ಬುಧವಾರ, 16-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಸಾಧಕರಿಗೆ ಏಕಲವ್ಯ ಪ್ರಶಸ್ತಿ ಪ್ರದಾನ: ಕ್ರೀಡಾಪಟುಗಳ ಮೊಗದಲ್ಲಿ ಅರಳಿದ ನಗು

ಸಾಧಕರಿಗೆ ಏಕಲವ್ಯ ಪ್ರಶಸ್ತಿ ಪ್ರದಾನ: ಕ್ರೀಡಾಪಟುಗಳ ಮೊಗದಲ್ಲಿ ಅರಳಿದ ನಗು

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಕ್ರೀಡಾ ಸಾಧಕರು. ನಿಂತವರು (ಬಲದಿಂದ); ರಾಜೇಶ್ ಶಿಂಧೆ, ಸಾಬು ಈಶ್ವರ್ ಗಾಣಿಗೇರ, ಎನ್. ಶ್ವೇತಾ, ಆರ್. ವಿನಯ್ ಕುಮಾರ್, ಎಸ್. ನವೀನ್, ಮಮತಾ ಪೂಜಾರಿ, ನಾಡಿಯಾ ಹರಿದಾಸ್, ಎ.ಬಿ.ಚೀಯಣ್ಣ, ಎಚ್. ನೇಹಾ, ರಾಕೇಶ್ ಮನ್‌ಪಟ್, ಎ.ಪಿ.ಗಗನ್ ಉಳ್ಳಾಲಮಠ, ಪ್ರತೀಕ್ ರಾಜ್, ರೋಷನ್ ಫೆರಾವೊ. ಕುಳಿತವರು (ಬಲದಿಂದ); ಜಿ.ಎ. ಸ್ಟ್ಯಾನಿ, ಕೃತಿಕಾ ಲಕ್ಷ್ಮಣ್, ಸಿ.ವಿ. ರಾಜಣ್ಣ ಮತ್ತು ಕಾಶೀನಾಥ್ ನಾಯ್ಕ

ಬೆಂಗಳೂರು:`ಕ್ರೀಡಾಪಟುಗಳಿಂದ ಸಾಧನೆಯನ್ನು ಹೇಗೆ ನಿರೀಕ್ಷೆ ಮಾಡುತ್ತೇವೊ,ಅದೇ ರೀತಿ ಅವರ ಭದ್ರತೆಯ ಬಗ್ಗೆಯೂ ಕಾಳಜಿ ವಹಿಸಬೇಕಿದೆ.ಆದ್ದರಿಂದ ಶೀಘ್ರದಲ್ಲಿಯೇ ಕ್ರೀಡಾ ವಿಮೆ ರೂಪಿಸಲಾಗುವುದು`ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದರು.

ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಬುಧವಾರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ವಿಮೆಯ ರೂಪುರೇಷೆಯ ಬಗ್ಗೆ ಇನ್ನು ಯೋಜನೆ ರೂಪಿಸಿಲ್ಲ. ನಾಲ್ಕಾರು ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದ ಅವರು,ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡಿದಂತೆ, ಅದಕ್ಕೆ ತಕ್ಕಂತೆ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಗುರುತಿಸುವಂತಹ ಸಾಧನೆ ಮಾಡಬೇಕು` ಎಂದು ನುಡಿದರು.

ಒಟ್ಟು 15ಕ್ರೀಡಾಪಟುಗಳಿಗೆ ಏಕಲವ್ಯ ಹಾಗೂ ನಾಲ್ವರು ಕೋಚ್‌ಗಳಿಗೆ `ಜೀವಮಾನದ ಶ್ರೇಷ್ಠ ಸಾಧನೆ`ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಹಲವು ವಿವಾದಗಳ ಕಾರಣದಿಂದ ಕಳೆದ ವರ್ಷ ಮೂವರು ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿತ್ತು. ಕರಾಟೆ ಪಟು ಮಂಡ್ಯದ ನವೀನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರೋಷನ್ ಫೆರಾವೊ (ದೇಹದಾರ್ಢ್ಯ) ಪ್ರಜ್ಞಾ ಎಚ್.ಎ. (ರೋಲರ್ ಸ್ಕೇಟಿಂಗ್) ಅವರಿಗೂ ಈ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.

ಏಕಲವ್ಯ ಪ್ರಶಸ್ತಿಯ ಮೊತ್ತವನ್ನು 2ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.ಮೊದಲು ಒಂದು ಲಕ್ಷ ರೂ. ನೀಡಲಾಗುತ್ತಿತ್ತು. ಜೀವಮಾನ ಶ್ರೇಷ್ಠ ಸಾಧನೆ 1.5 ಲಕ್ಷ ರೂಪಾಯಿ ಒಳಗೊಂಡಿದೆ.

ಚೀನಾ ಮುಂದೆ ಭಾರತ ಹಿಂದೆ:`ಚೀನಾಕ್ಕೆ ಹೋಲಿಸಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಹಿಂದೆ ಉಳಿದಿದೆ.ಆದರೆ,ಚೀನಾವನ್ನೂ ಮೀರಿಸಿ ಸಾಧನೆ ಮಾಡುವ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆದರೆ, ಕ್ರೀಡೆಯಲ್ಲೂ ರಾಜಕೀಯ, ವೈಯಕ್ತಿಕ ಹಿತಾಸಕ್ತಿ ಹೆಚ್ಚಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ,ಕ್ರೀಡೆಯಲ್ಲಿ ಭಾರತ ಹಿಂದೆಯೇ ಉಳಿಯಬೇಕಾಗುತ್ತದೆ`ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಳವಳ ವ್ಯಕ್ತಪಡಿಸಿದರು.

`ಈ ವರ್ಷ ಯಾವುದೇ ವಿವಾದಕ್ಕೆ ಅವಕಾಶವಿಲ್ಲದಂತೆ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.ಆಯ್ಕೆ ಸಮಿತಿಯೂ ಕೂಡಾ ಸಾಕಷ್ಟು ಶ್ರಮ ವಹಿಸಿ ಪಾರದರ್ಶಕತೆ ಕಾಪಾಡಿಕೊಂಡಿದೆ` ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ್, ಯುವಜನ ಮತ್ತು ಸೇವಾ ಇಲಾಖೆಯ ನಿರ್ದೇಶಕ ಎಂ.ಕೆ. ಬಲದೇವಕೃಷ್ಣ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್,ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

`ನನಗಿಂತ ಅಪ್ಪನಿಗೇ ಹೆಚ್ಚು ಖುಷಿ`

`ಸಾಧನೆಯನ್ನು ಗುರುತಿಸಿ ಸರ್ಕಾರ ನೀಡಿರುವ ಈ ಪ್ರಶಸ್ತಿಯಿಂದ ನನ್ನ ಅಪ್ಪ ಗೋವಿಂದ ನಾಯ್ಕ ಅವರಿಗೆ ಹೆಚ್ಚು ಖುಷಿ....`

-ಏಕಲವ್ಯ ಪ್ರಶಸ್ತಿ ಸ್ವೀಕರಿಸಿದ ನಂತರ ಶಿರಸಿ ತಾಲ್ಲೂಕಿನ ಬೆಂಗಲೆ ಗ್ರಾಮದ ಕಾಶೀನಾಥ್ ನಾಯ್ಕ `ಪ್ರಜಾವಾಣಿ`ಗೆ ಪ್ರತಿಕ್ತಿಯಿಸಿದ್ದು ಹೀಗೆ.

`ಅಪ್ಪ ಮೊದಲಿನಿಂದಲೂ ಪಡುತ್ತಿದ್ದ ಕಷ್ಟವನ್ನು ನೋಡಲು ನನಗಾಗುತ್ತಿರಲಿಲ್ಲ. ಇಳಿ ವಯಸ್ಸಿನಲ್ಲಿ ಅವರ ಬಾಳಿಗೆ ಬೆಳಕಾಗಬೇಕೆನ್ನುವುದು ನನ್ನ ಆಸೆ. ಹೊಲ ಮನೆಯನ್ನು ನೋಡಿಕೊಂಡು ಅವರು ನಮ್ಮನ್ನು ಸಾಕಿದರು.ಈಗ ಪ್ರಶಸ್ತಿ ಬಂದಿದ್ದಕ್ಕೆ ನನಗಿಂತಲೂ ಅವರೇ ಹೆಚ್ಚು ಖುಷಿ ಪಟ್ಟಿದ್ದಾರೆ` ಎಂದು ಕಾಶೀನಾಥ್ ಸಂತಸ ವ್ಯಕ್ತಪಡಿಸಿದರು.

2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇವರು ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ಸದ್ಯಕ್ಕೆ ಪುಣೆಯಲ್ಲಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

`ಇತರ ಕ್ರೀಡೆಗಳಿಗೂ ಸಿಗಲಿ ಆದ್ಯತೆ`: `ಭಾರತದಲ್ಲಿ ಕ್ರಿಕೆಟ್‌ಗೆ ಸಿಕ್ಕಷ್ಟು ಆದ್ಯತೆ ಇತರ ಕ್ರೀಡೆಗಳಿಗೆ ಸಿಗುತ್ತಿಲ್ಲ.ಆದ್ದರಿಂದ ಕ್ರಿಕೆಟ್‌ಗೆ ಸಿಗುವ ಪ್ರೋತ್ಸಾಹ ಬೇರೆ ಕ್ರೀಡೆಗಳಿಗೆ ಕನಿಷ್ಠ ಅರ್ಧದಷ್ಟಾದರೂ ಸಿಗಲಿ` ಎಂದು ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಹೇಳಿದರು.

ನಿರೀಕ್ಷೆ ಇತ್ತು: `ನಾಲ್ಕು ವರ್ಷಗಳ ಹಿಂದೆಯೇ ಪ್ರಶಸ್ತಿ ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಈಗ ಪ್ರಶಸ್ತಿ ಬಂದಿದೆ`ಎಂದು ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಕೃತಿಕಾ ಲಕ್ಷ್ಮಣ್ ಸಂತಸ ವ್ಯಕ್ತಪಡಿಸಿದರು.

16 ವರ್ಷದೊಳಗಿನವರ ಫಿಬಾ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕೃತಿಕಾ ಪಾಲ್ಗೊಂಡಿದ್ದರು.2008ರಲ್ಲಿ ರಷ್ಯಾದಲ್ಲಿ ನಡೆದ ಕಿರಿಯರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-30

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ
»ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...
»ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್
»ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ
» ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...
»ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ
»ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್
»Iranian athlete refuses to 'shake hands' with Duchess of Cambridge during medal ceremony over 'cultural reasons'
»ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ
»ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ
» `ಸತ್ಯಾಗ್ರಹ'ದಲ್ಲಿ ಕರೀನಾ?...
»ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ
» ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ
»ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್
»ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
»‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’
» ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
»ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ
»ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ
»ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ
»ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ
»ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್
»ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್
»ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri