ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ |
ಪ್ರಕಟಿಸಿದ ದಿನಾಂಕ : 2012-09-06
ಉಡುಪಿ,
ಸೆ. 5: ಶಿರೂರಿನ ಗ್ರೀನ್ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ
ಬುಧವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಿರೂರು
ವೆಲ್ಫೇರ್ ಟ್ರಸ್ಟ್ನ ಹಿರಿಯ ಉಪಾಧ್ಯಕ್ಷ ಮುಹಮ್ಮದ್ ಮೀರಾನ್ ಸಾಹಿಬ್,
ರಾಧಾಕೃಷ್ಣನ್ರ ಜೀವನವನ್ನು ಉಲ್ಲೇಖಿಸಿ ಆಧುನಿಕ ಜಗತ್ತಿನಲ್ಲಿ ಶಿಕ್ಷಕರ ಪಾತ್ರದ
ಮಹತ್ವವನ್ನು ವಿವರಿಸಿದರು ಹಾಗೂ ಶಿಕ್ಷಕರು ಮಾದರಿಯಾಗಬೇಕು ಹಾಗೂ ಮುಂದಿನ ತಲೆಮಾರಿಗೆ
ಭದ್ರ ಬುನಾದಿಯನ್ನು ಹಾಕಬೇಕು ಎಂದರು. 
ಉತ್ತಮ
ಶಿಕ್ಷಕರನ್ನು ವಿದ್ಯಾರ್ಥಿಗಳು ಯಾವಾಗಲೂ ಪ್ರೀತಿಸುತ್ತಾರೆ. ಮಾನವ ನಿಗೆ ಹಾರಲು
ಗೊತ್ತು, ಮೀನಿನ ಹಾಗೆ ಈಜಲು ಗೊತ್ತು. ಆದರೆ, ಮಾನವ ನಾಗಿರಲು ಗೊತ್ತಿಲ್ಲ ಎಂದು ಹೇಳಿದ
ಅವರು, ಮಕ್ಕಳಿಗೆ ಮಾನವೀಯ ಉದಾತ್ತ ಗುಣಗಳನ್ನು ಶಿಕ್ಷಕರು ಕಳುಹಿಸಿ ಕೊಡಬೇಕು ಎಂದರು. 
ಸಮಾರಂಭದ
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಜಾನ್ ಮ್ಯಾಥ್ಯೂ, ಉತ್ತಮ ಶಿಕ್ಷಣವನ್ನು
ನೀಡುವ ಶ್ರೇಷ್ಠ ಕಾರ್ಯಕ್ಕೆ ತಮ್ಮನ್ನು ಮರುಸಮರ್ಪಿಸಿ ಕೊಳ್ಳುವಂತೆ ಶಿಕ್ಷಕರಿಗೆ ಕರೆ
ನೀಡಿದರು.  ಶಿಕ್ಷಕರ ಬಗ್ಗೆ ಕಾಳಜಿ ತೆಗೆದು ಕೊಳ್ಳುತ್ತಿರುವ
‘ಗ್ರೀನ್ವ್ಯಾಲಿ’ಯ ಆಡಳಿತ ಮಂಡಳಿಯನ್ನು ಶ್ಲಾಘಿಸಿದ ಅವರು, ಶಿಕ್ಷಕರ ಸೇವೆಯ
ಸದುಪಯೋಗವನ್ನು ಪಡೆದುಕೊಳ್ಳು ವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
‘ಗ್ರೀನ್ವ್ಯಾಲಿ’ಗೆ ಸಲ್ಲಿಸಿರುವ ಸೇವೆಗಾಗಿ ಶಿಕ್ಷಕರು ಮತ್ತು ಶಿಕ್ಷಕೇತರ
ಸಿಬ್ಬಂದಿಗೆ ಈ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 ದ್ವಿತೀಯ ಪಿಯುಸಿಯ
ಪ್ರತಿಷ್ಠಾ ಪಿ. ರಾವ್ ಸ್ವಾಗತಿಸಿದರು ಹಾಗೂ ವಿದ್ಯಾರ್ಥಿಗಳ ಪರವಾಗಿ ಶಿಕ್ಷಕರ ದಿನದ
ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಶಿಕ್ಷಕರ ದಿನದ ಹಾಡನ್ನು ಶಾಲಾ ತಂಡ ಸಾದರಪಡಿಸಿತು.
ರಜನಿ ಎಸ್. ಕೊಪ್ಪಡ್ ವಂದಿಸಿ ದರು. ಬಳಿಕ ವಿದ್ಯಾರ್ಥಿಗಳು ವಿವಿಧ ಮನರಂಜನಾ
ಕಾರ್ಯಕ್ರಮ ನಡೆಸಿಕೊಟ್ಟರು.
ಇದಕ್ಕೂ ಮೊದಲು ವಿದ್ಯಾರ್ಥಿ ನಾಯಕರು, ಶಾಲಾ ಸಿಬ್ಬಂದಿ ಮುಖ್ಯ ಅತಿಥಿಯನ್ನು ವೇದಿಕೆಗೆ ಕರೆತಂದರು ಹಾಗೂ ಹೂವು ಮತ್ತು ಶುಭಾಶಯ ಪತ್ರಗಳನ್ನು ನೀಡಿದರು.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06
|
|
|