`ಸತ್ಯಾಗ್ರಹ'ದಲ್ಲಿ ಕರೀನಾ?... |
ಪ್ರಕಟಿಸಿದ ದಿನಾಂಕ : 2012-09-05
ಪ್ರಕಾಶ್ ಝಾ ನಿರ್ದೇಶನದ `ಸತ್ಯಾಗ್ರಹ` ಚಿತ್ರದಲ್ಲಿ ಕರೀನಾ ನಟಿಸಲಿದ್ದಾರೆಯೇ?ಬಿ-ಟೌನ್ನಲ್ಲಿ ಅಂಥದ್ದೊಂದು ಸುದ್ದಿ ನಿಧಾನವಾಗಿ ಹರಡುತ್ತಿದೆ. ಈ ಹಿಂದೆ ಪ್ರಕಾಶ್ ಅವರನ್ನು ಈ ಬಗ್ಗೆ ಕೇಳಿದಾಗ ಸ್ಪಷ್ಟವಾಗಿ ನಿರಾಕರಿಸಿದ್ದರು. ಈಗ ಮತ್ತದೇ ಪ್ರಶ್ನೆಯನ್ನು ಝಾ ಮುಂದಿರಿಸಿದಾಗ, ಮುಗಳ್ನಗುತ್ತ ಸುಮ್ಮನಾಗುತ್ತಿದ್ದಾರೆ.
ಈ ಮೌನವನ್ನು ಸಹಮತಿ ಎಂದುಕೊಳ್ಳುವುದೋ ಎಂಬುದೇ ಚರ್ಚೆಯ ವಿಷಯವಾಗಿದೆ. ಝಾ ಮೊದಲಿನಂತೆ ನಿರಾಕರಿಸುತ್ತಿಲ್ಲ. ಆದರೆ ಇನ್ನು ಹತ್ತು ದಿನಗಳಲ್ಲಿ ಪಾತ್ರಗಳ ತೀರ್ಮಾನವಾಗಲಿದೆ ಎಂದು ಹೇಳುತ್ತಿದ್ದಾರೆ.
ಕರೀನಾ ಈ ಚಿತ್ರಕ್ಕೆ ಅಂತಿಮ ತೀರ್ಮಾನವಾದರೆ ಝಾ ಅವರೊಂದಿಗೆ ಇದು ಅವರ ಮೊದಲ ಚಿತ್ರವಾಗಲಿದೆ. ಅಜಯ್ ದೇವಗನ್ ಜೊತೆಗೆ ಓಂಕಾರಾ ನಂತರ ಎರಡನೆಯ ಚಿತ್ರವಾಗಲಿದೆ.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆಧಾರವಾಗಿಸಿಕೊಂಡು ನಿರ್ಮಿಸುತ್ತಿರುವ `ಸತ್ಯಾಗ್ರಹ` ಚಿತ್ರದ್ಲ್ಲಲಿ ಅಮಿತಾಬ್ ಬಚ್ಚನ್ ಸಹ ನಟಿಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-05
|
|
|