ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು

ಬೆಂಗಳೂರು: ಸಾದರಹಳ್ಳಿ ಗ್ರಾನೈಟ್ ಶಿಲೆಯಿಂದ ಆವೃತವಾದ ಕೊಳ, ಆ ಕೊಳದ ಮಧ್ಯೆ ಆಲಂಕಾರಿಕ ದೀಪಗಳ ಹಿನ್ನೆಲೆಯೊಂದಿಗೆ ಚಿಮ್ಮುವ ನೀರಿನ ಕಾರಂಜಿಗಳು, ಕಾರಂಜಿಗೆ ಹಿಮ್ಮೇಳದಂತೆ ಜುಳು ಜುಳು ಹರಿಯುವ ಝರಿ, ದೊಡ್ಡ ಹೂಕುಂಟದಲ್ಲಿ ವರ್ಷ ಪೂರ್ತಿ ಅರಳಿ ನಿಲ್ಲುವ ಆಲಂಕಾರಿಕ ಹೂವಿನ ಸಸ್ಯಗಳು, ಇವೆಲ್ಲವನ್ನು ನಡೆದಾಡುತ್ತಲೇ ನೋಡಿ ಆನಂದಿಸಲು ವಿಶಾಲವಾದ ಪಾದಚಾರಿ ಪಥ-

ನೋಡುಗರಿಗೆ ಆಹ್ಲಾದಕರ ಅನುಭವ ನೀಡುವ ಮೇಲ್ಕಂಡ ಎಲ್ಲವೂ ‘ನಗರ ಚೌಕ‘ದ (ಅರ್ಬನ್ ಸ್ಕ್ವೇರ್) ಹೆಸರಿನಲ್ಲಿ ‘ನಮ್ಮ ಮೆಟ್ರೊ‘ದ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದ ಎಡ ಬದಿಯಲ್ಲಿ ಮೈದಳೆದು ನಿಂತಿವೆ.

ಎಂ.ಜಿ.ರಸ್ತೆಯಲ್ಲಿ ಬ್ರಿಗೇಡ್ ರಸ್ತೆಯ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ಮೆಟ್ರೊದ ಎತ್ತರಿಸಿದ ಮಾರ್ಗದ ಕೆಳಗೆ ನಿರ್ಮಾಣಗೊಳ್ಳುತ್ತಿರುವ ‘ಸುಂದರ ಬುಲೇವಾರ್ಡ್‘ನ ಭಾಗವಾಗಿ ‘ನಗರ ಚೌಕ‘ ರೂಪುಗೊಂಡಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಅವರು ಬುಧವಾರ ರಾತ್ರಿ ಬಣ್ಣ ಬಣ್ಣದ ಬಲೂನುಗಳನ್ನು ಹಾರಿ ಬಿಡುವ ಮೂಲಕ ‘ನಗರ ಚೌಕ‘ವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಇಲ್ಲಿ ಮೆಟ್ರೊ ಕಾಮಗಾರಿ ಆರಂಭವಾಗುವ ಮೊದಲು ಉತ್ತಮವಾದ ಬುಲೇವಾರ್ಡ್ ಇತ್ತು. ಅದನ್ನು ಆಧುನಿಕ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಪುನರ್ ನಿರ್ಮಿಸುವುದಾಗಿ ಭರವಸೆ ನೀಡಿದ್ದೆವು. ಅದರಂತೆ ನಿಲ್ದಾಣದ ಪೂರ್ವಭಾಗದಲ್ಲಿ ನಿರ್ಮಿಸಿದ ನಗರ ಚೌಕವನ್ನು ಬೆಂಗಳೂರಿನ ನಾಗರಿಕರಿಗೆ ಕೊಡುಗೆಯಾಗಿ ಕೊಟ್ಟಿದ್ದೇವೆ. ಇಲ್ಲಿ ಲೇಸರ್ ಪ್ರದರ್ಶನಕ್ಕೂ ಅವಕಾಶ ಇದೆ‘ ಎಂದರು.

‘ಮೊದಲಿಗೆ ಇಲ್ಲಿ ನಾಗರಿಕರು ಕುಳಿತುಕೊಳ್ಳಲು ಕಲ್ಲು ಬೆಂಚುಗಳನ್ನು ಹಾಕಲು ಯೋಜನೆ ಇತ್ತು. ಆದರೆ ಪಾದಚಾರಿಗಳ ಸರಾಗ ಓಡಾಟಕ್ಕೆ ತೊಂದರೆ ಆಗಬಹುದೆಂಬ ಕಾರಣಕ್ಕೆ ಕಲ್ಲು ಬೆಂಚು ಹಾಕದೇ ಇರಲು ನಿರ್ಧರಿಸಿದೆವು. ಮೀಡಿಯನ್ ಅಂಚಿನಲ್ಲಿ ಕುಳಿತು ನೀರಿನ ಕಾರಂಜಿಯ ಸೌಂದರ್ಯವನ್ನು ಸವಿಯಬಹುದು‘ ಎಂದು ಅವರು ತಿಳಿಸಿದರು.

‘ನಿಲ್ದಾಣದ ಬಲ ಬದಿಯಲ್ಲಿ ಅನಿಲ್ ಕುಂಬ್ಳೆ ವೃತ್ತದವರೆಗೆ ಎತ್ತರಿಸಿದ ಪಾದಚಾರಿ ಮಾರ್ಗ, ಅದರಡಿಯಲ್ಲಿ ಪುಟಾಣಿಗಳ ಆಟದ ಅಂಗಳ, ಪ್ರದರ್ಶನ ಗ್ಯಾಲರಿ, ಬಯಲು ರಂಗ ಮಂದಿರ ಮೊದಲಾದವುಗಳ ನಿರ್ಮಾಣ ಕಾರ್ಯ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ‘ ಎಂದು ಅವರು ಹೇಳಿದರು.

‘ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ಜಕ್ಕರಾಯನಕೆರೆ ಮೈದಾನದ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಸುರಂಗ ಕೊರೆಯುವ ಕಾಮಗಾರಿ ಈ ತಿಂಗಳ ಕೊನೆ ವಾರದಲ್ಲಿ ಆರಂಭವಾಗಲಿದೆ. ಕೆ.ಆರ್.ರಸ್ತೆ ಕಡೆಯಿಂದ ಚಿಕ್ಕಪೇಟೆ ಕಡೆಗೆ ಸುರಂಗ ಕೊರೆಯುವ ಕಾರ್ಯ ಅಕ್ಟೋಬರ್ ಅಂತ್ಯಕ್ಕೆ ಪ್ರಾರಂಭವಾಗಲಿದೆ‘ ಎಂದು ಅವರು ವಿವರಿಸಿದರು.

ಕಾಮಗಾರಿಗೆ ಅನುಮತಿ: ಮಲ್ಲೇಶ್ವರ ಬಳಿ ರೈಲ್ವೆ ಹಳಿಗಳ ಮೇಲೆ 66 ಮೀಟರ್ ಉದ್ದದ ಮೆಟ್ರೊ ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು (ಸಿ‌ಆರ್‌ಎಸ್) ಅನುಮತಿ ನೀಡಿದ್ದಾರೆ. ಈ ಕಾಮಗಾರಿ ಪೂರ್ಣಗೊಳ್ಳಲು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ತಿಳಿಸಿದರು.

ಅಪರೂಪದ ಹೂ ಗಿಡ

‘ನಗರ ಚೌಕ‘ವನ್ನು ತೋಟಗಾರಿಕೆ ಇಲಾಖೆಯವರು ಆಲಂಕಾರಿಕ ಹೂ ಗಿಡಗಳಿಂದ ಸಿಂಗರಿಸಿದ್ದಾರೆ. ಮಾಣಿಕ್ ಷಾ ಪೆರೇಡ್ ಮೈದಾನದ ಕಾಂಪೌಂಡ್, ಕೊಳದ ನಡುವೆ ಫೈಕಸ್ ಗಿಡಗಳನ್ನು ಹಾಕಲಾಗಿದೆ. ಕೊಳಕ್ಕೆ ನೇಪಥ್ಯದಲ್ಲಿ ಬೆಳೆಯುವ ಈ ಗಿಡಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ನಿರ್ವಹಿಸಬಹುದು.

ಇನ್ನು ಕೊಳದ ಮಧ್ಯೆ ದೊಡ್ಡ ಹೂವಿನ ಆಕಾರದ ಕುಂಡಗಳಲ್ಲಿ ಬಿಳಿ, ಕೆಂಪು ಬಣ್ಣದ ಹೂ ಬಿಡುವ ಮಾಂಡೊವಿಲ್ಲೈ ಗಿಡಗಳನ್ನು ಹಾಕಲಾಗಿದೆ. ಇವುಗಳ ಜತೆ ಕೊಳದ ಒಂದು ಬದಿಯಲ್ಲಿ ಇರಿಸಿರುವ ದೇವಗಣಿಗಲೆ (ಪ್ಲುಮೇರಿಯಾ) ಮತ್ತು ಕಾಡಿಯಾ ಸೆಬಾಸ್ಟಿನಿ ಗಿಡಗಳೆಲ್ಲವೂ ಅಪರೂಪದವು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ತಿಳಿಸಿದರು.

‘ಮೆಟ್ರೊದ ಎತ್ತರಿಸಿದ ಮಾರ್ಗದ ಕೆಳಗೆ ಬ್ರಿಗೇಡ್ ಜಂಕ್ಷನ್‌ನಿಂದ ಟ್ರಿನಿಟಿ ವೃತ್ತದವರೆಗಿನ ರಸ್ತೆ ವಿಭಜಕವನ್ನು ಆಲಂಕಾರಿಕ ಸಸ್ಯಗಳಿಂದ ಅಂದಗೊಳಿಸಲಾಗಿದೆ. ಟ್ರಿನಿಟಿ ವೃತ್ತದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗಿನ ರಸ್ತೆ ವಿಭಜಕವನ್ನೂ ಹಸಿರುಮಯಗೊಳಿಸಲಾಗುವುದು‘ ಎಂದು ಅವರು ಹೇಳಿದರು.

ತಿಂಗಳಾಂತ್ಯಕ್ಕೆ ಕಾಫಿ ಶಾಪ್!

ಎಂ.ಜಿ ರಸ್ತೆ ನಿಲ್ದಾಣದ ಹೊರ ಆವರಣದ ಮಧ್ಯ ಭಾಗದಲ್ಲಿ ಕಾಫಿ ಶಾಪ್‌ಗಾಗಿ ಮಳಿಗೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಈ ತಿಂಗಳ ಮೂರನೇ ವಾರದಲ್ಲಿ ಕಾಫಿ ಶಾಪ್ ಆರಂಭವಾಗುವ ನಿರೀಕ್ಷೆ ಇದೆ.ಕಾಫಿ ಶಾಪ್‌ನ ತಿಂಗಳ ಬಾಡಿಗೆ 2.73 ಲಕ್ಷ ರೂಪಾಯಿ. ಉಳಿದ 5  ನಿಲ್ದಾಣಗಳಲ್ಲೂ ಕಾಫಿ ಶಾಪ್ ತೆರೆಯಲು ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು.

ಜತೆಗೆ ಎಲ್ಲ ಆರು ನಿಲ್ದಾಣಗಳಲ್ಲಿ ಔಷಧದ ಅಂಗಡಿ, ಲಾಂಡ್ರಿ, ಸಲೂನ್, ಟೀ ಕೆಫೆ, ತ್ವರಿತ ಸೇವೆ ಒದಗಿಸುವ ರೆಸ್ಟೋರೆಂಟ್, ಪುಸ್ತಕದಂಗಡಿ ಮೊದಲಾದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಬಾಡಿಗೆಗೆ ನೀಡುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಧಾನ ವ್ಯವಸ್ಥಾಪಕ (ಹಣಕಾಸು) ವಸಂತರಾವ್ ತಿಳಿಸಿದರು.

ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ವಿಶಾಲವಾದ ಜಾಗ ಇರುವುದರಿಂದ ಅಲ್ಲಿ ದೊಡ್ಡ ರೆಸ್ಟೋರೆಂಟ್ ಪ್ರಾರಂಭಿಸಲು ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri