ಸೋಮವಾರ, 17-02-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ತಪ್ಪಲಿನ ಬಾಗಿನಮಲೆ ಮೀಸಲು ಅರಣ್ಯದಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಹಾಗೂ ನಕ್ಸಲರ ನಡುವೆ ಮಂಗಳವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ತಂಡದ ಸದಸ್ಯನೊಬ್ಬ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಹೆಸರು ವಿಳಾಸ ಇನ್ನೂ ಖಚಿತಪಟ್ಟಿಲ್ಲ.

`ನಕ್ಸಲರ ಜಾಡು ಹಿಡಿದು ಮಂಗಳವಾರ ಎರ್ಮಾಯಿಲ್ ಕಡೆಯಿಂದ ಅರಣ್ಯ ಹೊಕ್ಕು ದಿನವಿಡೀ ಬಿಸಿಲೆ ಘಾಟಿ ಪರಿಸರದ ದಟ್ಟಾರಣ್ಯದಲ್ಲಿ ಶೋಧ ಕಾರ್ಯ ನಡೆಸಿದ ಎಎನ್‌ಎಫ್ ಪಡೆಗೆ, ರಾತ್ರಿ ನಕ್ಸಲರ ಮುಖಾಮುಖಿಯಾಯಿತು.

ನಕ್ಸಲರು ಎಎನ್‌ಎಫ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದಾಗ, ಪಡೆಯು ಪ್ರತಿಯಾಗಿ ದಾಳಿ ನಡೆಸಿದ ಕಾರಣ ನಕ್ಸಲ್ ತಂಡದ ಸದಸ್ಯ ಹತನಾದ. ಉಳಿದವರು ಪರಾರಿಯಾಗಿದ್ದಾರೆ. ನಕ್ಸಲರ ತಂಡದಲ್ಲಿ ಎಷ್ಟು ಜನ ಇದ್ದರು ಎಂಬುದು ಖಚಿತಪಟ್ಟಿಲ್ಲ. ಘಟನಾ ಸ್ಥಳದಲ್ಲಿ 2 ಗ್ರೆನೇಡ್ ಎಸೆದ ಗುರುತುಗಳಿವೆ` ಎಂದು ಎಎನ್‌ಎಫ್ ಮೂಲಗಳು ತಿಳಿಸಿವೆ.

ಇಲ್ಲಿಗೆ ಸಮೀಪದ ಕುಲ್ಕಂದದ ಪಳ್ಳಿಗದ್ದೆಯಲ್ಲಿ ಕಾಡಿನ ಅಂಚಿನ ಎರ್ಮಾಯಿಲ್‌ನ ಮನೆಯೊಂದಕ್ಕೆ ಶನಿವಾರ ಭೇಟಿ ನೀಡಿದ್ದ ನಕ್ಸಲರು ಊಟ ಮಾಡಿ ಹೋಗಿದ್ದರು.

ಎಎನ್‌ಎಫ್ ಭಾನುವಾರವೇ ಈ ಪರಿಸರದಲ್ಲಿ ನಕ್ಸಲರಿಗಾಗಿ ಶೋಧ ಆರಂಭಿಸಿತ್ತು. ಅಂದು ನಕ್ಸಲರು ಹಾಗೂ ಎಎನ್‌ಎಫ್ ನಡುವೆ ಗುಂಡಿನ ಚಕಮಕಿಯೂ ನಡೆದಿತ್ತು. ದಾಳಿ ವೇಳೆ ತಪ್ಪಿಸಿಕೊಂಡ ನಕ್ಸಲರು ಎರ್ಮಾಯಿಲ್ ಕಡೆಗೆ ತೆರಳಿದ್ದಾರೆ ಎಂಬ ಶಂಕೆ ಬಲವಾಗಿತ್ತು.
 
ಒಂದು ಬದಿಯಲ್ಲಿ ಅಡ್ಡಹೊಳೆ ಇನ್ನೊಂದು ಬದಿಯಲ್ಲಿ ಕೋಟೆಸಾರು ಹೊಳೆ ಇರುವ ಅರಣ್ಯದ ಒಳಗೆ ಇದ್ದ ನಕ್ಸಲರು ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದರಿತ ಎ.ಎನ್.ಎಫ್ ಪಡೆಯವರು ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದ್ದರು.

ಸುಬ್ರಹ್ಮಣ್ಯ ಪರಿಸರದ ಕಾಡಿನಲ್ಲಿ ಠಿಕಾಣಿ ಹೂಡಿದ್ದ ನಕ್ಸಲ್ ನಿಗ್ರಹ ಪಡೆಯವರು ಸೋಮವಾರ ಬಾಗಿನಮಲೆ ಮೀಸಲು ಅರಣ್ಯದಲ್ಲಿ ನಕ್ಸಲರಿಗಾಗಿ ಶೋಧ ಮುಂದುವರಿಸಿದ್ದರು. ಮಂಗಳವಾರ ಬೆಳಿಗ್ಗೆ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಘಾಟಿಯ ಗಡಿ ಚೌಡಮ್ಮ ಗುಡಿಯ ಎಡಭಾಗದಿಂದ ಶೋಧ ಮುಂದುವರಿಸಿದ ನಕ್ಸಲ್ ನಿಗ್ರಹ ಪಡೆ, ದಟ್ಟವಾದ ಕಾನನದಲ್ಲಿ ಏಳು ಕಿ.ಮೀ ದೂರ ಸಾಗಿ, ರಾತ್ರಿ ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿತ್ತು. ಪ್ರದೇಶದಲ್ಲಿ ನಕ್ಸಲರ ಚಲನವಲನ ಕಂಡು ಬಂದಿದ್ದರಿಂದ ಕಾರ್ಯಾಚರಣೆ ತೀವ್ರಗೊಳಿಸಿದ್ದು, ರಾತ್ರಿ 7.45ರ ವೇಳೆಗೆ ಗುಂಡಿನ ಚಕಮಕಿ ನಡೆದಿದೆ` ಎಂದು ಎ.ಎನ್.ಎಫ್ ಪಡೆಯವರು ಖಚಿತಪಡಿಸಿದ್ದಾರೆ.

ಕಾರ್ಯಾಚರಣೆಗೆ ಅಡ್ಡಿಯಾದ ಮಳೆ: ಬಿಸಿಲೆ ಗಡಿಭಾಗದ ಎಡಭಾಗದಿಂದ 7ಕಿ.ಮೀ ದೂರ ತಲುಪಲು ಎಎನ್‌ಎಫ್ ಪಡೆ ಪ್ರಯಾಸಪಟ್ಟಿತು. ನಿಲ್ಲದ ಭಾರಿ ಮಳೆ, ರಕ್ತ ಹೀರುವ ಜಿಗಣೆ ಕಾಟವೂ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿತು. ಕಳೆದೆರಡು ದಿನಗಳಿಂದ ಅನ್ನ, ಆಹಾರ, ನಿದ್ರೆ ಇಲ್ಲದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಎನ್‌ಎಫ್ ಸಿಬ್ಬಂದಿಗೆ 7.ಕಿ.ಮೀ ಗುಡ್ಡ ಹತ್ತಿಯೇ ಊಟದ ಪೊಟ್ಟಣಗಳನ್ನು ಬುಧವಾರ ಸಂಜೆಯ ವೇಳೆಗೆ ತಲುಪಿಸಲಾಯಿತು.
 
ಅನ್ನ, ಆಹಾರ, ನಿದ್ರೆ ಇಲ್ಲದೆ ರಾತ್ರಿ ಕಾರ್ಯಾಚರಿಸಿದ ನಕ್ಸಲ್ ಪಡೆ ಸುಬ್ರಹ್ಮಣ್ಯ ಪರಿಸರದಲ್ಲಿ ಇದೇ ಮೊದಲ ಬಾರಿ ಪಶ್ಚಿಮ ವಲಯ ಐಜಿಪಿ ಪ್ರತಾಪ ರೆಡ್ಡಿ, ಎಎನ್‌ಎಫ್ ಕಮಾಂಡರ್ ಅಲೋಕ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಎಸ್‌ಪಿ  ಸುಭಾಷ್ ಗುಡಿಮನಿ, ಎಎನ್‌ಎಫ್ ಎಸ್‌ಪಿ.ವಾಸುದೇವ ಮೂರ್ತಿ, ಎಎಸ್‌ಪಿ ಎಂ.ಎನ್.ಅನುಚೇತ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು.

ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದಕ್ಕೆ ಕರೆತರುವ ಕಾರ್ಯ ಬುಧವಾರ ಸಂಜೆ ಆರಂಭವಾಯಿತು.

ನಕ್ಸಲ್ ಸಾಹಿತ್ಯ, ಬಂದೂಕು ಪತ್ತೆ
ಸುಬ್ರಹ್ಮಣ್ಯ ವರದಿ:
ನಕ್ಸಲರು ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದರು. ಅವರು ಇದ್ದ ಟೆಂಟ್‌ನಲ್ಲಿ 25 ಕೆ.ಜಿ ಅಕ್ಕಿ ಮತ್ತಿತರ ದಿನಸಿ ಸಾಮಗ್ರಿ, ನಕ್ಸಲ್    ಸಾಹಿತ್ಯ , ಟಿಫನ್ ಬಾಕ್ಸ್ ಬಾಂಬ್, ಏಳು ಕಿಟ್ ಬ್ಯಾಗ್ ಹಾಗೂ ಬಂದೂಕು ವಶಪಡಿಸಿಕೊಳ್ಳಲಾಗಿದೆ ಎಂದು ನಕ್ಸಲ್ ನಿಗ್ರಹ ಪಡೆಯ ಕಮಾಂಡರ್ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇಲ್ಲಿಗೆ ಸಮೀಪದ ಕುಲ್ಕುಂದಲ್ಲಿ ಬುಧವಾರ ನಕ್ಸಲ್ ಎನ್‌ಕೌಂಟರ್ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, `ಸ್ಥಳದಲ್ಲಿ ದೊರೆತ ಸಾಹಿತ್ಯವು ಕನ್ನಡ, ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದವು. ಕೈ ಬರಹದ ಹಾಗೂ ಮುದ್ರಿತ ಸಾಹಿತ್ಯಗಳೆರಡೂ ದೊರೆತಿವೆ` ಎಂದರು.

ಬಹುಮಾನ ಘೋಷಣೆ: ದುರ್ಗಮವಾದ ಕಾಡಿನಲ್ಲಿ, ಅಬ್ಬರದ ಮಳೆಯ ನಡುವೆ ಅನ್ನಾಹಾರ, ನಿದ್ರೆಯಿಲ್ಲದೆ, ರಕ್ತಹೀರುವ ಜಿಗಣೆಗಳ ಕಾಟದಲ್ಲಿ ಕನಿಷ್ಠ ಹತ್ತು ಬೆಟ್ಟಗಳನ್ನು ಏರಿ ಇಳಿದು ನಕ್ಸಲರನ್ನು ಬೆನ್ನಟ್ಟಿ ಧೈರ್ಯದಿಂದ ಕಾರ್ಯಾಚರಣೆ ನಡೆಸಿದ ಎಎನ್‌ಎಫ್ ಸಿಬ್ಬಂದಿ ಬಗ್ಗೆ ಮೆಚ್ಚಿದ ಪೊಲೀಸ್ ಡಿ.ಜಿ.ಪಿ ಅವರು ಹರ್ಷ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.

ಸತ್ತವ ಕುಪ್ಪಸ್ವಾಮಿ ?
ಎಎನ್‌ಎಫ್ ಗುಂಡಿಗೆ ಬಲಿಯಾದ ನಕ್ಸಲ್ ತಂಡದ ಸದಸ್ಯ ತಮಿಳುನಾಡು ಮೂಲದ ಕುಪ್ಪಸ್ವಾಮಿ ಎಂದು ಮೂಲಗಳು ತಿಳಿಸಿವೆ. ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ.

ಕುಲ್ಕಂದದಲ್ಲಿ ನಕ್ಸಲ ಚಲನವಲನ: ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಅರಣ್ಯ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ನಕ್ಸಲರ ಚಲನವಲನ ಕಾಣಿಸಿಕೊಂಡಿತ್ತು. ಆ. 23ರಂದು ಚೇರುವಿನ ಮನೆಯೊಂದಕ್ಕೆ ಭೇಟಿ ನೀಡಿದ್ದ ನಕ್ಸಲರು 2.ಕೆ.ಜಿ ಅಕ್ಕಿ, 2 ತೆಂಗಿನ ಕಾಯಿ ಹಿಡಿದುಕೊಂಡು ಹೋಗಿದ್ದರು.
 
ಆ 24ರಂದು ಆ ಪರಿಸರದ ಮನೆಯೊಂದರಿಂದ ಸೀಮೆಎಣ್ಣೆ ತೆಗೆದುಕೊಂಡು ಹೋಗ್ದ್ದಿದರು. ಆ ಬಳಿಕ ಸುಬ್ರಹ್ಮಣ್ಯದ ಹೋಂ ಸ್ಟೇ ಒಂದರಲ್ಲಿ ತಂಗಿದ್ದ ನಕ್ಸಲರು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಜಾರ್ಜ್ ಮಾಡಿ ಹಿಂತಿರುಗಿದ್ದರು. ಬಳಿಕ ಗುರುವಾರ (ಆ.30) ಮತ್ತು  ಶುಕ್ರವಾರ (ಆ.31) ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಪಳ್ಳಿಗದ್ದೆಗೆ ನಕ್ಸಲರು ಬಂದು ಹಿಂತಿರುಗ್ದ್ದಿದರು. ಬಳಿಕವೂ ಕಾಡಿನಂಚಿನಲ್ಲಿರುವ  ತೋಟದ ಕೆಲವು ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ದರು.
 
ಇದಾದ ಬಳಿಕ, ನಕ್ಸಲರ ತಂಡ ಕಳೆದ ಶನಿವಾರ ಎರ್ಮಾಯಿಲ್‌ನ ಮನೆಯಲ್ಲಿ ಊಟ ಮಾಡಿತ್ತು. ನಕ್ಸಲ್ ಗುಂಪಿನ ಸುಂದರಿ ಎಂಬಾಕೆ ಆ ಮನೆಯ ಅಡುಗೆ ಕೋಣೆಗೂ ಪ್ರವೇಶ ಮಾಡಿದ್ದಳು` ಎಂದು ಪೋಲೀಸರಿಗೆ ಮಾಹಿತಿ ದೊರಕಿದೆ. ಈ ಬೆಳವಣಿಗೆಯಿಂದ ಆತಂಕಗೊಂಡ ಕುಲ್ಕುಂದ ಪಳ್ಳಿಗದ್ದೆಯ ಕೆಲವು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಊರು ತೊರೆದಿದ್ದವು.

ದುರ್ಗಮ ಕಾಡಿನಲ್ಲಿ ಎಎನ್‌ಎಫ್ ಕಾರ್ಯಾಚರಣೆ

ಸುಬ್ರಹ್ಮಣ್ಯ: ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್)ಯೊಂದಿಗೆ ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ತಂಡದ ಸದಸ್ಯನೋರ್ವ ಬಲಿಯಾಗಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಯಸಳೂರು ಅರಣ್ಯ ಭಾಗದ ಗಡಿಯಲ್ಲಿ ಮಂಗಳವಾರ ರಾತ್ರಿ 7.45ರ ಸುಮಾರಿಗೆ ನಕ್ಸಲ್‌ ಎನ್‌ಕೌಂಟರ್‌ ನಡೆದಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಕಳೆದ ಕೆಲವು ದಿನಗಳಿಂದ ಕುಲ್ಕುಂದ ಪಳ್ಳಿಗದ್ದೆ ಪರಿಸರದ ಮನೆಗಳಿಗೆ ಭೇಟಿ ನೀಡುತ್ತ ಭೀತಿ ಮೂಡಿಸಿದ್ದ ನಕ್ಸಲರ ವಿರುದ್ಧ ಎಎನ್‌ಎಫ್ ಮೂರು ದಿನಗಳಿಂದೀಚೆಗೆ ಬಾಗಿನಮಲೆ ಮೀಸಲು ಅರಣ್ಯದಲ್ಲಿ 5 ತಂಡಗಳಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದೆ.

ರವಿವಾರ ತಮ್ಮೊಂದಿಗೆ ಗುಂಡಿನ ಚಕಮಕಿ ನಡೆಸಿ, ಗ್ರೆನೇಡ್‌ ಎಸೆದು ಪರಾರಿಯಾಗಿದ್ದ ನಕ್ಸಲರು ಎರ್ಮಾಯಿಲ್‌ ಕಡೆಗೆ ತೆರಳಿದ್ದಾರೆ ಎಂಬ ಶಂಕೆ ಎಎನ್‌ಎಫ್ ಸಿಬಂದಿಯಲ್ಲಿ ಬಲವಾಗಿತ್ತು. ಅಡ್ಡಹೊಳೆ ಮತ್ತು ಕೋಟೆಸಾರು ಹೊಳೆಯ ಮಧ್ಯೆ ಎರ್ಮಾಯಿಲ್‌ ಅರಣ್ಯ ಇರುವ ಕಾರಣ ನಕ್ಸಲರು ಅಲ್ಲಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬ ದೃಢ ನಂಬಿಕೆಯೊಂದಿಗೆ ಎಲ್ಲ ಕಡೆಗಳಿಂದಲೂ ಶೋಧ ಆರಂಭಿಸಿದ್ದರು.

ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಘಾಟಿಯ ಗಡಿ ಚೌಡಮ್ಮ ಗುಡಿಯ ಎಡಭಾಗದಿಂದ ಶೋಧ ಕಾರ್ಯ ಆರಂಭಿಸಿದ ನಕ್ಸಲ್‌ ನಿಗ್ರಹ ಪಡೆ ದಟ್ಟ ಕಾನನದಲ್ಲಿ ಮುನ್ನಡೆಯುತ್ತಾ ಏಳು ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ನಡೆಸಿ ರಾತ್ರಿ ಅಲ್ಲೇ ತಂಗಿತ್ತು. ರಾತ್ರಿ ವೇಳೆ ಅವರ ಮೇಲೆ ನಕ್ಸಲರು ಗುಂಡು ಹಾರಿಸಿದ್ದು, ಪ್ರತಿದಾಳಿ ನಡೆಸಿದಾಗ ಓರ್ವ ನಕ್ಸಲ್‌ ಹತನಾದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಎರಡು ಗ್ರೆನೇಡ್‌ ಪತ್ತೆಯಾಗಿವೆ.

* ಸಂಚಾರ ನಿರ್ಬಂಧ

ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಘಟನೆಯ ಸ್ಥಳ ಪರಿಶೀಲನೆಗೆ ಹಿರಿಯ ಅಧಿಕಾರಿಗಳು ತೆರಳಿದ ನಿಮಿತ್ತ ಸುಬ್ರಹ್ಮಣ್ಯದಿಂದ ಬಿಸಿಲೆ ಮಾರ್ಗದಲ್ಲಿ ಎಎನ್‌ಎಫ್, ಪೊಲೀಸ್‌ ಮತ್ತು ಮಾಧ್ಯಮ ಸಿಬಂದಿಯ ಹೊರತು ಇತರ ಜನ - ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು.

* ಕಳೆದೆರಡು ದಿನಗಳಿಂದ ಅನ್ನ, ಆಹಾರ, ನಿದ್ರೆ ಇಲ್ಲದೆ ಕಾರ್ಯಾಚರಿಸುತ್ತಿರುವ ಪಡೆಯ ಯೋಧರಿಗೆ 7 ಕಿ.ಮೀ. ಗುಡ್ಡ ಹತ್ತಿಯೇ ಊಟದ ಪ್ಯಾಕೆಟನ್ನು ಬುಧವಾರ ಸಂಜೆಯ ವೇಳೆಗೆ ತಲುಪಿಸಲಾಯಿತು.

* ಎಎನ್‌ಎಫ್ ಪಡೆಯ ಅಹೋರಾತ್ರಿ ಕಾರ್ಯಾಚರಣೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಳಗ್ಗೆಯೇ ವದಂತಿ

ಬುಧವಾರ ಬೆಳಗ್ಗೆ 8.30ರ ವೇಳೆಗೆ ಎಎನ್‌ಎಫ್ ಐಜಿಪಿ ಆಲೋಕ್‌ ಕುಮಾರ್‌ ಅವರು ಅರಣ್ಯ ವೀಕ್ಷಕ ದಾಮೋದರ ಮತ್ತು ತಮ್ಮ ತಂಡದೊಂದಿಗೆ ಸುಬ್ರಹ್ಮಣ್ಯ - ಗುಂಡ್ಯ ರಸ್ತೆಯ ಎರ್ಮಾಯಿಲ್‌ ಕಡೆಯಿಂದ ಅರಣ್ಯವನ್ನು ಪ್ರವೇಶಿಸಿದ್ದು, ಅದಾಗಲೇ ಓರ್ವ ನಕ್ಸಲ್‌ ಮೃತಪಟ್ಟಿದ್ದಾನೆ ಎಂಬ ವದಂತಿ ಹಬ್ಬಿತ್ತು.

ದ.ಕ. ಜಿಲ್ಲಾ ಪ್ರಭಾರ ಎಸ್‌ಪಿ ಸುಭಾಸ್‌ ಗುಡಿಮನಿ, ಅರಣ್ಯ ರಕ್ಷಕ ಸೋಮಯ್ಯ, ಎಎಸ್‌ಪಿ ಅನುಚೇತನ್‌, ವೃತ್ತ ನಿರೀಕ್ಷಕರಾದ ಸುದರ್ಶನ್‌ ಮತ್ತು ಗುರುಪ್ರಸಾದ್‌, ಠಾಣಾಧಿಕಾರಿಗಳಾದ ಎಚ್‌.ಇ. ನಾಗಾರಾಜ್‌, ರವಿ, ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ , ತಾ.ಪಂ. ಉಪಾಧ್ಯಕ್ಷ ನಾರಾಯಣ ಆಗ್ರಹಾರ ಅವರು ಬೇರೆಬೇರೆ ತಂಡಗಳಲ್ಲಿ ಘಟನಾ ಸ್ಥಳಕ್ಕೆ ತೆರಳಿದರು. ತ‌ದನಂತರ ಪುತ್ತೂರು ಎಸ್‌ಪಿ ಪ್ರಸನ್ನ, ಪುತ್ತೂರು ತಹಶೀಲ್ದಾರ್‌ ಕುಳ್ಳೇಗೌಡ ಸ್ಥಳ ಮಹಜರಿಗಾಗಿ ಇನ್ನೊಂದು ಪಡೆಯೊಂದಿಗೆ ತೆರಳಿದರು.

ಭಾರೀ ಮಳೆ, ಜಿಗಣೆ ಕಾಟ

ಘಟನಾ ಸ್ಥಳವು ಬಿಸಿಲೆ ಗಡಿಯಿಂದ 7 ಕಿ.ಮೀ. ದೂರದ ಗುಡ್ಡದ ಮೇಲಿದ್ದು, ಭಾರೀ ಮಳೆ ಮತ್ತು ರಕ್ತ ಹೀರುವ ಜಿಗಣೆಗಳ ಕಾಟದಿಂದಾಗಿ ಘಟನಾ ಸ್ಥಳವನ್ನು ತಲುಪಲು ಪೊಲೀಸ್‌ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾರೀ ಪ್ರಯಾಸ ಪಡಬೇಕಾಯಿತು.

ಕುಲ್ಕುಂದಲ್ಲಿ ನಕ್ಸಲ್‌ ಹೆಜ್ಜೆ ...

* ಆ. 22ರಂದು ನಕ್ಸಲರ ತಂಡವೊಂದು ಕಾಡಿನಂಚಿನಲ್ಲಿರುವ ಎರ್ಮಾಯಿಲ್‌ನ ಮನೆಯೊಂದರಲ್ಲಿ ಊಟ ಮಾಡಿ ತೆರಳಿದೆ.

* ಆ. 23ರಂದು ಚೇರುವಿನ ಮನೆಯೊಂದಕ್ಕೆ ಬಂದವರು 2.ಕೆ.ಜಿ ಅಕ್ಕಿ,2 ತೆಂಗಿನ ಕಾಯಿ ಪಡೆದುಕೊಂಡು ಹೋಗಿದ್ದರು.

* ಆ. 24ರಂದು ಭಾಗ್ಯದ ಮನೆಯೊಂದರಿಂದ ಸೀಮೆಎಣ್ಣೆ ತೆಗೆದುಕೊಂಡು ಹೋಗಿದ್ದಾರೆ.

* ಸುಬ್ರಹ್ಮಣ್ಯದ ಹೋಂಸ್ಟೇಯೊಂದರಲ್ಲಿ ನಕ್ಸಲರು ತಂಗಿ ತಮ್ಮ ಲ್ಯಾಪ್‌ಟಾÂಪ್‌, ಮೊಬೈಲ್‌ ಚಾರ್ಜ್‌ ಮಾಡಿ ಹಿಂದಿರಿಗಿದ್ದರು.

* ಆ. 30 ಮತ್ತು 31ರಂದು ಸುಬ್ರಹ್ಮಣ್ಯದ ಕುಲ್ಕುಂದ ಪಳ್ಳಿಗದ್ದೆಗೆ ನಕ್ಸಲರು ಬಂದು ಹಿಂದಿರುಗಿದ್ದಾರೆ. ಅನಂತರದ ದಿನಗಳಲ್ಲಿ ಕಾಡಿನಂಚಿನಲ್ಲಿರುವ ನಡುತೋಟದ ಕೆಲವು ಮನೆಗಳಿಗೆ ನಕ್ಸಲರು ಭೇಟಿ ನೀಡಿರಬಹುದು ಎಂದು ಶಂಕಿಸಲಾಗಿದೆ.

* ಕುಲ್ಕುಂದದ ಮನೆಯೊಂದರ ಅಡುಗೆ ಕೋಣೆಗೆ ಪ್ರವೇಶ ಮಾಡಿದವಳು ನಕ್ಸಲ್‌ ಗುಂಪಿನ ಸುಂದರಿ ಎಂದು ಗುರುತಿಸಲಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ | ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06

Tell a Friend
ಇತರ ಸಂಭಂದಪಟ್ಟ ವರದಿಗಳು
»ಎಎನ್‌ಎಫ್-ನಕ್ಸಲ್‌ ಮಧ್ಯೆ ಗುಂಡಿನ ಕಾಳಗ : ಓರ್ವ ನಕ್ಸಲ್ ಸಾವಿಗೀಡಾಗಿರುವ ಶಂಕೆ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri