ಸೋಮವಾರ, 27-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ

ನವದೆಹಲಿ: ಯುಪಿ‌ಎ ಸರ್ಕಾರ ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವಾಗಲೇ, ಪ್ರಧಾನಿ ಕಾರ್ಯಾಲಯ ಸಚಿವರ ಆಸ್ತಿ ವಿವರ ಬಹಿರಂಗಪಡಿಸಿದೆ.

ಕೆಲ ಸಚಿವರ ಆಸ್ತಿಪಾಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಹೆಚ್ಚಾಗಿರುವುದು ವಿಶೇಷ. ಕಾರ್ಯಾಲಯ ಬಹಿರಂಗಗೊಳಿಸಿದ ಆಸ್ತಿ ಪ್ರಕಾರ, ಡಿ‌ಎಂಕೆ ನಾಯಕ ಮತ್ತು ಕೇಂದ್ರ ರಸಗೊಬ್ಬರ ಸಚಿವ ಅಳಗಿರಿ ಅವರ ಆಸ್ತಿ ರು.೩೭ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಅವರ ಪತ್ನಿ ಕಾಂತಿ ಅವರ ಆಸ್ತಿಯೂ ಸೇರಿದೆ.

ಇವರಿಬ್ಬರ ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡರೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.೧೭ ರಷ್ಟು ಏರಿಕೆಯಾಗಿದೆ. ಇದಕ್ಕಿಂತ ವಿಶೇಷ ಎಂದರೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ರಾಜೀವ್ ಶುಕ್ಲಾ ಅವರ ಆಸ್ತಿ. ಇವರ ಆಸ್ತಿಯಲ್ಲಿ ಶೇ.೭೬ ರಷ್ಟು ಏರಿಕೆಯಾಗಿದೆ.

ಇವರ ಪತ್ನಿ ನ್ಯೂಸ್ ಚಾನೆಲ್‌ವೊಂದರ ಒಡತಿಯಾಗಿದ್ದಾರೆ. ಕಳೆದ ವರ್ಷ ಈ ದಂಪತಿಯ ಆಸ್ತಿ ರು.೧೬.೫೬ ಕೋಟಿ. ಆದರೆ ಈ ವರ್ಷ ಇವರಿಬ್ಬರ ಆಸ್ತಿ ಮೌಲ್ಯ ರು.೨೯.೨೫ ಕೋಟಿ.
ಇದರಲ್ಲಿ ಶುಕ್ಲಾ ಅವರ ಪತ್ನಿಯೊಬ್ಬರೇ ರು.೨೩.೩೪ ಕೋಟಿಯಷ್ಟು ಆಸ್ತಿಗೆ ಒಡತಿಯಾಗಿದ್ದಾರೆ. ೨೦೧೧ರಲ್ಲಿ ರು.೧.೮ ಕೋಟಿಯಷ್ಟು ಆದಾಯ ಹೊಂದಿದ್ದ ರಾಜೀವ್ ಶುಕ್ಲಾ ಅವರ ಆಸ್ತಿ ಈ ವರ್ಷ ರು.೫.೯ ಕೋಟಿಗೆ ಏರಿಕೆಯಾಗಿದೆ.

ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಆಸ್ತಿಯೂ ಶೇ.೩೩ ರಷ್ಟು ಏರಿಕೆಯಾಗಿದೆ. ವಿಶೇಷ ಎಂದರೆ ಇವರ ಕುಟುಂಬದಲ್ಲಿ ಯಾರಿಗೂ ಕಾರಿಲ್ಲ!

ಹಣಕಾಸು ಸಚಿವ ಪಿ.ಚಿದಂಬರಂ ಅವರ ಆಸ್ತಿ ಶೇ.೨೬ ರಷ್ಟು ಏರಿಕೆಯಾಗಿದೆ. ಇವರ ಆಸ್ತಿಯ ಒಟ್ಟಾರೆ ಮೌಲ್ಯ ರು.೩೦ ಕೋಟಿ.

ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರೂ ಕೋಟ್ಯಧೀಶರೇ. ಇವರ ಆಸ್ತಿ ರು.೧೪.೧೮ ಕೋಟಿ. ವಿಶೇಷ ಎಂದರೆ ಶಿಂಧೆ ಅವರಿಗೂ ಕಾರಿಲ್ಲ.

ಇವರೆಲ್ಲಾ ಡಬಲ್ ಡಿಜಿಟ್ ಕೋಟ್ಯಧೀಶರು. ಇನ್ನು ತ್ರಿಬಲ್ ಡಿಜಿಟ್ ಕೋಟ್ಯಧೀಶರೂ ಮನಮೋಹನ್ ಸಂಪುಟದಲ್ಲಿದ್ದಾರೆ. ಸಚಿವ ಕಮಲ್ ನಾಥ್ ಅವರ ಆಸ್ತಿ ರು.೨೬೦ ಕೋಟಿ. ಪ್ರಫುಲ್ ಪಟೇಲ್ ಅವರ ಆಸ್ತಿ ಮೌಲ್ಯ ರು.೧೦೧ ಕೋಟಿ. ಆದರೆ ಇದು ಕಳೆದ ವರ್ಷದ ಆಸ್ತಿ ವಿವರ. ಈ ವರ್ಷ ಇವರಿಬ್ಬರೂ ಆಸ್ತಿ ವಿವರ ಸಲ್ಲಿಸಿಲ್ಲ.

ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ಸಚಿವರ ಆಸ್ತಿ ವಿವರ:

ಕರ್ನಾಟಕದಿಂದ ಆಯ್ಕೆಯಾಗಿರುವ ಕೆಲ ಕೇಂದ್ರ ಸಚಿವರೂ ಕೋಟ್ಯಧೀಶರೇ. ಅವರಲ್ಲಿ ಮೊದಲನೆಯದಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು. ಇವರ ಒಟ್ಟಾರೆ ಆಸ್ತಿ ಮೌಲ್ಯ ರು.೧.೮೯ ಕೋಟಿ. ಆದರೆ ಇವರ ಪತ್ನಿ ಪ್ರೇಮಾ ಕೃಷ್ಣ ಅವರ ಆಸ್ತಿಯೇ ಹೆಚ್ಚಿದೆ. ಅವರು ಹೊಂದಿರುವ ಆಸ್ತಿ ಮೌಲ್ಯ ರು.೨.೩೬ ಕೋಟಿ. ಇವರಿಬ್ಬರ ಒಟ್ಟಾರೆ ಆಸ್ತಿ ಮೌಲ್ಯ ರು.೪.೨೫ ಕೋಟಿ.

ಇನ್ನು ಮಲ್ಲಿಕಾರ್ಜುನ ಖರ್ಗೆ. ಕೇಂದ್ರ ಕಾರ್ಮಿಕ ಸಚಿವರಾಗಿರುವ ಖರ್ಗೆ ಅವರು ಹೊಂದಿರುವ ಆಸ್ತಿ ಮೌಲ್ಯ ರು.೨.೩೭ ಕೋಟಿ. ಆದರೆ ಖರ್ಗೆ ಅವರ ಪತ್ನಿ ರಾಧಾ ಬಾಯಿ ಖರ್ಗೆ ಅವರು ಹೊಂದಿರುವ ಆಸ್ತಿ ಮೌಲ್ಯ ಕೂಡ ರು.೧.೯೭ ಕೋಟಿ. ಇವರಿಬ್ಬರ ಒಟ್ಟಾರೆ ಆಸ್ತಿ ಮೌಲ್ಯ ರು.೪.೩೫ ಕೋಟಿ.

ಖರ್ಗೆ ಅವರು ಬೆಂಗಳೂರಿನಲ್ಲಿ ಎರಡು ಮನೆ, ಗುಲ್ಬರ್ಗದಲ್ಲಿ ಒಂದು ಮನೆ ಹೊಂದಿದ್ದಾರೆ. ಇವರ ಹೆಸರಲ್ಲಿ ಕೆಲವೊಂದು ಷೇರು, ಬಾಂಡ್‌ಗಳು ಇವೆ. ಬ್ಯಾಂಕ್‌ಗಳಲ್ಲಿ ಉಳಿತಾಯವನ್ನೂ ಮಾಡಿದ್ದಾರೆ. ಇವರು ಕೈಯಲ್ಲಿ ಇಟ್ಟುಕೊಂಡಿರುವ ನಗದು ರು.೫೦ ಸಾವಿರ ಮತ್ತು ರು.೯೦ ಸಾವಿರ.

ಇನ್ನು ಪತ್ನಿ ರಾಧಾ ಬಾಯಿ ಖರ್ಗೆ ಅವರ ಹೆಸರಲ್ಲಿ ಯಾವುದೇ ಮನೆಗಳಿಲ್ಲ. ಆದರೆ ಆಸ್ತಿಯಿದೆ. ಬೆಂಗಳೂರಿನಲ್ಲಿ ಮನೆ ಕಟ್ಟಿಸಲಾಗುತ್ತಿದೆ. ಅಲ್ಲದೆ ಸೈಟೂ ಕೂಡ ಇದೆ.

ಇವರ ಬಳಿ ಹಿಂದಿನವರ ಕಡೆಯಿಂದ ಬಂದ ಚಿನ್ನಾಭರಣವಿದೆ. ಇವರ ಹೆಸರಲ್ಲೂ ಬ್ಯಾಂಕಿನಲ್ಲಿ ಹಣ ಇಡಲಾಗಿದೆ. ಜೊತೆಗೆ ರು.೫೦ ಸಾವಿರ ನಗದನ್ನು ಹೊಂದಿದ್ದಾರೆ.

ವೀರಪ್ಪ ಮೊಯ್ಲಿ ಲಕ್ಷಾಧೀಶ, ಪತ್ನಿ ಕೋಟ್ಯಧೀಶೆ: ಇನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯ್ಲಿ ಅವರ ಒಟ್ಟಾರೆ ಆಸ್ತಿ ರು.೧೭,೬೧,೬೦೦ ಮಾತ್ರ. ಇವರ ಹೆಸರಲ್ಲಿ ಮನೆಯಾಗಲಿ, ಯಾವುದೇ ರೀತಿಯ ಆಸ್ತಿಯಾಗಲಿ ಇಲ್ಲ.

ಆದರೆ ಪತ್ನಿ ಮಾಲತಿ ಮೊಯ್ಲಿ ಅವರು ಕೋಟ್ಯಧೀಶರು. ಅವರು ಹೊಂದಿರುವ ಒಟ್ಟಾರೆ ಆಸ್ತಿ ರು.೩.೧೦ ಕೋಟಿ.

ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಮನೆ ಇವರ ಹೆಸರಲ್ಲೇ ಇದೆ. ಇವರಿಬ್ಬರ ಒಟ್ಟಾರೆ ಆಸ್ತಿ ಮೌಲ್ಯ ರು.೩.೨೮ ಕೋಟಿ.

ಕರ್ನಾಟಕದವರೇ ಆದ ಮತ್ತೊಬ್ಬ ಸಚಿವ ಕೆ.ಎಚ್. ಮುನಿಯಪ್ಪ ಅವರು ಆಸ್ತಿ ವಿವರ ಸಲ್ಲಿಸಿಲ್ಲ.

ಕುಬೇರರ ನಡುವೆ ಕುಚೇಲ

ಇದು ಸಂಪೂರ್ಣವಾಗಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಕಥೆ.ಕೇಂದ್ರ ಸಂಪುಟದಲ್ಲಿ ಕೋಟ್ಯಧಿಪತಿಗಳೇ ಕಾಣಿಸಿಕೊಂಡರೂ ಸಹ, ಇವರೊಬ್ಬರು ಮಾತ್ರ ’ಏನೂ’ ಇಲ್ಲದೇ ಜೀವಿಸುತ್ತಿದ್ದಾರೆ. ತಮ್ಮ ಹೆಸರಲ್ಲೊಂದು ಮನೆಯೂ ಇಲ್ಲ. ಬ್ಯಾಂಕ್ ಬ್ಯಾಲೆನ್ಸೋ ಕೆಲವೇ ಕೆಲವು ಲಕ್ಷ. ಅದೂ ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ನಿವೃತ್ತಿಯಾದಾಗ ಬಂದದ್ದು.

ಆಂಟನಿ ಹೆಸರಲ್ಲಿ

 ಮನೆ, ಆಸ್ತಿ - ಇಲ್ಲ 
ಕಾರು - ವ್ಯಾಗನಾರ್(ಸೆಕೆಂಡ್ ಹ್ಯಾಂಡ್)
ಬ್ಯಾಂಕ್ ಬ್ಯಾಲೆನ್ಸ್ - ರು.೨.೬೨ ಲಕ್ಷ

ಪತ್ನಿ ಎಲಿಜೆಬೆತ್ ಆಂಟನಿ ಹೆಸರಲ್ಲಿ


ಮನೆ - ತಿರುವನಂತಪುರ, ಮೌಲ್ಯ ರು. ೧೫ ಲಕ್ಷ 
ಕಾರು, ಆಸ್ತಿ - ಇಲ್ಲ
ಬ್ಯಾಂಕ್ ಬ್ಯಾಲೆನ್ಸ್ - ರು. ೧೦.೪೯ ಲಕ್ಷ

ರಾಜೀವ್ ಶುಕ್ಲಾ

೨೦೧೨ ರಲ್ಲಿ ರು.೨೯.೨೫ ಕೋಟಿ 
೨೦೧೧ ರಲ್ಲಿ ರು.೧೬.೫೬ ಕೋಟಿ
ಶೇ. ೭೬ ಏರಿಕೆ

ಶರದ್ ಪವಾರ್

೨೦೧೨ ರಲ್ಲಿ ರು.೧೬.೨೨ ಕೋಟಿ
೨೦೧೧ ರಲ್ಲಿ ರು.೧೨.೧೫ ಕೋಟಿ
೩೩ ಶೇ ಏರಿಕೆ

ಪಿ.ಚಿದಂಬರಂ

೨೦೧೨ ರಲ್ಲಿ ರು.೨೯.೯೪ ಕೋಟಿ
೨೦೧೧ ರಲ್ಲಿ ರು.೨೩.೬೭ ಕೋಟಿ
ಶೇ. ೨೬ ಏರಿಕೆ

ಎಸ್.ಎಂ. ಕೃಷ್ಣ

ಪತ್ನಿ ಪ್ರೇಮಾಕೃಷ್ಣ ಹೆಸರಲ್ಲಿ ೨.೩೬ ಕೋಟಿ
ಕೃಷ್ಣ ಅವರ ಹೆಸರಲ್ಲಿ ರು. ೧.೮೯ ಕೋಟಿ
ಒಟ್ಟಾರೆ ಆಸ್ತಿ ರು. ೪.೨೫ ಕೋಟಿ

ಮಲ್ಲಿಕಾರ್ಜುನ ಖರ್ಗೆ

ಪತ್ನಿ ರಾಧಾ ಹೆಸರಲ್ಲಿ ೧.೯೭ ಕೋಟಿ
ಖರ್ಗೆ ಹೆಸರಲ್ಲಿ ರು. ೨.೩೭ ಕೋಟಿ
ಒಟ್ಟಾರೆ ಆಸ್ತಿ ರು. ೪.೩೫ ಕೋಟಿ

ವೀರಪ್ಪ ಮೊಯ್ಲಿ

ಪತ್ನಿ ಮಾಲತಿ ಹೆಸರಲ್ಲಿ ೩.೧೦ ಕೋಟಿ
ಮೊಯ್ಲಿ ಅವರ ಹೆಸರಲ್ಲಿ ರು. ೧೭ ಲಕ್ಷ
ಒಟ್ಟಾರೆ ಆಸ್ತಿ ರು. ೩.೨೮ ಕೋಟಿ

ಎಂ.ಕೆ. ಅಳಗಿರಿ

ಒಟ್ಟಾರೆ ಆಸ್ತಿ

೨೦೧೧ರಲ್ಲಿ ರು.೩೨ ಕೋಟಿ
೨೦೧೨ರಲ್ಲಿ ರು.೩೭.೪೬ ಕೋಟಿ
ಏರಿಕೆ - ಶೇ.೧೭

ಸುಶೀಲ್ ಕುಮಾರ್ ಶಿಂಧೆ

ಒಟ್ಟಾರೆ ಆಸ್ತಿ ೨೦೧೧ರಲ್ಲಿ ರು.೧೩.೩ ಕೋಟಿ

೨೦೧೨ರಲ್ಲಿ ರು.೧೪.೧೮ ಕೋಟಿ
ಏರಿಕೆ - ಶೇ.೭

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri