ಚಿಕ್ಕಮಗಳೂರು: ಯುಪಿಎ ವಿರುದ್ಧ ಎಬಿವಿಪಿಯಿಂದ ಪ್ರತಿಭಟನೆ |
ಪ್ರಕಟಿಸಿದ ದಿನಾಂಕ : 2012-09-05
ಚಿಕ್ಕಮಗಳೂರು,
ಸೆ. 4: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ಹಾಗೂ ಪ್ರಧಾನಿ
ಡಾ.ಮನಮೋಹನ್ಸಿಂಗ್ ರಾಜೀನಾಮೆಗೆ ಆಗ್ರಹಿಸಿ ಕಾಲೇಜ್ ಬಂದ್ ನಡೆಸಿ, ಅಖಿಲ ಭಾರತ
ವಿದ್ಯಾರ್ಥಿ ಫೆೆಡರೇಷನ್ನ ಕಾರ್ಯಕ ರ್ತರು ಜಿಲ್ಲೆಯ ವಿವಿಧೆಡೆಗಳಲ್ಲಿ ಮಂಗಳವಾರ
ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು
ನಗರದ ಹನುಮಂತಪ್ಪ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಮತ್ತು ಕಾಲೇಜು
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇದೇ ವೇಳೆ ಹನು ಮಂತಪ್ಪ ವೃತ್ತದ ಬಳಿ ರಸ್ತೆ
ತಡೆ ನಡೆಸಲು ಎಬಿವಿಪಿ ಕಾರ್ಯಕರ್ತರು ಪ್ರಯತ್ನಿ ಸಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ
ವಿಫಲವಾಯಿತು. ಈ ನಡುವೆ ಕೆಲವು ಸಮಯ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಇದಕ್ಕೂ
ಮುನ್ನ ಎಬಿವಿಪಿ ಮುಖಂಡ ದಯಾನಂದ ತಿರುಗುಣ ಮಾತನಾಡಿ, ಭಾರತದ ಸ್ವಾತಂತ್ರ್ಯದ ನಂತರ
ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ಈ ದೇಶವನ್ನು ಆಳಿರುವ ಕಾಂಗ್ರೆಸ್, ಅಧಿಕಾರ
ಹಿಡಿಯುವುದೇ ಸಿದ್ಧಾಂತ, ಭ್ರಷ್ಟಾಚಾರವೇ ಸಂಸ್ಕೃತಿ ಎಂದು ಭಾವಿಸಿರುವಂತಿದೆ. ಅಂದು
1947ರಲ್ಲಿ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಭಾರತೀಯ ಸೇನೆಗೆ ಜೀಪು
ಖರೀದಿಯಲ್ಲಿ ಮಾಡಿದ 80 ಸಾವಿರ ಕೋಟಿ ರೂ. ಹಗರಣದಿಂದ ಹಿಡಿದು ಕಲ್ಲಿದ್ದಲು ಗಣಿ
ಹಂಚಿಕೆಯ 1.86 ಲಕ್ಷ ಕೋಟಿ ರೂ.ಗಳವರೆಗೆ ಹಗರಣ ನಡೆಸಿದೆ. ಇದು ಹಿಂದೆಂದೂ ಕಂಡು ಕೇಳರಿಯ
ದಂತಹ ಭ್ರಷ್ಟಾಚಾರ, ಹಗರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಇಂತಹ
ಹಗರಣಗಳಿಂದ ದೇಶವು ವಿಶ್ವ ಮಟ್ಟದಲ್ಲಿ ತನ್ನ ವೌಲ್ಯವನ್ನು ಕಳೆದುಕೊ ಳ್ಳುವಂತೆ
ಮಾಡಿದೆ. ಭಾರತವನ್ನು ಬಲಿಷ್ಠ, ಉತ್ಕೃಷ್ಟ, ಸಮರ್ಥ, ಸದೃಢ, ಸ್ವಾಭಿಮಾನಿ
ರಾಷ್ಟ್ರವನ್ನಾಗಿ ಕಟ್ಟಲು ಆಗ್ರಹಿಸಿದರೆ ಕೇಂದ್ರ ಸರಕಾರ ಯಾವುದಕ್ಕೂ ಪ್ರತಿಕ್ರಿಯಿಸದೆ
ವೌನ ವಹಿಸಿರುವುದು ಅತ್ಯಂತ ಖಂಡನೀಯ. ಸೋನಿಯಾಗಾಂಧಿ ಸೇರಿದಂತೆ ಸರಕಾರದಲ್ಲಿರುವ ಹಾಗೂ
ಸರಕಾರದಲ್ಲಿ ಇಲ್ಲದಿರುವ ನೂರಾರು ಕಪ್ಪು ಹಣದ ಶ್ರೀಮಂತರ ಹೆಸರನ್ನು ಬಹಿರಂಗಗೊಳಿಸಲು
ಹಿಂದೇಟು ಹಾಕುತ್ತಿರುವ ಅತ್ಯಂತ ದುರ್ಬಲ ಪ್ರಧಾನ ಮಂತ್ರಿ ರಾಜೀನಾಮೆ ನೀಡಿ ಮನೆಗೆ
ತೆರಳಬೇಕೆಂದು ಎಬಿವಿಪಿ ಒತ್ತಾಯಿಸಿದೆ. ಇದೇ ರೀತಿ ಎಪಿವಿಪಿ ಕಾರ್ಯಕರ್ತರು ಜಿಲ್ಲೆಯ
ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿದರು.
ವರದಿಯ ವಿವರಗಳು |
 |
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-05
|
|
|