ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ

ಅಬುಜಾ: ನೈಜೀರಿಯಾ ಕರಾವಳಿಯಾಚೆ ಬುಧವಾರ ಬೆಳಗ್ಗೆ ಕಡಲ್ಗಳ್ಳರು ಅಪಹರಿಸಿದ್ದ ತೈಲ ನೌಕೆಯನ್ನು ನೈಜೀರಿಯಾ ನೌಕಾಪಡೆ ಮಧ್ಯಪ್ರವೇಶಿಸಿದ ಬಳಿಕ ಬಿಡುಗಡೆಗೊಳಿಸುವುದರೊಂದಿಗೆ ಅಪಹರಣ ನಾಟಕ ಸುಖಾಂತ್ಯಗೊಂಡಿದೆ. ನೌಕೆಯಲ್ಲಿದ್ದ ಎಲ್ಲ 23 ಭಾರತೀಯ ನಾವಿಕರು ಸುರಕ್ಷಿತರಾಗಿದ್ದಾರೆ.

 ಗಿನಿಯಾ ಕೊಲ್ಲಿಯಲ್ಲಿ ಕಡಲ್ಗಳ್ಳರು ವಶಕ್ಕೆ ತೆಗೆದುಕೊಂಡಿದ್ದ ಸಿಂಗಾಪುರ ಒಡೆತನದ 'ಅಬುಧಾಬಿ ಸ್ಟಾರ್‌' ಹೆಸರಿನ ತೈಲ ನೌಕೆಯನ್ನು ನೈಜೀರಿಯಾ ನೌಕಾಪಡೆ ತಡೆದುನಿಲ್ಲಿಸಿತು. ನೌಕಾಪಡೆ ಅಧಿಕಾರಿಗಳು ತೈಲನೌಕೆಯೊಳಗೆ ತೆರಳಿದ ಬಳಿಕ ಅಪಹರಣ ಬಿಕ್ಕಟ್ಟು ಅಂತ್ಯಗೊಂಡಿತೆಂದು ಅಧಿಕೃತ ಮೂಲಗಳು ತಿಳಿಸಿವೆ.

 'ಕಡಲ್ಗಳ್ಳರು ನೌಕಾಪಡೆಯ ಹಡಗನ್ನು ನೋಡಿದ ಬಳಿಕ ಬಹುಶಃ ತೈಲನೌಕೆಯಿಂದ ಪಲಾಯನಗೈದರು. ಕಡಲ್ಗಳ್ಳರನ್ನು ಬಂಧಿಸಿದ ಅಥವಾ ವಶಕ್ಕೆ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮೂಲಗಳು ಹೇಳಿವೆ.

ಅಪಹರಣ ನಾಟಕ 24 ತಾಸುಗಳಿಗಿಂತ ಕಡಿಮೆ ಅವಧಿಯಲ್ಲಿ ಕೊನೆಗೊಂಡಿತು ಮತ್ತು ಎಲ್ಲ ನಾವಿಕ ಸಿಬಂದಿ ಸುರಕ್ಷಿತರಾಗಿದ್ದಾರೆ. ನಾವಿಕ ಸಿಬಂದಿ ನೌಕೆಯ ಅತ್ಯಂತ ಬಿಗಿ ಭದ್ರತೆಯ ಜಾಗವಾದ 'ಸಿಟಾಡೆಲ್‌'ನಲ್ಲಿ ತಮ್ಮನ್ನು ತಾವು ಕೂಡಿಹಾಕಿಕೊಂಡು ಬೀಗ ಜಡಿದಿದ್ದರು. ಬಹುಶಃ ತೈಲವನ್ನು ಕದಿಯುವ ಸಲುವಾಗಿ ನೌಕೆಯ ಅಪಹರಣ ನಡೆದಿತ್ತು ಮತ್ತು ಒತ್ತೆ ಹಣಕ್ಕಾಗಿ ಆಗಿರಲಿಲ್ಲ. ಏಕೆಂದರೆ ಸೊಮಾಲಿ ಕರಾವಳಿಯಾಚೆ ಈ ಹಿಂದೆ ಇಂಥದ್ದೇ ಘಟನೆಗಳು ಸಂಭವಿಸಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನೌಕೆಯಲ್ಲಿನ ತೈಲವನ್ನು ಹೊರತೆಗೆಯಲು ಕಡಲ್ಗಳ್ಳರಿಗೆ ನೌಕೆಯ ಸಿಬಂದಿಯ ನೆರವಿನ ಅಗತ್ಯವಿದ್ದುದರಿಂದ ತೈಲ ಕೂಡ ಸುರಕ್ಷಿತವಾಗಿದೆ.

ಈ ಮುನ್ನ ಭಾರತದ ನಾವಿಕರ ಸುರಕ್ಷತೆಯ ಹೊಣೆ ಹೊಂದಿರುವ ನೌಕಾಯಾನ ಮಹಾನಿರ್ದೇಶನಾಲಯ(ಡಿಜಿಎಸ್‌) ಅಪಹರಣದ ಸುದ್ದಿ ತಿಳಿದು ನೈಜೀರಿಯಾ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಅದನ್ನನುಸರಿಸಿ ನೈಜೀರಿಯಾ ನೌಕಾಪಡೆ ಕಾರ್ಯಾಚರಣೆಗೆ ಇಳಿದಿತ್ತು ಎಂದು ಅಧಿಕಾರಿ ಹೇಳಿದರು.

ದಾಳಿಕೋರರು ನೈಗರ್‌ ಡೆಲ್ಟಾ ಪ್ರದೇಶದ ತೈಲ ಚೋರರೆಂದು ವರದಿಯೊಂದು ತಿಳಿಸಿತ್ತು. ಇದು ಕಳೆದ ಎರಡು ವಾರಗಳಲ್ಲಿ ಪ್ರದೇಶದಲ್ಲಿ ಸಂಭವಿಸಿರುವ ಇಂಥ ಮೂರನೇ ದಾಳಿಯಾಗಿದೆ. ಅಬುಧಾಬಿ ಸ್ಟಾರ್‌ ನೌಕೆ ಅಪಹರಣಕ್ಕೊಳಗಾಗುವ ವೇಳೆ ನೈಜೀರಿಯಾದ ಅತಿದೊಡ್ಡ ಬಂದರು ಲಾಗೋಸ್‌ನಿಂದ 80 ಕಿ.ಮೀ. ದೂರದಲ್ಲಿ ಲಂಗರು ಹಾಕಿತ್ತೆಂದು ನೌಕಾಪಡೆಯ ವಕ್ತಾರರೋರ್ವರು ಹೇಳಿದರು.

23 ಭಾರತೀಯ ನಾವಿಕರಿದ್ದ ನೌಕೆ ಅಪಹರಣ:

ಲಾಗೋಸ್‌: ನೈಜೀರಿಯಾದ ವಾಣಿಜ್ಯ ನಗರಿಯಾಗಿರುವ ಲಾಗೋಸ್‌ನ ಕರಾವಳಿ ತೀರದಲ್ಲಿ ತೈಲ ಸಾಗಾಟ ನಿರತವಾಗಿದ್ದ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ಹಡಗು, 23 ಭಾರತೀಯ ನಾವಿಕರನ್ನು ಒಳಗೊಂಡಿದ್ದು, ಸದ್ಯ ಅಪಹರಣಕ್ಕೀಡಾಗಿರುವ ಹಡಗು ಹಾಗೂ ನಾವಿಕರ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತೈಲ ಟ್ಯಾಂಕರ್‌ ಕಂಪೆನಿ ತಿಳಿಸಿದೆ.

ದುಬೈ ಮೂಲದ ತೈಲ ಟ್ಯಾಂಕರ್‌ ಕಂಪೆನಿಯಾಗಿರುವ ಪಯೋನೀರ್‌ ಎಲ್‌.ಎಲ್‌.ಸಿ.ಗೆ ಸೇರಿದ ಈ ಹಡಗು ಬೋನ್ನಿ ಬಂದರಿನಿಂದ ಗ್ಯಾಸೋಲಿನ್‌ನ್ನು ಅಮೆರಿಕಕ್ಕೆ ಕೊಂಡೊಯ್ಯುತ್ತಿತ್ತು ಮಾತ್ರವಲ್ಲದೆ ಇದರಲ್ಲಿದ್ದ ಎಲ್ಲ ನೌಕಾ ಸಿಬಂದಿಗಳೂ ಭಾರತೀಯರಾಗಿದ್ದಾರೆ ಎಂದು ಕಂಪೆನಿಯ ವಕ್ತಾರರಾದ ಪ್ಯಾಟ್‌ ಆ್ಯಡಮ್‌ಸನ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ಸದ್ಯ ಹಡಗಿನಲ್ಲಿರುವ ಎಲ್ಲ ನಾವಿಕರೂ ಸುರಕ್ಷಿತವಾಗಿದ್ದು, ಅವರ ಮೇಲೆ ಕಡಲ್ಗಳ್ಳರು ದಾಳಿ ನಡೆಸಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಈವರೆಗೆ ಅಪಹರಣದ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲವಾಗಿದ್ದು, ಒತ್ತೆಹಣಕ್ಕಾಗಿ ಬೇಡಿಕೆ ಬಂದಿಲ್ಲ . ಹಡಗು ಹಾಗೂ ನಾವಿಕರ ಸುರಕ್ಷಿತ ಬಿಡುಗಡೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಕಂಪೆನಿ ನಡೆಸಲಿದೆ ಎಂದವರು ಹೇಳಿದರು.

ಕಡಲ್ಗಳ್ಳರು ಹಡಗನ್ನು ಪ್ರವೇಶಿಸಿದ ಬಳಿಕ ನೌಕೆಯಲ್ಲಿನ ಎಲ್ಲಾ ಸಿಬಂದಿಗಳನ್ನು ಅದರಲ್ಲಿನ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಕಡಲ್ಗಳ್ಳರ ಪ್ರವೇಶದ ಬಳಿಕ, ಹಡಗು, ಕಂಪೆನಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಬುಧವಾರ ಮುಂಜಾನೆ ನೌಕೆಯನ್ನು ಅಪಹರಿಸಲಾಗಿದೆ ಎಂದು ಕಂಪೆನಿ ಹೇಳಿದರೆ, ಸಾಗರ ಅಧಿಕಾರಿಗಳು, ಮಂಗಳವಾರ ರಾತ್ರಿ ಶಸ್ತ್ರಸಜ್ಜಿತ ಕಡಲ್ಗಳ್ಳರು ನೌಕೆಯನ್ನು ಪ್ರವೇಶಿಸಿ, ಅದರಲ್ಲಿನ ನಾವಿಕರಿಗೆ ಹಲ್ಲೆಗೈದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕಡಲ್ಗಳ್ಳರು, ನೌಕೆಯನ್ನು ಸಮುದ್ರದ ಮಧ್ಯೆಕ್ಕೆ ಕೊಂಡೊಯ್ದಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri