ಬುಧವಾರ, 16-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಕನ್ನಡ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ ಗೆ ಕೇರಳ ರಾಜ್ಯ ಪ್ರಶಸ್ತಿ.

ಕಾಸರಗೋಡು:ಸೇವಾ ಕಾರ್ಯಗಳಿಂದ  ಸದಾ ಸುದ್ದಿಯಲ್ಲಿರುವ  ಕಾಸರಗೋಡು ಸರಕಾರಿ ಕಾಲೇಜಿನ  ಎನ್.ಎಸ್ .ಎಸ್  ಘಟಕ ವು ರಾಜ್ಯ ಮಟ್ಟದ  ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.ಕಾಲೇಜಿನ  ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ  ಪ್ರೊ.ರತ್ನಾಕರ ಮಲ್ಲಮೂಲೆ ಉತ್ತಮ  ಯೋಜನಾಧಿಕಾರಿ ರಾಜ್ಯ ಪ್ರಶಸ್ತಿಯನ್ನು, ಎನ್.ಎಸ್.ಎಸ್ ಘಟಕ  ಉತ್ತಮ  ಘಟಕ  ಪ್ರಶಸ್ತಿಯನ್ನೂ,ವಿದ್ಯಾರ್ಥಿನಿ ಮಹಿಮಾ.ಪಿ  ಉತ್ತಮ ಸ್ವಯಂಸೆವಕಿ ಪ್ರಶಸ್ತಿ ಯನ್ನು ಪಡೆದಿದ್ದಾರೆ.ಈಗ  ಕೇರಳದ  ನಂಬರ್ ಒನ್  ಘಟಕ ಎಂಬ ಹೆಗ್ಗಳಿಕೆಗೆ ಕಾಲೇಜಿಗೆ ಲಭಿಸಿದೆ.



ಅಧ್ಯಾಪನದೊಂದಿಗೆ ಬಿಡುವಿಲ್ಲದ ಸೇವಾಕಾರ್ಯಗಳಲ್ಲಿ ತನ್ನನ್ನು,ಜತೆಗೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಕ್ರಿಯಾಶೀಲ ವಾಗಿ ದುಡಿಯುತ್ತಿರುವ ರತ್ನಾಕರ ಮಲ್ಲಮೂಲೆ ಯವರ ನಿಸ್ಪ್ರಹ ಪ್ರಾಮಾಣಿಕ  ದುಡಿಮೆ ಮತ್ತು ಸಾಧನೆಗೆ ಈ ಪ್ರಶಸ್ತಿ ಸಂದಿವೆ.ತನ್ನ ವಿದ್ಯಾರ್ಥಿ  ದೆಸೆಯಿಂದಲೇ  ಕಾಸರಗೋಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ  ರಂಗಗಳಲ್ಲಿ ಸಕ್ರಿಯರಾಗಿರುವ ಮಲ್ಲಮೂಲೆ ಯವರ ಬಿಡುವಿಲ್ಲದ ,ನಿಸ್ವಾರ್ಥ ದುಡಿಮೆಗೆ ಈಗ ಗರಿ ಮೂಡಿದೆ .



ರತ್ನಾಕರ ಮಲ್ಲಮೂಲೆ ಯವರು ರಾಷ್ಟ್ರೀಯ  ಸೇವಾ ಯೋಜನೆ ಯ (N.S.S.)  ನೇತೃತ್ವ ದಲ್ಲಿ ಎಂಡೋಸಲ್ಫಾನ್  ಭಾಧಿತ  ಕಾಸರಗೋಡು,ಎನ್ಮಕಜೆ ಪಂಚಾಯತಿನ  ನಿರಾಶ್ರಿತ  ಈಶ್ವರ  ನಾಯಕ್ ರಿಗೆ ಮನೆ ನಿರ್ಮಿಸಿ ಕೊಟ್ಟಿತ್ತು .ಎನ್.ಎಸ್.ಎಸ್ ನ ಈ ಮಹಾತ್ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ತುಂಬು ಸಹಕಾರ ಲಭಿಸಿತ್ತು.ಕಾಲೇಜು ಪಾಠ ಪ್ರವಚನಗಳ ಮಧ್ಯೆ, ಬಿಡುವು ಮಾಡಿಕೊಂಡು ಕಾಲೇಜು ಆವರದೊಳಗೆ ತರಕಾರಿ ತೋಟ ನಿರ್ಮಾಣ, ಎಂಡೋಸಲ್ಫಾನ್ ವಿರುದ್ಹ ಜಾಗೃತಿ,ನಿರಂತರ ರಕ್ತದಾನದ ಮೂಲಕ ಹಲವು ಜೀವದಾನ ,ವಿವಿಧ ರೋಗಗಳ ಕುರಿತು ಸಾಮಾಜಿಕ ಸುರ್ವೆ,ಪ್ರಕೃತಿ ಸಂಪನ್ಮೂಲಗಳ ಉಳಿತಾಯ, ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ,ಯಕ್ಷಗಾನ ತರಬೇತಿ,ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕು ಪ್ರಮುಖ ರಸ್ತೆಗಳ  ನಿರ್ಮಾಣ,ದತ್ತು ಗ್ರಾಮ ಎನ್ಮಕಜೆಯಲ್ಲಿ ಬಸ್ ತಂಗುದಾಣ ನಿರ್ಮಾಣ,  ’ಕಾವಳ’ ಸಾಮಾಜಿಕ ಕಾಳಜಿಯ ಕಿರು ಚಿತ್ರ ನಿರ್ಮಾಣ- ಇವು ಕಾಸರಗೋಡು ಸರಕಾರಿ ಕಾಲೇಜಿನ ಎನ್.ಯಸ್.ಎಸ್.ಕಳೆದ ಮೂರು ವರ್ಷಗಳಲ್ಲಿ ಮಾಡಿದ ಪ್ರಮಖ ಸಾಮಾಜಿಕ ಕೈಂಕರ್ಯಗಳು .


2009 ರ ಲ್ಲಿ ’ ಮಳೆ ನಿಂತ ಮೇಲೆ’ ನಾಟಕವನ್ನು ರಚಿಸಿ,ಸಾಂತ್ವನ  ರಂಗಯಾತ್ರೆ ಯ ಮೂಲಕ  ನಾಟಕವನ್ನು ಕಾಸರಗೋಡು ಮತ್ತು ಕರ್ನಾಟಕದ  ಮಂಗಳೂರ್,ಮೈಸೂರ್ , ಬೆಂಗಳೂರ್ ಮುಂತಾದ ಕಡೆ ವಿವಿದೆಡೆ ಪ್ರದರ್ಶಿಸಿ,ಕರ್ನಾಟಕ ನೆರೆ ಸಂತ್ರಸ್ತ ನಿಧಿಗೆ 50 ಸಾವಿರಕ್ಕೂ ಮಿಕ್ಕಿ ಹಣವನ್ನು ನೀಡಿದ ಹೆಗ್ಗಳಿಕೆ ಮಲ್ಲಮೂಲೆ ಯವರದು. ಸಾಂತ್ವನ  ರಂಗಯಾತ್ರೆ ಗೆ ಅಪೂರ್ವ ಕಲಾವಿದರು ಕಾಸರಗೋಡು ಮತ್ತು ಎನ್.ಎಸ್.ಎಸ್  ವಿದ್ಯಾರ್ಥಿಗಳು ನೇತೃತ್ವ ನೀಡಿದ್ದರು .

ಮುಖ್ಯವಾಗಿ ಯವಜನತೆಯಲ್ಲಿ  ಸಾಮಾಜಿಕ ಜಾಗೃತಿ ಯನ್ನುಂಟು ಮಾಡಲು ಸುಮಾರು ಎಂಟು ಲಕ್ಷ ವೆಚ್ಹ  ದಲ್ಲಿ ನಿರ್ಮಿಸಿದ ’ ಕಾವಳ ’ ಕನ್ನಡ  ಕಿರುಚಿತ್ರ  ಕ್ಕೆ ಸಂಭಾಷಣೆ ಬರೆದ  ರತ್ನಾಕರ  ಮಲ್ಲಮೂಲೆ.,ಚಿತ್ರ ನಿರ್ಮಾಣದಲ್ಲಿ ದುಡಿದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಆಧುನಿಕ  ವ್ಯಾಮೋಹಕ್ಕೆ ಬಲಿಬಿದ್ದು,ತಮ್ಮ ಭವಿಷ್ಯವನ್ನು  ದುರಂತಕ್ಕೆ ಒಡ್ಡುವ  ಸನ್ನಿವೇಶ , ಎಂಡೋಸಲ್ಫಾನ್ ಬವಣೆ,ಹದಿಹರೆಯದ ತಲ್ಲಣ ಗಳು ಕಾವಳ ದ  ಮುಖ್ಯ ಕಥಾವಸ್ತು.ಕಳೆದ ನವೆಂಬರ್ ನಲ್ಲಿ ಕಾಸರಗೋಡಿನಲ್ಲಿ ಬಿಡುಗಡೆಯಾದ ಈ  ಚಿತ್ರ  ಕಾಸರಗೋಡು,ಕರ್ನಾಟಕದ  ಗ್ರಾಮೀಣ ಪ್ರದೆಶಗಳಲ್ಲಿ ಪ್ರದರ್ಶನಗೊಂಡು ಅಪಾರ  ಜನಮೆಚ್ಚುಗೆಗೆ ಪಾತ್ರವಾಗಿದೆ .


ಪುನರ್ನವ ಟ್ರಸ್ಟ್ ಮಲ್ಲಮೂಲೆಯವರ  ಉದಾತ್ತ ಸಾಮಾಜಿಕ  ಸೇವಾ ಮನೋಭಾವಕ್ಕೆ ಮತ್ತೊಂದು ನಿದರ್ಶನ . ಸಮಾನ ಮನಸ್ಕರಾದ , ಬೆಂಗಳೂರಿನ  ಮೂವರು ಗೆಳೆಯರನ್ನು ಸೇರಿಸಿ ಟ್ರಸ್ಟ್  ಸ್ಥಾಪಿಸಿ ಬಡ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ  ಸಹಾಯ ಮಾಡುತಿದ್ದಾರೆ  . ಕಳೆದ  ವರ್ಷ  ಎಂಡೋಸಲ್ಫಾನ್  ಭಾದಿತ, ಅಂಗವೈಕಲ್ಯ  ಹೊಂದಿದ , ಪ್ರತಿಭಾವಂತೆ ವಿದ್ಯಾರ್ಥಿನಿ  ಶ್ರುತಿ ಪಿ  ಯವರನ್ನು ಶೈಕ್ಷಣಿಕ ದತ್ಹು ಸ್ವೀಕಾರಿಸಿದಲ್ಲದೆ, ಇಬ್ಬರು  ಎಂಡೋಸಲ್ಫಾನ್  ಪೀಡಿತ  ವಿದ್ಯಾರ್ಥಿ ಗಳಿಗೆ ಆರ್ಥಿಕ  ಧನ ಸಹಾಯ , ಸ್ಕೂಲ್ ಕಿಟ್, ಸಮವಸ್ತ್ರ  ನೀಡಿತ್ತು.  ಈ  ವರ್ಷ  28 ಬಡ, ಪ್ರತಿಭೆಗಳಿಗೆ ಟ್ರಸ್ಟ್  ಸಹಾಯ ಮಾಡಿದಲ್ಲ ದೆ ,ಕೊರಗ ಸಮುದಾಯದಲ್ಲಿ ಪ್ರಥಮ ವಾಗಿ  ಎಂ.ಎ  ಪದವಿ ಪೂರೈಸಿದ  ಮೀನಾಕ್ಷಿ ಬೋದ್ದೊಡಿ ಯವರನ್ನು ಅಭಿನಂದಿಸಿದಲ್ಲದೆ ,  ಅವರಿಗೆ ಸರಕಾರಿ ಉದ್ಯೋಗ ನೀಡುವಂತೆ   ಕೇರಳ ಸರಕಾರವನ್ಜ್ನು  ಒತ್ತಾಯಿಸಿತ್ತು . ಪುನರ್ನವ ಟ್ರಸ್ಟ್ ನ  ಕಾರ್ಯಚಟುವತಿಕೆಗಳಿಗೆ ಮಲ್ಲಮೂಲೆ ಸೇರಿದಂತೆ ಉಳಿದ ಮೂವರು  ತಮ್ಮ  ದುಡಿಮೆ ಯ ಒಂದಂಶವನ್ನು ವಿನಿಯೋಗಿಸುತಿದ್ದಾರೆ.

 

’ಮಳೆ ನಿಂತ ಮೇಲೆ’ ನಾಟಕ , ’ಚಪ್ಪರ ಮದುವೆ’ ಸಂಶೋಧನ ಕೃತಿ  ರತ್ನಾಕರ ಮಲ್ಲಮೂಲೆಯವರ  ಪ್ರಕಟಿತ ಕೃತಿಗಳು . ’ಯಕ್ಷಗಾನ ಬೊಂಬೆಯಾಟ ’   ಮತ್ತು ’ಸುಳಿಗಾಳಿ ’ ಅನುವಾದ ಕಾದಂಬರಿ ಬಿಡುಗಡೆಯ ಹಂತದಲ್ಲಿದೆ.  ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮಲ್ಲಮೂಲೆ , ಮಂಗಳೂರ್ ಆಕಾಶವಾಣಿಯ’ ಬಿ ’ ಗ್ರೇಡ್  ಕಲಾವಿದರೂ ಆಗಿದ್ದಾರೆ . ಕಾಲೇಜು ವಿದ್ಯಾರ್ಥಿಗಳಿಗೆ  ಯಕ್ಷಗಾನ ತರಬೇತಿ , ನೀಡುವಲ್ಲಿ ನೇತೃತ್ವ ವಹಿಸುವುದಲ್ಲದೆ , ಯಕ್ಷಗಾನ ಆಟ ಮತ್ತು ಕೂಟ ಗಳಲ್ಲಿ  ವಿದ್ಯಾರ್ಥಿಗಳೊಂದಿಗೆ ಸಕ್ರಿಯರಾಗಿದ್ದಾರೆ .


ಕಣ್ಣೂರ್  ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಮಿತಿ ಸದಸ್ಯ ರಾಗಿ ,ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಸಲಹಾ ಸಮಿತಿ ಸದಸ್ಯರಾಗಿ , ಕೇರಳ ಸಾಕ್ಷರತ ಮಿಶನ್ ನ ಕನ್ನಡ ಪಾಠ ಪುಸ್ತಕ ರಚನಾ ಸಮಿತಿಯ ಅದ್ಯಕ್ಷರಾಗಿ ,ವಿವಿದ ವ್ಯಕ್ತಿತ್ವ ವಿಕಾಸ ತರಗತಿ, ಪರಿಸರ ಸಂರಕ್ಷಣೆ ತರಗತಿಗಳ ಸಂಪನ್ಮೂಲ ವ್ಯಕ್ತಿಯಾಗಿ  ದುಡಿಯುತಿದ್ದಾರೆ . ಗಡಿನಾಡು ಯಕ್ಷಪರಿಷತ್ ನ ಸ್ತಾಪಕ ಅಧ್ಯಕ್ಷರಾಗಿ , ಅಪೂರ್ವ ಕಲಾವಿದರು ಸಂಸ್ತೆಯ ಕಾರ್ಯದರ್ಶಿಯಾಗಿ , ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಯಾಗಿ , ಕಾಸರಗೋಡು ಕನ್ನಡ ಬಳಗ ದ ಸದಸ್ಯನಾಗಿ, ಕರ್ನಾಟಕ ಸಂಶೋದಕರ ಒಕ್ಕೂಟ ದ  ಕಾಸರಗೋಡು ಪ್ರತಿನಿಧಿಯಾಗಿ  ಸೇವೆ ಸಲ್ಲಿಸುತಿದ್ದಾರೆ. 




ಮಲ್ಲಮೂಲೆ ಯವರು ಫಾತಿಮಾ ಎ .ಎಲ್ .ಪಿ ಶಾಲೆ ನಾರಂಪಾಡಿ, ಶ್ರೀ ಅನ್ನಪೂರ್ಣೆಶ್ವರಿ  ಹೈಸ್ಕೂಲ್  ಅಗಲ್ಪಾಡಿ , ಗೋವಿಂದ ಪೈ ಕಾಲೇಜು ಮಂಜೇಶ್ವರ , ಕಾಸರಗೋಡು ಸರಕಾರಿ ಕಾಲೇಜು ಕಾಸರಗೋಡು - ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಯಾಗಿದ್ದಾರೆ . ಮಲ್ಲಮೂಲೆ ಮಹಾಲಿಂಗ ಮತ್ತು ಸೀತಮ್ಮ ದಂಪತಿಗಳ ಪುತ್ರ . ಮಲ್ಲಮೂಲೆಯವರ ಸಾಧನೆ ಯನ್ನು ಮನ್ನಿಸಿ ಕಾಸರಗೋಡಿನ ಹಲವು ಸಂಘ ಸಂಸ್ಥೆಗಳು ಹಲವು ಅಭಿನಂದನಾ ಕಾರ್ಯಕ್ರಮ ಗಳನ್ನು ಆಯೋಜಿಸುವ ಸಿದ್ದತೆಯಲ್ಲಿದೆ .

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-08-29

Tell a Friend

ಪ್ರತಿಸ್ಪಂದನ
sadananda, mangalore
2012-08-30
It is great pleasure to know that Govt college Kasaragod NSS team concorred 3 awards.Out of this Sri Prof.Ratnakar Mallamoole is awarded the best nss officer in Kerala state

. Prof Mallamoole is deserved person for the award.he is involved a lot in social activities through NSS by constructing houses to the poor as he physically witnessed during constuction of house,providing basic needs to the needy , meritorious students,and also cultivating vegetable in the college campus.

He is strugling a lot apart from his nominal duties as professor. It is proud to say that a Professor can achieve a lot by serving the public in social activities.

It is a duty to encourage and congradulate this type of great personnalities .I wish him all the success in his future endeavours.also congradulate Mahima the best volunteer in NSS

:Sadananda, secretary Abhaya Charitable Trust Mangalore.

Naveen ellangala, Bengaluru
2012-08-30
ರತ್ನಾಕರ ಮಲ್ಲಮೂಲೆ ನನ್ನ ಆತ್ಮಿಯ ಗೆಳೆಯ ಎಂದು ಹೇಳಲು ಹೆಮ್ಮೆ ಪಡುತ್ತೇನೆ.ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ಬೇರೆಯವರಲ್ಲಿ ಕಾಣಲು ಕಷ್ಟ ಸಾದ್ಯ. ದಾರಿ ತಪ್ಪುತ್ತಿರುವ ಸಮಾಜದ ಬಗ್ಗೆ ಮಾತಾಡುವಾಗ ಅವರ ಕಣ್ಣಲ್ಲಿ ನಿರನ್ನ ಕಂಡಿದೇನೆ. ರಾತ್ರಿ ಹಗಲೆಂದಿಲ್ಲದೆ ಸಮಾಜದ ಬಗ್ಗೆ ಚಿಂತಿಸುತ, ದುಡಿಯುತ್ತಿರುವ ಇವರು ಸಮಾಜಕ್ಕೆ ಸಿಕ್ಕಿರುವತಹ ಮಹತ್ತರವಾದ ಕೊಡುಗೆ.
Gireesh.U, Uppangala
2012-08-30
ಮೊತ್ತ ಮೊದಲು ಅವರಿಗೆ ನನ್ನ ಅಭಿನಂದನೆಗಳು , ನಮ್ಮ ಊರಿನ ಒಬ್ಬ ಅಧ್ಯಾಪಕನಿಗೆ ಇಂಥಹ ಪ್ರಶಸ್ತಿ ಬಂದದ್ದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಇನ್ನೊಂದು ವಿಷ್ಯ ಅಂದ್ರೆ ನಮ್ಮದೇ ಶಾಲೆಯಲ್ಲಿ ಕಲಿತ ಅವ್ರಿಗೆ ದೇವರು ಒಳ್ಳೇದು ಮಾಡಲಿ ಎಂದು ಆಶಿಸುತ್ತೇವೆ
ramakrishna hosabettu, katipalla
2012-08-29
Today I have pasted this NSS unit news in FB & it has attracted so many likes
ವಿಜಯ್ ಸುವರ್ಣ , ಕತಾರ್
2012-08-29
ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಮಾಜದಲ್ಲಿನ ಅಗತ್ಯದ ಪ್ರತಿಯೊಂದು ಕೋನದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡು ಎಲೆಮರೆಯ ಕಾಯಿಯಂತೆ ಇದ್ದುಕೊಂಡೇ ಯಾವ ಪ್ರತಿಫಲಾಕ್ಷೆಯನ್ನೂ ನಿರೀಕ್ಷಿಸದೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಿರುವ ಪ್ರೊ. ರತ್ನಾಕರ ಮಲ್ಲಮೂಲೆ ಯವರು ನಿಜವಾಗಿಯೂ ದೇಶದ ಓರ್ವ ಅನರ್ಘ್ಯ ರತ್ನ.

ಸಮಾಜಸೇವೆಯನ್ನು ಮಾಡಲು ಯಾವುದೇ ಅಧಿಕಾರ/ಮಂತ್ರಿಪದವಿಯೂ ಬೇಡ ಒಬ್ಬ ಸಾಮಾನ್ಯ ಪ್ರಜೆಯಾಗಿ ಇದ್ದುಕೊಂಡೇ ತೋರಿಸಿಕೊಡಬಹುದು ಎಂಬುದಾಗಿ ಪ್ರತ್ಯಕ್ಷವಾಗಿ ನಿದರ್ಶನಮಾಡಿ ತೋರಿಸಿದ ಇವರ ಪ್ರಾತ್ಯಕ್ಷಿಕೆಯನ್ನು ಕೇವಲ ಹಣ ಮತ್ತು ಅಧಿಕಾರ ಧಾಹಕ್ಕಾಗಿ ಒದ್ದಾಡುತ್ತಿರುವ/ ಡೊಂಬರಾಟ ವಾಡುತ್ತಿರುವ ನಮ್ಮ ರಾಜಕಾರಣಿಗಳು ಇವರನ್ನು ನೋಡಿಕಲಿಯಬೇಕಾದುದು ಬಹಳಷ್ಟಿದೆ.

ಇವರ ಸೇವೆಯ ಮಟ್ಟವನ್ನು ಕೇರಳ ಸರಕಾರ ಗುರುತಿಸಿರುವಂತೆ ನಮ್ಮ ಕರ್ನಾಟಕ ಸರಕಾರ ಕೂಡಾ ಇವರ ನಿಸ್ಪ್ರಹ ಸೇವೆಯನ್ನು ಗಮನಿಸಿ ಇವರನ್ನು ಸರ್ವೊಚ್ಛ ಪುರಸ್ಕಾರವಿತ್ತು ಗೌರವಿಸುವ ದಿನ ಬೇಗಬರಲಿ ಎಂಬುದು ನಮ್ಮ ಮನದಾಳದ ಹಾರೈಕೆ.

ಆತ್ಮೀಯ ಅಭಿನಂದನೆಗಳು ಶ್ರೀ ರತ್ನಾಕರ ಮಲ್ಲಮೂಲೆಯವರಿಗೆ ಹಾಗೂ ಸುದ್ದಿ ಪ್ರಕಟಿಸಿದ ಗಲ್ಫ್ ಕನ್ನಡಿಗ ಬಳಗಕ್ಕೆ.

ಅರೆಹೊಳೆ ಸದಾಶಿವ ರಾವ್, ಮಂಗಳೂರು
2012-08-29
ರತ್ನಾಕರ ಮಲ್ಲಮೂಲೇ ಯವರಿಗೆ ಶುಭಾಶಯಗಳು. ಅಧ್ಯಾಪನ ವ್ರತ್ತಿಯೊ೦ದಿಗೆ ಜನರ ಬದುಕನ್ನು ಹೇಗೆ ಕಟ್ಟಿ ಕೊಡಬಹುದು ಮತ್ತು ಓರ್ವ ಸರಕಾರೀ ನೌಕರನು ಸಮಾಜಮುಖಿಯಾಗಿ ಹೇಗೆ ಕೆಲಸ ಮಾಡಬಹುದು ಎ೦ಬುದನ್ನು ತೋರಿಸಿಕೊಟ್ಟವರು ರತ್ನಾಕರ ಅವರು. ಸಾಮಾಜಿಕ ಸಾಂಸ್ಕ್ರತಿಕ ರಾಯಭಾರಿಯಾಗಿರುವ ರತ್ನಾಕರರಿಗೆ ಸಲ್ಲುವ ಮೂಲಕ ಪ್ರಶಸ್ತಿ ತನ್ನ ಘನತೆ ಹೆಚ್ಚಿಸಿಕೊ೦ಡಿದೆ....ಶುಭಾಶಯಗಳು
subrahmanya, venur
2012-08-29
ಸರಕಾರೀ ಕಾಲೇಜು ಅಂದರೆ "ಗಂಟೆ ಹೊಡಿ ಸಂಬಳ ತಗೋ" ಎಂಬ ಭಾವನೆ ಎಲ್ಲ ಕಡೆ ಸಾಮಾನ್ಯ . ಆದರೆ ಅಲ್ಲೋ ಒಬ್ಬ ಪ್ರತಿಭಾನ್ವಿತ ಪ್ರಾಧ್ಯಾಪಕ ಬೇರೆ ಬೇರೆ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ಕೌಶಲ ವೆರ್ಧನೆಯನ್ನು ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಉನ್ನತ ಪ್ರಶಸ್ತಿಯನ್ನು ಗಳಿಸಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ.

ಈ ಲೇಖನ ಕುರಿತು ಬೆಳಕು ಚೆಲ್ಲಿದ ಪದ್ಯಾಣ ರಾಮಚಂದ್ರರಿಗೂ ಇಂಥ ಉತ್ತಮ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕಾಗಿ ಅಭಿನಂದನೆಗಳು

ರಫೀಕ್ ದಲ್ಕಾಜೆ , ಕೋಲ್ಪೆ
2012-08-29
ಪ್ರಿಯ ರತ್ನಾಕರರವರೆ ನಿಮ್ಮ ಸೇವೆ ಸಾಮಾನ್ಯ ಜನರ ಮನ ತಟ್ಟುವಂತದ್ದು. ನಿಮಗೆ ರಾಜ್ಯ ಪ್ರಶಸ್ತಿ ಕೈ ಸೇರಿದ್ದು ನಂಗೆ ಸಂತೋಷ ತಂದಿದೆ. ತಮಗೆ ಅಭಿನಂದನೆಗಳು. ನಿಮ್ಮ ಸೇವೆ ಇನ್ನಷ್ಟು ಸ್ತರಗಳಿಗೆ ತಲುಪಲಿ ಎಂಬ ಸುಭ ಹಾರೈಕೆ.
vinay kumar, saudi arabia
2012-08-29
ನಾನು ರತ್ನಾಕರ ಮಲ್ಲಮೂಲೆ ಅವರ ವಿದ್ಯಾರ್ಥಿಯಾಗಿದ್ದು ಇವರ ಸಾಧನೆಗೆ ತಕ್ಕ ಪ್ರಶಸ್ತಿ ಲಭಿಸಿದ್ದು ಸಂತೋಷದ ವಿಷಯ .......ಅಭಿನಂದನೆಗಳು ,,,,,,,,
ramakrishna hosabettu, katipalla
2012-08-29
ಮಲ್ಲಮೂಲೆಗೆ ಪ್ರಶಸ್ಥಿ ಕೇರಳ ಸರಕಾರ ಕೊಡಿಸಿ , ಒಬ್ಬ ಅಧ್ಯಾಪಕರ ಮನ ತಣಿಸಿದಿರಿ . ತುಂಬಾ ಸಂತೋಷವಾಯಿತು ಹಾಗೂ ಅವರೇ ನೀವು ಪ್ರಕಟಿಸಿದಕ್ಕೆ , ಥ್ಯಾಂಕ್ಸ್ ಕೊಟ್ಟಿರುವರು .. ಅವರಿಗೆ ದೇವರು ಮುಂದೇ ರಾಷ್ಟ್ರ ಪ್ರಶಸ್ಥಿ ಸಿಗುವಾಗೆ ದೇವರನ್ನು ನಾವು ಪ್ರಾರ್ತಿಸುವ಻ .
Subhashini, Kasaragod
2012-08-29
ಕಾಸರಗೋಡಿನ ಸರಕಾರೀ ಕಾಲೇಜು , ಅಲ್ಲಿನ ಪರಿಸರ , ನನ್ನ ಪ್ರಾಧ್ಯಾಪಕರು , ಸಹ ವಿಧ್ಯಾರ್ಥಿಗಳನ್ನೂ ಎಂದಿಗೂ ಮರೆಯುವಂತಿಲ್ಲ . ನಮ್ಮ ಕಾಲೇಜು ಎನ್. ಎಸ್. ಎಸ್. ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿತ್ತು .

ಆ ಸಂಪ್ರದಾಯ ಈಗಲೂ ರತ್ನಾಕರ ಮಲ್ಲಮೂಲೆ ನೇತೃತ್ವದಲ್ಲಿ ಮುಂದುವರಿಯುತ್ತಿರುವುದು ಅಭಿಮಾನದ ಸಂಗತಿ . ಅಭಿನಂದನೆಗಳು !

govindaballamoole, kasaragod ,kerala
2012-08-29
ಸರಕಾರೀ ಕಾಲೇಜು ಕಾಸರಗೋಡು ಎಂದಾಕ್ಷಣ ಈಗ ಫಕ್ಕನೆ ಮನನಕ್ಕೆ ಬರುವ ಹೆಸರು ರತ್ನಾಕರ ಮಲ್ಲಮೂಲೆ. ಮಾಧ್ಯಮಗಳಲ್ಲೂ ವಾರ್ತೆಗಳಲ್ಲೂ ಅವರು ಸದಾ ಸುದ್ದಿಮಾಡುತ್ತಿರುವ ವ್ಯಕ್ತಿಯಾಗಿರುತ್ತಾರೆ. ಪಾದರಸದಂತೆ ಹಲವು ಕ್ಷೇತ್ರಗಲ್ಲಿ ಓಡಾಡಿಕೊಂಡು ಪ್ರಾಧ್ಯಾಪಕ ಎಂಬ ಸ್ಥಾನವನ್ನು ಪೂರ್ಣ ಅರ್ಥಗಳಲ್ಲಿ ಚಾಲ್ತಿಗೆ ತರುತ್ತಾ ಇರುವ ಮಾದರೀ ಪುರುಷ. ಇದೀಗ ಅವರನ್ನು ರಾಜ್ಯ ಪ್ರಶಸ್ತಿ ಅರಸಿಕೊಂಡು ಬಂದು ಅವರ ಹೆಗಲೇರಿ ನಿಂತಿದೆ . ಶ್ಲಾಘನೀಯ ಸೂಕ್ತ ವಿಚಾರ.

ಇಂತಹ ಶ್ರೇಷ್ಠ ಕಾರ್ಯಗಳನ್ನು ಜನ ಮಾನಸಗಳಲ್ಲಿ ಪ್ರಚುರಪಡಿಸುವ ದೌತ್ಯ ಅಗತ್ಯ ಮಾಡಬೇಕಾದುದು ಮಾಧ್ಯಮಗಳ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಹೊರದೇಶದಲ್ಲಿದ್ದುಕೊಂಡು ಕನ್ನಡ ತಾಯ್ ಭುವನೇಶ್ವರಿಯ ಸೇವೆ ಸದಾ ಮಾಡುತ್ತಾಇರುವ " ಗಲ್ಫ್ ಕನ್ನಡಿಗ " ನ ಕಾರ್ಯ ಶೈಲಿ ಮನನೀಯ, ಶ್ಲಾಘನೀಯ, ಸ್ಮರಣೀಯ, ಮಾದರೀಯ.

ಅನಂತ ಅನಂತ ಅಭಿನಂದನೆಗಳು ಇದರ ಚುಕ್ಕಾಣಿ ಹಿಡಿದ ಪದ್ಯಾಣ ರಾಮಚಂದ್ರ ಅವರಿಗೆ

Srinivasa Pejathaya, Iruvailu, Mangaluru
2012-08-29
ಕನ್ನಡದ ಕಂಪು ಪಸರಿಸುವ ಗುರುಗಳಿಗೆ ವಂದನೆ. ರತ್ನಾಕರ ಮಲ್ಲಮೂಲೆಯವರ ಸಾಮಾಜಿಕ ಕಾಳಜಿ, ಯುವಕರನ್ನು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿಸುವಂತೆ ಮಾಡಿರುವ ಪ್ರೇರೇಪಣೆ, ಸಾಂಸ್ಕೃತಿಕ ತಳಹದಿಯ ಅಭಿವೃದ್ಧಿ ಎಲ್ಲವೂ ಗಮನಾರ್ಹ, ಅಭಿನಂದನೆಗೆ ಸೂಕ್ತ.

ಪ್ರಸಸ್ತಿ ಇಂದ ಅವರ ಕೆಲಸಗಳಿಗೆ ಮನ್ನಣೆ ದೊರೆತ ಜೊತೆಯಲ್ಲೇ ಅದರ ಘನತೆಯು ಹೆಚ್ಚಿದೆ. ನಿಮಗೊಂದು ವಂದನೆ ಅಭಿನಂದನೆ.

Rathnakara Mallamoole, Kasaragodu
2012-08-29
ನನಗೆ ರಾಜ್ಯ ಪ್ರಶಸ್ತಿ ಬಂದ ಸಂತೋಷ ವಾರ್ತೆ ಯನ್ನು ಬಹಳ ಸುಂದರವಾಗಿ ನಿಮ್ಮ ಅಂತರ್ಜಾಲ ಪತ್ರಿಕೆಯಲ್ಲಿ ಹಾಕಿ ಎಲ್ಲಾ ಗಲ್ಫ್ ಕನ್ನಡಿಗರಿಗೆ ತಿಳಿಯುವಂತೆ ಮಾಡಿರುವಿರಿ . ನಿಮ್ಮ ಪ್ರೀತಿ ವಿಶ್ವಾಸ ಗಳಿಗೆ ಆಭಾರಿ ಯಾಗಿರುವೆ ರತ್ನಾಕರ ಮಲ್ಲಮೂಲೆ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri