ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ

ಉಡುಪಿ, ಸೆ.6: ಕಳೆದ ಎಂಟು ವರ್ಷಗಳಿಂದ ಇನ್ನಂಜೆ ಗ್ರಾಮದ ಶಂಕರಪುರದಲ್ಲಿ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ‘ವಿಶ್ವಾಸದ ಮನೆ’ಯನ್ನು ನಡೆಸಲು ಸರಕಾರದಿಂದ ಕಾನೂನು ಬದ್ಧವಾಗಿ ಪರವಾನಿಗೆ ನೀಡುವಂತೆ ಕೇಂದ್ರದ ಅಧ್ಯಕ್ಷ ಪಾಸ್ಟರ್ ಸುನಿಲ್ ಜಾನ್ ಡಿಸೋಜ ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸುನಿಲ್ ಜಾನ್ ಡಿಸೋಜ, ಇಂದು ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಕಳೆದ ಎಂಟು ವರ್ಷಗಳಿಂದ ರಸ್ತೆ ಹಾಗೂ ಬೀದಿ ಬದಿಗಳಲ್ಲಿ ಅನಾಥ ರಂತೆ, ನಿರ್ಗತಿಕರಂತೆ ತಿರುಗುವ ಹಾಗೂ ಮಾನಸಿಕ ರೋಗಿಗಳಾಗಿ ಅಲೆಯುವ ಪುರುಷ ಹಾಗೂ ಮಹಿಳೆಯ ರನ್ನು ವಿಶ್ವಾಸದ ಮನೆಗೆ ಕರೆತಂದು ಚಿಕಿತ್ಸೆ ನೀಡಿ ಅವರನ್ನು ಸಂಪೂರ್ಣ ಗುಣಮುಖರಾಗಿಸಿ ಅವರವರ ಊರುಗಳನ್ನು ಹುಡುಕಿ ಮನೆಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.

ಸಂಸ್ಥೆಯ ವತಿಯಿಂದ ಆಶ್ರಿತರಿಗೆ ಊಟ, ವಸತಿ, ವೈದ್ಯಕೀಯ ಹಾಗೂ ಇನ್ನಿತರ ಅಗತ್ಯತೆಗಳನ್ನು ಪೂರೈಸು ವುದರೊಂದಿಗೆ ಅವರಿಗೆ ವೃತ್ತಿ ತರಬೇತಿಗಳನ್ನೂ ನೀಡ ಲಾಗುತ್ತಿದೆ. ಸಂಸ್ಥೆಯಲ್ಲಿ ಇಲ್ಲಿಯವರೆಗೆ 200ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದು, ಇವರಲ್ಲಿ ನೂರಕ್ಕೂ ಅಧಿಕ ಮಂದಿ ಸಂಪೂರ್ಣ ಗುಣಮುಖರಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ ಎಂದರು.

ಇವರು ಕರ್ನಾಟಕದ ನಾನಾ ಊರುಗಳಿಂದ ಮಾತ್ರ ವಲ್ಲದೇ ದೂರದ ತಮಿಳುನಾಡು, ಆಂಧ್ರ, ಬಿಹಾರ, ಮಹಾರಾಷ್ಟ್ರಗಳಿಂದಲೂ ಅಲೆಯುತ್ತಾ ಬಂದವರಿದ್ದರು. ಅವರು ಗುಣಮುಖರಾಗಿ ತಮ್ಮ ಹಳೆಯ ನೆನಪುಗಳನ್ನು ಮರಳಿ ಗಳಿಸಿದ ನಂತರ ಅವರ ಕುಟುಂಬದ ವಿವರ ಸಂಗ್ರ ಹಿಸಿ ಅಲ್ಲಿಗೆ ತಲುಪಿಸಲಾಗುತ್ತಿದೆ ಎಂದರು.

ಸಂಸ್ಥೆಯ ಈ ಸಾಮಾಜಿಕ ಸೇವೆ, ಕಳಕಳಿಗೆ ಜನಪ್ರತಿನಿಧಿ ಗಳಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಗೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಸರಕಾರ ಕಾನೂನು ಬದ್ಧ ಅನುಮತಿ ನೀಡ ಬೇಕಾಗಿದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.

ಸರಕಾರಿ ವೈದ್ಯರ ವರ್ತನೆಗೆ ಖಂಡನೆ: ಕಳೆದ ವರ್ಷ ನೀಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ವಿಶ್ವಾಸದ ಮನೆ ಪುನರ್ವಸತಿ ಕೇಂದ್ರವನ್ನು ಪರಿಶೀಲಿಸಿ ವರದಿ ಸಲ್ಲಿ ಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದು, ಅದ ರಂತೆ ಕಳೆದ ಡಿ.15ರಂದು ಭೇಟಿ ನೀಡಿದ ಅಧಿಕಾರಿಗಳು ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸಲಹೆ ನೀಡಿದ್ದರು.

ಇದೀಗ ನ್ಯೂನತೆಗಳನ್ನು ಸರಿಪಡಿಸಿ ದಾಖಲೆಗಳನ್ನು ನೀಡಿದಾಗ ಮರು ಪರಿಶೀಲನೆಗೆ ಜಿಲ್ಲಾಸ್ಪತ್ರೆಯ ಸರಕಾರಿ ಅಧಿಕಾರಿಗಳಾದ ಡಾ.ವಾಸುದೇವ್ ಹಾಗೂ ಡಾ.ಮೋಹನ್ ನಾಯ್ಕೆ ನಿನ್ನೆ ಸಂಸ್ಥೆಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮೆಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಅವರು ಒರಟಾಗಿ ವರ್ತಿಸಿದ್ದಾರೆ. ಎಲ್ಲರನ್ನೂ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದಾರೆ. ಅವರ ಮಾತು ಹಾಗೂ ಧೋರಣೆ ತಮಗೆ ಅತೀವ ನೋವುಂಟು ಮಾಡಿದೆ ಎಂದರು.

ಇಂದು ಜಿಲ್ಲಾಧಿಕಾರಿಯ ಭೇಟಿಯ ಸಂದರ್ಭದಲ್ಲಿ ವೈದ್ಯರ ವರ್ತನೆಯ ವಿಷಯವನ್ನು ತಾನವರ ಗಮನಕ್ಕೆ ತಂದಿದ್ದು, ಈ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ತಾವು ಮಾಡು ತ್ತಿರುವ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿ, ಮಾನ್ಯತೆ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದರು.

ಇನ್ನ್ನೂ ಐವರು ಗುಣಮುಖ, ಊರಿನತ್ತ ಪಯಣ...
ಕಳೆದ ಕೆಲವು ವರ್ಷಗಳಿಂದ ವಿಶ್ವಾಸದ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತಿದ್ದ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಇದೀಗ ಸಂಪೂರ್ಣ ಗುಣಮುಖರಾಗಿದ್ದು, ತಮ್ಮೂರುಗಳಿಗೆ ತೆರಳಲು ಸಿದ್ಧ ರಾಗಿದ್ದಾರೆ ಎಂದು ಸುನಿಲ್ ಡಿಸೋಜ ತಿಳಿಸಿದರು.

ಇವರಲ್ಲಿ ಕುಂದಾಪುರ ತಾಲೂಕಿ ನವರಾದ ಭುಜಂಗಯ್ಯ 2 ವರ್ಷ ಗಳ ಹಿಂದೆ ಕಲ್ಯಾಣಪುರದ ಬಳಿ ಸಿಕ್ಕಿದ್ದು, ನಮ್ಮಲ್ಲಿಗೆ ಬಂದ ಆರು ತಿಂಗಳು ಮಾತನ್ನೇ ಆಡುತ್ತಿರಲಿಲ್ಲ. ಬಳಿಕ ಒಂದು ದಿನ ಇದ್ದಕ್ಕಿದ್ದಂತೆ ಮಾತನಾಡಲು ಆರಂಭಿಸಿದ್ದು, ಇದೀಗ ಸಂಪೂರ್ಣ ಗುಣ ಮುಖ ರಾಗಿದ್ದಾರೆ. ಅವರನ್ನು ಒಂದೆರಡು ದಿನದೊಳಗೆ ಮನೆಗೆ ತಲುಪಿ ಸಲಾಗುವುದು ಎಂದರು.

ಈಶ್ವರ್ ಎಂಬವರು ಮಾನಸಿಕ ಅಸ್ವಸ್ಥತೆಯಿಂದ ಮಂಗಳೂರಿನಲ್ಲಿ ಬೀದಿ ಬೀದಿ ಅಲೆಯುತ್ತಿದ್ದವರನ್ನು 2009ರ ಡಿಸೆಂಬರ್‌ನಲ್ಲಿ ನಮ್ಮಲ್ಲಿಗೆ ಕರೆತರಲಾಗಿತ್ತು. ಅವರೀಗ ಗುಣ ಮುಖರಾಗಿ ಪುಣೆಯ ಬಳಿ ಇರುವ ತಮ್ಮೂರಿಗೆ ತೆರಳಲು ಸಿದ್ಧರಾಗಿದ್ದಾರೆ ಎಂದರು.

ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ದಿಕ್ಕಿಲ್ಲದೇ, ಆಹಾರವಿಲ್ಲದೇ ಬಿದ್ದಿದ್ದ ಕಲ್ಯಾಣಿ ಎಂಬವರನ್ನು 2009ರ ಡಿಸೆಂಬರ್‌ನಲ್ಲಿ ಕರೆತರಲಾಗಿತ್ತು. ಸತತ ಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿ ತನ್ನ ನೆನಪುಗಳನ್ನು ಮರಳಿ ಪಡೆದ ಇವರೀಗ ಗೋವಾ ಸಾವಂತವಾಡಿಯ ತನ್ನೂರಿಗೆ ತೆರಳಲು ಕಾತರ ರಾಗಿದ್ದಾರೆ ಎಂದು ಸುನಿಲ್ ಡಿಸೋಜ ತಿಳಿಸಿದರು.

ಮೂಲತಃ ದಾಂಡೇಲಿಯವರಾದ ಸೋನಮ್ಮ 2 ವರ್ಷಗಳಿಂದ ವಿಶ್ವಾಸದ ಮನೆಯಲ್ಲಿದ್ದು, ಗುಣಮುಖರಾದ ಇವರನ್ನು ಇನ್ನೊಂದು ವಾರದೊಳಗೆ ಮನೆಗೆ ತಲುಪಿಸಲಾಗುವುದು ಎಂದರು. ಕೊನೆಯದಾಗಿ ಸೀಮ ಎಂಬವರು ಕಳೆದ 4 ವರ್ಷಗಳಿಂದ ವಿಶ್ವಾಸದ ಮನೆಯಲ್ಲಿದ್ದು ಚಿಕಿತ್ಸೆಪಡೆದು ಗುಣಮುಖ ರಾಗಿದ್ದಾರೆ. ನಮ್ಮಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುವ ಇವರನ್ನು ನಾಗ್ಪುರಕ್ಕೆ ಶೀಘ್ರವೇ ತಲುಪಿಸಲಾಗುವುದು ಎಂದರು.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-07

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri