ಸೋಮವಾರ, 09-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಶಂಕಿತರ ಸೆರೆ ಶ್ರೇಯ ಆಂಧ್ರದ `ಎಸ್‌ಐಬಿ'ಗೆ | ಹುಬ್ಬಳ್ಳಿಯಲ್ಲಿ 28 ದಿನ ಬೀಡು ಬಿಟ್ಟಿದ್ದ ಹೈದ್ರಾಬಾದ್‌ ಪೊಲೀಸ್

* ಶಿವಕುಮಾರ ಮೆಣಸಿನಕಾಯಿ, ಹುಬ್ಬಳ್ಳಿ

ಹುಜಿ ಮತ್ತು ಲಷ್ಕರ್-ಎ-ತಯ್ಬಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಆರೋಪಿಗಳನ್ನು ಪತ್ತೆ ಮಾಡಿರುವ ರಾಜ್ಯ ಪೊಲೀಸರು ಭಾರಿ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿರುವುದು ಈಗ ಜನಜನಿತ.ಆದರೆ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಳ್ಳುವ ಮುನ್ನ,28ದಿನಗಳ ಕಾಲ ಹೈದರಾಬಾದ್ ಪೊಲೀಸರು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.

ದೇಶದೆಲ್ಲೆಡೆ ಉಗ್ರರು ನುಸುಳಿರುವ ಕುರಿತಂತೆ ಕೇಂದ್ರ ಗುಪ್ತಚರ ಇಲಾಖೆ ಕಳೆದ ಮೇನಲ್ಲಿ ನೀಡಿದ್ದ ಎಚ್ಚರಿಕೆ ಆಧರಿಸಿ,ಹೈದರಾಬಾದ್ ಪೊಲೀಸರು ನಡೆಸಿದ ಕಾರ್ಯಾಚರಣೆ ಫಲವಾಗಿ ರಾಜ್ಯದ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಯಿತು ಎಂಬುದು ಈ ಘಟನೆಯ ಹಿಂದಿನ ಸತ್ಯ.ಇದಕ್ಕೆ ಪೂರಕ ಎಂಬಂತೆ ಆ.3ರಿಂದ 28ದಿನಗಳ ಕಾಲ ಹೈದರಾಬಾದ್ ಸಿಸಿಬಿಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು.

ನುಸುಳಿ ಬಂದಿದ್ದ ಶಂಕಿತ ವ್ಯಕ್ತಿ:

ಕಳೆದ ಜುಲೈನಲ್ಲಿ ಹುಜಿ ಪ್ರತಿನಿಧಿಯೊಬ್ಬ ಬಹುಮುಖ್ಯ ಸಂದೇಶ ಹೊತ್ತು ಕರ್ನಾಟಕವನ್ನು ನುಸುಳಿದ್ದ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆಯು ಹೈದರಾಬಾದ್ ಪೊಲೀಸರಿಗೆ ಮಾಹಿತಿ ನೀಡಿತ್ತು.ಹೈದರಾಬಾದ್‌ನಿಂದ ಕರೀಂನಗರಕ್ಕೆ ಬಂದಿದ್ದ ಆ ಉಗ್ರ ಅಲ್ಲಿ ಕೆಲ ಕಾಲ ಇದ್ದು,ರಂಜಾನ್ ತಿಂಗಳ ಆರಂಭಕ್ಕೆ ಕೆಲ ದಿನಗಳ ಮುಂಚೆ ಅಲ್ಲಿಂದ ಹುಬ್ಬಳ್ಳಿಗೆ ಬಂದಿದ್ದ. ಶಂಕಿತ ವ್ಯಕ್ತಿ ಕೆಲ ಸ್ಥಳೀಯ ಸಂಪರ್ಕ ಬಳಸಿ ಸೋನಿಯಾ ಗಾಂಧಿ ನಗರದಲ್ಲಿ ಅವಿತುಕೊಂಡಿದ್ದ. ಈತನ ಜಾಡು ಹಿಡಿದು ನಗರಕ್ಕೆ ಬಂದಿದ್ದ ಆಂಧ್ರ ಪೊಲೀಸರು 9ದಿನಗಳ ಹಿಂದೆಯೇ ಆತನನ್ನು ಹುಬ್ಬಳ್ಳಿಯಿಂದ ಕರೆದೊಯ್ದು ವಿಚಾರಣೆ ನಡೆಸಿದ್ದರು.ಅದರ ಫಲವಾಗಿ ರಾಜ್ಯದ ಹುಜಿ ಸಂಘಟನೆಯ ಬೇರುಗಳನ್ನು ಪತ್ತೆ ಮಾಡಿರುವ ಆಂಧ್ರ ಪೊಲೀಸರು ಎರಡನೇ ಹಂತದ ಕಾರ್ಯಾಚರಣೆಗೆ ಮುಂದಾದ ಬಳಿಕ ಬೆಂಗಳೂರು ಸಿಸಿಬಿ ಪೊಲೀಸರ ನೆರವು ಕೇಳಲು ಮುಂದಾದರು ಎನ್ನಲಾಗಿದೆ.ಹುಬ್ಬಳ್ಳಿಯ ಎಲ್ಲ ನಂಟುಗಳು ಬೆಂಗಳೂರಿನೊಂದಿಗೆ ಗಾಢವಾಗಿ ಬೆಸೆದುಕೊಂಡಿದ್ದರಿಂದ ಆಂಧ್ರ ಪೊಲೀಸರಿಗೆ ರಾಜ್ಯದ ಪೊಲೀಸರ ನೆರವು ಅನಿವಾರ್ಯವಾಗಿತ್ತು.

ಹೆಕ್ಕಿ ತೆಗೆದ ಬೆಂಗಳೂರು ಸಿಸಿಬಿ:

ಹೈದರಾಬಾದ್ ಪೊಲೀಸರ ಎಳೆಯನ್ನು ಹೆಕ್ಕಿ ತೆಗೆದು, ಗಣ್ಯರ ಹತ್ಯೆಯ ಸಂಚನ್ನು ಭೇದಿಸುವಲ್ಲಿ ಸಿಸಿಬಿ ಪೊಲೀಸರು ಕೆಲವೇ ದಿನಗಳಲ್ಲಿ ಯಶಸ್ವಿಯಾದರು.ಆದರೆ, ಹುಜಿ ಸಂಘಟನೆಯ ಶಂಕಿತರ ಗುರಿ ರಾಜ್ಯದ ಗಣ್ಯರು ಎಂಬುದು ಬಯಲಾದ ಬಳಿಕ ಹೈದರಾಬಾದ್ ಪೊಲೀಸರು ಸದ್ದಿಲ್ಲದೆ ಹಿಂದೆ ಸರಿದರು.ಆಂಧ್ರಪ್ರದೇಶದಲ್ಲಿನ ಸಂಪರ್ಕಗಳು ಕಡಿದು ಹೋಗಬಹುದು ಎಂಬ ಆತಂಕ ಒಂದೆಡೆಯಾದರೆ,ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಕ್ಕರೆ ಮುಂದಿನ ಕಾರ್ಯಾಚರಣೆಗೆ ಹೊಡೆದ ಬೀಳುತ್ತದೆ ಎಂಬ ಕಳಕಳಿ ಮತ್ತೊಂದೆಡೆ ಇತ್ತು. ಈ ಮಧ್ಯೆ ಮಾಧ್ಯಮಗಳಲ್ಲಿ ಉತ್ತರ ಪ್ರದೇಶ ಪೊಲೀಸರು ಎಂಬುದಾಗಿ ಪ್ರಕಟಗೊಂಡಿದ್ದರಿಂದ ಆಂಧ್ರ ಪೊಲೀಸ್ ತೆರೆಮರೆಗೆ ಸರಿಯಲು ಕಾರಣವಾಯಿತು ಎನ್ನಲಾಗಿದೆ.

ಬಂಧನಕ್ಕೆ ಪಿಎಫ್‌ಐ ಖಂಡನೆ

ಹುಬ್ಬಳ್ಳಿ:ವಿನಾಕಾರಣ ಮುಸ್ಲಿಂ ಯುವಕರನ್ನು ಆರೋಪಿಗಳನ್ನಾಗಿಸುವ ಚಾಳಿಯನ್ನು ಪೊಲೀಸರು ಬಿಡಬೇಕು ಎಂದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.

ಪಿಎಫ್‌ಐ ರಾಜ್ಯ ಘಟಕದ ಸದಸ್ಯ ಟಿ.ಎಚ್.ಅಬೂಬಕ್ಕರ್ ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಯಾವುದೇ ತನಿಖೆಗೆ ಬಂಧಿತರ ಕುಟುಂಬಗಳ ಸದಸ್ಯರು ಸಿದ್ಧರಿದ್ದಾರೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಡುರಸ್ತೆ ಪ್ರೆಸ್‌ಮೀಟ್:ಪಿಎಫ್‌ಐ ಸದಸ್ಯರು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.ಆದರೆ,ಮಧ್ಯಾಹ್ನ ಹೋಟೆಲ್ ಆಡಳಿತ ಮಂಡಳಿ ಪಿಎಫ್‌ಐಗೆ ಅವಕಾಶ ನಿರಾಕರಿಸಿತು ಎಂದು ಸಂಘಟಕರು ತಿಳಿಸಿದರು.ಹಾಗಾಗಿ ಹೋಟೆಲ್ ಎದುರಿನ ರಸ್ತೆಯಲ್ಲೇ ನಿಂತು ಮಾಧ್ಯಮದವರೊಂದಿಗೆ ಮಾತನಾಡಿದ ಮುಖಂಡರು,ಹೋಟೆಲ್ ಆಡಳಿತ ಮಂಡಳಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಪಿಎಫ್‌ಐಗೆ ಅವಕಾಶ ನಿರಾಕರಿಸಲಾಯಿತು ಎಂದು ಹೋಟೆಲ್ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ

ಶಂಕಿತರ ಸೆರೆ ಶ್ರೇಯ ಆಂಧ್ರದ `ಎಸ್‌ಐಬಿ'ಗೆ

ಜೆ.ಆರ್.ಗಿರೀಶ್

ಬೆಂಗಳೂರು:ರಾಜ್ಯದ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ಚಲನವಲನಗಳ ಬಗ್ಗೆ ಮೊದಲು ಮಾಹಿತಿ ಕಲೆ ಹಾಕಿದ್ದ ಆಂಧ್ರಪ್ರದೇಶ ಗುಪ್ತಚರ ದಳದ (ಎಸ್‌ಐಬಿ) ಪೊಲೀಸರು,ಮೂರು ತಿಂಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ಮಫ್ತಿಯಲ್ಲಿದ್ದು,ಬಂಧನದ ಕಾರ್ಯಾಚರಣೆ ನಡೆಸಿರುವ ಅಂಶ ಬೆಳಕಿಗೆ ಬಂದಿದೆ.

ಶಂಕಿತ ಉಗ್ರರ ಜಾಡು ಹಿಡಿದು ರಾಜ್ಯಕ್ಕೆ ಬಂದಿದ್ದ ಆಂಧ್ರಪ್ರದೇಶ ಎಸ್‌ಐಬಿ ಪೊಲೀಸರು, ಮೌಲ್ವಿಗಳ ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವಿಶೇಷ ಕಾರ್ಯಾಚರಣೆಗಾಗಿ ಅವರು, ಹಲವು ದಿನಗಳವರೆಗೆ ಮುಖಕ್ಷೌರ ಮಾಡಿಸದೆ ಗಡ್ಡ ಬಿಟ್ಟಿದ್ದರು.ಅಲ್ಲದೇ,ಮೌಲ್ವಿಗಳ ಪೋಷಾಕಿನಲ್ಲಿ ನಗರದ ಕೆಲವು ಮಸೀದಿಗಳಿಗೆ ಭೇಟಿ ಸಹ ಕೊಟ್ಟಿದ್ದರು.
 
ಬಂಧಿತರು ವಾಸವಾಗಿದ್ದ ಬೆಂಗಳೂರಿನ ಜೆ.ಸಿ.ನಗರ ಬಳಿಯ ಮುನಿರೆಡ್ಡಿಪಾಳ್ಯದಲ್ಲಿ,ಟೀ ವ್ಯಾಪಾರಿಗಳ ಸೋಗಿನಲ್ಲಿ ತಿರುಗಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಹುಬ್ಬಳ್ಳಿಯಲ್ಲಿ ಬಂಧಿತನಾದ ದಂತವೈದ್ಯ ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರನನ್ನು ರೋಗಿಯ ನೆಪದಲ್ಲಿ ಸಂಪರ್ಕಿಸಿ ಆತನ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸಿದ್ದರು. 

`ಆಂಧ್ರಪ್ರದೇಶ ಪೊಲೀಸರು ಶಂಕಿತ ಉಗ್ರರ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ,ಅವರು ಎಲ್‌ಇಟಿ ಹಾಗೂ `ಹುಜಿ`ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಆ.26ರಂದು ಅಧಿಕೃತವಾಗಿ ಮಾಹಿತಿ ನೀಡಿದರು.ಈ ಮಾಹಿತಿ ಆಧರಿಸಿ ಆಂಧ್ರಪ್ರದೇಶ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಬಂಧಿಸಲಾಯಿತು`ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ರೌಡಿಯಿಂದ ಸುಳಿವು:`ಆಂಧ್ರಪ್ರದೇಶ ಪೊಲೀಸರು ಸ್ಥಳೀಯ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಕುಖ್ಯಾತ ರೌಡಿಯೊಬ್ಬನನ್ನು ಕೆಲ ತಿಂಗಳುಗಳ ಹಿಂದೆ ಬಂಧಿಸಿದ್ದರು. ಆ ರೌಡಿಯ ಜತೆ ಶಂಕಿತ ಉಗ್ರ ಶೋಯಬ್ ಅಹಮ್ಮದ್ ಮಿರ್ಜಾ ಅಲಿಯಾಸ್ ಚೋಟು ಸಂಪರ್ಕ ಇಟ್ಟುಕೊಂಡಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

ಈ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದಾಗ ಶೋಯಬ್,ಹುಜಿ ಭಯೋತ್ಪಾದನಾ ಸಂಘಟನೆಯಲ್ಲಿ ಪ್ರಮುಖನಾಗಿದ್ದ ಉಗ್ರ ಶಾಹಿದ್ ಬಿಲಾಲ್ (ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ) ಜತೆ ನಂಟು ಇಟ್ಟುಕೊಂಡಿದ್ದ ಅಂಶ ಬಹಿರಂಗಗೊಂಡಿತ್ತು` ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರಂತರ ವಿಚಾರಣೆ:`ಬಂಧಿತರನ್ನು ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಒಂದು ಗಂಟೆವರೆಗೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ.ಬಂಧಿತರು ತನಿಖೆಗೆ ಸ್ಪಂದಿಸುತ್ತಿದ್ದು,ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಊಟಕ್ಕೆ ಬಿರಿಯಾನಿ, ಕಬಾಬ್ ಮತ್ತು ಟೀ ವ್ಯವಸ್ಥೆ ಮಾಡಲಾಗಿದೆ.ಅಲ್ಲದೇ,ಪ್ರಾರ್ಥನೆಗೂ ಅವಕಾಶ ಮಾಡಿಕೊಡಲಾಗಿದೆ`ಎಂದು ಮಾಹಿತಿ ನೀಡಿದ್ದಾರೆ.

ವೈದ್ಯನ ಬಂಧನ
ಬೆಂಗಳೂರು
: ಶಂಕಿತ ಉಗ್ರರ ಬಂಧನ ಸರಣಿ ಮುಂದುವರಿಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ)ಪೊಲೀಸರು,ಡಾ.ನಹೀಂ ಸಿದ್ದಿಕಿ(23)ಎಂಬಾತನನ್ನು ಬೆಂಗಳೂರಿನಲ್ಲಿ ಭಾನುವಾರ ಸಂಜೆ ಬಂಧಿಸಿದ್ದಾರೆ.   

ಗೃಹ ಸಚಿವಾಲಯ ಟೀಕೆ
ನವದೆಹಲಿ
: ಬಂಧಿತ ಶಂಕಿತ ಉಗ್ರರ ಸಂಚು ಮತ್ತು ಸಂಪರ್ಕ ಕುರಿತು ಕರ್ನಾಟಕ ಪೊಲೀಸರು ನಡೆಸುತ್ತಿರುವ ತನಿಖೆ ವಿಧಾನ ಕುರಿತು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಮತ್ತು ಗುಪ್ತ ದಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಹೈದರಾಬಾದ್ ನಂಟು
ಬೆಂಗಳೂರು:
ಹುಬ್ಬಳ್ಳಿಯಲ್ಲಿ 2008ರಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರ ಜಾಲ  ನಿಯಂತ್ರಿಸುತ್ತಿದ್ದ ಹೈದರಾಬಾದ್ ಮೂಲದ ಕೆಲವರು, ಈಗ ಬಂಧಿತರಾಗಿರುವ ಶಂಕಿತ ಉಗ್ರರ ಜೊತೆಯೂ ಸಂಪರ್ಕ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.   

ವಿಶೇಷ ತಂಡ
ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರ ವಿಚಾರಣೆ ನಡೆಸಲು ಹೈದರಾಬಾದ್‌ನಿಂದ ವಿಶೇಷ ಪೊಲೀಸ್ ತಂಡವೊಂದು ಸೋಮವಾರ ರಾತ್ರಿ ನಗರಕ್ಕೆ ಬಂದಿದೆ.ಈ ಸಂಬಂಧ ಆಂಧ್ರಪ್ರದೇಶದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೈದರಾಬಾದ್ ಪೊಲೀಸ್ ಕಮಿಷನರ್ ಅನುರಾಗ್ ಶರ್ಮ ಅವರು,`ಶಂಕಿತ ಉಗ್ರರ ವಿಚಾರಣೆಗಾಗಿ ವಿಶೇಷ ತನಿಖಾ ತಂಡವೊಂದನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ.

ಆ ತಂಡದಲ್ಲಿ ರಾಜ್ಯ ಗುಪ್ತಚರ ದಳ ಮತ್ತು ವಿಶೇಷ ತನಿಖಾ ತಂಡದ (ಎಸ್‌ಐಟಿ) ಹತ್ತು ಮಂದಿ ಅಧಿಕಾರಿಗಳಿದ್ದಾರೆ.ಆ ಅಧಿಕಾರಿಗಳು,ಸ್ಥಳೀಯ ಪೊಲೀಸರೊಂದಿಗೆ ಚರ್ಚಿಸಿ ಬಂಧಿತರ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ` ಎಂದು ಹೇಳಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಿ.ಕ | ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-04

Tell a Friend
ಇತರ ಸಂಭಂದಪಟ್ಟ ವರದಿಗಳು
»‘ಉಗ್ರ’ರ ಕುರಿತಂತೆ ಮಾಧ್ಯಮಗಳಿಂದ ವದಂತಿ ಕಡಿವಾಣ ಹಾಕಲು ಸಂಪಾದಕರಿಗೆ ಮಿರ್ಜಿ ಮನವಿ
»'ಸಿಸಿಬಿ ಬೇಟೆ ': ಮೆಡಿಕೋ ನಯೀಮ್ ಸಿದ್ದಿಖಿ ಸೆರೆ; ಬಂಧಿತರ ಸಂಖ್ಯೆ 18ಕ್ಕೆ
»ಉಗ್ರರ ಸ್ಕೆಚ್‌: ಮಾಸ್ಟರ್‌ ಮೈಂಡ್‌ ಯಾರು? ನಾಪತ್ತೆ!: ಕಾರ್ಯಾಚರಣೆ ಚುರುಕುಗೊಳಿಸಿದ ರಾಜ್ಯ ಪೊಲೀಸರು | ಕೈಗಾ ಅಣು ಸ್ಥಾವರ ಹಾಗೂ ರಕ್ಷಣಾ ಇಲಾಖೆ ದಾಳಿಯ ಸಂಚು: ಅಲ್ಲಗಳೆದ ಮಿರ್ಜಿ
»ಉಗ್ರರ ಟಾರ್ಗೆಟ್ ಲಿಸ್ಟ್...
»ನಾಟ್ಯ ಗೃಹದಲ್ಲಿ ನಮ್ಮ ಶಾಸಕರ ಮೋಜು!: ಅಧ್ಯಯನಕ್ಕೆಂದು ಅರ್ಜೆಂಟೈನಾಕ್ಕೆ ತೆರಳಿರುವ ಜನಪ್ರತಿನಿಧಿಗಳಿಂದ‘ಟ್ಯಾಂಗೋ ಹೌಸ್’ಗಳಿಗೆ ಭೇಟಿ
»ವಿಚಾರಣೆ ವಿಶೇಷ ತಂಡ: ನೆರೆರಾಜ್ಯಗಳಲ್ಲೂ ಉಗ್ರರ ಬೇಟೆ ಬಂಧಿತರ ಸಂಖ್ಯೆ 16| ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು? | ಮಾಧ್ಯಮ..! ಇದು ಭಯೋತ್ಪಾದನಾ ಕೃತ್ಯಗಳಿಗೆ ಉಗ್ರಗಾಮಿಗಳ ಹೊಸ ಅಸ್ತ್ರ: ಪೊಲೀಸರಿಂದ ಮಾಹಿತಿ ಬಯಲು
»ಬಂಧಿತ ಶಂಕಿತ ಉಗ್ರರ ಪೋಷಕರಿಂದ ದೂರು, ಪಚಾವೋ, ಮಿರ್ಜಿಗೆ ಗೌರ್ನರ್ ಬುಲಾವ್
»ಆಂಧ್ರ, ಮಹಾರಾಷ್ಟ್ರಕ್ಕೂ ಕರ್ನಾಟಕ 'ಉಗ್ರ'ರ ಲಿಂಕ್; ಹಲವರ ಬಂಧನ
»ಆಂಧ್ರದಲ್ಲೂ ಸ್ಕೆಚ್: ಮತ್ತೊಂದು ಸಂಚು ಬಯಲು | 14 ದಿನ ಪೊಲೀಸ್ ವಶಕ್ಕೆ-ಸೌದಿಯಲ್ಲೇ ಆಗಿತ್ತು ಪ್ಲಾನ್: 3ತಿಂಗಳಿಂದ ಬೆನ್ನು ಬಿದ್ದಿದ್ದ ಶಂಕಿತ ಉಗ್ರರು
»ಬಂಧಿತರು ಉಗ್ರವಾದಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ;ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಸ್ಪಷ್ಟನೆ
»ಮಾಹಿತಿ ನೀಡುತ್ತಿಲ್ಲ: ಶಂಕಿತ ಉಗ್ರರ ತಂದೆ ಅಳಲು | ಮಾಹಿತಿಗೆ ಇಂಟರ್‌ಪೋಲ್ ನೆರವು' - ಅಶೋಕ್
»`ಉಗ್ರರ ಮಾಹಿತಿಗೆ ಇಂಟರ್‌ಪೋಲ್ ನೆರವು'
»ಎಲ್‌ಇಟಿ, ಹುಜಿ ನಂಟು; ಗಣ್ಯರ ಹತ್ಯೆಗೆ ಸಂಚು: ಬೆಚ್ಚಿಬಿದ್ದನಗರ: ಶಂಕಿತ ಉಗ್ರರಲ್ಲಿ ವೈದ್ಯ, ಎಂಜಿನಿಯರ್, ಗುತ್ತಿಗೆದಾರ, ಪತ್ರಕರ್ತ ಹಾಗೂ ಗಾರೆ ಕಾರ್ಮಿಕ! | ಶೆಟ್ಟರ್ ನಿವಾಸ ಬಳಿಯೇ ಶಂಕಿತ ಉಗ್ರನ ಮನೆ
»

ಪ್ರತಿಸ್ಪಂದನ
ಸಂಕೇಶ, ಹುಬ್ಬಳ್ಳಿ
2012-09-04
ನಿರೀಕ್ಷೆ ಸತ್ಯವೇ ಆಯಿತು ಮೆಣಸಿನಕಾಯಿ ತಾಗಬಾರದ ಜಾಗಕ್ಕೇ ತಾಗಿದೆ.
Saleem, Camp Arifjan
2012-09-04
ಎಲೋ ಮುತಾಲಿಕನ ಚೇಲಾ ಸಂಕೇಶನೇ, ನಿನ್ನ ಇದೇ ಹೈದರಾಬಾದ್ ಪೊಲೀಸರು ಮೆಕ್ಕಾ ಮಸ್ಜಿದ್ ಸ್ಪೋಟದ ಕೇಸಲ್ಲಿ 74 ಸುಶಿಕ್ಷಿತ ಮುಸ್ಲಿಂ ಯುವಕರನ್ನು ಬಂದಿಸಿ ವರ್ಷ ಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಿತ್ತು ಮತ್ತು ಅವರಲ್ಲಿ 12 ಯುವಕರ ಮೇಲೆ ಚಾರ್ಜ್ ಶೀಟ್ ಹಾಕಿತ್ತು. ಅವರ ಜೀವನದ ಅಮೂಲ್ಯ ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದು ಮತ್ತು ಉಗ್ರ ಎಂಬ ಹಣೆ ಪಟ್ಟಿಯಿಂದ ಇನ್ನುಳಿದ ಜೀವನವನ್ನು ಕಗ್ಗತ್ತಲಲ್ಲಿ ಕಳೆಯಬೇಕಾದುದು ಇದೇ ನಿನ್ನ ಹೈದರಾಬಾದ್ ಪೋಲಿಸರಿಂದ. ಇನ್ನೂ ಯುವಕರು ಬಲಿಪಶುವಾಗುತ್ತಿದ್ದರು ಆದರೆ ಅಸೀಮಾನಂದ ಮನ ಕರಗಿ ತಪ್ಪೊಪ್ಪಿಕೊಂಡು ಬಿಟ್ಟ ಅದೂ ನಿನ್ನ ಹೈದರಾಬಾದ್ ಪೋಲೀಸರ ತನಿಖೆಯಿಂದ ಬಾಯಿ ಬಿಟ್ಟದ್ದಲ್ಲ. ಹೀಗೆ ನಡೆಯುತ್ತೆ ನಿನ್ನ ಈ ಪೋಲೀಸರ ತನಿಖಾ ಶೈಲಿ.
ಸಂಕೇಶ, ಹುಬ್ಬಳ್ಳಿ
2012-09-04
ಶಿವಕುಮಾರ ಮೆಣಸಿನಕಾಯಿಯವರೇ...ನಿಮ್ಮ ವರದಿಯಿಂದ ಕೆಲವರ ದೇಹದ ಕೆಲವು ಭಾಗಗಳಿಗೆ ಮೆಣಸಿನಕಾಯಿ ಹಚ್ಚಿದಂತೆ ಆಗಬಹುದು. ಈ ತನಕ ಕರ್ನಾಟಕದ ಪೊಲೀಸರಿಗೆ ಮಾತ್ರ ಬಯ್ಯುತ್ತಿದ್ದ ಇಂತವರು ಇನ್ನುಮುಂದೆ ಹೈದರಾಬಾದ್ ಪೊಲೀಸರಿಗೂ ಬಯ್ಯಲು ಶುರುಮಾಡಬಹುದು. ಯಾಕೆಂದರೆ ಇವರ ಅಂಬೋಣದಲ್ಲಿ ಮಾಧ್ಯಮದ ವರದಿಗಳೆಲ್ಲಾ ಸುಳ್ಳು. ಪೊಲೀಸರು ಬಂಧಿಸಿರುವ ಎಲ್ಲರೂ ನಿರಪರಾಧಿಗಳು, ಅಮಾಯಕರು! ನೋಡ್ತಾ ಇರಿ.... ನಿಮ್ಮ ಈ ವರದಿಯ ಕುರಿತು ಅದೆಷ್ಟು ಖಾರವಾದ ಪ್ರತಿಕ್ರಿಯೆಗಳು ಅಪ್ಪಳಿಸುತ್ತವೆ ಎಂದು. ಧನ್ಯವಾದ ಶಿವಕುಮಾರ ರವರೇ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ರೈತರ ಜಮೀನಿಗೆ 35 ಲಕ್ಷ ರೂ. ನಿಗದಿಗೆ ಸಂಪುಟ ಒಪ್ಪಿಗೆ: ಪ್ರತಿಭಟನೆಗೆ ಮಣಿದ ಸರಕಾರ: ಸುದರ್ಶನ್ ಸ್ವಾಗತ
»ಕುಸಿದ ಹುಲಿಕೆರೆ ಸುರಂಗ: ರೈತರಲ್ಲಿ ಆತಂಕ
»ಸಫಾಯಿ ಕರ್ಮಚಾರಿ ಆಯೋಗ ರಚನೆಗೆ ಚಿಂತನೆ: ಸಚಿವ ಸುರೇಶ್‌ಕುಮಾರ್
»ರಾಷ್ಟ್ರೋತ್ಥಾನ ಪರಿಷತ್‌ಗೆ ಭೂಮಿ ಮಂಜೂರು; ಹೈಕೋರ್ಟ್ ತಡೆ
»ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
»ಕೃಷಿ ಭೂಮಿಗೆ 25ರಿಂದ 35 ಲಕ್ಷ ಅನುದಾನ: ಸುರೇಶ್‌ಕುಮಾರ್
»ಗುಟ್ಕಾ ತಿಂದರೂ ತಲಾಖ್ !...
»ಬಿಜೆಪಿ ಭ್ರಷ್ಟಾಚಾರದಲ್ಲೇ ಕಾಲಹರಣ ಮಾಡ್ತಿದೆ: ಕಾಂಗ್ರೆಸ್
»ಅಕ್ರಮ-ಸಕ್ರಮ: ರಾಜ್ಯಪಾಲರನ್ನು ಭೇಟಿ ಮಾಡಿದ ಸಿ‌ಎಂ ಶೆಟ್ಟರ್
»ಅನಧಿಕೃತ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಧರಣಿ
»ಪ್ರೌಢಶಿಕ್ಷಣದೊಂದಿಗೆ ಪದವಿ ಪೂರ್ವ ಇಲಾಖೆ ವಿಲೀನ ವಿರೋಧಿಸಿ ಪಿಯು ಕಾಲೇಜು ನೌಕರರ ಸಂಘದಿಂದ ಮನವಿ
»ಜಗತ್ತಿಗೆ ನೋನಿ ಸಸ್ಯ ಔಷಧಿ ಗುಣವುಳ್ಳ ಅಮೂಲ್ಯ ಕೊಡುಗೆ: ಕೃಷಿತಜ್ಞ ಸಚ್ಚಿದಾನಂದ
»ಸಂಗಮೇಶ್ವರಪೇಟೆ ಸಹಕಾರ ಸಂಘಕ್ಕೆ 50 ಲಕ್ಷ ಲಾಭ: ಸಚಿವ ಜೀವರಾಜ್
»ವಿದ್ಯಾರ್ಥಿಗಳು ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಿಕೊಳ್ಳಬೇಕು: ಬೋಪಯ್ಯ
»ಜನರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ದ್ರೋಹಿಗಳು: ಮತ್ತೆ ಗುಡುಗಿದ ಈಶ್ವರಪ್ಪ
»ಎರಡನೆ ದಿನಕ್ಕೆ ಕಾಲಿಟ್ಟ ಬಗರ್ ಹುಕುಂ ರೈತರ ಪಾದಯಾತ್ರೆ
» ಕನ್ನಡ ವಿಕಿ ಡಿಂಡಿಮ!...
» ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
»ಗಂಗಾವತಿ: ಎಚ್ಚೆತ್ತ ಆರೋಗ್ಯ ಇಲಾಖೆ, ನಗರಸಭೆ ಜಿಲ್ಲೆಯಲ್ಲಿ 270 ಡೆಂಗ್ ಪ್ರಕರಣ ಪತ್ತೆ: 2 ಸಾವು
»ಅಮಾಯಕರಿಗೆ ಉಗ್ರರ ಪಟ್ಟ :ಎ.ಕೆ. ಸುಬ್ಬಯ್ಯ ಆರೋಪ; *ಪೊಲೀಸರ ಮಾಹಿತಿಯ ಕುರಿತಂತೆ ಸಂಶಯ!
»Plea to remove Karnataka judge for alleged sexist remarks
»ಮೈಸೂರು: ಮನೆ ಮನೆಗೆ ಅಂಬೇಡ್ಕರ್'ಗೆ ಚಾಲನೆ
»ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
»ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
»ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri