ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ತುತ್ತು ಅನ್ನಕ್ಕೂ ತಾಯಿ-ಮಗಳ ಪರದಾಟ - ಹಿಂದು ಕುಟುಂಬಕ್ಕೆ ನೆರವಾದ ಅಲ್ಪಸಂಖ್ಯಾತರು!

ಅಬೂಬಕ್ಕರ್ ಅವರ ಮಾನವೀಯ ಸ್ಪಂದನೆ ಭಾವೈಕ್ಯತೆ ಹಾಗೂ ಸೌಹಾದತೆಯ ಸಂದೇಶವನ್ನು ಸಾರಿದೆ

ಬಂಟ್ವಾಳ: ತಾಲೂಕಿನ ಚೇಳೂರು ಗ್ರಾಮದ ಕೊಪ್ಪಳ ಎಂಬಲ್ಲಿರುವ ಈ ಬಿಲ್ಲವ ಕುಟುಂಬಕ್ಕೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿಯಿದೆ!  80 ದಾಟಿದ ಮಹಿಳೆಗೆ ದೃಷ್ಟಿ ದೋಷವಾದರೆ, ೪೦ರ ಹರೆಯದ ಆಕೆಯ ಮಗಳಿಗೆ ಬುದ್ಧಿಮಾಂದ್ಯ. 12 ಸೆನ್ಸ್ ಜಾಗದಲ್ಲಿ ಸಣ್ಣ ಮನೆಯಿದೆ. ಕಳೆದ ವರ್ಷ ಇಲ್ಲಿನ ಭಗವತೀ ಮಲಯಾಳಿ ಬಿಲ್ಲವ ಸ್ವ-ಸಹಾಯ ಗುಂಪಿನ ಕಾರ್ಯಕರ್ತರ, ಗ್ರಾ.ಪಂ.ಸದಸ್ಯರ, ಸ್ಥಳೀಯ ದಾನಿಗಳ ನೆರವಿನಿಂದ ಮನೆ ರಿಪೇರಿ ಮಾಡಲಾಗಿತ್ತು. ಅಲ್ಲಲ್ಲಿ ಬೇಸಾಯ ಕೂಲಿ, ಮನೆಗಳ ಪಾತ್ರೆ ತಿಕ್ಕುತ್ತಾ ಬಂದ ಒಂದಷ್ಟು ಸಂಪಾದನೆಯಿಂ ದಾಗಿ ಹೊಟ್ಟೆ ತುಂಬುತ್ತಿತ್ತು. ಬಟ್ಟೆಬರೆ, ಮದ್ದಿಗೂ ಅಲ್ಲಿಂದಲ್ಲಿಗೆ ಸಾಕಾಗುತ್ತಿತ್ತು. ಆದರೀಗ ವೃದ್ಧೆ ದುಡಿಯುವ ಚೈತನ್ಯ ಕಳೆದು ಬಿಟ್ಟಿದ್ದಾಳೆ. ಸರ್ಕಾರದವರು ಕೊಡುವ ನಾಲ್ಕು ನೂರು ವೃದ್ಧಾಪ್ಯ, ಮಗಳಿಗೆ ಬರುವ ಒಂದು ಸಾವಿರ ಅಂಗವಿಕಲ ವೇತನದಲ್ಲಿ ಇಡೀ ಮನೆಯ ಖರ್ಚು ಸಾಗಬೇಕು.  

ಇವು ಕಮಲಕ್ಕ ಎನ್ನುವ ವಿಧವೆ, ವೃದ್ಧೆ, ಬಡ ಬೆಳ್ಚಡ ಬಿಲ್ಲವ ಹೆಂಗಸು ಬದುಕು ಕಟ್ಟಿದ ಕತೆ. 

ಈಕೆಯ ಗಂಡ ತ್ಯಾಂಪ ಬೆಳ್ಚಡ ಸುಮಾರು 10-12 ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ಆಮೇಲೆ ಈಕೆಯ ಜೀವನಕ್ಕೆ ಧಿಕ್ಕೇ ಇಲ್ಲ. ಮೂವರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಕಿರಿಯ ಪ್ರಾಯ ದಲ್ಲೇ ಪ್ರಾಣ ಬಿಟ್ಟಿದ್ದಾರೆ. ರಾಜೀವಿ ಬದು ಕುಳಿದ ಮೂರನೇ ಹೆಣ್ಣು ಮಗಳು/ ಈಕೆಗೆ ಬರೋಬ್ಬರಿ 40 ವರ್ಷ. ಪ್ರಾಯ ಬೆಳೆದರೂ ಬುದ್ಧಿ ಶಕ್ತಿ ಬೆಳೆದಿಲ್ಲ. ಕಣ್ಣಿನ ದೃಷ್ಟಿಯೂ ಸರಿಯಿಲ್ಲ. ಯಾರಾದರೂ ಅಪರಿಚಿತರನ್ನು ಕಂಡರೆ ಹೆದರಿ ಹೋಗುತ್ತಾಳೆ. ಬಹುಶಃ ತಾಯಿಯಲ್ಲಿ ಮಾತ್ರ ಆಕೆ ಮಾತಾಡುವುದು. ಅದೂ ಒಂದೆರಡು ಅಗತ್ಯದ ಮಾತುಗಳು ಮಾತ್ರ!

ಕಮಲಕ್ಕನ ಅಸಹಾಯಕತೆ ಸ್ಥಿತಿಗೆ ಮುಡಿಪು ಬ್ಲಾಕ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಸ್.ಅಬೂಬಕ್ಕರ್ ಸಜೀಪ ಸಹಾಯ ಹಸ್ತ ಒದಗಿಸಿದ್ದಾರೆ. ಅವಳ ಮನೆಗೆ ಭೇಟಿ ನೀಡಿ ತಾಯಿ-ಮಗಳ ಸ್ಥಿತಿ-ಗತಿಯನ್ನು ಅವಲೋಕಿಸಿದ್ದಾರೆ. ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಅಕ್ಕಿ ಹಾಗೂ ಜಿನಸು ಸಾಮಾಗ್ರಿಗಳನ್ನು ಆಕೆಯ ಮನೆಗೆ ಪೂರೈಸಿದ್ದಾರೆ. ಮುಡಿಪು ಅಲ್ಪಸಂಖ್ಯಾತ ಘಟಕದ ವತಿಯಿಂದ ಮನೆಯೊಂದನ್ನು ಕಟ್ಟಿಕೊಡುವ ನಿರ್ಧಾರ ಮಾಡಲಾಗಿದೆ. ಅಬೂಬಕ್ಕರ್ ಅವರ ಮಾನವೀಯ ಸ್ಪಂದನೆ ಭಾವೈಕ್ಯತೆ ಹಾಗೂ ಸೌಹಾದತೆಯ ಸಂದೇಶವನ್ನು ಸಾರಿದೆ. ಉಳಿದ ರಾಜಕೀಯ ಪಕ್ಷಗಳಿಗೂ ಮಾದರಿಯಾಗಿದೆ. ಅವರ ಜೊತೆಗೆ ಕುರ್ನಾಡು ಗ್ರಾ.ಪಂ. ಅಧ್ಯಕ್ಷ ಝುಬೈರ್ ತಲೆಮೊಗರು, ಸದಸ್ಯ ಗಣೇಶ್, ಸ್ಥಳೀಯ ಹಿರಿಯರಾದ ಕೊಗ್ಗಣ್ಣ ಬೆಳ್ಚಡ ಹಾಗೂ ಡೇನಿಯಲ್ ಡಿಸೋಜಾ ಕುಟುಂಬಕ್ಕೆ ನೆರವಾಗಿದ್ದಾರೆ.   

ಕಮಲಕ್ಕನ ಮನೆಯಿರುವುದು ಮುಡಿಪು-ಮೆಲ್ಕಾರ್ ರಸ್ತೆಯ ಚೇಳೂರು ಜಂಕ್ಷನ್ ಸಮೀಪ. ಅಲ್ಲಿಂದ ತಿರುಗಿ ಸುಮಾರು 3 ಕಿ.ಮೀ. ಹೋದರೆ ಕೊಪ್ಪಳ ಎಂಬ ಸಣ್ಣ ಊರು ಸಿಗುತ್ತದೆ. ರಸ್ತೆಯ ಪೂರ್ತಿ ಕೆಟ್ಟು ಹೋಗಿದೆ. ಆಮೇಲೆ ಸ್ವಲ್ಪ ಕಾಡು, ಬಯಲು ದಾರಿ. ಬೇರೆಯವರ ತೋಟ ದಾಟಿ ಹೋಗಬೇಕು. ಅವರ ಮನೆಗೆ ಹೋಗಲು ಸ್ವಂತ ದಾರಿಯೇ ಇಲ್ಲ. ಹಾಗಾಗಿ ಅವರ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲು ಸಾದ್ಯವಾಗಿರಲಿಲ್ಲ.ಅವರಿಗೆ ಸ್ವಂತ ಮನೆ ಕಟ್ಟಿಕೊಡಲು ಗ್ರಾ.ಪಂ.ನವರು ಈಗ ಮುಂದಾಗಿದ್ದಾರೆ. ಮುಡಿಪು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದವರು ಮುತುವರ್ಜಿ ವಹಿಸಿದ್ದಾರೆ. ಕಮಲಕ್ಕನಿಗೆ ಮನೆ ಕಟ್ಟಲು ನೀವೂ ಸಹಾಯ ಮಾಡಿ.

ಮನೆ ವಿಳಾಸ: ಕಮಲಕ್ಕ, ಗಂಡನ ಹೆಸರು: ದಿ| ತ್ಯಾಂಪ ಬೆಳ್ಚಡ, ಮನೆ ನಂಬ್ರ 1ಕೊಪ್ಪಳ, ಚೇಳೂರು ಗ್ರಾಮ, ಕುರ್ನಾಡು, ಬಂಟ್ವಾಳ ತಾ|, ದಕ್ಷಿಣ ಕನ್ನಡ. ಬ್ಯಾಂಕ್ ಖಾತೆ ನಂ. 12727, ಕೆನರಾ ಬ್ಯಾಂಕ್, ಅಮ್ಮೆಂಬಳ, ಕುರ್ನಾಡು.

ಮುಡಿಪು ಬ್ಲಾಕ್ ಕಾಂಗ್ರೆಸ್ ನಿಂದ ವಿಭಿನ್ನ ಸ್ವಾತಂತ್ರ್ಯೋತ್ಸವ ಆಚರಣೆ : ಬಡ ಕುಟುಂಬದ ಕಣ್ಣೀರೊರೆಸಲು ಕೈಜೋಡಿಸಲು ಕರೆ.

 ಮುಡಿಪು ಬ್ಲಾಕ್ ಕಾಂಗ್ರೆಸ್ ನ ಅಲ್ಪ ಸಂಖ್ಯಾತ ಘಟಕವು ದೇಶದ 66 ನೆ ಸ್ವಾತಂತ್ರ್ಯೋತ್ಸವವನ್ನು ಬುಧವಾರ ವಿಭಿನ್ನವಾಗಿ ಹಾಗೂ ಅರ್ಥ ಪೂರ್ಣ ವಾಗಿ ಆಚರಿಸಿಕೊಂಡಿತು. ಬಡತನದ ಬೇಗುದಿಯಲ್ಲಿ ಬೇಯುತ್ತಿರುವ ಬಡ-ಅನಾಥ ತಾಯಿ-ಮಗಳ ಕುಟುಂಬವೊಂದನ್ನು ಪತ್ತೆ ಹಚ್ಚಿದ ಎಸ್. ಅಬೂಬಕ್ಕರ್ ನೇತ್ರತ್ವದ ನೇತ್ರತ್ವದ ಅಲ್ಪ ಸಂಖ್ಯಾತ ಘಟಕದ ನಿಯೋಗ ಆ ಕುಟುಂಬಕ್ಕೆ ನಾಲ್ಕು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಾಗ್ರಿಗಳನ್ನು ನೀಡಿ ಸಂತೈಸಿದ್ದಲ್ಲದೆ ಸಮಾಜಮುಖಿ ಸಂಘಟನೆಗಳು ಬಡ ಕುಟುಂಬದ ಪಾಲಿಗೆ ವರದಾನವಾಗಬೇಕೆಂಬ ಮನವಿಯನ್ನು ಮಾಡಿಕೊಂಡಿದೆ.

ತಾಯಿ-ಮಗಳು ತಮ್ಮ ಹರಕಲು ಗುಡಿಸಲಿನೊಂದಿಗೆ.

ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಚೇಳೂರು-ಕೊಪ್ಪಳ ಎಂಬ ಗುಡ್ಡ-ಗಾಡು ಪ್ರದೇಶದಲ್ಲಿ ಅನಾಥ ಪ್ರಜ್ಞೆಯೊಂದಿಗೆ ಬದುಕುತ್ತಿರುವ ದಿವಂಗತ ತ್ಯಾಂಪಣ್ಣ ಬೆಳ್ಚಡ ಎಂಬವರ ಪತ್ನಿ ಸುಮಾರು 75 ವರ್ಷದ ಕಮಲಕ್ಕ ಹಾಗೂ ಆಕೆಯ ಬುದ್ದಿಮಾಂದ್ಯ ಅವಿವಾಹಿತ ಸುಮಾರು 45 ವರ್ಷ ಪ್ರಾಯದ ರಾಜೀವಿ ಎಂಬವರ ಮನೆಯನ್ನು ಗುರುತಿಸಿದ ಎಸ್. ಅಬೂಬಕ್ಕರ್ ನೇತ್ರತ್ವದ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ನಿಯೋಗ ಅಲ್ಲಿಗೆ ಧಾವಿಸಿ ಈ ಅನಾಥ ಕುಟುಂಬದ ಕಣ್ಣೀರ ಕಥೆಯನ್ನು ಕಣ್ಣಾರೆ ಕಂಡಿದ್ದಾರೆ.

ಕುಟುಂಬಕ್ಕೆ ದಿನಸಿ ಸಾಮಗ್ರಿ ವಿತರಿಸಿದ ಕಾಂಗ್ರೆಸ್ ನಿಯೋಗ.

ಕುಟುಂಬದ ದಯನೀಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ನಿಯೋಗದ ಸದಸ್ಯರು ಸ್ಥಳದಲ್ಲೇ ನಾಲ್ಕು ತಿಂಗಳ ದಿನಸಿ ಸಾಮಗ್ರಿಗಳನ್ನು ಪೂರೈಸುವ ತೀರ್ಮಾನ ಕೈಗೊಂಡಿದ್ದಾರೆ. ಗುಡ್ಡ-ಗಾಡು ಪ್ರದೇಶದಲ್ಲಿರುವ, ಹಳ್ಳ-ಕೊಳ್ಳ, ಬಂಡೆಗಳನ್ನು ದಾಟಿ ಹೋಗಬೇಕಾದ ಇ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಸ್ವತಃ ಹೊತ್ತುಕೊಂಡು ಹೋಗಿ ಮುಟ್ಟಿಸಿ ಬಡ ಕುಟುಂಬದ ಪಾಲಿಗೆ ನೈಜ ಸ್ವಾತಂತ್ರ್ಯದ ಸಿಹಿ ಉಣ್ಣಿಸುವ ಪ್ರಯತ್ನ ಮಾಡಿದ್ದಾರೆ.


ಗುಡ್ಡ-ಗಾಡು ಪ್ರದೇಶದ ಮೋಲಕ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಸಾಗಿಸಿದ ನಿಯೋಗದ ಸದಸ್ಯರು.

ಕುಟುಂಬದ ಯಜಮಾನ ತ್ಯಾಂಪಣ್ಣ ಬೆಳ್ಚಡ ಸುಮಾರು 8 ವರ್ಷಗಳ ಹಿಂದೆ ಮ್ರತ ಪಟ್ಟಿದ್ದು ಆ ಬಳಿಕ ಪರಿಸರದ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಹರಕಲು ಗುಡಿಸಲಿನಲ್ಲಿ ಬದುಕು ಕಾಣುತ್ತಿರುವ ಈ ಬಡ ಜೀವಗಳು ಮುದಿ ಕಮಲಕ್ಕ ಸುತ್ತುತ್ತಿರುವ ಬೀದಿಯಿಂದ ಬರುವ ಅಲ್ಪ ಆದಾಯವನ್ನು ನೆಚ್ಚಿಕೊಂಡು ಒಪ್ಪೊತ್ತಿನ ಆಹಾರ ಸೇವಿಸಿ ನರಕ ಯಾತನೆಯ ಜೀವನ ನಡೆಸುತ್ತಿದೆ. ಕಣ್ಣು ಕಾಣದ ಈ ಮುದಿ ಜೀವ ಯಾವ ರೀತಿ ಬೀದಿ ಸುತ್ತುತ್ತಿದೆ ಎಂಬುದೇ ಈ ಪರಿಸರದ ಮಂದಿಗೆ ಉತ್ತರ ಕಂಡು ಕೊಳ್ಳಲಾರದ ಆಶ್ಚರ್ಯವಾಗಿದೆ. ಗುಡ್ಡ ಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಈ ಕುಟುಂಬದ ಮನೆಗೆ ತಲುಪುವರೆ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲ. ಮೂಲಭೂತ ಅವಶ್ಯಕತೆಗಳ ಗಂಧ ಗಾಳಿ ಈ ಮನೆಯ ಹತ್ತಿರ ಇನ್ನೂ ಸುಳಿದಿಲ್ಲ. ವಿದ್ಯುತ್, ಕುಡಿಯುವ ನೀರು, ರಸ್ತೆ ಇನ್ನಿತರ ಯಾವುದೇ ಸೌಲಭ್ಯಗಳೂ ಇಲ್ಲಿಲ್ಲ. ಇವುಗಳನ್ನು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಲ್ಲಿ ಕೇಳಿಕೊಂಡು ಹೋಗುವ ತಾಕತ್ತೂ ಈ ಕುತುಮ್ಬಕ್ಕಿಲ್ಲ. ಒಟ್ಟಿನಲ್ಲಿ ಈ ಕುಟುಂಬದ ದಯನೀಯ ಪರಿಸ್ಥಿತಿಯನ್ನು ಹೇಳುವವರು ಕೇಳುವವರು ಯಾರೂ ಇಲ್ಲದಂತಹ ಪರಿಸ್ಥಿತಿ.

ದಯನೀಯ ಬದುಕಿನ ಕಥಾ ವಸ್ತು ಜೀವಗಳಾದ ಕಮಲಕ್ಕ ಹಾಗೂ ರಾಜೀವಿ

ಇದ್ದಿಗ ಕಣ್ಣೀರ ಕೋಡಿಯಲ್ಲಿ ಬದುಕುತ್ತಿರುವ ಈ ಬಡ ಕುಟುಂಬದ ಪಾಲಿಗೆ ಆಪ್ದ್ಭಾಂದವನಾಗಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪದಾಧಿಕಾರಿಗಳು ಧಾವಿಸಿದ್ದು, ಕತ್ತಲಲ್ಲಿದ್ದ ಬಡ ಕುಟುಂಬದ ಪರಿಚಯವನ್ನು ಹೊರ ಜಗತ್ತಿಗೆ ಕಾಣಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನಾದರೂ ಸ್ಥಲೀಯಾದಲಿತ, ಸರಕಾರ ಹಾಗೂ ಸಮಾಜದಲ್ಲಿರುವ ಸೇವಾ ಮನೋಭಾವ ಹೊಂದಿರುವ ಸಂಘ ಸಂಸ್ಥೆಗಳು ಮುಂದೆ ಬಂದು ಈ ಕುಟುಂಬದ ನರಕ ಯಾತನೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತ್ತರಾಗಬೇಕು ಎಂಬ ಕಳಕಳಿಯನ್ನು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಎಸ್. ಅಬೂಬಕ್ಕರ್ ವ್ಯಕ್ತಪಡಿಸುವ ಮೋಲಕ ಸಮಾಜ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : JK & Abbu Sa
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2012-08-29

Tell a Friend

ಪ್ರತಿಸ್ಪಂದನ
salam, dubai
2012-08-30
there is nobody for helping this poor muslim family? plz click http://www.gulfkannadiga.com/news-71678.html
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri