ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ವಿಶ್ವವಿಜೇತ ಕಿರಿಯರಿಗೆ ಅದ್ದೂರಿ ಸ್ವಾಗತ

ಮುಂಬೈ,ಆ.28:ಆಸ್ಟ್ರೇಲಿಯದಲ್ಲಿ ವಿಶ್ವಕಪ್ ಜಯಿಸಿದ ಭಾರತದ ಅಂಡರ್-19 ಕ್ರಿಕೆಟ್ ತಂಡ ತವರಿಗೆ ಆಗಮಿಸಿದಾಗ ಅದ್ದೂರಿಯ ಸ್ವಾಗತ ದೊರೆಯಿತು.


ಉನ್ಮುಕ್ತ್ ಚಂದ್ ನೇತೃತ್ವದ ಭಾರತದ ಅಂಡರ್ -19ತಂಡ ವಿಶ್ವಕಪ್ ಫೈನಲ್‌ನಲ್ಲಿ ರವಿವಾರ ಆಸ್ಟ್ರೇಲಿಯ ಅಂಡರ್ 19ತಂಡವನ್ನು ಬಗ್ಗು ಬಡಿದು ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.


ವಿಶ್ವ ವಿಜೇತ ಕಿರಿಯರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದರು.ವಿಶ್ವ ಕಿರೀಟ ಧರಿಸಿದ ಕಿರಿಯರನ್ನು ರಾಷ್ಟ್ರೀಯ ತಂಡದ ಮಾಜಿ ಕ್ರಿಕೆಟ್ ಆಟಗಾರರು,ಹಾಲಿ ಆಟಗಾರರು , ಬಾಲಿವುಡ್ ತಾರೆಯರು,ಪ್ರಧಾನ ಮಂತ್ರಿ ಕಾರ್ಯಾಲಯ ಅಭಿನಂದಿಸಿದೆ.


ಆಸ್ಟ್ರೇಲಿಯ ತಂಡವನ್ನು ಅದರದ್ದೆ ನೆಲದಲ್ಲಿ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿರುವುದು ಕಿರಿಯರ ಅಸಾಮಾನ್ಯ ಸಾಧನೆಯಾಗಿದೆ.ತಂಡದ ಈ ಸಾಧನೆಯನ್ನು ಗುರುತಿಸಿ ಬಿಸಿಸಿಐಯು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದೆ.

ವಿಶ್ವ ವಿಜೇತ ಕಿರಿಯರ ಮುಂದಿನ ನಡೆ:ಉನ್ಮುಕ್ತ್ ಚಂದ್ ನೇತೃತ್ವದ ಭಾರತ ತಂಡ ಅಂಡರ್-19 ತಂಡ ವಿಶ್ವಕಪ್ ಗೆದ್ದು ತವರಿಗೆ ಆಗಮಿಸಿದೆ.

ಇಂತಹ ಸಾಧನೆ ಮಾಡಿದ ಆಟಗಾರರು ಮುಂದೆ ಏನು ಮಾಡುತ್ತಾರೆ ?ಅವರ ಭವಿಷ್ಯ ಏನು?ಎನ್ನುವ ಪ್ರಶ್ನೆ ಪ್ರತಿಯೊಬ್ಬರು ಕೇಳುವುದು ಸಹಜ.ಕಿರಿಯರು ಈ ಸಾಧನೆಯ ಆಧಾರದಲ್ಲಿ ಹಿರಿಯರ ತಂಡ ಸೇರ್ಪಡೆಗೆ ಪ್ರಯತ್ನ ನಡೆಸಿದರೆ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ.


ಕಿರಿಯರು ಈ ಸಾಧನೆ ಟೀಮ್ ಇಂಡಿಯಾದ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಮಾಜಿ ಕ್ರಿಕೆಟಿಗರಾದ ವಿಜಯ್ ದಾಹಿಯ ಮತ್ತು ರಿತೇಂದರ್ ಸಿಂಗ್ ಸೋಧಿ ಅಭಿಪ್ರಾಯಪಟ್ಟಿದ್ದಾರೆ.ವೀರೇಂದ್ರ ಸಿಂಗ್ ಸೆಹ್ವಾಗ್,ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಮತ್ತು ಮುಹಮ್ಮದ್ ಕೈಫ್ ಅಂಡರ್-19ತಂಡದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಹಿರಿಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.


‘‘ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಕಿರಿಯರು ಪ್ರಸ್ತುತ ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗಿದೆ. ಕಿರಿಯರು ರಾಜ್ಯ ತಂಡ,ಇಂಡಿಯಾ ‘ಎ’ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ದೇಶಿಯ ಟೂರ್ನಮೆಂಟ್‌ಗಳಲ್ಲಿ ಕಠಿಣ ಶ್ರಮ ವಹಿಸಿ ಸಾಕಷ್ಟು ರನ್‌ಗಳನ್ನು ಕಲೆ ಹಾಕಿದರೆ ಅವರಿಗೆ ಹಿರಿಯರ ತಂಡ ಪ್ರವೇಶಕ್ಕೆ ಹಾದಿ ಸುಗಮವಾಗಬಹುದು ’’ಎಂದು 2000ರಲ್ಲಿ ವಿಶ್ವಕಪ್ ಗೆದ್ದಿರುವ ಭಾರತ ಅಂಡರ್ -19 ತಂಡದ ನಾಯಕ ಮುಹಮ್ಮದ್ ಕೈಫ್ ಹೇಳಿದ್ದಾರೆ.

ಆ. 26 ನಮ್ಮ ಪಾಲಿನ ಮಹೋನ್ನತ ದಿನ: ಚಂದ್‌

ಕಿರಿಯರ ಕ್ರಿಕೆಟ್‌ನಲ್ಲಿ ನಮ್ಮಿಂದ ಹೊಸತೊಂದು ಅಧ್ಯಾಯ ದಾಖಲಾದ ದಿನ... ಎಂದು ಸಂಭ್ರಮಿಸಿದ್ದಾರೆ ಉನ್ಮುಕ್ತ್ ಭರತ್‌ ಚಂದ್

 ಮುಂಬಯಿ:ಆಗಸ್ಟ್‌ 26 ನಮ್ಮೆಲ್ಲರ ಪಾಲಿನ ಮಹೋನ್ನತ ದಿನ. ಭಾರತೀಯ ಕ್ರಿಕೆಟ್‌ ಇತಿಹಾಸದ ಸ್ಮರಣೀಯ ದಿನ.ಕಿರಿಯರ ಕ್ರಿಕೆಟ್‌ನಲ್ಲಿ ನಮ್ಮಿಂದ ಹೊಸತೊಂದು ಅಧ್ಯಾಯ ದಾಖಲಾದ ದಿನ... ಎಂದು ಸಂಭ್ರಮಿಸಿದ್ದಾರೆ ಅಂಡರ್‌-19 ತಂಡದ ನಾಯಕ ಉನ್ಮುಕ್ತ್  ಭರತ್‌ ಚಂದ್‌. ಭಾರತಕ್ಕೆ 3ನೇ ಬಾರಿ ಕಿರಿಯರ ವಿಶ್ವಕಪ್‌ ಕಿರೀಟ ತೊಡಿಸಿದ ತಂಡ ಮಂಗಳವಾರ ಸಂಜೆ ಮುಂಬಯಿಗೆ ಆಗಮಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಚಂದ್‌ ಮಾತಾಡುತ್ತಿದ್ದರು.

'ವಿಶ್ವಕಪ್‌ ಜಯಿಸಿದ ಸಾಧನೆಯಿಂದ ನಮಗೆಲ್ಲ ವಿಪರೀತ ಖುಷಿಯಾಗಿದೆ. ಇದನ್ನು ಬಣ್ಣಿಸಲಾಗುತ್ತಿಲ್ಲ.ಆ.26ನನ್ನ ಪಾಲಿನ 'ಬಿಗ್‌ ಡೇ'.ತಂಡಕ್ಕೆ ಅತ್ಯಗತ್ಯವಿದ್ದಾಗ ಶತಕವೊಂದನ್ನು ಹೊಡೆದದ್ದು ನನ್ನ ಅದೃಷ್ಟ.ನಾನೀಗ ಭಾರತ 'ಎ'ತಂಡಕ್ಕೆ ಆಯ್ಕೆಯಾಗಿದ್ದೇನೆ.ಮುಂದಿನ ಗಮನವೆಲ್ಲ ನ್ಯೂಜಿಲಂಡ್‌ ಪ್ರವಾಸದತ್ತ ಹರಿಸಲಿದ್ದೇನೆ...' ಎಂದು ಚಂದ್‌ ಹೇಳಿದರು.

'ನಾನು ಭವಿಷ್ಯದ ಬಗ್ಗೆ ವಿಸ್ತ್ರತ ಆಲೋಚನೆಯನ್ನೇನೂ ಹೊಂದಿಲ್ಲ. ನನ್ನ ಅಂಡರ್‌-19ಬಾಳ್ವೆ ಸುಸಂಪನ್ನಗೊಂಡಿದೆ. ಈಗ 'ಎ' ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ಮುಂದಿನ ನ್ಯೂಜಿಲಂಡ್‌ ಪ್ರವಾಸ ನನಗೆ ಮುಖ್ಯ...' ಎಂದರು ಚಂದ್‌.

ಅಂಡರ್‌-19 ತಂಡದ ಕೋಚ್‌, ಭಾರತದ ಹಾಗೂ ತಮಿಳುನಾಡಿನ ಮಾಜಿ ಕ್ರಿಕೆಟಿಗ ಭರತ್‌ ಅರುಣ್‌ ತಮ್ಮ ಹುಡುಗರ ಸಾಧನೆಯಿಂದ ಉಬ್ಬಿ ಹೋಗಿದ್ದರು.'ಇವರ ಬಗ್ಗೆ ಹೆಮ್ಮೆಯಾಗುತ್ತಿದೆ.ಸೀನಿಯರ್‌ ತಂಡದ ಪ್ರವೇಶಕ್ಕೆ ಅಂಡರ್‌-19ಅತ್ಯುತ್ತಮ ತಳಹದಿ.ಇವರೆಲ್ಲರೂ ಪ್ರತಿಭಾನ್ವಿತರು.ಯಾವುದೇ ಸವಾಲಿಗೂ ಸಿದ್ಧರೆಂಬುದನ್ನು ತೋರಿಸಿ ಕೊಟ್ಟಿದ್ದಾರೆ.ಆದರೆ ಆಟಗಾರರಾಗಿ ಇನ್ನೂ ಪಕ್ವಗೊಳ್ಳಬೇಕಿದೆ. ಏಣಿಯನ್ನೇರುವ ದೊಡ್ಡ ಸವಾಲು ಇನ್ನು ಎದುರಾಗಲಿದೆ...' ಎಂದು ಬಿ. ಅರುಣ್‌ ಅಭಿಪ್ರಾಯಪಟ್ಟರು.

'ತಂಡದ ಕ್ಷೇತ್ರರಕ್ಷಣೆ ಉತ್ತಮ ಮಟ್ಟದಲ್ಲಿತ್ತು. ಬೌಲಿಂಗ್‌ ಕೂಡ ಗಮನಾರ್ಹವಾಗಿತ್ತು.ಕೆಲವರು 140ರಿಂದ 150ಕಿ.ಮೀ.ವೇಗ ಹೊಂದಿದ್ದರು. ಒತ್ತಡವನ್ನು ನಿಭಾಯಿಸುವುದು ಮುಖ್ಯವಾಗಿತ್ತು ಹಾಗೂ ಇದರಲ್ಲಿ ಹುಡುಗರು ಯಶಸ್ಸು ಕಂಡರು.ಗೆಲುವಿನಲ್ಲಿ ಎಲ್ಲರ ಕಾಣಿಕೆಯೂ ಇದೆ.ಇವರಲ್ಲಿ ಕೆಲವರು ಶೀಘ್ರದಲ್ಲೇ ಸೀನಿಯರ್‌ ತಂಡದಲ್ಲಿ ಆಡುವರೆಂಬ ವಿಶ್ವಾಸ ನನ್ನದು...' ಎಂಬುದಾಗಿ ಅರುಣ್‌ ಹೇಳಿದರು.

ಉನ್ಮುಕ್ತ್  ಉಕ್ತಿಗಳು...

'ನಮ್ಮ ಮೇಲೆ ನಾವು ಇರಿಸಿಕೊಂಡ ನಂಬಿಕೆಯೇ ವಿಶ್ವಕಪ್‌ ಗೆಲುವಿನ ರಹಸ್ಯ' ಎಂಬುದಾಗಿ ಉನ್ಮುಕ್ತ್  ಚಂದ್‌ ಹೇಳಿದರು.

'ಆರಂಭದಲ್ಲಿ ನಾವು ತುಸು ಎಡವಿದ್ದು ನಿಜ. ಆದರೆ ಅನಂತರ ಹಿಡಿತ ಸಾಧಿಸಿ ಮುಂದುವರಿದೆವು. ಸರಿಯಾದ ಹೊತ್ತಿಗೆ ಔನ್ನತ್ಯ ಕಂಡುಕೊಂಡೆವು' ಎಂದರು ಚಂದ್‌.

'ನಮಗೆ ವರವಾಗಿ ಪರಿಣಮಿಸಿದ್ದೆಂದರೆ ಭಾರತದಲ್ಲಿ ಏನಾಗುತ್ತಿತ್ತು,ಯಾವ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು ಎಂದು ತಿಳಿಯದಿದ್ದುದು.ಹೀಗಾಗಿ ವಿಶೇಷ ಒತ್ತಡವಿರಲಿಲ್ಲ.ನೇರವಾಗಿ ಗುರಿಯತ್ತ ಮುನ್ನಡೆದೆವು.ಎಲ್ಲರ ಆತ್ಮವಿಶ್ವಾಸವೂ ಉನ್ನತ ಮಟ್ಟದಲ್ಲಿತ್ತು.ಟ್ರೋಫಿಯನ್ನು ಖಂಡಿತ ಎತ್ತಿಹಿಡಿಯಲಿದ್ದೇವೆ ಎಂಬ ನಂಬಿಕೆ ಎಲ್ಲರದಾಗಿತ್ತು.ಇದು ನಿಜವಾಯಿತು...'ಎನ್ನುವಾಗ ಅವರ ಕಂಗಳಲ್ಲಿ ಅದೇನೋ ಮಿಂಚು, ಅದೇನೋ ಹೊಳಪು!

'ನಾವು ವೆಸ್ಟ್‌ ಇಂಡೀಸ್‌ ವಿರುದ್ಧದ ಆರಂಭದ ಪಂದ್ಯದಲ್ಲೇ ಸೋತೆವು.ಅಲ್ಲಿಂದ ಮುಂದೆ ತಂಡದ ಧನಾತ್ಮಕ ಅಂಶಗಳೇನಿವೆಯೋ ಅದರತ್ತ ಹೆಚ್ಚಿನ ಗಮನ ಹರಿಸಿದೆವು. ಮುಖ್ಯವಾಗಿ ಬೌಲಿಂಗ್‌ ಹಾಗೂ ಫೀಲ್ಡಿಂಗ್‌. ಮುಂದಿನ ಪಂದ್ಯಗಳಲ್ಲಿ ಈ ಅಂಶಗಳು ನೆರವಿಗೆ ಬಂದವು...'

ತೆಂಡುಲ್ಕರ್‌ ಟಿಪ್ಸ್

 ತಂಡ ಆಸ್ಟ್ರೇಲಿಯಕ್ಕೆ ತೆರಳುವ ಮುನ್ನ ಮಾಸ್ಟರ್‌ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡುಲ್ಕರ್‌ ನೀಡಿದ ಟಿಪ್ಸ್ನಿಂದ ಬಹಳ ಲಾಭವಾಯಿತು ಎಂದೂ ಚಂದ್‌ ಹೇಳಿದರು.'ನಾವಂದು ಸುಮಾರು ಅರ್ಧ ಗಂಟೆ ಕಾಲ ತೆಂಡುಲ್ಕರ್‌ ಜತೆ ಇದ್ದೆವು. ಆಸ್ಟ್ರೇಲಿಯದಲ್ಲಿ ಏನನ್ನೆಲ್ಲ ಎದುರಿಸಬೇಕು ಹಾಗೂ ಎದುರಾಳಿಯನ್ನು ಹೇಗೆ ತಡೆದು ನಿಲ್ಲಿಸಬೇಕೆಂಬ ಬಗ್ಗೆ ಅವರು ಹೇಳಿದರು.ಇದರಿಂದ ಬಹಳ ನೆರವಾಯಿತು...' ಎಂದರು.

ಕಿರಿಯ ಕ್ರಿಕೆಟಿಗರಿಗೆ ಭವ್ಯ ಸ್ವಾಗತ

ಬಲಾಡ್ಯ ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಮಣಿಸಿ ಮೂರನೇ ಬಾರಿ ಅಂಡರ್‌-19ವಿಶ್ವಕಪ್‌ ಎತ್ತಿದ ಭಾರತೀಯ ಕ್ರಿಕೆಟ್‌ ತಂಡ ಮಂಗಳವಾರ ಮುಂಬಯಿಗೆ ಬಂದಿಳಿದಾಗ ಅದ್ಧೂರಿ ಹಾಗೂ ಭವ್ಯ ಸ್ವಾಗತ ನೀಡಲಾಯಿತು.

ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಸಾವಿರಾರು ಅಭಿಮಾನಿಗಳು, ಕ್ರಿಕೆಟ್‌ ಪರಿವಾರದ ಸದಸ್ಯರೆಲ್ಲ ಜಮಾಯಿಸಿದ್ದರು.ವಿವಿಧ ವಾದ್ಯಮೇಳ,ನಾಸಿಕ್‌ ದೋಲ್‌,ಭಾಂಗ್ರಾ ನೃತ್ಯ-ಸಂಗೀತದಿಂದಾಗಿ ಅಲ್ಲೊಂದು ಹಬ್ಬದ ವಾತಾವರಣವೇ ಮೇಳೈಸಿತ್ತು.

 ಪ್ರಶಸ್ತಿ ಕಾಳಗದ ವೇಳೆ ಕಪ್ತಾನನ ಆಟವಾಡಿ ಅಮೋಘ ಶತಕವೊಂದನ್ನು ಬಾರಿಸಿದ ಉನ್ಮುಕ್ತ್ ಚಂದ್‌ ವಿಶ್ವಕಪ್‌ ಪ್ರದರ್ಶಿಸುತ್ತ ಮೊದಲು ವಿಮಾನ ನಿಲ್ದಾಣದಿಂದ ಹೊರಬಂದಾಗ ನೆರೆದವರ ಜಯಘೋಷ ಮುಗಿಲು ಮುಟ್ಟಿತ್ತು. ಬಳಿಕ ಒಬ್ಬೊಬ್ಬರಾಗಿ ನಾಯಕನನ್ನು ಸುತ್ತುವರಿದರು.ತಾವು ಗೆದ್ದ ಟ್ರೋಫಿಯನ್ನು ಅಭಿಮಾನಿಗಳಿಗೆ ತೋರಿಸಿ ಸಂಭ್ರಮಿಸಿದರು.

ಬೌಲರ್‌ ಹರ್ಮೀತ್‌ ಸಿಂಗ್‌ ಪರಿವಾರದ ಸದಸ್ಯರೆಲ್ಲ ದೂರದ ಪಂಜಾಬ್‌ನಿಂದ ಆಗಮಿಸಿ ಸ್ವಾಗತದ ಮುಂಚೂಣಿಯಲ್ಲಿದ್ದುದು ವಿಶೇಷವಾಗಿತ್ತು.

ಸಂಜೆಯೇ ಬಿಸಿಸಿಐ ವಿಶ್ವವಿಜೇತರನ್ನು ಸಮ್ಮಾನಿಸಿ ಗೌರವ ಸಲ್ಲಿಸಿತು.ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ತಂಡದ ಪ್ರತಿಯೋರ್ವ ಸದಸ್ಯರಿಗೂ 20ಲಕ್ಷ ರೂ., ಅಧಿಕಾರಿಗಳಿಗೆ ಹಾಗೂ ಸಹಾಯಕ ಸಿಬಂದಿಗಳಿಗೆ ತಲಾ 15 ಲಕ್ಷ ರೂ. ಬಹುಮಾನ ಘೋಷಿಸಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-08-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ
»ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...
»ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್
»ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ
» ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...
»ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ
»ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್
»Iranian athlete refuses to 'shake hands' with Duchess of Cambridge during medal ceremony over 'cultural reasons'
»ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ
»ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ
» `ಸತ್ಯಾಗ್ರಹ'ದಲ್ಲಿ ಕರೀನಾ?...
»ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ
» ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ
»ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್
»ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
»‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’
» ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
»ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ
»ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ
»ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ
»ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ
»ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್
»ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್
»ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri