ವಿಜಯ ಕುಮಾರ್, ಯೋಗೀಶ್ವರ್ಗೆ ಖೇಲ್ ರತ್ನ ಪ್ರದಾನ | ಯುವರಾಜ್, ಅಶ್ವಿನಿ ಪೊನ್ನಪ್ಪ ಸಮೇತ 25 ಮಂದಿ ಕ್ರೀಡಾ ಸಾಧಕರಿಗೆ ಅರ್ಜುನ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2012-08-30
ಹೊಸದಿಲ್ಲಿ,ಆ.29:ಒಲಿಂಪಿಕ್ಸ್ನಲ್ಲಿ ಪದಕ ವಿಜೇತರಾದ ಶೂಟರ್ ವಿಜಯ ಕುಮಾರ್ ಮತ್ತು ಕುಸ್ತಿಪಟು ಯೋಗೀಶ್ವರ್ ದತ್ತ್ಗೆ ಜಂಟಿಯಾಗಿ ಇಂದು ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿ‘ರಾಜೀವ ಗಾಂಧಿ ಖೇಲ್ರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಒಲಿಂಪಿಕ್ಸ್ ಹೀರೋಗಳಾದ ವಿಜಯ್ ಕುಮಾರ್ ಹಾಗೂ ಯೋಗೀಶ್ವರ್ ದತ್ತ್ಗೆ ರಾಜೀವ್ ಗಾಂಧಿ ಖೇಲ್ ರತ್ನ,25ಮಂದಿಗೆ ಅರ್ಜುನ ಪ್ರಶಸ್ತಿ ಮತ್ತು 8ಮಂದಿಗೆ ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ ಮಾಡಿದರು.ಖೇಲ್ ರತ್ನ ಪ್ರಶಸ್ತಿ 7ಲಕ್ಷ ರೂ. ನಗದು,ಪ್ರಶಸ್ತಿ ಪತ್ರ ಹಾಗೂ ಫಲಕವನ್ನೊಳಗೊಂಡಿದೆ.ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳು ತಲಾ 5ಲಕ್ಷ ರೂ ನಗದು,ಪ್ರಶಸ್ತಿ ಫಲಕ ಒಳಗೊಂಡಿವೆ.ಒಲಿಂಪಿಕ್ಸ್ನಲ್ಲಿ ರಜತ ಪದಕ ಪಡೆದ ಶೂಟರ್ ವಿಜಯ್ ಕುಮಾರ್ ಮತ್ತು ಕಂಚು ಗಳಿಸಿದ ಕುಸ್ತಿಪಟು ಯೋಗೀಶ್ವರ್ ದತ್ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು


ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ರೀಡಾರಂಗದಲ್ಲಿ ಸಾಧನೆ ಮಾಡಿರುವ ಓರ್ವ ಕ್ರೀಡಾಪಟುವಿಗೆ ನೀಡಲಾಗುತ್ತಿದೆ.ಆದರೆ ಈ ಬಾರಿ ಇಬ್ಬರಿಗೆ ನೀಡಲಾಗಿದೆ.
ಅರ್ಜುನ ಪ್ರಶಸ್ತಿಯನ್ನು 15ಮಂದಿಗೆ ನೀಡಲಾಗುತ್ತಿದೆ.ಆದರೆ ಒಲಿಂಪಿಕ್ಸ್ನ ಹಿನ್ನೆಲೆಯಲ್ಲಿ 25ಮಂದಿಗೆ ಪ್ರಶಸ್ತಿ ನೀಡಲಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿರುವ ಟೀಮ್ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ಗೆ ಇದೇ ಸಂದರ್ಭದಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.
ಪ್ರಶಸ್ತಿ ಪಡೆದವರ ವಿವರ ಈ ಕೆಳಗಿನಂತಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ:ವಿಜಯ ಕುಮಾರ್(ಶೂಟಿಂಗ್)ಮತ್ತು ಯೋಗೀಶ್ವರ್ ದತ್ತ್(ಕುಸ್ತಿ).
ಅರ್ಜುನ ಪ್ರಶಸ್ತಿ:ದೀಪಿಕಾ ಕುಮಾರಿ(ಆರ್ಚರಿ),ಲೈಶಿರಾಮ್ ಬೊಂಬೈಲಾ ದೇವಿ(ಆರ್ಚರಿ),ಸುಧಾಸಿಂಗ್ (ಅಥ್ಲೆಟಿಕ್ಸ್),ಕವಿತಾ ರಾಮ್ದಾಸ್ ರಾವುತ್ (ಅಥ್ಲೆಟಿಕ್ಸ್), ಅಶ್ವಿನಿ ಪೊನ್ನಪ್ಪ (ಬ್ಯಾಡ್ಮಿಂಟನ್),ಪಾರುಪಳ್ಳಿ ಕಶ್ಯಪ್ (ಬ್ಯಾಡ್ಮಿಂಟನ್),ಆದಿತ್ಯ ಮೆಹ್ತಾ (ಬಿಲಿಯರ್ಡ್ ಮತ್ತು ಸ್ನೂಕರ್),ವಿಕಾಸ್ ಕೃಷ್ಣನ್ (ಬಾಕ್ಸಿಂಗ್),ಯುವರಾಜ್ ಸಿಂಗ್ (ಕ್ರಿಕೆಟ್),ಸರ್ದಾರ್ ಸಿಂಗ್(ಹಾಕಿ),ಯಶ್ಪಾಲ್ ಸೋಳಂಕಿ(ಜುಡೋ), ಅನೂಪ್ ಕುಮಾರ್ (ಕಬಡ್ಡಿ),ಸಮೀರ್ ಸುಹಾಗ್(ಪೊಲೋ),ಅನುರಾಜ್ ಸಿಂಗ್ (ಶೂಟಿಂಗ್), ಓಂಕಾರ್ ಸಿಂಗ್ (ಶೂಟಿಂಗ್), ಜಯ್ದೀಪ್ ಕರ್ಮಾಕರ್(ಶೂಟಿಂಗ್), ದೀಪಿಕಾ ಪಳ್ಳಿಕಲ್(ಸ್ಕ್ವಾಶ್),ಸಂದೀಪ್ ಸೆಜ್ವಾಲ್(ಈಜು),ಸೋನಿಯಾ ಚಾನು(ವೇಟ್ ಲಿಫ್ಟಿಂಗ್),ನರಸಿಂಗ್ ಯಾದವ್(ಕುಸ್ತಿ),ರಾಜೇಂದ್ರ ಕುಮಾರ್(ಕುಸ್ತಿ), ಗೀತಾ ಪೋಗಟ್(ಕುಸ್ತಿ),ಎಂ.ಬಿಮೊಲಿಜಿತ್ ಸಿಂಗ್(ವುಶು),ದೀಪಾ ಮಲ್ಲಿಕ್(ಅಥ್ಲೆಟಿಕ್ಸ -ಪ್ಯಾರಾಲಿಂಪಿಕ್ಸ್),ರಾಮ್ಕರಣ್ ಸಿಂಗ್(ಅಥ್ಲೆಟಿಕ್ಸ್-ಪ್ರಾರಾಲಿಂಪಿಕ್ಸ್ ).
ದ್ರೋಣಾಚಾರ್ಯ ಪ್ರಶಸ್ತಿ:ವೀರೇಂದ್ರ ಪೂನಿಯಾ(ಅಥ್ಲೆಟಿಕ್ಸ್),ಸುನೀಲ್ ದಬಾಸ್(ಕಬಡ್ಡಿ),ಯಶ್ವೀರ್ ಸಿಂಗ್(ಕುಸ್ತಿ),ಹರೇಂದ್ರ ಸಿಂಗ್(ಹಾಕಿ),ಸತ್ಪಾಲ್ ಸಿಂಗ್(ಪ್ಯಾರಾ ಸ್ಪೋರ್ಟ್ಸ್-ಅಥ್ಲೆಟಿಕ್ಸ್),ಜೆ.ಎಸ್ ಭಾಟಿಯಾ (ಅಥ್ಲೆಟಿಕ್ಸ್ನಲ್ಲಿ ಜೀವಮಾನ ಶ್ರೇಷ್ಠ ಸಾಧನೆ),ಭವಾನಿ ಮುಖರ್ಜಿ (ಟೇಬಲ್ ಟೆನಿಸ್-ಜೀವಮಾನದ ಶ್ರೇಷ್ಠ ಸಾಧನೆ) ಮತ್ತು ಬಿ.ಐ ಫೆರ್ನಾಂರಿಝ್(ಬಾಕ್ಸಿಂಗ್).
ಧ್ಯಾನ್ಚಂದ್ ಪ್ರಶಸ್ತಿ:ಜಗ್ರಾಜ್ ಸಿಂಗ್ ಮಾನ್(ಅಥ್ಲೆಟಿಕ್ಸ್),ಗುಣ್ದೀಪ್ ಕುಮಾರ್(ಹಾಕಿ),ವಿನೋದ್ ಕುಮಾರ್(ಕುಸ್ತಿ),ಸುಖ್ಬೀರ್ ಸಿಂಗ್ಟೋಕಸ್(ಪ್ಯಾರಾ ಸ್ಪೋರ್ಟ್ಸ್).
ತೇನ್ಸಿಂಗ್ ರ್ನೋ ಸಾಹಸ ಪ್ರಶಸ್ತಿ:ಕರ್ನಲ್ ಆನಂದ್ ಸ್ವರೂಪ್(ಲ್ಯಾಂಡ್ ಅಡ್ವೆಂಚರ್),ರಾಜೇಂದ್ರ ಸಿಂಗ್ ಜಲಾಲ್(ಲ್ಯಾಂಡ್ ಅಡ್ವೆಂಚರ್), ಭಕ್ತಿ ಶರ್ಮ ( ಜಲ ಸಾಹಸ), ಮನ್ದೀಪ್ ಸಿಂಗ್ ಸೋನ್ (ಜೀವಮಾನ ಶ್ರೇಷ್ಠ ಸಾಧನೆ).
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-30
|
|
|