ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಉಡುಪಿ: ಕೆ.ಎಸ್‌.ಈಶ್ವರಪ್ಪರಿಗೆ ಪಂ.ನೌಕರರ ಸಂಘದ ಮನವಿ

 ಉಡುಪಿ: ರಾಜ್ಯದ ಸುಮಾರು 5,000ಕ್ಕೂ ಅಧಿಕ ಗ್ರಾ.ಪಂ.ಗಳಲ್ಲಿ ಹಲವು ವರ್ಷಗಳಿಂದ ಅತ್ಯಲ್ಪ ವೇತನಕ್ಕೆ ದುಡಿಯುತ್ತಿರುವ ಸುಮಾರು 30,000 ನೌಕರರು (ಗುಮಾಸ್ತರು/ಬಿಲ್‌ ವಸೂಲಿಗಾರರು/ಕಂಪ್ಯೂಟರ್‌ ಅಪರೇಟರ್/ನಳ್ಳಿ ನೀರು ನಿಯಂತ್ರಕರು/ಜಾಡಮಾಲಿಗಳು ಇತ್ಯಾದಿ) ಹಾಗೂ 5,000ಕ್ಕೂ ಅಧಿಕ ಪಿಡಿ‌ಒ/ಕಾರ್ಯದರ್ಶಿಗಳ ಪ್ರಮುಖ ಬೇಡಿಕೆ ಈಡೇರಿಕೆ ಬಗ್ಗೆ ಉಡುಪಿ ಜಿಲ್ಲಾ ಸಂಘದ ವತಿಯಿಂದ ಉಪ ಮುಖ್ಯಮಂತ್ರಿ ಕೆ. ಎಸ್‌. ಈಶ್ವರಪ್ಪನರವರಿಗೆ ಮನವಿ ನೀಡಿ ಆಗ್ರಹಿಸಯಿಸಲಾಯಿತು.

ಶಾಸಕ ಹಾಗೂ ರಾಜ್ಯ ಸಂಘದ ಗೌರವಾಧ್ಯಕ್ಷ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ರಾಜ್ಯಮಟ್ಟದ ಗ್ರಾಮೀಣಾಭಿವೃದ್ಧಿ ಇಲಾಖಾ ನೌಕರರ ಸಮಾವೇಶದಲ್ಲಿ ಅಂದಿನ ಪಂಚಾಯತ್‌ರಾಜ್‌ ಸಚಿವ, ಹಾಲಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಗಣ್ಯರು, ನೌಕರರ ಮುಂದೆ ಮಾಡಿದ್ದ ರಾಜಾಂಗಣ ಘೋಷಣೆಯ ಕೆಲವು ಪ್ರಮುಖ ಬೇಡಿಕೆಗಳನ್ನು ಆಂಶಿಕವಾಗಿ ಈಡೇರಿಸಿರುವುದಕ್ಕಾಗಿ ಸರಕಾರವನ್ನು ಅಭಿನಂದಿಸಿ, ಉಳಿದ ಪ್ರಮುಖ ಬೇಡಿಕೆಗಳ ಬಗ್ಗೆ ತತ್‌ಕ್ಷಣ ಸಕಾರಾತ್ಮಕ ನಿಲುವಿನೊಂದಿಗೆ ಆದೇಶ ಹೊರಡಿಸುವಂತೆ ಒತ್ತಾಯಿಸಲಾಯಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಲಕ್ಷ್ಮೀನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಬಿಜೆಪಿ ಯುವ ಮೋರ್ಚಾಧ್ಯಕ್ಷ ವಿಲಾಸ್‌ ನಾಯಕ್‌ ಉಪಸ್ಥಿತರಿದ್ದರು.

        ಬೇಡಿಕೆಗಳು:

ಪಂಚಾಯತ್‌ ನೌಕರರಿಗೆ ಹೊಸದಾಗಿ ಸೃಜಿಸಿದ 2ನೇ ದರ್ಜೆ ಲೆಕ್ಕಿಗ/ಗುಮಾಸ್ತ ಹುದ್ದೆಯ ಕೋಟಾವನ್ನು ಶೇ.30ರಿಂದ 50ಕ್ಕೆ ಹೆಚ್ಚಿಸಬೇಕು. ಗ್ರೇಡ್‌-1 ಪಂಚಾಯತ್‌ಗಳಿಗೆ ಮಾತ್ರ ಮಂಜೂರು ಮಾಡಿರುವ ಲೆಕ್ಕಿಗ/ಗುಮಾಸ್ತ ಹುದ್ದೆಯನ್ನು 2ನೇ ದರ್ಜೆಯ 3,500 ಗ್ರಾ.ಪಂ.ಗಳಿಗೂ ಸೃಜಿಸಿ, 10 ವರ್ಷಕ್ಕೆ ಅಧಿಕ ಸೇವೆ ಮಾಡಿದ ಎಸ್‌.ಎಸ್‌.ಎಲ್‌.ಸಿ. ಪಾಸಾದ ನೌಕರರಿಗೆ ಆದ್ಯತೆ ನೀಡಬೇಕು. ಸದ್ರಿ ಲೆಕ್ಕಿಗ/ಗುಮಾಸ್ತ ಹುದ್ದೆಗೆ ಭಡ್ತಿ ಪಡೆಯಲು ಈಗ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ ಪಿಯುಸಿಯ ಬದಲಾಗಿ, ಪಿಡಿ‌ಒ ಮತ್ತು ಕಾರ್ಯದರ್ಶಿಗಳಿಗೆ ಭಡ್ತಿಗೆ ಅನ್ವಯಿಸಿರುವಂತೆ 10 ವರ್ಷ ಸೇವೆಯ ಜತೆಗೆ ಎಸ್‌.ಎಸ್‌.ಎಲ್‌.ಸಿ.ಗೆ ಮಿತಿಗೊಳಿಸಿ ನಿಯಮವನ್ನು ಸಡಿಲಿಸಬೇಕು. ಮಂಡಲ ಪಂಚಾಯತ್‌ನ ’ಸಿ’ ದರ್ಜೆ ನೌಕರರಿಗೆ ಈ ಹಿಂದೆ ಹುದ್ದೆಗೆ ಸೇರುವಾಗ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಹತೆ ಕಡ್ಡಾಯವಲ್ಲ ಎಂಬ ಆದೇಶದ ನಿಯಮ ಸಡಿಲಿಕೆಯನ್ನು ಮಾಡಲಾಗಿದೆ. ಇದನ್ನು ಮಂಡಲ ಪಂಚಾಯತ್‌ ಅವಧಿಯ ಎಸ್‌.ಎಸ್‌.ಎಲ್‌.ಸಿ. ಆದ ಎಟೆಂಡರ್‌/ಪಂಪ್‌ ಅಪರೇಟರ್‌ ಹಾಗೂ 1994ರ ಬಳಿಕ ಸೇವೆಗೆ ಸೇರಿದ ’ಸಿ’ ದರ್ಜೆ ಗುಮಾಸ್ತ/ಬಿಲ್‌ ವಸೂಲಿಗಾರರಿಗೂ ವಿಸ್ತರಿಸಬೇಕು. ಪಂಚಾಯತ್‌ರಾಜ್‌ ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ-ಸೇವಾ ನಿಯಮಾವಳಿಯನ್ನು ರಚಿಸಬೇಕು. ಎಲ್ಲ ನೌಕರರನ್ನು ಸರಕಾರಿ ನೌಕರರನ್ನಾಗಿ ಘೋಷಿಸಬೇಕು ಹಾಗೂ ನಗರಸಭಾ ನೌಕರರಂತೆ ಶೇ.40 ಆದಾಯ ಮಿತಿಯೊಳಗೆ ವೇತನ ನಿಗದಿ-ಪರಿಷ್ಕರಣೆ ಅಧಿಕಾರವನ್ನು ಗ್ರಾ.ಪಂ.ಗೆ ನೀಡಬೇಕು. ಪಂಚಾಯತ್‌ನ ಕಂಪ್ಯೂಟರ್‌ ಅಪರೇಟರ್‌ಗಳ ಸೇವೆಯನ್ನು ಖಾಯಂಗೊಳಿಸಿ ಸೂಕ್ತ ವೇತನ ಪರಿಷ್ಕರಣೆ ಹಾಗೂ ಭಡ್ತಿಗೆ ಅವಕಾಶ ಕಲ್ಪಿಸಬೇಕು. ಹೊಸ ಹುದ್ದೆ ಪಿಡಿ‌ಒಗಳಿಗೆ ಭಡ್ತಿ ಮತ್ತು ಕಾರ್ಯದರ್ಶಿಗಳಿಗೆ ಸಮರ್ಪಕ ಕೆಲಸ ನಿರ್ವಹಣೆ-ವಿಂಗಡಣೆ (ಜಾಬ್‌ ಚಾರ್ಟ್‌) ಮಾಡಿ ನಿಯಮಾನುಸಾರ ಉತ್ತಮ ಸೇವೆ ನೀಡಲು ಸೂಕ್ತ ಭದ್ರತೆ ಒದಗಿಸಿ ಮನೋಸ್ಥೈರ್ಯ ವೃದ್ಧಿಗೆ ಕ್ರಮ ಕೈಗೊಳ್ಳಬೇಕು.

ನೌಕರರ ಬೇಡಿಕೆ-ಸಮಸ್ಯೆಗಳ ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸಿದ ಉಪಮುಖ್ಯಮಂತ್ರಿಗಳು ಶೀಘ್ರದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳ ಸಭೆ ಕರೆದು ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿರುತ್ತಾರೆ. ನೌಕರರ ಸಂಘದ ಪರವಾಗಿ ಶೇಖರ್‌ ನಾಯ್ಕ, ರಾಮದಾಸ್‌, ನಂದೀಶ್‌, ಮೆಲ್ವಿನ್‌ ಬಾಂಜಿ, ಉಮೇಶ್‌, ಕೇಶವ, ವಿಶ್ವನಾಥ, ರಮಾನಂದ, ರೇವತಿ, ಹರೀಶ್‌, ರಮೇಶ್‌, ಉದಯ ಮುಂತಾದವರು ನಿಯೋಗದಲ್ಲಿದ್ದರೆಂದು ಜಿಲ್ಲಾ ಸಂಘದ ಕಾರ್ಯದರ್ಶಿ ಹರಿಕೃಷ್ಣ ಶಿವತ್ತಾಯರು ತಿಳಿಸಿರುತ್ತಾರೆ.

        ಗ್ರಾ.ಪಂ.ನೌಕರರ ಬೇಡಿಕೆ ಆಂಶಿಕ ಈಡೇರಿಕೆ: ಭಟ್‌

 ಉಡುಪಿ: ಎರಡು ವರ್ಷದ ಹಿಂದೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಅಭೂತಪೂರ್ವವಾಗಿ ಜರಗಿದ ರಾಜ್ಯಮಟ್ಟದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖಾ ನೌಕರರು-ಪಿಡಿ‌ಒ-ಕಾರ್ಯದರ್ಶಿ-ಪಂಚಾಯತ್‌ ನೌಕರರ ಸಮಾವೇಶದಲ್ಲಿ ಅಂದಿನ ಪಂಚಾಯತ್‌ರಾಜ್‌ ಸಚಿವರೂ ಹಾಲಿ ಮುಖ್ಯಮಂತ್ರಿಗಳಾಗಿರುವ ಜಗದೀಶ್‌ ಶೆಟ್ಟರ್‌ ಅವರು ಡಿ. ವಿ. ಸದಾನಂದ ಗೌಡ ಹಾಗೂ ದಿ| ಡಾ| ವಿ. ಎಸ್‌. ಆಚಾರ್ಯ ಹಾಗೂ ಇತರರ ಸಮಕ್ಷಮ ಮಾಡಿದ್ದ ರಾಜಾಂಗಣ ಘೋಷಣೆಯಂತೆ ಪಂಚಾಯತ್‌ ನೌಕರರ ಕೆಲವು ಪ್ರಮುಖ ಬೇಡಿಕೆಗಳು ಆಂಶಿಕವಾಗಿ ಈಡೇರಿಸಿರುವುದಕ್ಕಾಗಿ ರಾಜ್ಯ ಸಂಘದ ಗೌರವಾಧ್ಯಕ್ಷ ಹಾಗೂ ಶಾಸಕ ಕೆ. ರಘುಪತಿ ಭಟ್‌ ಹರ್ಷವ್ಯಕ್ತಪಡಿಸಿದ್ದಾರೆ.

ಪಂಚಾಯತ್‌ ಕಾರ್ಯದರ್ಶಿಗಳು ಪಿಡಿ‌ಒ ಹುದ್ದೆಗೆ ಭಡ್ತಿ ಪಡೆಯಲು ನಿಗದಿ ಪಡಿಸಿದ್ದ ಪದವಿ ಅರ್ಹತೆಯನ್ನು ಸಡಿಲಿಸಿ ಎಸ್‌.ಎಸ್‌.ಎಲ್‌.ಸಿ.ಗೆ ಮಿತಿಗೊಳಿಸಲಾಗಿದೆ. ಇದರಿಂದಾಗಿ ಅನೇಕ ಮಂದಿಗೆ ನೆರವಾಗಿದೆ.

ಇದು ರಾಜ್ಯ ಸಂಘದ ಹೋರಾಟ ಮತ್ತು ರಾಜಾಂಗಣ ಘೋಷಣೆಗೆ ದೊರೆತ ಪ್ರತಿಫ‌ಲವಾಗಿರುತ್ತದೆ.

 ಆದರೆ ಈ ಸಾಧನೆಯನ್ನು ಕೆಲವು ಸ್ಥಾಪಿತ ಹಿತಾಸಕ್ತಿಯ ಕಾರ್ಮಿಕ ಸಂಘಟನೆಗಳು ತಮ್ಮ ಸಾಧನೆ ಎಂದು ಗ್ರಾ.ಪಂ.ಗಳಿಗೆ ಇ-ಮೇಲ್‌ ಮೂಲಕ ತಿಳಿಸಿ ರಾಜಕೀಯ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಭಟ್‌ ತಿಳಿಸಿದ್ದಾರೆ.

ಅಧಿಕಾರರೂಢ ಸರಕಾರ ಮತ್ತು ಸಚಿವರು-ಅಧಿಕಾರಿಗಳ ಮೇಲೆ ಪûಾತೀತ ನೆಲೆಯಲ್ಲಿ ಜಿಲ್ಲೆ-ರಾಜ್ಯಮಟ್ಟದಲ್ಲಿ ಪಂಚಾಯತ್‌ ನೌಕರರು-ಕಾರ್ಯದರ್ಶಿ-ಪಿಡಿ‌ಒಗಳ ನ್ಯಾಯಸಮ್ಮತ ಪ್ರಮುಖ ಬೇಡಿಕೆ ಈಡೇರಿಕೆಗೆ ರಾಜ್ಯ ಸಂಘದ ಗೌರವಾಧ್ಯಕ್ಷನಾಗಿ ಸತತ ಒತ್ತಡ ತರಲು ನಾನು ಕಟಿ ಬದ್ಧನಾಗಿರುತ್ತೇನೆ. ಉಪ ಮುಖ್ಯಮಂತ್ರಿಗಳೂ ಪಂಚಾಯತ್‌ ರಾಜ್‌ ಸಚಿವರೂ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಕೆ. ಎಸ್‌. ಈಶ್ವರಪ್ಪ‌ಅವರಿಗೆ ಉಡುಪಿಯಲ್ಲಿ ರಾಜ್ಯ ಸಂಘದ ವತಿಯಿಂದ ಇನ್ನಷ್ಟು ಬೇಡಿಕೆಗಳ ಮನವಿ ನೀಡಿ ಒತ್ತಾಯಿಸಲಾಗಿದೆ. ಸರಕಾರದ ಮೇಲೆ ಒತ್ತಡ ತರಲು ಸಹಕರಿಸುವಂತೆ ರಘುಪತಿ ಭಟ್‌ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖಾ ನೌಕರರನ್ನು ವಿನಂತಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri