ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್ |
ಪ್ರಕಟಿಸಿದ ದಿನಾಂಕ : 2012-09-06
ಪುತ್ತೂರು,
ಸೆ.5: ಶಿಕ್ಷಣವೆಂದರೆ ವಿದ್ಯಾರ್ಥಿಗಳಿಗೆ ಪಾಠವನ್ನು ತುರುಕುವ ವ್ಯವಸ್ಥೆಯಲ್ಲ.
ವಿದ್ಯಾರ್ಥಿಗಳ ಸಾಮರ್ಥ್ಯ ಕ್ಕನುಗುಣವಾಗಿ ಕಲಿಸುವುದೇ ನಿಜವಾದ ಶಿಕ್ಷಣ ಎಂದು ಪುತ್ತೂರು
ವಿವೇಕಾನಂದ ಕಾಲೇಜ್ನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಹೇಳಿದರು. ದ.ಕ.ಜಿ.ಪಂ.
ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನಾಚರಣಾ ಸಮಿತಿ, ಶಿಕ್ಷಕರ ಕಲ್ಯಾಣ ನಿಧಿ
ಬೆಂಗಳೂರು ಮತ್ತು ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಚೇರಿ ಪುತ್ತೂರು ಇದರ ಸಹಯೋಗದಲ್ಲಿ
ಬುಧವಾರ ಪುತ್ತೂರಿನ ತೆಂಕಿಲ ವಿವೇಕಾನಂದ ವಿದ್ಯಾಲಯದ ಯಾದವಶ್ರೀ ಸಭಾಭವನದಲ್ಲಿ ನಡೆದ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ
ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೆಲವೊಂದು
ಹೆತ್ತವರು ಶಿಕ್ಷಣದ ಹೆಸರಿನಲ್ಲಿ ತಮ್ಮ ಮಕ್ಕಳ ಪ್ರತಿಭೆಯನ್ನು ಬೆಳೆಸುವ ಭರದಲ್ಲಿ ಅವರ
ಭಾವನೆಗಳನ್ನು ಚಿವುಟುವ ಕೆಲಸ ಮಾಡುತ್ತಾರೆ. ಇಂತಹ ವಾತಾವರಣ ದಲ್ಲಿ ಬೆಳೆದ ಮಕ್ಕಳು
ತಮ್ಮ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸು ವುದರಲ್ಲಿ ವಿಶೇಷವಿಲ್ಲ ಎಂದು ಅವರು
ಮಾರ್ಮಿಕವಾಗಿ ನುಡಿದರು.
ಶಾಸಕಿ
ಮಲ್ಲಿಕಾ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷ ಶಂಭು ಭಟ್
ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಪುಲಸ್ಯ ರೈ,
ಕಾರ್ಯನಿವಾಹಣಾಧಿಕಾರಿ ಜಯಾನಂದ ಪೂಜಾರಿ, ತಹಶೀಲ್ದಾರ್ ಕುಳ್ಳೇಗೌಡ, ಕ್ಷೇತ್ರ ಸಂಪನ್ಮೂಲ
ಕೇಂದ್ರದ ಸಮನ್ವಯಾಧಿಕಾರಿ ನಂದೀಶ್, ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ
ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನ ಪ್ರಶಸ್ತಿ ಪುರಸ್ಕೃತ
ಶಿಕ್ಷಕರು, ಶಿಕ್ಷಕರ ಕಲ್ಯಾಣ ನಿಧಿ ಪ್ರಶಸ್ತಿ ವಿಜೇತರು ಹಾಗೂ ಈ ಬಾರಿಯ
ಎಸೆಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸ
ಲಾಯಿತು. ಮತ್ತು ಶಿಕ್ಷಕರ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ
ವೇಳೆ ಶಿಕ್ಷಕರಿಂದ ನೇತ್ರದಾನ ಶಿಬಿರ ನಡೆಯಿತು. ಡಾ. ದಿನೇಶ್ ಕಾಮತ್ ನೇತ್ರದಾನದ
ಮಹತ್ವದ ಬಗ್ಗೆ ತಿಳಿಸಿದರು. ಪುತ್ತೂರು ಕ್ಷೇತ್ರ ಶಿಕ್ಷಣಾ ಧಿಕಾರಿ ಕೆ. ಶೇಷಶಯನ
ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ವಂದಿಸಿದರು.
ಶಿಕ್ಷಕ ನಾರಾಯಣ ಭಟ್ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06
|
|
|