ಸೋಮವಾರ, 17-02-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ

ಬೆಂಗಳೂರು:ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಶಾಸಕರ ಇನ್ನೊಂದು ತಂಡ ‘ಅಧ್ಯಯನ’ ಹೆಸರಿನ ವಿದೇಶ ಪ್ರವಾಸಕ್ಕೆ ಸಿದ್ಧವಾಗಿದೆ.

ವಿಧಾನಸಭೆ ಉಪಸಭಾಪತಿ ಎನ್. ಯೋಗೇಶ್ ಭಟ್ ಅಧ್ಯಕ್ಷತೆಯ ಅರ್ಜಿ ಸಮಿತಿ ಮತ್ತು ವಸತಿ ಸಮಿತಿಯ ೧೬ ಸದಸ್ಯರು ಹಾಗೂ ಏಳು ಅಧಿಕಾರಿಗಳು ಸೆಪ್ಟೆಂಬರ್ ೨೪ರಿಂದ ಅಕ್ಟೋಬರ್ ೯ರವರೆಗೆ ರಷ್ಯಾ, ಫಿನ್‌ಲ್ಯಾಂಡ್, ಸ್ವೀಡನ್, ನಾರ್ವೆ, ಡೆನ್ಮಾರ್ಕ್, ಈಜಿಪ್ತ್ ಹಾಗೂ ಇಸ್ರೇಲ್ ದೇಶಗಳಿಗೆ ವಿದೇಶ ಪ್ರವಾಸಕ್ಕೆ ತೆರಳಲು ಸರ್ಕಾರ ಅನುಮತಿ ನೀಡಿದೆ.
ಆದರೆ ಈಗಾಗಲೇ ತೆರಳಿರುವ ಶಾಸಕರ ವಿದೇಶ ಪ್ರವಾಸ ಮೊಟಕುಗೊಳಿಸುವಂತೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ತಂಡಕ್ಕೂ ಪ್ರವಾಸವನ್ನು ಎರಡು ತಿಂಗಳು ಮುಂದಕ್ಕೆ ಹಾಕುವಂತೆ ಸ್ಪೀಕರ್ ಕೆ.ಜಿ. ಬೋಪಯ್ಯ ಸೂಚನೆ ನೀಡಿದ್ದಾರೆ. 

16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ

 ಟ್ರಾವೆಲ್ ಏಜೆನ್ಸಿಗೆ ಕೊಟ್ಟ ಒಂದೂವರೆ ಕೋಟಿ ರೂ. ವಾಪಸ್ ಕಷ್ಟ * ಪ್ರತಿ ಶಾಸಕರ ಖಾತೆಗೆ 6.13 ಲಕ್ಷ ರೂ. ಪ್ರವಾಸ ಭತ್ಯೆ ಜಮೆ * ಸೆ.24ರಿಂದ ಸೆ.9ರವರೆಗೆ ರಷ್ಯಾ, ಸ್ಕಾಂಡಿನೇವಿಯ, ಈಜಿಪ್ತ್, ಇಸ್ರೇಲ್ ಪ್ರವಾಸ * ವಿದೇಶದಲ್ಲಿರುವ ಶಾಸಕರು ವಾಪಸ್ ಬಂದರೆ ಹಣ ಹಿಂದಕ್ಕೆ ಸಿಗದು

ಬೆಂಗಳೂರು: ಒಂದೆಡೆ ವಿದೇಶ ಪ್ರವಾಸ ಹೋಗಬೇಕೆ ಬೇಡವೇ ಎಂಬ ಜಿಜ್ಞಾಸೆಯಲ್ಲಿ ಶಾಸಕರು ಮುಳುಗಿದ್ದರೆ; ಮತ್ತೊಂದೆಡೆ, ಪ್ರವಾಸ ಆಯೋಜಿಸಲು ಟ್ರಾವೆಲ್ ಏಜೆನ್ಸಿಗೆ ಮುಂಗಡವಾಗಿ ಸಂದಾಯ ಮಾಡಿದ ಒಂದೂವರೆ ಕೋಟಿ ರೂ. ವಾಪಸ್ ಬರುವುದು ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಪೂರ್ವ ನಿಗದಿಯಂತೆ ಸೆ.24ರಿಂದ ಅಕ್ಟೋಬರ್ 9ರವರೆಗೆ ವಿಧಾನಸಭೆ ಉಪಸಭಾಧ್ಯಕ್ಷ ಯೋಗೀಶ್ ಭಟ್ ಅಧ್ಯಕ್ಷತೆಯ ಎರಡು ಸಮಿತಿಗೆ ಸೇರಿದ ಒಟ್ಟು 16 ಶಾಸಕರು, ಏಳು ಅಧಿಕಾರಿಗಳು ರಷ್ಯಾ, ಫಿನ್‌ಲ್ಯಾಂಡ್, ನಾರ್ವೆ, ಡೆನ್ಮಾರ್ಕ್, ಈಜಿಪ್ತ್ ಹಾಗೂ ಇಸ್ರೇಲ್ ಪ್ರವಾಸಕ್ಕೆ ತೆರಳಬೇಕಿತ್ತು.

ವಿದೇಶದಲ್ಲಿರುವ ಶಾಸಕರನ್ನು ವಾಪಸ್ ಕರೆಸಲಾಗುವುದು, ಮುಂದೆ ಹೋಗಲು ಅವಕಾಶ ಕಲ್ಪಿಸುವುದಿಲ್ಲ ಎಂದು ಸಿ‌ಎಂ ಜಗದೀಶ್ ಶೆಟ್ಟರ್ ವಾಗ್ದಾನ ಮಾಡಿದ್ದರು. ಸುದ್ದಿಗಾರರ ಜತೆ ಬುಧವಾರ ಮಾತನಾಡಿದ್ದ ಸ್ಪೀಕರ್ ಕೆ.ಜಿ. ಬೋಪಯ್ಯ ವಿದೇಶ ಪ್ರವಾಸ ರದ್ದು ಮಾಡಿರುವುದಾಗಿ ಪ್ರಕಟಿಸಿದ್ದರು. ಶಾಸಕರ ಖಾತೆಗೆ ಜಮೆ ಮಾಡಲಾದ ಹಣವನ್ನು ಮರುಪಾವತಿ ಮಾಡುವಂತೆ ಶಾಸಕರಿಗೆ ಪತ್ರ ಬರೆಯುತ್ತಿರುವುದಾಗಿ ಸಚಿವಾಲಯ ಮೂಲಗಳು ತಿಳಿಸಿದ್ದವು.

ಸಂಜೆ ಹೊತ್ತಿಗೆ ಈ ಎಲ್ಲ ಗೊಂದಲ ಮತ್ತಷ್ಟು ಕಗ್ಗಂಟಾಯಿತು. ಶಾಸಕರು ವಿದೇಶಕ್ಕೆ ಹೋಗಕೂಡದು ಎಂದು ಆದೇಶ ಹೊರಡಿಸಲು ಅಥವಾ ರದ್ದು ಮಾಡಲು ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿಲ್ಲ. ಅದು ಶಾಸಕರ ಹಕ್ಕು. ಒಂದು ವೇಳೆ ರದ್ದು ಮಾಡಲೇಬೇಕಾದರೆ ಪ್ರವಾಸಕ್ಕೆ ಮುಂದಾದ ಸಂಬಂದಪಟ್ಟ ಸಮಿತಿ ಸಭೆ ಸೇರಿ ನಿರ್ಣಯ ಕೈಗೊಂಡರೆ ಇದು ಸಾಧ್ಯ” ಎಂಬ ಅಭಿಪ್ರಾಯಗಳು ಸಚಿವಾಲಯದ ಅಧಿಕಾರಿಗಳಿಂದಲೇ ಮೂಡಿಬಂದವು.

ಯಾವ ಸಮಿತಿ ಪ್ರವಾಸ?

ಲಭ್ಯವಾದ ದಾಖಲೆ ಪ್ರಕಾರ ಯೋಗೀಶ್ ಭಟ್ ಅಧ್ಯಕ್ಷತೆಯ ವಿಧಾನಸಭೆಯ ಅರ್ಜಿಗಳ ಸಮಿತಿ ಹಾಗೂ ವಸತಿ ಸಮಿತಿಯ 16 ಶಾಸಕರು ಸೆ.24ಕ್ಕೆ ವಿದೇಶಕ್ಕೆ ಹಾರುವ ಪ್ರವಾಸ ಪಟ್ಟಿ ಸಿದ್ಧವಾಗಿತ್ತು. ಹೆಚ್ಚುವರಿ ಕಾರ್ಯದರ್ಶಿ ಮಟ್ಟದ ಅಧಿಕಾರಿ ಸೇರಿದಂತೆ ಏಳು ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಎಸ್‌ಓಟಿಸಿ’ ಎಂಬ ಟ್ರಾವೆಲ್ ಏಜೆನ್ಸಿ ಈ ಪ್ರವಾಸ ರೂಪುರೇಷೆ ಸಿದ್ಧಪಡಿಸಿದೆ. 16 ದಿನಗಳ ಪ್ರವಾಸದ ವಿವರ ಮೂರು ಪುಟಗಳಲ್ಲಿದೆ.

ಸೆ.24ರಂದು ಬೆಂಗಳೂರಿನಿಂದ ದುಬೈ, ಕೋಪನ್‌ಹೇಗನ್, ಹೆಲ್ಸಿಂಕಿ, ಮಾಸ್ಕೊ, ಟೆಲ್ ಅವಿವ್, ಅಮ್ಮಾನ್, ಕೈರೊ ಪ್ರವಾಸವನ್ನು ಈ ತಂಡ ಕೈಗೊಳ್ಳಲಿದೆ. ರಾಷ್ಟ್ರೀಯ ಉದ್ಯಾನ, ಬೀಚ್, ಪ್ರಾಚೀನ ಸ್ಮಾರಕಗಳು, ಮ್ಯೂಸಿಯಂಗಳನ್ನು ಶಾಸಕರು ವೀಕ್ಷಿಸುವ ಕಾರ್ಯಕ್ರಮವಿದೆ. ನಾಲ್ಕು ಕಡೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಜತೆ ಚರ್ಚೆ, ಹೈನುಗಾರಿಕೆ, ಆಹಾರ ಸಂಸ್ಕರಣಾ ಉದ್ಯಮದ ಪ್ರಗತಿಯನ್ನು ವೀಕ್ಷಿಸುವ ಕಾರ್ಯಕ್ರಮವನ್ನೂ ಜತೆಗೆ ಸೇರಿಸಿಕೊಳ್ಳಲಾಗಿದೆ.

ಹಣ ವಾಪಸ್ ಸಿಗದು?

ಪ್ರತಿ ಶಾಸಕರಿಗೆ 6.70 ಲಕ್ಷ ರೂ. ನಿಗದಿಯಾಗಿದ್ದು, ಶೇ.90ರಷ್ಟು ಅಂದರೆ 6.13 ಲಕ್ಷ ರೂ.ಗಳನ್ನು ಈಗಾಗಲೇ ಶಾಸಕರ ಖಾತೆಗೆ ಜಮೆ ಮಾಡಲಾಗಿದೆ. ಈ ಮೊತ್ತವನ್ನು ಶಾಸಕರು ವೈಯಕ್ತಿಕ ಚೆಕ್ ರೂಪದಲ್ಲಿ ಟ್ರಾವೆಲ್ ಏಜೆನ್ಸಿಗೆ ಸಂದಾಯ ಮಾಡಿದ್ದಾರೆ. ಎಲ್ಲ ಶಾಸಕರು ಮತ್ತು ಅವರ ಪತ್ನಿಯರಿಗೆ ವೀಸಾ ಕೊಡಿಸುವ ವ್ಯವಸ್ಥೆಯನ್ನೂ ಟ್ರಾವೆಲ್ ಏಜೆನ್ಸಿ ಪ್ರತಿನಿಧಿಗಳು ಮಾಡುತ್ತಿದ್ದಾರೆ. ಪ್ರವಾಸ ಪಟ್ಟಿ ಅನ್ವಯ ಊಟ-ವಸತಿ ವ್ಯವಸ್ಥೆಯನ್ನು ಈಗಾಗಲೇ ನಿಗದಿ ಮಾಡಲಾಗಿದ್ದು, ಹಣ ಪಾವತಿಯಾಗಿದೆ.

ವಿದೇಶ ಪ್ರವಾಸ ಆಯೋಜಿಸುವ ಏಜೆನ್ಸಿಯೊಂದರ ಮುಖ್ಯಸ್ಥರು ಹೇಳುವ ಪ್ರಕಾರ, ಈ ರೀತಿಯ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿದ ಮೇಲೆ ರದ್ದುಪಡಿಸಿದರೆ ಒಂದು ಪೈಸೆಯನ್ನೂ ಹಿಂತಿರುಗಿಸುವ ಪದ್ಧತಿ ಇಲ್ಲ. ವೀಸಾ ಅಗತ್ಯವಾಗಿರುವುದರಿಂದ 2-3 ತಿಂಗಳ ಮೊದಲೇ ಪ್ರವಾಸದ ವೇಳಾಪಟ್ಟಿ ನಿಗದಿಪಡಿಸಬೇಕು. ಜತೆಗೆ ವಾಸ್ತವ್ಯಕ್ಕೆ ಸ್ಟಾರ್ ಹೋಟೆಲ್ ಗೊತ್ತುಪಡಿಸಬೇಕು. ಅಲ್ಲಿ ಓಡಾಡಲು ವಾಹನ ವ್ಯವಸ್ಥೆ ಮಾಡಬೇಕು. ಇದಕ್ಕೆಲ್ಲ ಟ್ರಾವೆಲ್ ಏಜೆನ್ಸಿಯವರು ಮುಂಗಡ ಹಣ ಪಾವತಿಸುವುದು ಅನಿವಾರ್ಯ. ಹಾಗಾಗಿ ಏಕಾ‌ಏಕಿ ಪ್ರವಾಸ ರದ್ದಾದರೆ ಹಣ ವಾಪಸ್ ಕೊಡುವುದಿಲ್ಲ,” ಎನ್ನುತ್ತಾರೆ.

ನಿರ್ದಿಷ್ಟ ಕಾರಣದಿಂದ ರದ್ದುಪಡಿಸಿದರೆ ಪ್ರವಾಸದ ದಿನಗಳು, ಸಂಬಂಧಪಟ್ಟ ಏರ್‌ಲೈನ್ಸ್ ಹಾಗೂ ಹೋಟೆಲ್‌ನ ನಿಯಮಗಳ ಅಧಾರದ ಮೇಲೆ ಶೇಕಡಾವಾರು ಮೊತ್ತವನ್ನು ಕಡಿತ ಮಾಡಿ ಪಾವತಿಸಲಾಗುತ್ತದೆ. ಅದು ಏಕರೂಪದಲ್ಲಿ ಇರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಟ್ರಾವೆಲ್ ಏಜೆನ್ಸಿ ಹಾಗೂ ಪ್ರವಾಸ ಹೋಗುವವರ ಮಧ್ಯೆ ಯಾವ ರೀತಿ ಒಪ್ಪಂದವಾಗಿರುತ್ತದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಹಾಗಿದ್ದರೂ ಪೂರ್ತಿ ಹಣ ವಾಪಸ್ ಬರುವುದಿಲ್ಲ,” ಎಂದು ಅವರು ಪ್ರತಿಪಾದಿಸುತ್ತಾರೆ.

ನಿಗದಿಯಾದ ವಿಮಾನದ ಬದಲಿಗೆ, ಅವಧಿಗೆ ಮುನ್ನವೇ ವಾಪಸ್ ಬರಬೇಕಾದರೆ ಅಂದು ಭಾರತಕ್ಕೆ ಮರಳಲಿರುವ ಪೂರ್ವನಿಗದಿತ ಏರ್‌ಲೈನ್ಸ್‌ನ ವಿಮಾನದಲ್ಲಿ ಸೀಟುಗಳು ಖಾಲಿ ಇದೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಆ ದಿನದ ದರದ ಆಧಾರದ ಮೇಲೆ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ. ಹಾಗಿದ್ದರೂ ಎಲ್ಲರೂ ಒಂದೇ ವಿಮಾನದಲ್ಲಿ ವಾಪಸ್ ಬರಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಟ್ರಾವೆಲ್ ಏಜೆನ್ಸಿ ಮುಖ್ಯಸ್ಥರು.

ಸಭೆಯಲ್ಲಿ ತೀರ್ಮಾನ

ಅಭಯ ಪಾಟೀಲ್ ಅಧ್ಯಕ್ಷತೆಯ ಅಂದಾಜುಗಳ ಸಮಿತಿ ಹಾಗೂ ಬಿ.ಸಿ. ನಾಗೇಶ್ ಅಧ್ಯಕ್ಷರಾಗಿರುವ ಭರವಸೆಗಳ ಸಮಿತಿ ಸೆ.26ರಿಂದ ವಿದೇಶ ಪ್ರವಾಸಕ್ಕೆ ತೆರಳಬೇಕಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರವಾಸ ರದ್ದುಪಡಿಸುವ ಸಾಧ್ಯತೆಯೂ ಇದೆ. ಗುರುವಾರ ಮೂರು ಸಮಿತಿಗಳ ಸಭೆ ನಡೆಯಲಿದ್ದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನದಮೇಲೆ ಶಾಸಕರ ಪ್ರವಾಸದ ಭವಿಷ್ಯ ನಿರ್ಧಾರವಾಗಲಿದೆ.

ಆದರೆ ಈ ಬಗ್ಗೆ ಸ್ಪೀಕರ್ ಕಚೇರಿಯಿಂದ ಲಿಖಿತ ಆದೇಶ ಇನ್ನೂ ಹೊರ ಬಿದ್ದಿಲ್ಲ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳ ಮೂಲಕ ಆಯಾ ಸಮಿತಿ ಅಧ್ಯಕ್ಷರಿಗೆ ಈ ಸೂಚನೆ ನೀಡಲಾಗಿದ್ದು, ನಿರ್ಧಾರವನ್ನು ಅವರ ಅವಗಾಹನೆಗೆ ಬಿಡಲಾಗಿದೆ ಎಂದು ಸ್ಪೀಕರ್ ಕಚೇರಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದೆ.

ಹೊರಟವರು ಯಾರು?: ಸಾರ್ವಜನಿಕ ಉದ್ದಿಮೆಗಳ ಸಮಿತಿ ಸದಸ್ಯರು ಈಗಾಗಲೇ ದಕ್ಷಿಣ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಈಗ ಅರ್ಜಿ ಸಮಿತಿ ಸದಸ್ಯರಾದ ಎನ್. ಯೋಗೇಶ್ ಭಟ್, ಎಸ್.ವಿ. ರಾಮಚಂದ್ರ, ಎಂ.ಸತ್ಯನಾರಾಯಣ, ಬೇಲೂರು ಗೋಪಾಲಕೃಷ್ಣ, ಬಿ.ಬಿ. ರಾಮಸ್ವಾಮಿ ಗೌಡ, ಸುರೇಶ್ ಗೌಡ, ದುರ್ಯೋಧನ ಎಂ. ಐಹೊಳೆ, ಮಲ್ಲಿಕಾ ಪ್ರಸಾದ್, ಪಿ.ಎಂ. ಅಶೋಕ್, ವಸತಿ ಸಮಿತಿಯ ನೆಹರೂ ಚೆನ್ನಬಸಪ್ಪ ಓಲೇಕಾರ್, ವೀರಭದ್ರಪ್ಪ ಹಾಲಹರವಿ, ಹಂಪಯ್ಯ ನಾಯಕ್ ಬಲ್ಲಟಗಿ, ಎನ್.ಎಚ್. ಶಿವಶಂಕರ ರೆಡ್ಡಿ, ಎಸ್.ಕೆ. ಬಸವರಾಜನ್, ಎಂ. ವಿರುಪಾಕ್ಷಪ್ಪ ಪ್ರವಾಸಕ್ಕೆ ಹೊರಟ ಸದಸ್ಯರು.

ಇವರ ಜತೆಗೆ ವಿಧಾನಸಭೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಂ. ಮಂಜುನಾಥ, ವಿಧಾನಸಭಾಧ್ಯಕ್ಷರ ಕಾರ್ಯದರ್ಶಿ ಎ.ಎನ್. ರಾಜಶೇಖರ, ಉಪಸಭಾಪತಿಗಳ ಕಾರ್ಯದರ್ಶಿ ಡಾ.ಕೆ.ವಿ. ಗುರುದತ್ತ, ಶಾಸನಸಭೆಯ ಎಸ್ಟೇಟ್ ಅಧಿಕಾರಿ ಡಿ.ವಿ. ಪ್ರಭು, ವಸತಿ ಸಮಿತಿ ಅಧೀನ ಕಾರ್ಯದರ್ಶಿ ಮಲ್ಲಪ್ಪ ಬಿ. ಕಾಳೆ, ವಸತಿ ಸಮಿತಿಯ ಸಹಾಯಕ ಎಸ್ಟೇಟ್ ಅಧಿಕಾರಿ ಗೋಪಾಲ್, ರೆಕಾರ್ಡಿಂಗ್ ಆಫಿಸರ್ ಎಂ. ಶಶಿಕಾಂತ ಅವರೂ ಪ್ರವಾಸಕ್ಕೆ ತೆರಳಲಿದ್ದಾರೆ.

ಇಂದು ಅಂದಾಜು ಸಮಿತಿ ಸಭೆ‌ಅಂದಾಜು ಸಮಿತಿ ಸದಸ್ಯರು ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ವಿಕಾಸಸೌಧದಲ್ಲಿ ಗುರುವಾರ ಸಭೆ ಸೇರಲಿದ್ದಾರೆ. ಅಧ್ಯಕ್ಷ ಅಭಯ್ ಪಾಟೀಲ್ ನೇತೃತ್ವದಲ್ಲಿ ಸದಸ್ಯರಾದ ಮುನಿಯಪ್ಪ, ಪ್ರಕಾಶ್ ಬಿ. ಹುಕ್ಕೇರಿ, ಕರಡಿ ಸಂಗಣ್ಣ, ಮಹಾದೇವಪ್ರಸಾದ್, ಅಮರೇಗೌಡ ಬಯ್ಯಾಪುರ್, ಶರಣಬಸಪ್ಪ ದರ್ಶನಾಪುರ, ಬಾಲಕೃಷ್ಣ, ವೀರಣ್ಣ ಚರಂತಿಮಠ್, ಡೆರ್ರ್‍ಇಕ್ ಎಂ.ಬಿ. ಫುಲಿನ್ ಫಾ, ದೊಡ್ಡನಗೌಡ ಜಿ.ಪಾಟೀಲ್, ಬಂಡೆಪ್ಪ ಕಾಶಂಪೂರ್, ಪಟ್ಟಣಶೆಟ್ಟಿ, ನೇಮರಾಜ್ ನಾಯಕ್, ಪಾಟೀಲ್, ಲಕ್ಷ್ಮಿನಾರಾಯಣ, ಪಾಟೀಲ್ ಸುರೇಶ್‌ಗೌಡರ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ /ವಿ.ಕ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-06

Tell a Friend

ಪ್ರತಿಸ್ಪಂದನ
Saleem, Camp Buehring, Kuwait
2012-09-06
ಅಧ್ಯಯನ ನಡೆಸಲು ಗೂಗಲ್ ಸಾಕಾಗುವುದಿಲ್ಲವೇ? ಇವರು ಹೋಗುವ ಅಭಿವೃದ್ದಿ ಹೊಂದಿದ ದೇಶದ ರಾಜಕಾರಿಣಿಗಳು ಎಲ್ಲಿ ಹೋಗಿದ್ದರು 'ಅಧ್ಯಯನಕ್ಕಾಗಿ' ತಮ್ಮ ದೇಶವನ್ನು ಅಭಿವೃದ್ಧಿ ಪಡಿಸಲು? ಇದೊಂದು ತೆರಿಗೆ ಹಣವನ್ನು ಪೋಲು ಮಾಡುವ ಚಟ ಅಲ್ಲವೇ? ಬಹುಶಹ ಕಪ್ಪು ಹಣ ವಿದೇಶದಲ್ಲಿ ಹೂಡಿಕೆ ಮಾಡಲು ಅಥವಾ ಸ್ವಿಸ್ಸ್ ಬ್ಯಾಂಕಲ್ಲಿ ಹೂಡಿಟ್ಟ ಹಣ ಸುರಕ್ಷಿತವಾಗಿದೆಯೋ ಇಲ್ವಾ ಎಂದು ನೋಡಲು ಹೋಗುತ್ತಿರಬೇಕು ಅಲ್ವೇ? ಅಥವಾ ಬಿನ್ನ ಮತ, ಕಚ್ಚಾಟ, ಹಗರಣಗಳು, ದಬ್ಬಾಳಿಕೆ ಮತ್ತು ಕೊನೆಯ ಅವಕಾಶ ಎಂಬ ಮಾನಸಿಕ ಒತ್ತಡದಿಂದ ಬಳಲಿ ಎಂಜಾಯ್ ಮಾಡಲು ವಿದೇಶಕ್ಕೆ ಹೋಗುತ್ತಿರಬೇಕು ಅಲ್ವೇ?
Naresh Shetty, Kandlur
2012-09-06
ಹಲ್ಕಾ ಗಳು
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri