ಸೋಮವಾರ, 17-02-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ

* ಹಂಝ ಮಲಾರ್

ಮಂಗಳೂರು, ಸೆ.5: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಕರೆಗೆ ‘ಓ’ಗೊಟ್ಟು ತನ್ನ 13ರ ಹರೆಯದಲ್ಲೇ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಕರುಣಾಕರ ಉಚ್ಚಿಲ್, 90ರ ಇಳಿ ವಯಸ್ಸಿನಲ್ಲಿ ತನ್ನ ತುಂಡು ಭೂಮಿ ಗಾಗಿ ಹೋರಾಟಕ್ಕಿಳಿದ ಕರುಣಾಜನಕ ಕಥೆ ಇಲ್ಲಿದೆ. ಇದನ್ನು ಸ್ವಾತಂತ್ರ ಚಳವಳಿಗಾರನ ವ್ಯಥೆ ಎಂದರೂ ತಪ್ಪಾಗಲಾರದು.

ಹೌದು. ರಾಷ್ಟ್ರೀಯ ಹೆದ್ದಾರಿ 75ರ ತೊಕ್ಕೊಟ್ಟು-ತಲಪಾಡಿ ರಸ್ತೆಯ ಸೋಮೇಶ್ವರ ಸಮೀಪದ ಉಚ್ಚಿಲ ಎಂಬಲ್ಲಿ ನೆಲೆಸಿರುವ ಕರುಣಾಕರ ಉಚ್ಚಿಲ್ 40 ವರ್ಷದ ಹಿಂದೆ ಸ್ವತಹ ಕಟ್ಟಿಸಿದ ಮನೆಯನ್ನು ಕಳಕೊಳ್ಳುವ ಸ್ಥಿತಿಯಲ್ಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇವರಿಗೆ ಪದೇ ಪದೇ ನೋಟೀಸ್ ಬರುತ್ತಿದ್ದು, ಈಗಾಗಲೆ ಕೆಲವು ಸಂತ್ರಸ್ತರು ಸಂಘಟಿತರಾಗಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಅದರಲ್ಲಿ ಉಚ್ಚಿಲ್ ಕೂಡ ಸೇರಿಕೊಂಡಿದ್ದಾರೆ. ಆದರೆ, ಮನೆಯನ್ನು ಉಳಿಸಿ ಕೊಳ್ಳುವ ಭರವಸೆಯನ್ನು ಮಾತ್ರ ಉಚ್ಚಿಲ್ ಕಳೆದುಕೊಂಡಿದ್ದಾರೆ.

1923ರ ಆಗಸ್ಟ್ 23ರಂದು ಸೋಮೇಶ್ವರ ಉಚ್ಚಿಲದಲ್ಲಿ ಬೋವಿ ಜನಾಂಗದ ಕೊರಗಪ್ಪ -ಅಮ್ಮಣ್ಣಿ ದಂಪತಿಯ ಮಗನಾಗಿ ಹುಟ್ಟಿ ಬೆಳೆದ ಕರುಣಾಕರ ಉಚ್ಚಿಲ್, 1937ರಲ್ಲಿ ನೆಹರೂ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಕಾಂಗ್ರೆಸ್ ಸೇವಾದಳಕ್ಕೆ ಸೇರ್ಪಡೆಗೊಂಡರು. ರಾಜಕೀಯದೊಂದಿಗೆ ಸ್ವಾತಂತ್ರ ಸಂಗ್ರಾಮಕ್ಕೂ ಧುಮುಕಿದ ಉಚ್ಚಿಲ್ ಅದೇ ವರ್ಷ ಮುಂಬೈಗೆ ತೆರಳಿ ಹೊಟ್ಟೆಪಾಡಿಗಾಗಿ ಬ್ರಿಟಿಷ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಸ್ವಾತಂತ್ರ ಚಳವಳಿಯೊಂದಿಗೆ ರಾತ್ರಿ ಶಾಲೆಗೆ ಸೇರಿ ಶಿಕ್ಷಣ ವನ್ನೂ ಪೂರೈಸಿಕೊಂಡರು.

ಸದಾ ಖಾದಿ ಬಟ್ಟೆ ಮತ್ತು ಗಾಂಧಿ ಟೋಪಿ ಧರಿಸುತ್ತಿದ್ದ ಉಚ್ಚಿಲ್, ಬ್ರಿಟಿಷರ ಕೆಂಗಣ್ಣಿಗೂ ಗುರಿಯಾಗಿದ್ದರು. ಕೆಲಸ ಬೇಕೋ, ಟೋಪಿ ಬೇಕೋ ಎಂಬ ಬ್ರಿಟಿಷರ ಪ್ರಶ್ನೆಗೆ ‘ಟೋಪಿ ಬೇಕು’ ಎನ್ನುತ್ತಾ ಕೆಲಸವನ್ನು ತಿರಸ್ಕರಿಸಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದರು. ಏತನ್ಮಧ್ಯೆ ಕೆಲವು ಕಾಳಸಂತೆ ಕೋರರು ಗಾಂಧಿ ಟೋಪಿಯನ್ನು ದುರ್ಬಳಕೆ ಮಾಡುತ್ತಿರುವುದನ್ನು ಕಂಡು ಟೋಪಿ ಧರಿಸುವುದನ್ನೇ ಬಿಟ್ಟರು.

ಸ್ವಾತಂತ್ರ ಲಭಿಸಿದ ಬಳಿಕ 10 ವರ್ಷಗಳ ಕಾಲ ಮುಂಬೈಯಲ್ಲೇ ನೆಲೆಸಿದ್ದ ಕರುಣಾಕರ ಉಚ್ಚಿಲ್, 1957ರಲ್ಲಿ ತನ್ನ ಊರಿಗೆ ಮರಳಿದರು. ಪಿಂಚಣಿ ಹೊರತುಪಡಿಸಿ ಸ್ವಾತಂತ್ರ ಯೋಧ ರಿಗೆ ಲಭಿಸುವ ಯಾವುದೇ ಸವಲತ್ತುಗಳನ್ನು ಪಡೆ ಯುವಲ್ಲಿ ವಿಫಲರಾದ ಕರುಣಾಕರ ಉಚ್ಚಿಲ್, ಊರಲ್ಲೇ ಸಣ್ಣ ಪುಟ್ಟ ವ್ಯಾಪಾರ ಮಾಡಿ ಬದುಕು ಸಾಗಿಸಿದರು. ಹಾಗೇ ಉಚ್ಚಿಲದಲ್ಲಿ 25 ಸೆಂಟ್ಸ್ ಜಾಗ ಖರೀದಿಸಿ ಮನೆಯೊಂದನ್ನು ಕಟ್ಟಿಸಿದರು. ಇದೀಗ ಆ ಮನೆಯ ಸ್ವಾಧೀನಕ್ಕೆ ರಾ.ಹೆ. ಪ್ರಾಧಿ ಕಾರ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.

ಮನೆ, ಜಾಗಕ್ಕೆ ಪರಿಹಾರ ನೀಡುವೆವು. ಆದಷ್ಟು ಬೇಗ ಮನೆ ಬಿಟ್ಟುಕೊಡಿ ಎಂದು ಪರೋಕ್ಷವಾಗಿ ಸೂಚಿ ಸಿದೆ. ಕರುಣಾಕರ ಉಚ್ಚಿಲರ ಸುತ್ತಮುತ್ತಲಿನ ಕೆಲವು ಸಂತ್ರಸ್ತರು ಪರಿಹಾರ ಧನ ಪಡೆದಿದ್ದರೆ, ಇನ್ನು ಕೆಲವರು ಜಾಗ ಬಿಟ್ಟು ಕೊಡಲು ಮುಂದಾಗಿದ್ದಾರೆ. ಆದರೆ, ಪರಿಹಾರ ಧನದ ಆಸೆಗೆ ಬೀಳದ ಉಚ್ಚಿಲ್, ತಾನು ಖರೀದಿಸಿದ ಜಾಗ ಮತ್ತು ಕಟ್ಟಿಸಿದ ಮನೆಯನ್ನು ಉಳಿಸುವುದಕ್ಕೋಸ್ಕರ ‘ಹೋರಾಟ’ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಅಂದು ದೇಶಕ್ಕಾಗಿ ಹೋರಾಟ ಮಾಡಿದೆ. ಇಂದು ತನ್ನ ಮನೆ, ಜಾಗ ಉಳಿಸಲು ಹೋರಾಟ ಮಾಡಬೇಕಾಗಿದೆ ಎಂದು ಉಚ್ಚಿಲ್ ವಿಷಾದ ದಿಂದ ನುಡಿಯುತ್ತಾರೆ.

ಕರುಣಾಕರ ಉಚ್ಚಿಲ್‌ರಿಗೆ ಎರಡು ಹೆಣ್ಣು ಮತ್ತು ಒಬ್ಬ ಗಂಡು ಮಗ. ಮೂವರೂ ತಮ್ಮ ನೆಲೆ ಕಂಡುಕೊಂಡಿದ್ದಾರೆ. ತಾನು ಕಟ್ಟಿಸಿದ ಮನೆಯಲ್ಲಿ ಪತ್ನಿ ಸರೋಜಿನಿ ಜತೆ ಸಂತೃಪ್ತ ಜೀವನ ಸಾಗಿಸುತ್ತಿರುವಾಗಲೇ ‘ಹೆದ್ದಾರಿ ವಿಸ್ತರಣೆ’ ಎಂಬ ಭೂತ ಉಚ್ಚಿಲ್‌ರ ನೆಮ್ಮದಿ ಕೆಡಿಸಿದೆ.

75ರ ಹರೆಯದ ಸರೋಜಿನಿ ನಿವೃತ್ತ ಮುಖ್ಯ ಶಿಕ್ಷಕಿ. ಪತಿಯ ಪ್ರತಿಯೊಂದು ಕಾರ್ಯಕ್ಕೂ ಬೆನ್ನೆಲುಬಾಗಿ ನಿಂತವರು. ‘ಸ್ವಾತಂತ್ರ ಹೋರಾಟ ಗಾರ’ ಎಂಬ ಹೆಗ್ಗಳಿಕೆ ಬಿಟ್ಟರೆ ಇವರು ಬೇರೇನೂ ಮಾಡಿಲ್ಲ. ಸರಕಾರದ ಯಾವುದೇ ಸವಲತ್ತುಗಳನ್ನು ಪಡೆದಿಲ್ಲ. ಇಲ್ಲಿಗೆ ಬಂದು ನೆಲೆಸಿದ ಬಳಿಕ ರೈಲ್ವೆ ಗೇಟ್, ರಸ್ತೆ, ವಿದ್ಯುತ್ ಸಂಪರ್ಕಕ್ಕಾಗಿ ಸಮಾಜ ಸೇವೆ ಮಾಡಿದರು. ಇದೀಗ ಮನೆ, ಜಾಗ ಕಳೆದುಕೊಳ್ಳುವ ಸ್ಥಿತಿಗೆ ಬಿದ್ದಿದ್ದೇವೆ. ಸರಕಾರ ಕೊಡುವ ಪಿಂಚಣಿ ಅವರ ಆರೋಗ್ಯ ಕಾಪಾಡಲು ಬೇಕಾದ ಔಷಧಿಗೆ ಖರ್ಚಾಗುತ್ತದೆ. ಈವಾಗ ನಮ್ಮ ನೆರವಿಗೆ ಯಾರೂ ಇಲ್ಲ ಎಂದು ಸರೋಜಿನಿ ಅಳಲು ತೋಡಿಕೊಳ್ಳುತ್ತಾರೆ.

ಜಿಲ್ಲಾಧಿಕಾರಿ ಮನಸ್ಸು ಮಾಡುತ್ತಿಲ್ಲ:  
ಸ್ವಾತಂತ್ರ ಹೋರಾಟಗಾರನ ಹಿನ್ನೆಲೆಯಲ್ಲಿ ಮಂಜನಾಡಿ ಗ್ರಾಮದ ನಾಟೆಕಲ್ ಬಳಿ 10 ಸೆಂಟ್ಸ್ ಜಾಗಕ್ಕಾಗಿ ಸಲ್ಲಿಸಿದ ಅರ್ಜಿ ಇನ್ನೂ ದ.ಕ. ಜಿಲ್ಲಾಧಿಕಾರಿಯ ಮೇಜಿನ ಮೇಲಿದೆ. ಆಸ್ಕರ್ ಫೆರ್ನಾಂಡೀಸ್, ವೀರಪ್ಪ ಮೊಯ್ಲಿ ಬಳಿ ಕೂಡ ಮಾತುಕತೆ ನಡೆಸಿದೆ. ಮೊನ್ನೆ ಸ್ಥಳೀಯ ಶಾಸಕರ ಜತೆಗೂಡಿ ಜಿಲ್ಲಾಧಿಕಾರಿ ಕಚೇರಿಗೆ ಹೋದರೂ ಪ್ರಯೋಜನವಾಗಲಿಲ್ಲ. ಅವರು ಮನಸ್ಸು ಮಾಡಿದರೆ ಆ ಫೈಲ್‌ಗೆ ಬೇಗನೆ ಚಾಲನೆ ಸಿಗಬಹುದು. ಆದರೆ ಈಗ ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿರುವಾಗ ಜಮೀನು ದಕ್ಕಿಸಿಕೊ ಳ್ಳುವುದು ಅಷ್ಟು ಸುಲಭದ ಮಾತಲ್ಲ ಎಂದು ಕರುಣಾಕರ ಉಚ್ಚಿಲ್ ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಉಚ್ಚಿಲ್ ಇಂದು ತನ್ನ ಭೂಮಿ ಮತ್ತು ಮನೆಯನ್ನು ಉಳಿಸಲು ಸರಕಾರಿ ಕಚೇರಿ, ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗಿ ರುವುದು ವಿಪರ್ಯಾಸವೇ ಸರಿ.

ಡಿಸಿಯೊಂದಿಗೆ ಮಾತುಕತೆ: ಖಾದರ್
ಹಿರಿಯ ಸ್ವಾತಂತ್ರ ಹೋರಾಟಗಾರ ಕರುಣಾಕರ ಉಚ್ಚಿಲ್ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದೀಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿದೆ. ಈ ಬಗ್ಗೆ ತಾನು ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿ ಅವರಿಗೆ ನಿವೇಶನ ದೊರಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06

Tell a Friend

ಪ್ರತಿಸ್ಪಂದನ
SHAMEEM, MANGALORE
2012-09-06
ಈ ಇಳಿವಯಸಿನಲ್ಲಿ ಬದುಕಿನ ಮುಸಸಂಜ್ಜ್ಯೆಯ ಕಠಿಣ ದಿನಗಳಲ್ಲಿ ನಿಜವಾಗಿಯೂ ಅವರು ಸ್ವಂತ ತನ್ನ ಮನೆ ಉಳಿಸಲು ರಾಷ್ಟೀಯ ಹೆದ್ದಾರಿ ಎಂಬ ರಾಕ್ಷಶರೊಂದಿಗೆ ಹೋರಾಟ ಮಾಡುತಿರುದು ರಾಷ್ಟೀಯ ದುರಂತ.
KANAKAMBARI, Shimoga
2012-09-06
ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಕರುಣಾಕರ್ ಉಚ್ಚಿಲ್ ರವರಿಗೆ ಸಹಾಯ ಮಾಡಲು ಮನಸ್ಸಿದ್ದರೆ ಬ ಜ ಪ ಸರಕಾರಕ್ಕೆ ದೊಡ್ಡ ವಿಷಯವೇ ಅಲ್ಲ. ಆದರೆ ಈ ಇಳಿ ವಯಸ್ಸಿನಲ್ಲಿ ಮಾನ್ಯ ಕರುಣಾಕರ ರವರು ಪಬ್ಬ್ ದಾಳಿಗೆ, ಹೆಮ್ಮಕ್ಕಳ ಮಾನಹರಣಕ್ಕೆ,ಗೋ ಸಾಗಟಕಾರರಿಗೆ ಹೊಡೆಯಲು,ಚರ್ಚ್ ಗೆ ಕಲ್ಲು ಹೊಡೆಯಲು,ಕೋಮುಗಲಾಟೆ ಮಾಡಲು ಬರಲಾರರು.ಅವರಿಂದ ದಳ,ಸೇನೆ,ಸಂಘಗಳಿಗೆ ಖಂಡಿತ ಲಾಭವಿಲ್ಲ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri