ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!

ಹಣೆಬರಹಕ್ಕೆ ಯಾರೂ ಹೊಣೆ ಅಲ್ಲ. ಹಾಗೆಂದು ಅದು ಹೊರೆಯೂ ಅಲ್ಲ. ಬದುಕು ಇಷ್ಟೇ ಎಂದು ಕೈಚೆಲ್ಲಿ ಕುಳಿತರೆ, ಅದು ಹಾಗೆಯೇ ಇರುತ್ತದೆ. ಆದರೆ ನಮ್ಮ ಬದುಕನ್ನು ನಾವೇ ನಿರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ ಇತರರ ಬಾಳಿಗೂ ನೆರವಾಗಬಹುದು ಎಂಬುದನ್ನು ಆರತಿ ನಾಯಕ್ ತೋರಿಸಿಕೊಟ್ಟಿದ್ದಾರೆ. ವರ್ಷದ ಹಿಂದೆ ಅಭಿಷೇಕ್ ಮುಂಡೆ ಈಕೆಯ ಬದುಕನ್ನು ರೀಡಿಫ್‌ನಲ್ಲಿ ಹೀಗೆ ತೆರೆದಿಟ್ಟಿದ್ದಾರೆ.

ಛೆ ಇದೆಂಥಾ ಬದುಕು! ಆರತಿಯ ಜಾಗದಲ್ಲಿ ಯಾರೇ ಇದ್ದರೂ ಹೀಗೇ ಯೋಚಿಸುತ್ತಿದ್ದರು. ಆದರೆ, ಆರತಿ ಆ ಜಾಯಮಾನದವಳಲ್ಲ. ಬದುಕು ಹೇಗೇ ಇದ್ದರೂ ಅದನ್ನು ಬಾಳಬೇಕು. ಅದಕ್ಕೊಂದು ಗುರಿಕೊಟ್ಟು ಸಾರ್ಥಕಪಡಿಸಿಕೊಳ್ಳಬೇಕು ಎಂದು ಸದಾ ಹಂಬಲಿಸಿದವಳು.

ಮುಂಬಯಿಯ ಖರೇ ಚಾಳ್ ಖರೇನೇ ಒಂದು ನರಕದ ಕೊಂಪೆ. ಬೆಂಕಿಪೊಟ್ಟಣದ ಮಾದರಿಯಲ್ಲಿ ಸಾಲುಸಾಲಾಗಿ ನಿರ್ಮಾಣಗೊಂಡಿರುವ ಮನೆ(ಇದನ್ನೂ ಮನೆ ಎಂದು ಕರೆಯಬಹುದಾದರೆ)ಗಳ ನಡುವೆ ವೆನಿಸ್‌ನ ನೀರಕಾಲುವೆಗಳ ಹಾಗೆ ಹರಿದುಹೋಗುವ ದೊಡ್ಡ ಚರಂಡಿಯ ನೀರು. ೧೫ರು.ಢ೧೫ ಅಡಿ ಅಗಲದ ಮನೆಯೇ ಈಕೆಯ ಕುಟುಂಬದ ಸೂರು. ಅಮ್ಮನೋ ತನಗಂಟಿದ ಬಡತನದ ಶಾಖದಲ್ಲಿಯೇ ರೊಟ್ಟಿ ತಟ್ಟುವ, ಅದರಲ್ಲೇ ನೆಮ್ಮದಿ ಕಾಣುವ ಗೃಹಿಣಿ. ಇನ್ನು ಅಪ್ಪ, ಹೇಳಲು ಆತನಿಗೆ ಕೆಲಸವಿತ್ತು. ಆದರೆ ಅಸಲು ಸೋಮಾರಿ. ಆತ ಟರ್ನರ್ ಆಗಿದ್ದ. ಶರ್ಟ್‌ಗಳ ಕೊರಳಪಟ್ಟಿಯಡಿ ಹೊಲಿಯಲಾಗುವ ಲೇಬಲ್‌ಗಳನ್ನು ತಯಾರಿಸುವ ಮೆಷಿನಿಸ್ಟ್. ಮಾಡಿದರೆ ಕೆಲಸಕ್ಕೆ ಮತ್ತು ಉಂಬಳಕ್ಕೆ ಕೊರತೆ ಇರಲಿಲ್ಲ. ಆದರೆ, ಕೆಲಸ ಆತನಿಗೆ ಕೈಗೆ ಹತ್ತುತ್ತಲೇ ಇರಲಿಲ್ಲ. ಮನಸ್ಸು ಬಂದಾಗ ದುಡಿಯುತ್ತಿದ್ದ. ಅದರಿಂದ ಬರುವ ಕಾಸೂ ಕೈಯಲ್ಲಿ ನಿಲ್ಲುತ್ತಿರಲಿಲ್ಲ. ಸಂಸಾರ ತೂಗಿಸುವುದೇ ಶ್ರಮವಾಗಿತ್ತು. ಆದರೆ ಆತ ಮಾತ್ರ ಶ್ರಮಜೀವಿ ಎಂಬುದಕ್ಕೆ ಅಪವಾದವಾಗಿದ್ದ. ಎಂದೋ, ಯಾರದೋ ಕೃಪಾಕಟಾಕ್ಷದಿಂದ ಕೊಂಡ ಅಂಗಡಿಯಿಂದ ಬರುತ್ತಿದ್ದ ಬಾಡಿಗೆಯೇ ಇವರ ಜೀವನಕ್ಕೆ ದಾರಿಯಾಗಿತ್ತು. ಅಮ್ಮ ಅವರಿವರ ಮನೆ ಚಾಕರಿ ಮಾಡಿಕೊಂಡು ಅದರಿಂದ ಬರುವ ವರಮಾನದಲ್ಲಿ ಹೇಗೋ ಮನೆ ತೂಗಿಸುತ್ತಿದ್ದಳು. ಅಲ್ಲಿಯೇ ಸಮೀಪದ ಶಾಲೆಯಲ್ಲಿ ಆರತಿಯ ಕಲಿಕಾ ಪರ್ವ ಆರಂಭವಾಗಿತ್ತು. ಓದಿನಲ್ಲಿ ತೀರಾ ಚುರುಕಲ್ಲದಿದ್ದರೂ, ಹೇಳಿಕೊಟ್ಟದ್ದನ್ನು ಮರೆಯದಷ್ಟು ಬುದ್ಧಿವಂತೆ.
ಅಮ್ಮನಿಗೊ ಯಾವುದೇ ಮಹತ್ವಾಕಾಂಕ್ಷೆ ಇಲ್ಲ. ಇನ್ನು ಅಪ್ಪ, ಸುಧಾರಿಸುವ ಯಾವುದೇ ಲಕ್ಷಣಗಳೂ ಇರಲಿಲ್ಲ. ಈ ಕತ್ತಲ ಬದುಕಿನಲ್ಲಿಯೇ ಆರತಿಯ ಬಾಲ್ಯ ಸಾಗಿತ್ತು. ತೀರಾ ಹೆಚ್ಚು ಬುದ್ಧಿವಂತರಲ್ಲದ ಬಡವರ ಮಕ್ಕಳನ್ನು ಸಾಗಹಾಕಲು ಶಾಲೆಗಳೂ ಒಂದು ಉಪಾಯ ಕಂಡುಕೊಂಡಿದ್ದವು. ಅವರನ್ನು ೧೦ನೇ ಈಯತ್ತೆವರೆಗೆ ಹೇಗಾದರೂ ಸಾಗಹಾಕಿ ನಂತರ ಕೈತೊಳೆದುಕೊಳ್ಳುತ್ತಿದ್ದವು. ಆರತಿಯ ಪಾಲಿಗೂ ಹಾಗೇ ಆಯಿತು. ನೋಡನೋಡುತ್ತಲೇ ಆಕೆ ಜೀವನದ ಅತಿ ದೊಡ್ಡ ಪರೀಕ್ಷೆಗೆ ಅಣಿಯಾಗಬೇಕಾಯಿತು. ಒಂದೆರಡು ಈಯತ್ತೆಗಳಲ್ಲಿ ‘ಬಡ್ತಿ’ ನೀಡಿ ಆಕೆಯನ್ನು ಎಸ್ಸೆಸ್ಸೆಲ್ಸಿಗೆ ತಳ್ಳಿದ್ದರು ಶಾಲೆಯ ಮಾಸ್ತರರು. ಆರತಿ ಇನ್ನೂ ಆ ಮಟ್ಟಕ್ಕೆ ಬೆಳೆದಿರಲಿಲ್ಲ. ಅಕ್ಷರಜ್ಞಾನವೂ ಆ ಸ್ತರದಲ್ಲಿ ಇರಲಿಲ್ಲ.

ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ಪರೀಕ್ಷೆಯ ಫಲಿತಾಂಶ ಬಂದಾಗ ಗರಬಡಿದಂತಾಯ್ತು. ಆರತಿ ಎರಡು ವಿಷಯಗಳಲ್ಲಿ ನಪಾಸಾಗಿದ್ದಳು. ಅಕ್ಷರಜ್ಞಾನವನ್ನು ಅಂಕಿ-ಸಂಖ್ಯೆಗಳ ಪರಿಧಿಯೊಳಗಿಟ್ಟು ವಿದ್ಯಾರ್ಥಿಯ ಹಣೆಬರಹ ಬರೆಯುವ ಇಂದಿನ ಶಿಕ್ಷಣ ವ್ಯವಸ್ಥೆ, ಆರತಿಯ ಬಾಳಿನ ಬೆಳಕನ್ನೇ ಕಸಿದಿತ್ತು. ಆಕೆಯನ್ನು ಕತ್ತಲೆಯ ಕೂಪಕ್ಕೆ ತಳ್ಳಲು ಸೋಮಾರಿ ಅಪ್ಪನಿಗೆ ಇದಕ್ಕಿಂತ ದೊಡ್ಡ ಕಾರಣ ಬೇಕಿರಲಿಲ್ಲ. ‘ನೀನು ಓದಿ ಕಡಿದು ಕಟ್ಟೆ ಹಾಕಿದ್ದು ಸಾಕು, ಇನ್ನು ಮನೆಯಲ್ಲಿ ಬಿದ್ದಿರು‘ ಎಂದು ಅಬ್ಬರಿಸಿದ. ‘ಇಂದಲ್ಲ ನಾಳೆ ಮದುವೆಯಾಗಿ ಬೇರೆ ಮನೆಗೆ ಹೋಗೋಳು. ನಿನಗೇಕೆ ಈ ಓದಿನ ಗೀಳು. ಮನೇಲಿ ಅಮ್ಮನಿಗೆ ಸಹಾಯ ಮಾಡಿಕೊಂಡಿರು‘ ಎಂದು ಗುಡುಗಿದ. ಅಪ್ಪನಿಗೆ ಎದಿರಾಡುವ ಚೈತನ್ಯ ಅಂದು ಆರತಿಗಿರಲಿಲ್ಲ. ಆ ಚಾಳ್‌ನಲ್ಲಿದ್ದ ಬಹುತೇಕ ಹುಡುಗಿಯರ ಹಾಡು-ಪಾಡು ಇದೇ ಆಗಿತ್ತು. ಅವರಿವರ ಮನೆಯ ಮುಸುರೆ ತಿಕ್ಕುವುದೇ ಅವರ ಬದುಕಾಗಿತ್ತು. ಆರತಿಯ ಕಣ್ಮುಂದೆ ಇದ್ದದ್ದೂ ಅದೇ ಆಯ್ಕೆ. ಆದರೆ, ಆ ದಿಟ್ಟ ಬಾಲಕಿ ಎಲ್ಲರೂ ನಡೆಯುವ ಹಾದಿಯಲ್ಲಿ ನಡೆಯಲು ನಿರಾಕರಿಸಿದಳು. ತನ್ನ ಬಾಳಿನ ದಾರಿಯನ್ನು ತಾನೇ ಕಂಡುಕೊಳ್ಳಲು, ಆ ದಾರಿಯಲ್ಲೇ ನಡೆಯಲು ತೀರ್ಮಾನಿಸಿದಳು. ಅದಕ್ಕೆ ಇಂಬು ನೀಡಿದ್ದು ಸ್ಯಾಟಿನ್ ರಿಬ್ಬನ್‌ನಿಂದ ತಯಾರಿಸಲಾಗುವ ಕೃತಕ ಹೂವುಗಳ ಕಾಯಕ.

ಒಂದು ಹೂವು ಕಟ್ಟಿದರೆ ಸಿಗುತ್ತಿದ್ದುದು ೯ ರೂ. ಹಾಗೆಂದು ಅದೇನೂ ಸುಲಭದ ಕೆಲಸ ಆಗಿರಲಿಲ್ಲ. ಕೈಯಲ್ಲಿ ಪಿನ್ನು ಹಿಡಿದು ಸ್ಯಾಟಿನ್ ಹಿಬ್ಬನ್‌ನನ್ನು ಅತ್ತಿಂದಿತ್ತ ಹೊರಳಿಸಿ ಒಂದು ಹೂವು ತಯಾರಿಸುವ ವೇಳೆಗೆ ಬೆರಳುಗಳು ರಕ್ತಕಾರುತ್ತಿದ್ದವು. ಪಿನ್ನು ಚುಚ್ಚಿ ಎಷ್ಟೋ ಬಾರಿ ಆರತಿ ನೋವಿನಿಂದ ಚೀರಿದ್ದಿದೆ. ಆದರೆ ಬದುಕೇ ಮುಳ್ಳಿನ ಹಾಸಿಗೆಯಾಗಿದ್ದಾಗ ಈ ಗಾಯ ಹೆಚ್ಚು ಗಾಢ ಎನಿಸಲಿಲ್ಲ ಆಕೆಗೆ. ಮುಂದಿನ ಮೂರು ವರ್ಷ ಕೃತಕ ಹೂವುಗಳ ಸಾಂಗತ್ಯದಲ್ಲಿಯೇ ಆರತಿಯ ಜೀವನ ಕಳೆಯಿತು. ಈ ಮೂರು ವರ್ಷಗಳಲ್ಲಿ ಆಕೆ ಮನೆಯಿಂದ ಹೊರಗೆ ಕಾಲಿಟ್ಟಿದ್ದೇ ಅಪರೂಪ. ಇನ್ನು ಆಟವಂತೂ ಕನಸು. ಬದುಕೇ ಒಂದು ಆಟವಾಗಿತ್ತು. ಇಷ್ಟಾದರೂ ಆರತಿ ತನ್ನ ಹಣೆಬರಹವನ್ನು ಹಳಿಯಲಿಲ್ಲ. ಹಾಗೆಂದು ಅದಕ್ಕೆ ಶರಣಾಗಲೂ ಇಲ್ಲ. ಒಂದು ಹೂವು ಕಟ್ಟುವ ಕಡೆ ಎರಡು ಹೂವು ಕಟ್ಟಿದಳು. ಒಂದು ಗುಚ್ಛ ಕಟ್ಟುವ ಕಡೆ ಎರಡು-ಮೂರು ಗುಚ್ಛ ಕಟ್ಟಿದಳು. ಇದರಿಂದ ಬಂದ ಹಣವನ್ನು ಕೂಡಿಟ್ಟಳು. ಕೆಲವೊಮ್ಮೆ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೂ ಮೂಲೆಯಲ್ಲಿ ಹಣತೆ ಹಚ್ಚಿಕೊಂಡು ಹೂವು ಕಟ್ಟುವ ಕಾಯಕದಲ್ಲಿ ತೊಡಗಿದಳು. ಹೀಗೆ ಹಗಲಿರುಳೆನ್ನದೆ ಸತತ ಮೂರು ವರ್ಷ ಮಾಡಿದ ಕಾಯಕಕ್ಕೆ ಪ್ರತಿಯಾಗಿ ಕೂಡಿಟ್ಟ ಹಣದ ಗಂಟೂ ದೊಡ್ಡದಾಯಿತು.

ಸುಮಾರು ಐದು ಸಾವಿರ ರೂಪಾಯಿಯ ಶ್ರಮದ ಗಳಿಕೆಯ ನಂತರ ಒಂದು ದಿನ ಧೈರ್ಯದಿಂದ ಅಪ್ಪನ ಮುಂದೆ ನಿಂತು ಹೇಳಿದಳು ‘ನಾನು ಓದು ಮುಂದುವರಿಸುತ್ತೇನೆ‘. ಅಪ್ಪ ಒಂದು ಕ್ಷಣ ಅವಾಕ್ಕಾದ. ಒದರಾಡಿದ, ಕೂಗಾಡಿದ, ಆದರೆ ಮಗಳ ದೃಢತೆಯ ಮುಂದೆ ಸುಮ್ಮನಾದ. ‘ಇಷ್ಟು ದಿನ ನೀನು ಹೇಳಿದಂತೆ ಕೇಳಿದೆ. ಈಗ ನಾನು ಅಂದುಕೊಂಡಿದ್ದನ್ನು ಮಾಡಲು ಅವಕಾಶ ಕೊಡು. ನಾನು ಮತ್ತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟುತ್ತೇನೆ. ಅಷ್ಟೇ ಅಲ್ಲ ಪಾಸಾಗುತ್ತೇನೆ ಸಹ‘ ಎಂಬ ಆರತಿಯ ಮಾತು ಅಪ್ಪನ ಮೊಂಡುವಾದಕ್ಕೆ ಬ್ರೇಕ್ ಹಾಕಿತ್ತು. ಹೂವು ಕಟ್ಟಿದ ಆ ದಿನಗಳಲ್ಲಿಯೇ ಸಮಯ ಸಿಕ್ಕಾಗಲೆಲ್ಲಾ ತಾನು ಎಡವಿದ ವಿಷಯಗಳ ಬಗ್ಗೆ ಮಾಡಿದ ಗಂಭೀರ ಅಧ್ಯಯನ ಆಕೆಯ ಕೈ ಬಿಡಲಿಲ್ಲ. ಮೂರು ವರ್ಷಗಳ ಹಿಂದೆ ತನ್ನ ಭವಿಷ್ಯವನ್ನೇ ನುಂಗಿಹಾಕಿದ್ದ ಆ ಎರಡು ವಿಷಯಗಳಲ್ಲಿ (ಸೋಶಿಯಲ್ ಸ್ಟಡೀಸ್ ಮತ್ತು ಗಣಿತ) ಆರತಿ ಅಗತ್ಯಕ್ಕಿಂತ ಹೆಚ್ಚು ಅಂಕ ಗಳಿಸಿ ಪಾಸಾಗಿದ್ದಳು.

ಇದು ಆರತಿಯ ಪಾಲಿಗೆ ಕೇವಲ ಫಲಿತಾಂಶವಾಗಿರಲಿಲ್ಲ. ಶಾಲೆಯಲ್ಲಿ ಕೊಟ್ಟ ಅಂಕಪಟ್ಟಿ ಕೇವಲ ಅಷ್ಟೇ ಆಗಿರಲಿಲ್ಲ. ಬದಲಿಗೆ ಹೊಸ ಬಾಳಿಗೆ, ಹೊಸ ಕನಸುಗಳಿಗೆ ಸಿಕ್ಕ ಪರವಾನಗಿಯಾಗಿತ್ತು. ಕಾಲೇಜು ಮೆಟ್ಟಿಲು ಹತ್ತಿ ಅಲ್ಲಿಯೂ ಸೈ ಎನಿಸಿಕೊಂಡಳು.
ಬಹುಶಃ ಈ ಅವಧಿಯಲ್ಲಿ ಆಕೆಗೆ ಒಂದು ಸತ್ಯ ಅರಿವಾಗಿತ್ತು. ಓದಲು ಎಲ್ಲರಿಗೂ ಆಸಕ್ತಿ ಇರುತ್ತದೆ. ಆದರೆ ಓದುವ ಮನಸ್ಸುಗಳನ್ನು ಕೈಹಿಡಿದು ನಡೆಸುವ ಮಾರ್ಗದರ್ಶನದ ಕೊರತೆ ತೀವ್ರವಾಗಿದೆ ಎಂದು. ಇದು ಆಕೆಯ ಸ್ವಾನುಭವವೂ ಆಗಿತ್ತು. ತನ್ನ ಕೇರಿಯ ಇತರ ಮಕ್ಕಳನ್ನು ನೋಡಿದಾಗ ಅರತಿಗೆ ತನ್ನದೇ ಬದುಕು ಎದುರು ನಿಲ್ಲುತ್ತಿತ್ತು. ಎಷ್ಟೋ ಮಕ್ಕಳು ಅದಾಗಲೇ ಮುಸುರೆ ತಿಕ್ಕುವ ಕಾಯಕದಲ್ಲಿ ಮುದುಡಿಹೋಗಿದ್ದರು. ಅವರಿಗಾಗಿ ತನ್ನ ಕೈಲಾದ ಸಹಾಯ ಮಾಡಬೇಕೆಂದು ಹಂಬಲಿಸಿದಳು. ಆಗ ಹುಟ್ಟಿದ್ದೇ ‘ಸಖಿ’! ಮೊದಲಿಗೆ ತನ್ನ ವಾರಿಗೆಯ ಕೆಲ ಬಾಲಕಿಯರನ್ನು ಕಟ್ಟಿಕೊಂಡು ಅವರಿಗೆ ಶಿಕ್ಷಣದ ಮಾರ್ಗದರ್ಶನ ನೀಡಲು ಮುಂದಾದಳು. ಅವರ ಪೋಷಕರ ಬಳಿ ತೆರಳಿ ತನ್ನ ಕತೆ ಹೇಳಿ ತನ್ನಂತೆಯೇ ಅವರೂ ಮೇಲೆ ಬರಲು ಅವಕಾಶ ಕೊಡಿ ಎಂದು ಕೇಳಿದಳು. ‘ನಿಮ್ಮ ಮಕ್ಕಳಿಗೆ ನಾನು ಮಾರ್ಗದರ್ಶನ ನೀಡುತ್ತೇನೆ. ಅದಕ್ಕಾಗಿ ನೀವು ನಯಾಪೈಸೆಯೂ ಕೊಡಬೇಡಿ’ ಎಂದಳು. ಆ ಮಾತು ಫಲ ನೀಡಿತು. ಕೇರಿಯ ಬಾಲಕಿಯರು ಮುಸುರೆ ತಿಕ್ಕುವುದನ್ನು ಬಿಟ್ಟು ಕೈಯಲ್ಲಿ ಪುಸ್ತಕ ಹಿಡಿದರು. ಅವರಿಗೆಲ್ಲ ಅರತಿಯೇ ಟೀಚರ್.

ಹಾಗೆಂದು ಅದು ಮನೆಪಾಠಕ್ಕಷ್ಟೇ ಸೀಮಿತವಾಗಿರಲಿಲ್ಲ. ಅವರಿಗೆ ಬದುಕಲು ಬೇಕಾಗುವ ಕಸುಬುಗಳ ಬಗ್ಗೆಯೂ ತಿಳಿವಳಿಕೆ ನೀಡುವುದು ಆಕೆಯ ಉದ್ದೇಶವಾಗಿತ್ತು. ಅದಕ್ಕೆಲ್ಲ ಹಣದ ಅವಶ್ಯಕತೆಯೂ ಇತ್ತು. ಆಗ ಆಕೆಯ ಗಮನಕ್ಕೆ ಬಂದದ್ದು ‘ಅಶೋಕ್ ಯೂಥ್ ವೆಂಚರ್ಸ್’ ಎಂಬ ಸಂಸ್ಥೆ. ಅಲ್ಲಿ ತನ್ನ ವಿಚಾರಗಳ ಬಗ್ಗೆ ಹೇಳಿಕೊಂಡರೆ ಹಣಕಾಸಿನ ನೆರವು ಸಿಗಬಹುದು ಎಂದೆಣಿಸಿದಳು. ತನ್ನ ಐವರು ಸಮಾನಮನಸ್ಕ ಗೆಳತಿಯರ ಜೊತೆಗೂಡಿ ಆರತಿ ನೆರವನ್ನರಸಿ ಹೊರಟಳು. ಪ್ರಾಯಶಃ ಆಕೆಯ ಅರಿವಿನ ಮಟ್ಟಿಗೆ ಅದೇ ಮೊದಲ ಬಾರಿ ಮುಳುಂದ್‌ನಿಂದ ಹೊರಗೆ ಪ್ರಯಾಣ ಬೆಳೆಸಿದ್ದಳು. ಧಾರಾವಿ ಎಂಬುದು ಆಕೆ ಮತ್ತು ಆಕೆಯ ಸ್ನೇಹಿತೆಯರಿಗೆ ಒಂದು ಮಾಯಾ ಪ್ರಪಂಚದಂತೆ ಭಾಸವಾಯಿತು. ಈಕೆ ಅಲ್ಲಿ ತನ್ನ ಯೋಜನೆ ಬಿಚ್ಚಿಟ್ಟಿದ್ದೇ ಬಂತು. ನೆರವಂತೂ ಬರಲಿಲ್ಲ. ಅಲ್ಲಿಂದ ಆರತಿ ಪ್ರಯಾಣ ಬೆಳೆಸಿದ್ದು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಕಡೆಗೆ. ಅಲ್ಲಿ ಈಕೆಯ ವಿಚಾರವನ್ನು ಆಲಿಸಿದ ಅಧಿಕಾರಿಗಳು ೫ ಸಾವಿರ ರೂ.ಗಳ ಚೆಕ್ ನೀಡಿದರು. ಈಕೆಯ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆ ಇರಲಿಲ್ಲ. ಜೊತೆ ಬಂದಿದ್ದವರ ಬಳಿ ಇತ್ತು. ಸರಿ ಅವರ ಖಾತೆಗೆ ಚೆಕ್ ಜಮೆ ಮಾಡಲಾಯಿತು. ಹಣ ಬಂದ ಮೇಲೆ ಗೆಳತಿಯರು ಬೇರೆ ರಾಗ ಶುರುಮಾಡಿದರು. ಈ ಹಣದಿಂದ ಮೆಹಂದಿ ಕ್ಲಾಸ್ ಮಾಡಿದರೆ ಹೇಗೆ? ಎಂದರು. ಆದರೆ ಆರತಿಗೆ ಅದು ಸರಿ ಕಾಣಲಿಲ್ಲ. ಅಂದುಕೊಂಡಿದ್ದ ಕೆಲಸಕ್ಕಷ್ಟೇ ಈ ಹಣ ವಿನಿಯೋಗವಾಗಬೇಕು ಎಂದು ಹಟ ಮಾಡಿದಳು. ಗೆಳತಿಯರಿಂದ ದುಡ್ಡು ವಾಪಸು ಕೇಳಿದಳು. ಆದರೆ, ಕೊನೆಗೆ ವಾಪಸು ಬಂದದ್ದು ಕೇವಲ ೯೦೦ ರೂ. ಮಾತ್ರ!

ಸರಿ, ಆ ಹಣದಲ್ಲಿ ಆಕೆ ಮಕ್ಕಳಿಗೆ ಉಪಯೋಗವಾಗುವ ಒಂದಷ್ಟು ಚಾರ್ಟುಗಳು, ಒಂದು ಸೆಟ್ ಪುಸ್ತಕ, ಪೇಪರ್ ಖರೀದಿಸಿದಳು. ಇದನ್ನು ಕಂಡ ಅಪ್ಪ ಎಗರಿಬಿದ್ದ. ಏನಿದು? ಎಂದು ಗದರಿದ. ಕೊನೆಗೆ ಇದು ತನ್ನ ಓದಿನ ಭಾಗವಾಗಿ ಕೊಳ್ಳಲೇಬೇಕಾದ ಸಾಮಗ್ರಿ ಎಂದು ಸಮಜಾಯಿಷಿ ನೀಡಿದಳು. ವೈ.ಬಿ. ಚವಾಣ್ ಮುಕ್ತ ವಿವಿಯಲ್ಲಿ ಪದವಿಗೆ ನೋಂದಾಯಿಸಿಕೊಂಡ ಆರತಿ ‘ಸಖಿ’ ಬ್ಯಾನರಿನಡಿ ಮಕ್ಕಳಿಗೆ ಅಕ್ಷರ ದಾಸೋಹಕ್ಕೂ ಮುಂದಾದಳು. ಅಲ್ಲಿ ಬರುತ್ತಿದ್ದ ಮಕ್ಕಳಿಗೆ ಆರತಿ ತನ್ನದೇ ಆದ ರೀತಿಯಲ್ಲಿ ಕಲಿಸುತ್ತಿದ್ದಳು. ಇಂಗ್ಲಿಷ್ ಅಕ್ಷರಗಳ ಜೋಡಣೆ, ಇಂಗ್ಲಿಷಿನಲ್ಲೇ ಮಾತನಾಡುವುದು, ಏನಾದರೂ ವಿಷಯವನ್ನು ಸಾದ್ಯಂತವಾಗಿ ಹೇಳಿ ನಂತರ ಅದನ್ನು ತಮ್ಮದೇ ಆದ ರೀತಿಯಲ್ಲಿ ಪುನರ್‌ಸೃಷ್ಟಿ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿದಳು. ಆರು ಮಕ್ಕಳಿಗೆ ಒಂದು ವರ್ಷ ಹೀಗೆ ಕಲಿಸಿದ ನಂತರ ಕೇರಿಯ ಜನರನ್ನು ಒಂದೆಡೆ ಸೇರಿಸಿ ಅವರ ಸಾಧನೆಯನ್ನು ಪರಿಚಯಿಸಿದಳು. ಆರೂ ಜನ ತಮಗೆ ತೋಚಿದ ವಿಷಯದ ಬಗ್ಗೆ ಇಂಗ್ಲಿಷಿನಲ್ಲಿ ಮಾತನಾಡಿದರು. ಒಂದಿಬ್ಬರು ತಮ್ಮ ತಾಯಿಯ ಬಗ್ಗೆ ಮಾತನಾಡಿದರೆ, ಉಳಿದವರು ಸಾವಿತ್ರಿಬಾಯಿ ಫುಲೆ ಮತ್ತು ಅಂಬೇಡ್ಕರ್ ಕುರಿತು ಮಾತನಾಡಿದರು. ತಮ್ಮ ಮಕ್ಕಳು ಚಾಕರಿ ಮಾಡಲಷ್ಟೇ ಲಾಯಕ್ಕು ಎಂದು ತಿಳಿದಿದ್ದ ಪೋಷಕರು ಅವರ ಮಾತು ಕೇಳಿ ಚಕಿತರಾದರು. ಅವರ ಬಗ್ಗೆ ತಾವು ತಿಳಿದದ್ದು ತಪ್ಪು ಎಂದು ಕೈಕೈ ಹೊಸಕಿಕೊಂಡರು.

ಕೊಳೆಗೇರಿಯಲ್ಲಿ ಆರತಿಯ ಈ ಅಕ್ಷರಕ್ರಾಂತಿಯ ವಿಚಾರ ತಿಳಿದ ಎನ್‌ಜಿ‌ಓ ಆಕೆಗೆ ೨೦ ಸಾವಿರ ರೂ.ಗಳ ಗ್ರಾಂಟ್ ನೀಡಿತು. ಈ ಹಣದಿಂದ ಮನೆಯಲ್ಲೊಂದು ಅಟ್ಟಣಿಗೆ ಮಾಡಿಸಿಕೊಂಡು ಅಲ್ಲಿ ಸಖಿಯ ಶಾಖೆ ತೆರೆಯಬೇಕು ಎಂಬುದು ಆಕೆಯ ಆಸೆಯಾಗಿತ್ತು. ಆದರೆ ಅದಕ್ಕೂ ಅಪ್ಪ ವರಾತ ತೆಗೆದ. ಆ ವೇಳೆಗೆ ಅಪ್ಪನನ್ನು ಮಣಿಸುವ ವಿದ್ಯೆ ಆರತಿಗೆ ಕರಗತವಾಗಿತ್ತು. ‘ನನಗೆ ೧೫ ಸಾವಿರ ರೂ. ಸ್ಕಾಲರ್‌ಶಿಪ್ ಸಿಕ್ಕಿದೆ. ಅದಕ್ಕೆ ಇನ್ನೊಂದಷ್ಟು ಹಣ ಹೊಂದಿಸಿದರೆ ಮನೆಯಲ್ಲೊಂದು ಅಟ್ಟಣಿಗೆ ಕಟ್ಟಿಸಬಹುದು. ಅದರಿಂದ ನಮಗೇ ಉಪಯೋಗ‘ ಎಂದಳು. ಅಪ್ಪ ಮರುಮಾತಾಡಲಿಲ್ಲ.

ಸಖಿಯ ಹೊಸ ಆಫೀಸ್ ಹೀಗೆ ಆರಂಭವಾಯಿತು. ಮಕ್ಕಳ ಸಂಖ್ಯೆಯೂ ೨೦ ದಾಟಿತು. ಒಂದೆಡೆ ತನ್ನ ಓದಿನ ಹೊರೆ, ಮತ್ತೊಂದೆಡೆ ಮಕ್ಕಳ ಜ್ಞಾನವೃದ್ಧಿಯ ಹೊಣೆ. ಆರತಿಗೆ ಎರಡೂ ಒಂದಕ್ಕೊಂದು ಪೂರಕವಾಗಿತ್ತು. ಮಕ್ಕಳಿಗೆ ಕಲಿಸುತ್ತ ತಾನೂ ಕಲಿಯುತ್ತಿದ್ದಳು. ಅದರ ಫಲವಾಗಿ ಇಂದು ಇಡೀ ಕೇರಿ ವಿದ್ಯಾವಂತ ಮಕ್ಕಳ ಕೇರಿಯಾಗಿ ಪರಿವರ್ತನೆಗೊಂಡಿದೆ. ಈ ಪ್ರಯತ್ನದ ಫಲವಾಗಿ ವಿಶ್ವ ಆರ್ಥಿಕ ವೇದಿಕೆ ಯಡಿ ಕೈಗೊಳ್ಳುವ International Youth Partnership Programನ ಸಕ್ರಿಯ ಸದಸ್ಯಳಾಗಿ ಆರತಿ ಆಯ್ಕೆಯಾಗಿದ್ದಾಳೆ.

ಶಾಲೆ ನಡೆಸುವ ನೆಪದಲ್ಲಿ ಸುಲಿಗೆ ಮಾಡುವ ವಿದ್ಯಾಪತಿಗಳು, ಮನೆಪಾಠದ ಹೆಸರಲ್ಲಿ ಕಲಿಕೆಯ ಭಾರವನ್ನು ಸಹಿಸಲಾರದ ಮಟ್ಟಿಗೆ ಹೆಚ್ಚಿಸಿರುವ ಟ್ಯುಟೋರಿಯಲ್‌ಗಳ ಈ ಕಾಲದಲ್ಲಿ ಆರತಿಯ ಪ್ರಯತ್ನ ಆಪ್ತವೆನಿಸುತ್ತದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-04

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri