಧನದಿಂದ ಆಶ್ಚರ್ಯ ಚಕಿತರಾಗಿದ್ದು,ಇವರು ಭಯೋತ್ಪಾದನೆ ಸಂಘಟನೆಯೊಂದಿಗೆ ಸಂಬಂಧವಿರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದರೂ,ಯಾರ ಸುದ್ದಿಗೂ ಹೋದವರಲ್ಲ. ಮುಗ್ಧರಾಗಿರುವ ಇವರನ್ನು ಪೊಲೀಸರು ಉದ್ದೇಶ ಪೂರ್ವಕವಾಗಿ ಭಯೋತ್ಪಾದನೆಯ ಜಾಲದಲ್ಲಿ ಸಿಲುಕಿಸಿದ್ದಾರೆ ಎಂದು ಮನೆಯ ಸುತ್ತಮುತ್ತಲ ಜನ ಆರೋಪಿಸುತ್ತಿದ್ದಾರೆ.

ನನ್ನ ಮಕ್ಕಳು ಅಮಾಯಕರು:ಅಬ್ದುಲ್ ರವೂಫ್ ಮಿರ್ಝಾ

ಬೆಂಗಳೂರು,ಆ.30:‘ನನ್ನ ಮಕ್ಕಳು ಅಮಾಯಕರು,ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಯಾವುದೇ ಉಗ್ರವಾದಿ ಚಟುವಟಿಕೆಗಳನ್ನೂ ನಡೆಸಿಲ್ಲ’ ಎಂದು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರಾದ ಶೋಹಿಬ್ ಅಹ್ಮದ್ ಮಿರ್ಝಾ ಹಾಗೂ ಏಜಾಝ್ ಅಹ್ಮದ್ ಮಿರ್ಝಾರ ತಂದೆ ಅಬ್ದುಲ್ ರವೂಫ್ ಮಿರ್ಝಾ ತಿಳಿಸಿದ್ದಾರೆ.ಮಕ್ಕಳ ಬಂಧನದ ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿಯಿಂದ ನಗರಕ್ಕೆ ಆಗಮಿಸಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ‘ನನ್ನ ಮಕ್ಕಳು ಉನ್ನತ ವ್ಯಾಸಂಗ ಮಾಡಿದವರಾಗಿದ್ದಾರೆ.ಏಜಾಝ್ ಅಹ್ಮದ್ ಮಿರ್ಝಾ ಡಿಆರ್‌ಡಿಒದಲ್ಲಿ ಕಿರಿಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಶೋಹಿಬ್ ಅಹ್ಮದ್ ಮಿರ್ಝಾ ಎಂಸಿಎ ವ್ಯಾಸಂಗ ಮಾಡುತ್ತಿದ್ದಾನೆ’ ಎಂದರು.‘ಪೊಲೀಸರು ನನ್ನ ಮಕ್ಕಳನ್ನು ಅಕ್ರಮವಾಗಿ ಬಂಧಿಸಿದ್ದಾರೆ.

ಬಂಧನಕ್ಕೂ ಮುನ್ನ ನೋಟಿಸ್ ನೀಡಬೇಕಿತ್ತು.ಹಾಗೂ ಡಿ.ಕೆ.ಬಸವ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಸಿಸಿಬಿ ಪೊಲೀಸರು ಈ ಯಾವುದೇ ಕ್ರಮಗಳನ್ನು ಅನುಸರಿಸದೆ ಅಕ್ರಮವಾಗಿ ನನ್ನ ಮಕ್ಕಳನ್ನು ಬಂಧಿಸಿದ್ದಾರೆ’ಎಂದು ಅಬ್ದುಲ್ ರವೂಫ್ ಮಿರ್ಝಾ ಆಕ್ರೋಶ ವ್ಯಕ್ತಪಡಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-31

Tell a Friend
ಇತರ ಸಂಭಂದಪಟ್ಟ ವರದಿಗಳು
» ಶಂಕಿತ 9 ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರ ಬಂಧನ

ಪ್ರತಿಸ್ಪಂದನ
Manava, Bangalore
2012-09-01
ವಿಪರ್ಯಾಸವೆಂದರೆ ಕೇರಳದ ಮದನಿಯನ್ನೂ ಸೆರೆಯಲ್ಲಿ ಇಟ್ಟು ವರ್ಷಗಳೆರಡು ಕಳೆದರೂ ವಿಚಾರಣೆ ನಡೆಯಲೇ ಇಲ್ಲ.ಒಂದು ವೇಳೆ ತಪ್ಪಿತಸ್ತ ಎಂದಾದರೆ ನೇಣು ಕಂಬಕ್ಕೆರಿಸಿ !!! ಅಥವಾ ನಿರಪರಾಧಿಯೆಂದು ಕ್ಷಮೆಯಾಚಿಸಿ ಬಿಡುಗಡೆ ಗೊಳಿಸಿ.ಇಲ್ಲೂ ರಾಜಕೀಯದ ಗಬ್ಬು ವಾಸನೆ ಇದೆ. ಚುನಾವಣೆಗಾಗಿ ಇನ್ನು ಎಷ್ಟೋ ಬಂಧನವಾಗಲಿದೆಯೋ ಆರ್ ಎಸ್ ಎಸ್ ಗೆ ಗೊತ್ತು.
ಜಾತ್ಯತೀತ , ಉಡುಪಿ
2012-09-01
ಸಂಕೇಶ್, ಎಂಬ ಹುಬ್ಬಲ್ಲಿಯಾವ ನಿನ್ನ ಪಿತಾಮಹನಾದ ಮುತಾಲಿಕನ ವಿವರವನ್ನು ನಿನ್ನ ಸಂಘ ಪರಿವಾರದ ಪೊಲೀಸರಿಗೆ ಕೊಡು. ನಿನ್ನ ನಂಟು ದೇಶ ದ್ರೋಹಿ ಭಯೋತ್ಪಾದಕ ಮುತಾಲಿಕನೊಂದಿಗೆದೆ ಎಂದು ಸ್ಪಷ್ಟವಾಗುತ್ತೆ. ಸಂಘ ಪರಿವಾರದ ಹರ್ಕತ್ತನ್ನು ಮತ್ತು ನಿಜಸ್ತಿತಿಯನ್ನು ಯಾರಾದರು ಬರೆದಲ್ಲಿ ಅದು ದೇಶ ವಿರೋಧಿ ಮತ್ತು ಹಿಂದೂ ವಿರೋಧಿಯಂತೆ. ಜಗದೀಶ್ ಕಾರಂತ , ಮುತಾಲಿಕ ಮತ್ತು ಪ್ರಭಾಕರ ಭಟ್ ಬಾಯಿ ತೆರೆದರೆ ಏನು ಬೊಗಳುತ್ತಾರೋ ಎಂದು ಗೊತ್ತ ನಿನ್ನ 'ಪೊಲೀಸರಿಗೆ'. ಇಂತಹವರನ್ನು ಸಂಬೋದಿಸುವಾಗ 'ಶ್ರೀ' ಎಂದು ಬೊಗಳುತ್ತೀರ, ಹುಬ್ಬಳ್ಳಿಯ ಬಂದಿತರನ್ನು ಹಿಂದೆ ಮುಂದೆ ನೋಡದೆ ಉಗ್ರ ಎಂದು ಬೊಗಳುತ್ತೀರ. ಯಾರು ಹುಬ್ಬಳಿಯ ಬಂದಿತ ಆರೋಪಿಗಳನ್ನು ಸಮರ್ಥನೆ ಮಾಡಲ್ಲ ತಪ್ಪಿತಸ್ಥರಾಗಿದ್ದಲ್ಲಿ, ಆದರೆ ಇದುವರೆಗೆ ನಡೆದ ವಿದ್ಯಮಾನಗಳು ಮತ್ತು ಅಮಾಯಕರನ್ನು ಬಲಿಪಶು ಮಾಡುವ ಕಾಯಕ ಸರಾಗವಾಗಿ ನಡೆಯುತ್ತಿರುವುದರಿಂದ ಸಂಶಯಕ್ಕೆ ಎಡೆ ಮಾಡಿ ಕೊಡುತ್ತೆ. ಸಂಕೇಶ, ನಿನ್ನ ಸಂಘ ಪರಿವಾರದ ಪೊಲೀಸರಿಗೆ ನನ್ನ ವಿವರ ಬೇಕಿದ್ದಲ್ಲಿ ಮುಂದಿನ ಪ್ರತಿಕ್ರಿಯೆಯಲ್ಲಿ ಖಂಡಿತ ಕೊಡುತ್ತೇನೆ, ಅದಕ್ಕಾಗಿ ನಿನ್ನ ಈಮೈಲ್ ಕೊಡು.
ಸಂಕೇಶ್, ಹುಬ್ಬಳ್ಳಿ
2012-08-31
ಈ ವರದಿಯ ಕುರಿತು ಬಂಧಿಸಿರುವ ಶಂಕಿತ ಉಗ್ರರನ್ನು ಸಮರ್ಥಿಸುತ್ತಾ ಯಾರ್ಯಾರು ಈ ಮಾದ್ಯಮದಲ್ಲಿ ಪ್ರತಿಕ್ರಿಯೆ ನೀಡುತ್ತಾರೋ ಅವರೆಲ್ಲರ ವಿವರಗಳನ್ನು ಕರ್ನಾಟಕದ ಪೋಲೀಸ್ ಮಹಾ ನಿರ್ದೇಶಕರಿಗೆ ನೀಡಿ ಇವರ ಬಗ್ಗೆಯೂ ತನಿಖೆ ನಡೆಸಲು ತಿಳಿಸಬೇಕು. ಯಾಕೆಂದರೆ ನಾನು ಗಮನಿಸುತ್ತಿರುವಂತೆ ದೇಶ ಹಾಗೂ ಹಿಂದೂ ಧರ್ಮದ ವಿರೋಧಿಗಳು ಬಹಳಷ್ಟು ಮಂದಿ ಇಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅವರಲ್ಲಿ ಕೆಲವರಾದರೂ ಇಂತಹ ಉಗ್ರರೊಂದಿಗೆ ಖಂಡಿತಾ ಸಂಬಂಧ ಇರಿಸಿಕೊಂಡಿರುವ ಸಾಧ್ಯತೆಯಿಲ್ಲದಿಲ್ಲ. ದಯವಿಟ್ಟು ಗಮನವಿರಲಿ.
plainlife, bangalore
2012-08-31
ಅಲ್ಪ (ಸಂಖ್ಯಾತ)ರನ್ನು ಸದೆ ಬಡೆಯಲು ನಮ್ಮ ದೇಶದ ಪೊಲೀಸರಿಗೆ ಇಸ್ರೆಲಿನವರು ಕೊಡುವ ತರಬೇತಿ ಇದುವೇ ಆಗಿದೆ. ಅಲ್ಪರು ಯಾವಾಗಲೂ ಎಲ್ಲ ವಿದದಲ್ಲಿಯೂ ಅಲ್ಪರಾಗಿಯೇ ಇರಬೇಕು. ಸಮಾಜದಲ್ಲಿ ಉನ್ನತ ದರ್ಜೆಯ ಪ್ರಜೆಗಳಾಗಿ ಬಾಳಬಾರದು. ವಿದ್ಯಾವಂತರಾದರೆ ಅವರನ್ನು ಸುಳ್ಳು ಕೇಸು ಹಾಕಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು. ಅವಿದ್ಯಾವಂತರಾದರೆ ಸಣ್ಣ ಪುಟ್ಟ ಕೆಲಸ ಮಾಡಿ, ನಾಯಿ ಬದುಕು ಮಾಡಲಿ. ಇನ್ನು ಕೆಲವರು ಅಲ್ಪರನ್ನು ಮತ್ತು ಕೀಲ್ಜಾತಿ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಯುವಕರನ್ನು ಕೋಮುಗಲಭೆಯ ಹೆಸರಲ್ಲಿ ಬಂಧಿಸಿ ಒಳಗೆ ಹಾಕುತ್ತಾರೆ. ಈ ತಂತ್ರವನ್ನು ಅರಿತು ಅಲ್ಪ ಸಂಖ್ಯಾತರು ಮತ್ತು ಉಳಿದ ದಲಿತ ಇತರರು ಒಟ್ಟಾಗಿ ಯಾವಾಗ ಅವರಿಗೆ ಬುದ್ದಿ ಕಲಿಸುವುದಿಲ್ಲವೋ ಅಲ್ಲಿಯವರೆಗೆ ಈ ಶೋಷಣೆ ನಡೆಯುತ್ತಾ ಇರುತ್ತದೆ. ಇದುವೇ ಬುದ್ದಿವಂತ, ಮೇಲ್ಜಾತಿಯೆಂದು ಕರೆಸಿಕ್ಕೊಳ್ಳುವ ಜನರ ಬದುಕುವ ಕಲೆ ಮತ್ತು ತಂತ್ರ. ಜೈಹೋ ಇಂಡಿಯಾ.
P.P.ABDUL KAREEM THOKUR, POLYA,UCHILA
2012-08-31
ಈ ಬಗ್ಗೆ ಸಮರ್ಪಕವಾಗಿ ತನಿಖೆಯಾಗಲಿ .ತಪ್ಪಿಸ್ಥರೆಂದು ಕಂಡು ಬಂದಲ್ಲಿ ಖಂಡಿತವಾಗಿಉ ಶಿಕ್ಷೆಯಾಗಲೇ ಬೇಕು ..
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri