ಮಂಗಳವಾರ, 28-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ

ಹುಬ್ಬಳ್ಳಿ:  ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಡಾ. ಜಾಫರ್ ಇಕ್ಬಾಲ್ ಸೊಲ್ಲಾಪುರಿ ಪಾಸ್‌ಪೋರ್ಟ್ ಅನ್ನು ಬುಧವಾರ ಆತನ ತಂದೆ ಶೇಖ್ ರಫೀಕ್ ಅಹಮದ್ ಸೊಲ್ಲಾಪುರಿ ಇಲ್ಲಿನ ಕೇಶ್ವಾಪುರ ಠಾಣೆ ಪೊಲೀಸರಿಗೆ ಒಪ್ಪಿಸಿದರು.

ಡಾ.ಜಾಫರ್ ಬಂಧನದ ಮರುದಿನ ಬೆಂಗಳೂರಿಗೆ ತೆರಳಿದ್ದ ಶೇಖ್ ರಫೀಕ್ ಕುಟುಂಬ ನಸುಕಿನಲ್ಲಿ ಹುಬ್ಬಳ್ಳಿಯ ಮನೆಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಸಿಸಿಬಿ ಪೊಲೀಸರು, ಡಾ. ಜಾಫರ್‌ನ ಪಾರ್ಸ್‌ಪೋರ್ಟ್ ನೀಡುವಂತೆ ಸೂಚಿಸಿದರು.

`ಮಗ ಪಾಸ್‌ಪೋರ್ಟ್ ಇಟ್ಟಿರುವ ಜಾಗ ನಮಗೆ ಗೊತ್ತಿಲ್ಲ. ಬೇಕಾದ ದಾಖಲೆಗಳನ್ನು ನೀವೇ ಹುಡುಕಿಕೊಳ್ಳಿ` ಎಂದು ಜಾಫರ್ ತಂದೆ ಶೇಖ್ ರಫೀಕ್ ತಿಳಿಸಿದರು. ಸ್ವಲ್ಪ ಹೊತ್ತು ಕಾದು ನಿಂತ ಅಧಿಕಾರಿಗಳು ಅಲ್ಲಿಂದ ಮರಳಿದರು. ಆನಂತರ ಮನೆಯ ಸದಸ್ಯರೇ ಪಾಸ್‌ಪೋರ್ಟ್ ಹುಡುಕಿ ಅದನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ, ಶೇಖ್ ರಫೀಕ್, `ಮಗನ ಬಂಧನದ ಸುದ್ದಿ ತಿಳಿದ ನಂತರ ನನ್ನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತು. ಚಿಕಿತ್ಸೆಗಾಗಿ ಕುಟುಂಬದ ಸದಸ್ಯರೊಂದಿಗೆ ಬೆಂಗಳೂರಿಗೆ ತೆರಳಿದ್ದೆ ಎಂದರು.

ಗೋವಾ ನಂಟಿನ ತನಿಖೆ

ಹುಬ್ಬಳ್ಳಿ:  ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ 11 ಮಂದಿ ಶಂಕಿತ ಉಗ್ರರಲ್ಲಿ ಕೆಲವರು ಹಲವು ಬಾರಿ ಗೋವಾಕ್ಕೆ ಭೇಟಿ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿರುವುದರಿಂದ ಈ ನಂಟಿನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಬಂಧಿಸಲಾದ ಸಾದಿಕ್ ಲಷ್ಕರಿ ಹಾಗೂ ರಿಯಾಜ್ ಹುಸೇನ್ ಬ್ಯಾಹಟ್ಟಿಯೊಂದಿಗೆ  ಪದೇ ಪದೇ ಗೋವಾಗೆ ಭೇಟಿ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾದಿಕ್ ಸಹೋದರಿ ಸೀಮಾ ಹಾಗೂ ರಿಯಾಜ್ ಸಹೋದರಿ ಫರ್‌ಜಾನಾ ಅವರನ್ನು ಮದುವೆಯಾಗಿರುವ ಯುವಕರು ಗೋವಾದವರಾಗಿದ್ದಾರೆ. ಎರಡೂ ಕುಟುಂಬಗಳ ನಡುವೆ ಸಂಪರ್ಕ ಇಲ್ಲದಿದ್ದರೂ ಇಬ್ಬರೂ ಇತ್ತೀಚೆಗೆ ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿರುವ ಸಿಸಿಬಿ, ಆಂತರಿಕ ಭದ್ರತಾ ದಳ ಹಾಗೂ ಅವಳಿ ನಗರ ಅಪರಾಧ ತನಿಖಾ ದಳದ ಅಧಿಕಾರಿಗಳು ಈಗಾಗಲೇ ಸಾದಿಕ್ ಪತ್ನಿ ಫಾತಿಮಾ ಅವರನ್ನು ಹುಬ್ಬಳ್ಳಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
 
ಆಕೆ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗೆ ಸಿಸಿಬಿ ಪೊಲೀಸರ ಒಂದು ತಂಡ ಶುಕ್ರವಾರ ಭಟ್ಕಳಕ್ಕೆ ತೆರಳಲಿದೆ.  ಬೆಂಗಳೂರಿನಲ್ಲಿ ಬಂಧಿತನಾಗಿರುವ ಮಹಮ್ಮದ್ ಯೂಸುಫ್ ನಾಲಾಬಂದ್ ನೀಡಿದ್ದ ಹುಬ್ಬಳ್ಳಿಯ ವಿಳಾಸ ಸುಳ್ಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆತನ ಮನೆ ಬಾಗಲಕೋಟೆಯ ಹಳೆ ತರಕಾರಿ ಮಾರುಕಟ್ಟೆಯ ಬಳಿ ಇದೆ.

ಡಿಆರ್‌ಡಿಒ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ ಅಜೀಜ್ ಅಹಮದ್ ಮಿರ್ಜಾ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಗಣೇಶ್ ಹಾಗೂ ಆನಂದ ಕಬ್ಬೂರಿ ನೇತೃತ್ವದ ತಂಡ ಹೆಚ್ಚಿನ ತನಿಖೆಗಾಗಿ ಬುಧವಾರ ಬಾಗಲಕೋಟೆಗೆ ತೆರಳಿದೆ.

ಮದುವೆಯ ಮಾಹಿತಿ: ಬಂಧಿತ ಉಬೇದುಲ್ಲಾ ಇಮ್ರಾನ್ ಬಹದ್ದೂರಿಯ ಅಣ್ಣನ ಮದುವೆ ಇದೇ 13ರಂದು ಕಾರವಾರದಲ್ಲಿ ನಡೆಯಲಿದೆ. `ಮದುವೆಗೆ ತೆರಳುತ್ತಿರುವುದರಿಂದ ಎರಡು ದಿನ ಹುಬ್ಬಳ್ಳಿಯಲ್ಲಿ ಇರುವುದಿಲ್ಲ` ಎಂದು ಆತನ ಕುಟುಂಬದ ಸದಸ್ಯರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತನಿಖಾಧಿಕಾರಿಗಳ ವರ್ಗ
ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಶಂಕಿತ ಉಗ್ರರ ಬಗ್ಗೆ ತನಿಖೆ ನಡೆಸುತ್ತಿರುವ ಮೂವರು ತನಿಖಾಧಿಕಾರಿಗಳನ್ನು ಪೊಲೀಸ್ ಇಲಾಖೆ ವರ್ಗಾಯಿಸಿದೆ.

ಸಿಸಿಬಿ ಇನ್‌ಸ್ಪೆಕ್ಟರ್ ನಿಂಗಪ್ಪ ಸಕ್ರಿ ಅವರನ್ನು ಬೆಂಗಳೂರಿನ ಶಿವಾಜಿನಗರ ಠಾಣೆಗೆ, ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರವೀಂದ್ರ ಶಿರೂರು ಅವರನ್ನು ಬೆಳಗಾವಿಗೆ ಹಾಗೂ ಆಂತರಿಕ ಭದ್ರತಾ ದಳದ ಇನ್‌ಸ್ಪೆಕ್ಟರ್ ಪ್ರಶಾಂತ ಸಿದ್ಧನಗೌಡ ಅವರನ್ನು ನರಗುಂದಕ್ಕೆ ವರ್ಗಾವಣೆ ಮಾಡಲಾಗಿದೆ.

ಆರೋಪಿಗಳು ಹಾಗೂ ಅವರ ಸಂಪರ್ಕಗಳ ಬಗ್ಗೆ ವಿಚಾರಣೆ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಬದಲಾಯಿಸಿದರೆ ತನಿಖೆಗೆ ಹಿನ್ನಡೆಯಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು

ದಾವಣಗೆರೆ: ಬೆಂಗಳೂರಿನಲ್ಲಿ ಈಚೆಗೆ ಸಿಕ್ಕಿಬಿದ್ದ ನಗರ ಮೂಲದ ಶಂಕಿತ ಉಗ್ರ ಡಾ.ನಯೀಂ ಸಿದ್ದಿಕಿಯನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ನಗರಕ್ಕೆ ತರುವ ಕಾರ್ಯ ದಿಢೀರನೆ ರದ್ದಾಗಿದೆ.

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಮನೆ ಮುಂದೆ ಕುತೂಹಲದಿಂದ ಜನಜಂಗುಳಿ ಸೇರುತ್ತಿರುವುದನ್ನು ನೋಡಿ ಸಿದ್ದಿಕಿಯ ತಾಯಿ ಮತ್ತು ತಂಗಿ  ಬೇಸತ್ತು ಮೌನಕ್ಕೆ ಶರಣಾಗಿದ್ದಾರೆ.

 ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಮನೆ ಮುಂದೆ ಕುತೂಹಲದಿಂದ ಜನಜಂಗುಳಿ ಸೇರುತ್ತಿರುವುದನ್ನು ನೋಡಿ ಬೇಸತ್ತ ಸಿದ್ದಿಕಿಯ ತಾಯಿ ಮತ್ತು ತಂಗಿ ಬುಧವಾರ ಮನೆಗೆ ಬೀಗಹಾಕಿ ತೆರಳಿದ್ದಾರೆ.

ಸಿದ್ದಿಕಿಯ ವಿಚಾರಣಾ ಸ್ಥಳವನ್ನು ಬದಲಾಯಿಸಲಾಗಿದೆ ಎಂಬ ಸುದ್ದಿಯೂ ಹಬ್ಬಿತು. ಆದರೆ, ಸಿದ್ದಿಕಿಯನ್ನು ದಾವಣಗೆರೆಗೆ ಕರೆತರಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಇಲ್ಲಿನ ಕೆ.ಬಿ. ಬಡಾವಣೆಯ ಅವನ ಮನೆ ಮುಂದೆ ಕುತೂಹಲದಿಂದ ಜನ ಜಮಾಯಿಸಿದ್ದರು.

ಪೊಲೀಸ್ ಮೂಲಗಳು ಹೇಳುವಂತೆ, ಸಿದ್ದಿಕಿಗಿಂತಲೂ ಹೆಚ್ಚಾಗಿ ಆತನ ತಂದೆ ದಾದಾಪೀರ್‌ನ ವಿಚಾರಣೆಯೇ ಹೆಚ್ಚು ಮಹತ್ವ ಪಡೆದಿದೆ. ಇಲ್ಲಿ ಪುಟ್ಟ ಕಾಯಿನ್ ಬೂತ್ ಅಂಗಡಿ ಹೊಂದಿದ್ದ ದಾದಾಪೀರ್, ಇದ್ದಕ್ಕಿದ್ದಂತೆಯೇ ಹಲವು ದಿನಗಳ ಕಾಲ ಎಲ್ಲಿಗೋ ಹೋಗುತ್ತಿದ್ದ. ಮತ್ತೆ ಬರುತ್ತಿದ್ದ. ಅಂಗಡಿಯಿಂದ ಬರುತ್ತಿದ್ದ ಅಲ್ಪ ಆದಾಯದಲ್ಲಿ ಮಗನನ್ನು ವೈದ್ಯಕೀಯ ಕೋರ್ಸ್ ಓದಿಸುವುದು ಹೇಗೆ ಸಾಧ್ಯವಾಯಿತು ಎಂಬ ಅನುಮಾನ ಮೂಡಿದೆ.

ಶಂಕಿತ ಉಗ್ರರ ಕುಟುಂಬದ ಸದಸ್ಯರ ಭೇಟಿ

ಬೆಂಗಳೂರು : ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿರುವ ಶಂಕಿತ ಉಗ್ರರನ್ನು ಭೇಟಿಯಾಗಲು ಅವರ ಕುಟುಂಬದ ಸದಸ್ಯರಿಗೆ ಪೊಲೀಸರು ಬುಧವಾರ ಅವಕಾಶ ಮಾಡಿಕೊಟ್ಟಿದ್ದಾರೆ.

ಬುಧವಾರ ಮಧ್ಯಾಹ್ನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಶಂಕಿತ ಉಗ್ರರನ್ನು ಭೇಟಿ ಮಾಡಲು ಕುಟುಂಬದ ಸದಸ್ಯರಿಗೆ ಅವಕಾಶ ನೀಡಲಾಯಿತು.

ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ವರದಿಗಾರ ಮುತಿ-ಉರ್‌-ರೆಹಮಾನ್‌- ಸಿದ್ದಕಿ ಹಾಗೂ ಓಬೆದುಲ್ಲಾ ಅವರನ್ನು ಅವರ ಕುಟುಂಬದವರು ಮಧ್ಯಾಹ್ನ 3 ಗಂಟೆಗೆ ಭೇಟಿಯಾಗಿ ಮಾತುಕತೆ ನಡೆಸಿದ್ದು, ಇವರು ಅರ್ಧ ಗಂಟೆಗೂ ಅಧಿಕ ಸಮಯ ಸಮಾಲೋಚನೆ ನಡೆಸಿದ್ದಾರೆ.

ಈಚೆಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ತಪರಾಕಿ ಬಳಿಕ ಎಚ್ಚೆತ್ತುಕೊಂಡಿರುವ ನಗರ ಪೊಲೀಸ್‌ ಆಯುಕ್ತ ಬಿ.ಜೆ.ಜ್ಯೋತಿಪ್ರಕಾಶ್‌ ಮಿರ್ಜಿ ಖುದ್ದು ಆಸಕ್ತಿ ವಹಿಸಿ ಶಂಕಿತ ಉಗ್ರರನ್ನು ಅವರ ಕುಟುಂಬದ ಸದಸ್ಯರು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಟ್ಟರು ಎಂದು ತಿಳಿದು ಬಂದಿದೆ.

ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

ಬೆಂಗಳೂರು :ಶಂಕಿತ ಉಗ್ರರ ಜಾಲ ಕಾರಾವಳಿ ಪ್ರದೇಶದಲ್ಲಿ ವ್ಯಾಪ್ತಿಸಿರುವ ಶಂಕೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ತಂಡ ಈಗ ಕಾರಾವಳಿ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಭಟ್ಕಳ ಸೇರಿದಂತೆ ಮತ್ತಿತರ ಕಡೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರಿಗೆ ಬಲೆ ಬೀಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು 'ಉದಯವಾಣಿ'ಗೆ ಮಾಹಿತಿ ನೀಡಿವೆ.

ಬ್ಯಾಂಕ್‌ ಅಕೌಂಟ್‌ ತಪಾಸಣೆ

ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಕೊಲ್ಲಿ ರಾಷ್ಟ್ರಗಳಿಂದ ವ್ಯಾಪಕ ಹಣ ಪೂರೈಕೆಯಾಗಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ, ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ಮತ್ತಿತರ ಕಡೆ ಶಂಕಿತ ಉಗ್ರರ ಬ್ಯಾಂಕ್‌ ಖಾತೆಗಳ ಪರಿಶೀಲನೆ ನಡೆಸಿ ಹಣದ ಮೂಲದ ಪತ್ತೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮೇಲ್‌ಗ‌ಳ ಮಾಹಿತಿ

ಶಂಕಿತ ಉಗ್ರರಿಗೆ ಬಂದಿರುವ ಈ.ಮೇಲ್‌ ಸಂದೇಶಗಳ ಬಗ್ಗೆ ಸೈಬರ್‌ ಪೊಲೀಸರಿಂದ ಸಿಸಿಬಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಇದರಿಂದ ಬಂಧಿತ ಆರೋಪಿಗಳಿಗೆ ಮುಸ್ಲಿಂ ರಾಷ್ಟ್ರಗಳಿಂದ ದೊಡ್ಡ ಮಟ್ಟದಲ್ಲಿ ಹಣಕಾಸಿನ ಸಹಕಾರ ಲಭಿಸಿರುವ ಬಗ್ಗೆ ಪ್ರಬಲ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : `ಪ್ರಜಾವಾಣಿ | ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06

Tell a Friend
ಇತರ ಸಂಭಂದಪಟ್ಟ ವರದಿಗಳು
»ರಾಯಚೂರಿನಲ್ಲಿ ಸಿಸಿಬಿ ಪೊಲೀಸರಿಂದ ಮತ್ತೋರ್ವ ಬಂಧನ
»ಶಂಕಿತರ ಸೆರೆ ಶ್ರೇಯ ಆಂಧ್ರದ `ಎಸ್‌ಐಬಿ'ಗೆ | ಹುಬ್ಬಳ್ಳಿಯಲ್ಲಿ 28 ದಿನ ಬೀಡು ಬಿಟ್ಟಿದ್ದ ಹೈದ್ರಾಬಾದ್‌ ಪೊಲೀಸ್
»‘ಉಗ್ರ’ರ ಕುರಿತಂತೆ ಮಾಧ್ಯಮಗಳಿಂದ ವದಂತಿ ಕಡಿವಾಣ ಹಾಕಲು ಸಂಪಾದಕರಿಗೆ ಮಿರ್ಜಿ ಮನವಿ
»'ಸಿಸಿಬಿ ಬೇಟೆ ': ಮೆಡಿಕೋ ನಯೀಮ್ ಸಿದ್ದಿಖಿ ಸೆರೆ; ಬಂಧಿತರ ಸಂಖ್ಯೆ 18ಕ್ಕೆ
»ಉಗ್ರರ ಸ್ಕೆಚ್‌: ಮಾಸ್ಟರ್‌ ಮೈಂಡ್‌ ಯಾರು? ನಾಪತ್ತೆ!: ಕಾರ್ಯಾಚರಣೆ ಚುರುಕುಗೊಳಿಸಿದ ರಾಜ್ಯ ಪೊಲೀಸರು | ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆ ದಾಳಿಯ ಸಂಚು: ಅಲ್ಲಗಳೆದ ಮಿರ್ಜಿ
»ಉಗ್ರರ ಟಾರ್ಗೆಟ್ ಲಿಸ್ಟ್...
»ನಾಟ್ಯ ಗೃಹದಲ್ಲಿ ನಮ್ಮ ಶಾಸಕರ ಮೋಜು!: ಅಧ್ಯಯನಕ್ಕೆಂದು ಅರ್ಜೆಂಟೈನಾಕ್ಕೆ ತೆರಳಿರುವ ಜನಪ್ರತಿನಿಧಿಗಳಿಂದ‘ಟ್ಯಾಂಗೋ ಹೌಸ್’ಗಳಿಗೆ ಭೇಟಿ
»ವಿಚಾರಣೆ ವಿಶೇಷ ತಂಡ: ನೆರೆರಾಜ್ಯಗಳಲ್ಲೂ ಉಗ್ರರ ಬೇಟೆ ಬಂಧಿತರ ಸಂಖ್ಯೆ 16| ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು? | ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳ ಹೊಸ ಅಸ್ತ್ರ: ಪೊಲೀಸರಿಂದ ಮಾಹಿತಿ ಬಯಲು
»ಬಂಧಿತ ಶಂಕಿತ ಉಗ್ರರ ಪೋಷಕರಿಂದ ದೂರು, ಪಚಾವೋ, ಮಿರ್ಜಿಗೆ ಗೌರ್ನರ್ ಬುಲಾವ್
»ಆಂಧ್ರ, ಮಹಾರಾಷ್ಟ್ರಕ್ಕೂ ಕರ್ನಾಟಕ 'ಉಗ್ರ'ರ ಲಿಂಕ್; ಹಲವರ ಬಂಧನ
»ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
»ಬಂಧಿತರು ಉಗ್ರವಾದಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ;ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಸ್ಪಷ್ಟನೆ
»ಮಾಹಿತಿ ನೀಡುತ್ತಿಲ್ಲ: ಶಂಕಿತ ಉಗ್ರರ ತಂದೆ ಅಳಲು | ಮಾಹಿತಿಗೆ ಇಂಟರ್‌ಪೋಲ್ ನೆರವು' - ಅಶೋಕ್
»`ಉಗ್ರರ ಮಾಹಿತಿಗೆ ಇಂಟರ್‌ಪೋಲ್ ನೆರವು'
»ಎಲ್‌ಇಟಿ, ಹುಜಿ ನಂಟು; ಗಣ್ಯರ ಹತ್ಯೆಗೆ ಸಂಚು: ಬೆಚ್ಚಿಬಿದ್ದನಗರ: ಶಂಕಿತ ಉಗ್ರರಲ್ಲಿ ವೈದ್ಯ, ಎಂಜಿನಿಯರ್, ಗುತ್ತಿಗೆದಾರ, ಪತ್ರಕರ್ತ ಹಾಗೂ ಗಾರೆ ಕಾರ್ಮಿಕ! | ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ
»

ಪ್ರತಿಸ್ಪಂದನ
RASHEED, BANTWALA
2012-09-06
ಎ ಬಿ ವಿ ಪಿ ಕಿರಾತಕರು ಸುಳ್ಯದಲ್ಲಿ ಹುಡುಗಿಯೊಬ್ಬಳ ಮೇಲೆ ನಡೆಸಿದ ಹಲ್ಲೆ ವಾರ್ತೆ ಗ.ಕ ಕೆ ಇನ್ನು ಸಿಕ್ಕಲ್ಲವೇ ?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri