ಶುಕ್ರವಾರ, 18-10-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ

ನವದೆಹಲಿ:ಛೇ... ಇದು ನಾಚಿಕೆಗೇಡಿನ ಸಂಗತಿ. ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕಾದ ‘ಹಿರಿಯ’ರೇ ಸದನದಲ್ಲಿ ಪರಸ್ಪರ ಕಿತ್ತಾಡಿಕೊಂಡು ಸಂಸತ್ತಿನ ಮಾನ ಹರಾಜು ಹಾಕಿದ ಘಟನೆ ಬುಧವಾರ ರಾಜ್ಯಸಭೆಯಲ್ಲಿ ನಡೆದಿದೆ.

ಒಂದು ಕಡೆ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸತತ ೧೨ ದಿನಗಳಿಂದ ಸಂಸತ್ತಿನ ಉಭಯ ಸದನಗಳ ಕಲಾಪ ಹಳ್ಳಹಿಡಿದಿದೆ. ಇದರ ನಡುವೆಯೇ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆ ವಿಚಾರದಲ್ಲಿ ಸಂಸದರಿಬ್ಬರು ಪರಸ್ಪರ ಕೈಕೈ ಮಿಲಾಯಿಸಿರುವುದು ಸಂಸತ್ತಿನ ವರ್ಚಸ್ಸನ್ನು ಮತ್ತೊಮ್ಮೆ ಮಣ್ಣು ಪಾಲು ಮಾಡಿದೆ.

ಸಂಸತ್ತು ತನ್ನ ೬೦ನೇ ವರ್ಷದ ಸಂಭ್ರಮ ಆಚರಿಸಿಕೊಂಡ ಸಂದರ್ಭದಲ್ಲೇ ಈ ಘಟನೆ ನಡೆದಿರುವುದು ಅದೂ ಹಿರಿಯರ ಮನೆ ಈ ಘಟನೆಗೆ ಸಾಕ್ಷಿಯಾಗಿರುವುದು ದೇಶದ ಜನ ತಲೆತಗ್ಗಿಸುವಂತೆ ಮಾಡಿದೆ.

ಆಗಿದ್ದೇನು?: ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರವಷ್ಟೇ ಒಪ್ಪಿಗೆ ಸೂಚಿಸಿತ್ತು. ಅದರಂತೆ ಸಚಿವ ವಿ. ನಾರಾಯಣಸ್ವಾಮಿ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸುವವರಿದ್ದರು. ಆದರೆ, ಕಲಾಪಪಟ್ಟಿಯಲ್ಲಿ ಮಸೂದೆ ಮಂಡನೆಯ ಪ್ರಸ್ತಾಪ ನೋಡಿದ ಎಸ್ಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಎಸ್ಪಿ ಸಂಸದ ನರೇಶ್ ಅಗರ್‌ವಾಲ್ ಅವರು ಸದನದ ಬಾವಿಗಿಳಿದು ಪ್ರತಿಭಟಿಸಲು ಹೋಗುತ್ತಿದ್ದಾಗ ಬಿ‌ಎಸ್ಪಿಯ ಅವತಾರ್ ಸಿಂಗ್ ಕರೀಂಪುರಿ ಅವರು ತಡೆದರು. ನರೇಶ್ ಕಾಲಪ್‌ಪಟ್ಟಿ ಹಿಡಿದು ಎಳೆದರು. ಇದರಿಂದಾಗಿ ಮುಖಂಡರ ನಡುವೆ ಕೆಲ ನಿಮಿಷಗಳ ಕಾಲ ನೂಕಾಟ, ತಳ್ಳಾಟ ನಡೆಯಿತು. ಈ ಸಂದರ್ಭದಲ್ಲಿ ಬಿ‌ಎಸ್ಪಿಯ ಬ್ರಿಜೇಶ್ ಪಾಠಕ್ ಮಧ್ಯಪ್ರವೇಶಿಸಿ ಕರೀಂಪುರಿ ಅವರನ್ನು ಸ್ವಸ್ಥಾನದಲ್ಲಿ ಕೂರಿಸುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಇಬ್ಬರ ಜಗಳ ಬಿಡಿಸಲು ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಮಾರ್ಷಲ್‌ಗಳನ್ನೂ ಕರೆಸಬೇಕಾಯಿತು. ಇದಾದ ಬೆನ್ನಲ್ಲೇ ಎಸ್ಪಿ ಹಾಗೂ ಬಿ‌ಎಸ್ಪಿ ಸದಸ್ಯರ ನಡುವಿನ ಪರಸ್ಪರ ವಾದ ವಿವಾದ ತಾರಕಕ್ಕೇರಿತು. ಈ ವೇಳೆ, ಸದನ ಬಾವಿಗಿಳಿದ ಅಗರ್ವಾಲ್ ಹಾಗೂ ಇತರೆ ಎಸ್ಪಿ ಸದಸ್ಯರು ಮಸೂದೆ ವಿರುದ್ಧ ಘೋಷಣೆ ಕೂಗಿದರು. ಒಂದು ಹಂತದಲ್ಲಿ ಸಭಾಧ್ಯಕ್ಷರ ಕೈಯಿಂದ ಮಸೂದೆಗೆ ಸಂಬಂಧಿಸಿದ ಪತ್ರವನ್ನೂ ಕಿತ್ತುಕೊಳ್ಳಲು ಯತ್ನಿಸಿದರು. ಆದರೆ, ಮಾರ್ಷಲ್‌ಗಳ ಮಧ್ಯಪ್ರವೇಶದಿಂದಾಗಿ ಈ ಪ್ರಯತ್ನವನ್ನು ಕೈಬಿಟ್ಟರು.

ಮಂಡನೆ: ಈ ಸಂದರ್ಭದಲ್ಲಿ ನಾರಾಯಣಸ್ವಾಮಿ ಅವರು ಗದ್ದಲದ ನಡುವೆಯೇ ಮಸೂದೆಯನ್ನು ಮಂಡಿಸಿದರು. ಮಾಯಾವತಿ ಸೇರಿ ಎಲ್ಲಾ ಬಿ‌ಎಸ್ಪಿ ಮುಖಂಡರು ಮಸೂದೆಗೆ ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು.

ಪಟ್ಟು ಬಿಡದ ಬಿಜೆಪಿ: ಸದನದಲ್ಲಿ ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಬಿಜೆಪಿ ಸದಸ್ಯರು ಮಾತ್ರ ಸದನದ ಬಾವಿಯಲ್ಲಿ ನಿಂತು ೧೨ನೇ ದಿನವೂ ಪ್ರಧಾನಿ ಮನಮೋಹನ ಸಿಂಗ್ ರಾಜಿನಾಮೆಗೆ ಆಗ್ರಹಿಸಿ ಘೋಷಣೆ ಕೂಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ ೨ ಗಂಟೆಗೆ ಮುಂದೂಡಲಾಯಿತು. ಆ ನಂತರವೂ ಗದ್ದಲ ಮುಂದುವರಿದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಇಂದು ಮತ್ತೆ ಮಂಡನೆ: ಯುಪಿ‌ಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಎಸ್ಪಿ ತೀವ್ರ ವಿರೋಧವಿದ್ದರೂ ಈ ಮಸೂದೆಯ ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಸರ್ಕಾರವು ಗುರುವಾರ ಮತ್ತೆ ಈ ಮಸೂದೆಯನ್ನು ರಾಜ್ಯಸಭೆಯ ಮುಂದಿಡಲು ನಿರ್ಧರಿಸಿದೆ. ಸರ್ಕಾರಿ ನೌಕರಿಗಳ ಬಡ್ತಿಯಲ್ಲಿ ಎಸ್ಸಿ, ಎಸ್ಟಿಗಳಿಗೆ ಶೇ. ೨೨.೫ರಷ್ಟು ಮೀಸಲು ಕಲ್ಪಿಸಬೇಕೆಂಬ ವಿಚಾರದಲ್ಲಿ ಸರ್ಕಾರವು ಸ್ಪಷ್ಟವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ಮಾಹಿತಿ ನೀಡಿದ್ದಾರೆ. ಈ ಮಸೂದೆಗೆ ಗುರುವಾರವೇ ಅಂಗೀಕಾರ ಸಿಗಬೇಕೆಂದು ಬಯಸುತ್ತೇವೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಸದಸ್ಯರಿಗೆ ಹಾಜರಿರುವಂತೆ ಹಾಗೂ ಮಸೂದೆ ಪರ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ನಿಯಮ ೧೯೩ರಡಿಯಲ್ಲಿ ರಾಜ್ಯದ ಬರಗಾಲ ಸೇರಿದಂತೆ ರೈತರ ಸಮಸ್ಯೆ ಚರ್ಚಿಸಲು ನೋಟಿಸ್ ನೀಡಿದ್ದೇನೆ. ಆದರೆ, ಕಲ್ಲಿದ್ದಲು ಗಲಾಟೆಯಿಂದ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ೫೦ ವರ್ಷದಲ್ಲಿ ಇದೇ ಮೊದಲಿಗೆ ಈ ಪ್ರಮಾಣದಲ್ಲಿ ಗದ್ದಲ ನಡೆಯುತ್ತಿದೆ. ರಾಜ್ಯ ಸಭೆಯಲ್ಲಿ ಇಬ್ಬರು ಸದಸ್ಯರು ಕುಸ್ತಿ ನಡೆಸಿರುವುದು ಅವರ ಸ್ಥಾನಕ್ಕೆ ಘನತೆ ತರುವಂತದ್ದಲ್ಲ.
- ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri