ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಸಮಸ್ಯೆಯ ಗಂಟುಗಳು...

ಅವನೊಬ್ಬ ಸದಾ ದುಃಖಿ. ತಾನು ಯಾವಾಗಲೂ ಸಮಸ್ಯೆಗಳ ಸುಳಿಯಲ್ಲೇ ಸಿಕ್ಕಿ ಹಾಕಿಕೊಂಡಿದ್ದೇನೆ ಎಂಬ ಚಿಂತೆಯಲ್ಲೇ ಇದ್ದವನು. ನಿತ್ಯ ದೇವರಲ್ಲಿ  ಪ್ರಾರ್ಥನೆ ಮಾಡುತ್ತಿದ್ದ.  ಭಗವಂತಾ, `ಯಾಕೆ ನೀನು ಕೇವಲ ನನ್ನನ್ನೇ ಪರೀಕ್ಷೆ ಮಾಡುತ್ತೀ.

ನನಗೆ ಒಂದು ಸಲವಾದರೂ ಕರುಣೆ ತೋರಿಸಿ ಸಂತೋಷ ನೀಡಬಾರದೇ`  ಎಂದು ಬೇಡುತ್ತಲೇ ಇದ್ದ. ದೇವರಾದರೂ ಎಷ್ಟು ತಡೆದುಕೊಂಡಾನು. ಒಂದು ದಿನ ರಾತ್ರಿ ಅವನ ಕನಸಿನಲ್ಲಿ  ದೇವರು ಪ್ರತ್ಯಕ್ಷನಾಗಿ ಹೇಳಿದ,  `ನಿನ್ನ ತೊಂದರೆಗಳು ನನಗೆ ಅರ್ಥವಾಗಿವೆ. ಆ ಎಲ್ಲ ತೊಂದರೆಗಳ ಪಟ್ಟಿಯನ್ನು ಮಾಡು.

ಆ ಪಟ್ಟಿಯ ಹೊರೆಯನ್ನು ನಾಳೆ ರಾತ್ರಿ ಹತ್ತು ಗಂಟೆಗೆ ಊರ ಹೊರಗಿರುವ ಆಂಜನೇಯನ ದೇವಸ್ಥಾನಕ್ಕೆ ತೆಗೆದುಕೊಂಡು ಬಾ. ಅವನ್ನೆಲ್ಲ ಪರಿಹಾರ ಮಾಡುತ್ತೇನೆ`. ದುಃಖಿಗೆ ಸ್ವಲ್ಪ ಸಂತೋಷವಾಯಿತು. ತಕ್ಷಣವೇ ಎದ್ದು ಕುಳಿತು ತನ್ನ ಕಷ್ಟಗಳ ಪಟ್ಟಿ ಮಾಡತೊಡಗಿದ. ಮರುದಿನ ಸಂಜೆಯವರೆಗೆ ಬರೆದೇ ಬರೆದ. ರಾತ್ರಿ ಹತ್ತು ಗಂಟೆಗೂ ಮೊದಲೇ ದೇವಸ್ಥಾನಕ್ಕೆ ನಡೆದ.

ಅವನಿಗೆ ಆಶ್ಚರ್ಯವೆಂದರೆ ಊರಿನ ಪ್ರತಿಯೊಬ್ಬರೂ ಆ ಕಡೆಗೇ ಹೋಗುತ್ತಿದ್ದಾರೆ! ಎಲ್ಲರ ಕೈಯಲ್ಲಿ  ಒಂದೊಂದು ದೊಡ್ಡ ಗಂಟು. ಓಹೋ! ಹಾಗಾದರೆ ದೇವರು ಎಲ್ಲರ ಸಮಸ್ಯೆಗಳನ್ನು ಒಮ್ಮೆಲೇ ಪರಿಹರಿಸಲು ತೀರ್ಮಾನಿಸಿದ್ದಾನೆ ಎಂದುಕೊಂಡ.

ಸುತ್ತಮುತ್ತ ನೋಡಿದ. ಎಲ್ಲರೂ ದೊಡ್ಡ ದೊಡ್ಡ ಗಂಟುಗಳನ್ನು ಹೊತ್ತಿದ್ದಾರೆ. ಕೆಲವರಂತೂ ಹೊರಲಾಗದಷ್ಟು ದೊಡ್ಡ ಗಂಟುಗಳನ್ನು ಎಳೆದುಕೊಂಡು ಬರುತ್ತಿದ್ದಾರೆ. ಜನರೆಲ್ಲ ತಮ್ಮ ತಮ್ಮ ಗಂಟುಗಳನ್ನು ದೇವಸ್ಥಾನದ ಎದುರಿಗಿದ್ದ ಕಟ್ಟೆಯ ಮೇಲೆ ಇಟ್ಟು ಸುಮ್ಮನೇ ನಿಂತರು. ಊರಿನ ಯಾರೂ ತಪ್ಪಿಸಿಕೊಂಡಿಲ್ಲ.

ಅತ್ಯಂತ ಶ್ರಿಮಂತನಿಂದ ಹಿಡಿದು ಊರಲ್ಲಿ  ಭಿಕ್ಷೆ ಬೇಡುತ್ತಿದ್ದ ಮುದುಕನವರೆಗೆ ಎಲ್ಲರೂ ಆತಂಕದಿಂದ ಮುಂದೇನಾದೀತು ಎಂಬ ಕಾತರದಿಂದ ನಿಂತಿದ್ದಾರೆ. ಸರಿಯಾಗಿ ಮಧ್ಯರಾತ್ರಿಯಾಗುತ್ತಿದ್ದಂತೆ ಭಗವಂತನ ಧ್ವನಿ ಕೇಳಿಸಿತು.

`ನೀವೀಗ ಯಾವ ಗಂಟನ್ನಾದರೂ ತೆಗೆದುಕೊಂಡು ಮನೆಗೆ ಹೋಗಿ, ಇಂದಿನಿಂದ ಅವು ನಿಮ್ಮವು. ನಾಡಿದ್ದು ರಾತ್ರಿ ಮತ್ತೆ ಇದೇ ಸಮಯಕ್ಕೆ ಇಲ್ಲಿಗೆ ಬಂದು ಕೊನೆಯ ಬಾರಿ ಬದಲಾಯಿಸಿಕೊಳ್ಳಲು ಅವಕಾಶವಿದೆ`. ನಮ್ಮ ದುಃಖಿ ಇದ್ದನಲ್ಲ, ಈ ಧ್ವನಿ ಕೇಳುತ್ತಲೇ ಊರಿನ ಅತ್ಯಂತ ಶ್ರಿಮಂತ ಇಟ್ಟಿದ್ದ ಗಂಟಿನ ಕಡೆಗೆ ಓಡಿ ಅದನ್ನೇ ಎತ್ತಿಕೊಂಡು ಮನೆಯ ಕಡೆಗೆ ಓಡಿದ. ಇನ್ನು ತನ್ನಷ್ಟು ಶ್ರಿಮಂತ ಇನ್ನಾರು ಎಂದು ಸಂತೋಷಪಟ್ಟ. ಇವನಂತೆಯೇ ಜನ ಬೇರೆ ಬೇರೆ ಗಂಟುಗಳನ್ನು ಎತ್ತಿಕೊಂಡು ನಡೆದರು.

ದುಃಖಿ ಮನೆಗೆ ಬಂದವನೇ ಗಂಟುಬಿಚ್ಚಿ ನೋಡಿದ. ಅದೇನು ಆಸ್ತಿ ಆ ಶ್ರಿಮಂತನದು! ಅದೆಷ್ಟು ಜಮೀನು, ಕಾರ್ಖಾನೆಗಳು, ಬಂಗಲೆಗಳು, ಕಾರುಗಳು! ಇಂಥವನಿಗೆ ಸಮಸ್ಯೆಗಳು ಏನಿದ್ದಾವು ಎಂದು ಪಟ್ಟಿ ನೋಡಿದ. ಎದೆ ಬಿರಿದು ಹೋಯಿತು. ಫ್ಯಾಕ್ಟರಿ ಕಟ್ಟುವುದಕ್ಕೆ ತೆಗೆದುಕೊಂಡ ಸಾಲ ಐದು ನೂರು ಕೋಟಿ ರೂಪಾಯಿಗಳು, ಕಾರಿನ ಮೇಲೆ ಸಾಲ.

ಬಡ್ಡಿಯೇ ನೂರಾರು ಕೋಟಿ ನಿಂತಿದೆ. ಕಾರ್ಖಾನೆಗಳಲ್ಲಿ  ಜನರು ಕೆಲಸಮಾಡುತ್ತಿಲ್ಲ, ಕಾರ್ಮಿಕರ ಸಂಪಿನಿಂದ ಪ್ರತಿನಿತ್ಯ ನೂರುಕೋಟಿ ನಷ್ಟವಾಗುತ್ತಿದೆ. ದುಃಖಿಗೆ ಗಾಬರಿ. ನೋಡುವುದಕ್ಕೆ ಅಷ್ಟು ಜರ್ಬಾಗಿದ್ದರೂ ಶ್ರಿಮಂತನ ಒಳಗಿನ ಪರಿಸ್ಥಿತಿ ಅವನಿಗೆ ತಿಳಿದಿರಲಿಲ್ಲ. ಅವನ ಸಮಸ್ಯೆಗಳ ತಳ-ಬುಡ ಅರ್ಥವಾಗಲಿಲ್ಲ.

ಪರಿಹರಿಸುವ ಮಾರ್ಗವಂತೂ ದೂರವೇ. ಎರಡು ದಿನ ಕಳೆದು ರಾತ್ರಿಯಾದೊಡನೆ ಈ ಗಂಟು ತೆಗೆದುಕೊಂಡು ಓಡಿದ. ಇವನಂತೆಯೇ ಎಲ್ಲರೂ ಓಡುತ್ತಿದ್ದಾರೆ! ಮಧ್ಯರಾತ್ರಿಯಾದೊಡನೆ ಎಲ್ಲರೂ ತಮ್ಮ ತಮ್ಮ ಮೊದಲಿನ ಗಂಟುಗಳನ್ನೇ ಎತ್ತಿಕೊಂಡು ಮನೆಗೆ ನಡೆದರು.

ನಮ್ಮ ಚಿರ ದುಃಖಿಯ ದುಃಖ ಕಡಿಮೆಯಾಯಿತು, ತಿಳುವಳಿಕೆ ಮೂಡಿತು. ಯಾವಾಗಲೂ ನಮ್ಮ ಕಷ್ಟಗಳೇ ದೊಡ್ಡವು, ಉಳಿದವರೆಲ್ಲ ಚೆನ್ನಾಗಿದ್ದಾರೆ ಎಂದೇ ಭಾವಿಸುತ್ತೇವೆ. ಆದರೆ ಎಲ್ಲರಿಗೂ ಅವರವರ ಸಮಸ್ಯೆಗಳು ಇದ್ದೇ ಇವೆ. ನಮಗೆ ನಮ್ಮ ಕಷ್ಟಗಳ ಅರಿವಿದೆ.

ಅವುಗಳನ್ನು ಪರಿಹರಿಸಿಕೊಳ್ಳಬಹುದಾದ ರೀತಿಗಳೂ ಗೊತ್ತಿವೆ. ಇವೇ ನಮಗೆ ವಾಸಿ. ಸುಖ ಎನ್ನುವುದು ಒಂದು ಮನಸ್ಥಿತಿ. ಅದನ್ನು ಪಡೆದೇ ತೀರುತ್ತೇನೆ ಎಂಬ ಹಟವೇ ದುಃಖಕ್ಕೆ ಕಾರಣವಾಗಬಹುದು. ಇರುವುದರಲ್ಲೇ ತೃಪ್ತಿಯನ್ನು, ಸಂತೋಷಪಡುವುದೇ ಮುಖ್ಯ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-04

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಕನ್ನಡಕ್ಕೆ ಎಂದೂ ಸಾವಿಲ್ಲ: ಡಾ.ಹನುಮಂತಯ್ಯ ಅಭಿಮತ
» ಸಮಸ್ಯೆಯ ಗಂಟುಗಳು...
»ಗಂಗಾವತಿ: ಬಸ್ ನಿಲ್ದಾಣ ಗಳಲ್ಲಿ ಗೌರವಾರ್ಥವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ
»ಪಳಕಳ ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ
»ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ: ಸಿದ್ದಣ್ಣ ಲಂಗೋಟಿ
»ಜಗದ, ಯುಗದ ಮಹಾಕವಿ ಕುವೆಂಪು: ದೇಜಗೌ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಕೂಗಿದರೂ”ದ್ವನಿ ಕೇಳಲಿಲ್ಲವೇ’ ನೃತ್ಯ ರೂಪಕ ಪ್ರದರ್ಶನ
»ನಿಘಂಟು ಬ್ರಹ್ಮ ಪ್ರೊ. ಜೀವಿಗೆ ಶತಕದ ಸಂಭ್ರಮ | ಸಂತನಂತೆ ಬದುಕು ಎಂಬ ತಂದೆ ಮಾತಿನಂತೆ ಸರಳ ಮಾರ್ಗದಲ್ಲೇ ಬದುಕಿದ್ದೇನೆ: ಪ್ರೊ. ಜಿ. ವೆಂಕಟಸುಬ್ಬಯ್ಯ
»ಕಾವ್ಯದಲ್ಲಿ ಬದುಕಿನ ಸಂವೇದನೆಯಿರಲಿ: ಸಿಪಿಕೆ
»ಬಾಬು ಕುಡ್ತಡ್ಕರಿಗೆ ಶೇಣಿ ಪ್ರಶಸ್ತಿ ಪ್ರದಾನ: ಯಕ್ಷಗಾನ ಶೈಕ್ಷಣಿಕ ಅಧ್ಯಯನ ಪಠ್ಯವಾಗಲಿ: ಡಾ| ಆಳ್ವ
»ಓರೆನೋಟ...
»ಮಾಲಿನಿ ಭಟ್ ಅವರ ಕವನ : ಅಪ್ಪಾ ನಿನ್ನ ಬರುವಿಕೆಯಲ್ಲಿ ಮತ್ತು ಅಮ್ಮ
»ಅಮೀನಗಡದ ’ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ’ ದಿಂದ ಕವನಗಳಿಗೆ ಆಹ್ವಾನ
»ಸಂಸ್ಕೃತಿ, ಸಾಹಿತ್ಯ ಬೆಳಗಿಸಿದ ಮಹಾನುಭಾವರ ಸ್ಮರಣೆ ಆದ್ಯ ಕರ್ತವ್ಯ: ಹಾಲಂಬಿ
»ನೀ ಜೊತೆಯಿರಲು-ಅನಿತಾ ನರೇಶ್ ಮಂಚಿಯವರ ಕವನ
»ವಿದೇಶದಲ್ಲಿ ಸಂಸ್ಕೃತಿ ಬಿತ್ತನೆ
»ಮಣಿಪಾಲದ ವಿದ್ಯಾರ್ಥಿಗೆ ರಾ.ಚಿತ್ರಕಲಾ ಪ್ರಶಸ್ತಿ
»ಡಾ.ಪುಣಿಂಚಿತ್ತಾಯರಿಗೆ ಮರಣೋತ್ತರ ‘ತುಳು ಸಾಹಿತ್ಯ ರತ್ನ ಪ್ರಶಸ್ತಿ’
»ಒಂದಿಷ್ಟು ಹನಿಗಳು... - ಗುರುನಾಥ ಬೋರಗಿ, ಬೆಂಗಳೂರು
»ನನ ಕಂದಾ ನೀ ನನ್ನ ಉಸಿರು... -ಸವಿತಾ ಇನಾಮದಾರ
»ಅಮ್ಮನ ಕೆನ್ನೆಯಲ್ಲಿ ರಮಝಾನ್ ದಿನಗಳು : ಬಿ.ಎಂ.ಬಶೀರ್,ಮಂಗಳೂರು
»ಕೇಳ ಬಾರದಿತ್ತೆ ಈ ಪ್ರಶ್ನೆ…-ಸುನೀತ ಮಂಜುನಾಥ್, ಮೈಸೂರು
»ದಿನೇಶ್ ಕುಕ್ಕುಜಡ್ಕ "ಪಂಚ್"
»ಮುಕ್ಕಾಲು ಪಟ್ಟಣದೊಳಗೆ ಕಾಲು ಗದ್ದೆಗೆ ಬೇಕು : -ಈಶ್ವರ ಕಿರಣ ಭಟ್,ಕಾಸರಗೋಡು
»ಬ್ರಹ್ಮಾಂಡವೆಲ್ಲಾ ಅಲೆದ ಮನಕ್ಕೆ ಒಂದು ಹನಿ ಅಮೃತ: ಪ್ರವೀಣ್ ಕುಲಕರ್ಣಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri