ಮಂಗಳವಾರ, 10-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಪ್ರಧಾನಿ ಕಣ್ಗಾವಲಲ್ಲೇ ಥೋರಿಯಂ ಲೂಟಿ?...

ನವದೆಹಲಿ: ೨ಜಿ ಮತ್ತು ಕಲ್ಲಿದ್ದಲು ಹಗರಣದಿಂದ ಮುಖಭಂಗ ಅನುಭವಿಸಿರುವ ಯುಪಿ‌ಎ ಸರ್ಕಾರಕ್ಕೆ ಮತ್ತೊಂದು ಹಗರಣ ಎದುರಾಗಿದೆ.

ಬರೋಬ್ಬರಿ ರು.೪೮ ಲಕ್ಷ ಕೋಟಿ ಮೌಲ್ಯದ ಥೋರಿಯಂ ಹಗರಣ ಬಹಿರಂಗವಾಗಿದ್ದು, ದೇಶದ ಸಮುದ್ರ ಕಿನಾರೆಗಳಿಂದ ನಿಯಮ ಉಲ್ಲಂಘಿಸಿ ೧,೯೫,೩೦೦ ಟನ್‌ಗಳಷ್ಟು ಥೋರಿಯಂ ಅನ್ನು ಖಾಸಗಿ ಕಂಪನಿಗಳು ರಫ್ತು ಮಾಡಿವೆ.

೨೦೦೪ರಿಂದ ಈಚೆಗೆ ಇದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎಂದು ಆಂಗ್ಲ ಪತ್ರಿಕೆ ‘ದ ಸ್ಟೇಟ್ಸ್‌ಮನ್’ ವರದಿ ಮಾಡಿದೆ. ಸುಮಾರು ೨೦.೧ ಲಕ್ಷ ಟನ್‌ಗಳಷ್ಟು ಮೊನೋಜೈಟ್ ನಾಪತ್ತೆಯಾಗಿದೆ. ಅಂದರೆ ಇದು ೧,೯೫,೩೦೦ ಟನ್ ಥೋರಿಯಂಗೆ ಸಮ.

ಈ ಮೊತ್ತದ ಮುಂದೆ ೨ಜಿ ಮತ್ತು ಕಲ್ಲಿದ್ದಲು ಹಗರಣದ ಮೊತ್ತ ಬಹಳ ಸಣ್ಣ ಪ್ರಮಾಣದ್ದು ಎಂದೇ ವಿಶ್ಲೇಷಿಸಲಾಗಿದೆ. ಏಕೆಂದರೆ ಮಹಾಲೇಖಪಾಲರ (ಸಿ‌ಎಜಿ) ವರದಿ ಪ್ರಕಾರ ೨ಜಿಯಿಂದ ಕೇಂದ್ರಕ್ಕೆ ನಷ್ಟವಾದದ್ದು ರು.೧.೭೬ ಲಕ್ಷ ಕೋಟಿ ಮತ್ತು ಕಲ್ಲಿದ್ದಲು ಹಗರಣದಿಂದ ಉಂಟಾಗಿರುವ ನಷ್ಟ ರು.೧.೮೬ ಕೋಟಿ.

ಮಾಹಿತಿ ಹಕ್ಕಿನಡಿ ಬಹಿರಂಗ: ಭಾರಿ ನಷ್ಟ ಉಂಟು ಮಾಡುವ ಹಗರಣ ಬಹಿರಂಗವಾದದ್ದು ಆರ್‌ಟಿ‌ಐ ಮೂಲಕ.

ಮಾಹಿತಿ ಹಕ್ಕು ಕಾರ್ಯಕರ್ತ ಕೊಡಿಕುನೆಲ್ ಸುರೇಶ್ ಮೋನೋಜೈಟ್ ರಫ್ತಿನ ಬಗ್ಗೆ ೨೦೧೧ರ ನ.೩೦ರಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಂದ ಉತ್ತರ ಕೋರಿ ಅರ್ಜಿ ಸಲ್ಲಿಸಿದ್ದರು. ಮೋನೋಜೈಟ್ ರಫ್ತು ಮಾಡುವಲ್ಲಿ ಕಂಪನಿಗಳು ಅಕ್ರಮ ಎಸಗಿವೆಯೇ ಎಂದು ಸುರೇಶ್ ಮಾಹಿತಿ ಬಯಸಿದ್ದರು.

ಎಲ್ಲಿ ಸಿಗುತ್ತದೆ?: ಒರಿಸ್ಸಾದ ಸ್ಯಾಂಡ್ ಮೈನಿಂಗ್ ಕಾಂಪ್ಲೆಕ್ಸ್, ಕನ್ಯಾಕುಮಾರಿ ಜಿಲ್ಲೆಯ ಮನವಲಕುರಿಚಿ ಮತ್ತು ಕೇರಳದ ಆಲುವ-ಚೇವರದಲ್ಲಿ ಹೇರಳವಾಗಿ ಮೋನೋಜೈಟ್ ಸಿಗುತ್ತದೆ.

ಯಾರಿಗೆ ಇದೆ ಅನುಮತಿ?: ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಇಂಡಿಯನ್ ರೇರ್ ಮಿನರಲ್ಸ್‌ಗೆ ಮಾತ್ರ ಮೋನೋಜೈಟ್‌ನಿಂದ ಥೋರಿಯಂ ಪಡೆಯಲು ಅಧಿಕಾರವಿದೆ. ಆದರೆ ಖಾಸಗಿ ಕಂಪನಿಗಳು ಎಲ್ಲ ನಿಯಮ ಗಾಳಿಗೆ ತೂರಿ ಮೋನೋಜೈಟ್ ಅನ್ನು ರಫ್ತು ಮಾಡಿವೆ.
ಮೋನೋಜೈಟ್‌ಗೆ ಅನುಮತಿ ಇಲ್ಲ : ಮಾಹಿತಿ ಹಕ್ಕು ಕಾರ್ಯಕರ್ತ ಸುರೇಶ್ ಅವರ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ವಿ.ನಾರಾಯಣಸ್ವಾಮಿ ಮೊನೋಜೈಟ್ ಹೊರತುಪಡಿಸಿ ಇತರ ಖನಿಜಗಳ ರಫ್ತಿಗೆ ಅನುಮತಿ ನೀಡಲಾಗಿದೆ. ಆದರೆ ಮೊನೋಜೈಟ್ ಮತ್ತು ಥೋರಿಯಂ ರಫ್ತಿಗೆ ಯಾವುದೇ ಕಂಪನಿಗಳಿಗೆ ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದ್ದರು. ಅದಕ್ಕೆ ಅಣುಶಕ್ತಿ ಕಾಯ್ದೆಯನ್ವಯ ಅನುಮತಿ ಕಡ್ಡಾಯ ಎಂದು ನಾರಾಯಣಸ್ವಾಮಿ ಮಾಹಿತಿ ನೀಡಿದ್ದರು.

ಹೊರಗಿಡಲಾಗಿತ್ತು: ಇನ್ನೊಂದು ಪ್ರಮುಖವಾದ ಅಂಶವೆಂದರೆ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಅಣುಶಕ್ತಿ ಖಾತೆಯನ್ನು ಹೊಂದಿದ್ದಾರೆ. ೨೦೦೬ರ ಜನವರಿ ೨೦ರಂದು ಭಾರ ಖನಿಜಗಳಾದ (ಹೆವಿ ಮಿನರಲ್ಸ್) ಮೋನೋಜೈಟ್ ಮತ್ತು ಇಲ್ಮನೈಟ್ ಅನ್ನು ನಿಷೇಧಿತ ವಸ್ತುಗಳ ಪಟ್ಟಿಯಿಂದ ಕೈಬಿಡಲಾಗಿತ್ತು ಎಂದು ‘ದ ಸ್ಟೇಟ್ಸ್‌ಮನ್’ ವರದಿ ಮಾಡಿತ್ತು. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲೆಂದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

೨೦೦೫ರಿಂದ ಹೆಚ್ಚಳ: ಒಡಿಶಾ ಮತ್ತು ಕೇರಳ ಕರಾವಳಿಯಲ್ಲಿ ಹೇರಳವಾಗಿರುವ ಮೋನೋಜೈಟ್‌ಗಳ ರಫ್ತಿಗೆ ಶುಕ್ರ ದೆಸೆ ಬಂದದ್ದು ೨೦೦೫ರ ಬಳಿಕ. ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಅಣು ಶಕ್ತಿಯನ್ನು ಬಳಸಲು ಆರಂಭ ಮಾಡಿದ್ದೇ ದೇಶದ ಕರಾವಳಿಯಲ್ಲಿರುವ ಮೋನೋಜೈಟ್, ಇಲ್ಮನೈಟ್ ಸೇರಿದಂತೆ ಇತರ ಭಾರ ಖನಿಜಗಳ ರಫ್ತು ಆರಂಭವಾಯಿತು. ದುರಂತವೆಂದರೆ, ದೇಶದ ಅಣುಶಕ್ತಿ ಗೆ ಅಗತ್ಯ ವಾಗಿರುವ ರೇಡಿಯೋ ಆರು.ಯಕ್ಟಿವ್ ಖನಿಜಗಳನ್ನೂ ಖಾಸಗಿ ಕಂಪನಿಗಳು ಕಾನೂನು ಬಾಹಿರವಾಗಿ ರಫ್ತು ಮಾಡಲಾರಂಭಿಸಿದವು. ಒಂದು ವೇಳೆ ಅಣು ಶಕ್ತಿ ಇಲಾಖೆಯ ಬಗ್ಗೆ ಮಹಾಲೇಖಪಾಲರು ತನಿಖೆ ಮಾಡಿದರೆ ಹುಳುಕುಗಳೆಲ್ಲವೂ ಬಹಿರಂಗವಾಗಲಿದೆ.

ಕಂಪನಿಗಳಿಗೇ ಪ್ರಶಸ್ತಿ: ಇಂತಹ ಅಪರೂಪದ ಖನಿಜಗಳನ್ನು ನಿಯಮ ಉಲ್ಲಂಘಿಸಿ ರಫ್ತು ಮಾಡಿದ ಪ್ರಮುಖ ಕಂಪನಿಗಳಿಗೆ ದೇಶದ ರಫ್ತು ಉತ್ತೇಜಕ ಮಂಡಳಿಯಿಂದ ವಿಶೇಷ ಪ್ರಶಸ್ತಿ ಮತ್ತು ಪ್ರಮಾಣ ಪ್ರತ್ರಗಳನ್ನು ನೀಡಿ ಗೌರವಿಸಲಾಗಿತ್ತು.

ಮುಖ್ಯಸ್ಥರೇ ಇಲ್ಲ: ಖನಿಜಗಳ ರಫ್ತಿಗೆ ಅನುಮತಿ ನೀಡಬೇಕಾದ ಪ್ರಾಧಿಕಾರ ಗಣಿಗಳ ಮುಖ್ಯ ನಿಯಂತ್ರಕರು. ಮಹಾರಾಷ್ಟ್ರದ ನಾಗ್ಪುರದಲ್ಲಿ ಇದರ ಮುಖ್ಯ ಕಚೇರಿಯಿದೆ. ಇದರ ಮುಖ್ಯಸ್ಥ ಹಾಗೂ ಕಟ್ಟುನಿಟ್ಟಿನ ಅಧಿಕಾರಿ ಸಿ.ಪಿ. ಆರು.ಯಂಬ್ರೋಸ್ ೨೦೦೮ರ ಜೂ.೩೦ರಂದು ನಿವೃತ್ತಿಯಾಗಿದ್ದಾರೆ. ಇದಾದ ಬಳಿಕ ಈ ಹುದ್ದೆಗೆ ಉದ್ದೇಶಪೂರ್ವಕವಾಗಿ ಯಾರನ್ನೂ ನೇಮಕ ಮಾಡಿಲ್ಲ.

ಕೇಂದ್ರ ವಲಯದ ಗಣಿ ನಿಯಂತ್ರಕ ರಂಜನ್ ಸಹಾಯ್ ಅವರನ್ನು ಈಗ ಗಣಿಗಳ ಮುಖ್ಯ ನಿಯಂತ್ರಕ ಹುದ್ದೆಗೆ ನೇಮಿಸಲಾಗಿದೆ. ಆದರೆ ಅವರು ಖಾಸಗಿ ಕಂಪನಿಗಳ ಲಾಬಿಗೆ ನೆರವಾಗುತ್ತಿದ್ದಾರೆಂದು ಆರೋಪಿಸ ಲಾಗಿದೆ. ಮಾತ್ರವಲ್ಲದೆ ಗಣಿ ಇಲಾಖೆಯಲ್ಲಿ ತಾವು ಹೊಂದಿರುವ ಪ್ರಭಾವದಿಂದಾಗಿ ಇಲಾಖೆಯ ಅಧಿಕಾರಿಗಳ ಜತೆಗೆ ನಿರಂಕುಶ ಧೋರಣೆಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಸಹಾಯ್ ಮೇಲಿದೆ.

ನೆಹರೂ ನಿಷೇಧ ಹೇರಿದ್ದರು

ದೇಶದ ಮೊದಲ ಪ್ರಧಾನಿ ದಿ.ಜವಾಹರ್‌ಲಾಲ್ ನೆಹರೂ ಥೋರಿಯಂ ರಫ್ತಿನ ಮೇಲೆ ನಿಷೇಧ ಹೇರಿದ್ದರು. ೧೯೦೫ರಲ್ಲಿ ಮೊದಲ ಬಾರಿಗೆ ದೇಶದಲ್ಲಿರುವ ಥೋರಿಯಂ ಮಹತ್ವ ಅರಿಯಲಾಗಿತ್ತು. ಜರ್ಮನಿಯ ವಿಜ್ಞಾನಿಯೊಬ್ಬರಿಂದಾಗಿ ದೇಶದ ಕರಾವಳಿ ಪ್ರದೇಶದಲ್ಲಿರುವ ಮರಳಿನಲ್ಲಿ ಥೋರಿಯಂ ಅಂಶ ಹೇರಳವಾಗಿದೆ ಎಂದು ಗೊತ್ತಾಯಿತು. ಹೀಗಾಗಿ, ಜರ್ಮನಿಗೆ ಹೇರಳವಾಗಿ ಮೋನೋಜೈಟ್ ರಫ್ತಾಗತೊಡಗಿತು. ಇದಾದ ಬಳಿಕ ಫ್ರಾನ್ಸ್ ಕೂಡ ಅದರಲ್ಲಿ ಆಸಕ್ತಿ ವಹಿಸಿತು.

ಸರ್ಕಾರ ಏನು ಮಾಡಬೇಕು?

- ಥೋರಿಯಂ ಅಂಶವನ್ನು ಒಳಗೊಂಡ ಮೋನೋಜೈಟ್, ಇಲ್ಮನೈಟ್, ರುಟೈಲ್, ಝಿರ್ಕಾನ್‌ಗಳನ್ನು ಖಾಸಗಿ ಕಂಪನಿಗಳ ವ್ಯಾಪ್ತಿಯಿಂದ ಹೊರಗಿಡಬೇಕು. ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ೧೯೫೭ರ ಅನ್ವಯ ಕೇಂದ್ರ ಸರ್ಕಾರ ಅದನ್ನು ಕಡ್ಡಾಯ ಮಾಡಬೇಕು.

- ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಮಾದರಿಯಲ್ಲಿ ಗಣಿ ಮತ್ತು ಖನಿಜ ಪ್ರಾಧಿಕಾರ ರಚನೆ ಮಾಡಬೇಕು. ಇದಕ್ಕೆ ಸದ್ಯ ಇರುವ ಕಾನೂನಿಗೆ ತಿದ್ದುಪಡಿ ತರಬೇಕು.

ಯುಪಿ‌ಎ ಭೂರಿ ಭೋಜನ

ರು.೧.೭೬ - ಲಕ್ಷ ಕೋಟಿ೨ಜಿ ಹಗರಣ


ರು.೧.೮೬ -ಲಕ್ಷ ಕೋಟಿಕೋಲ್ ಹಗರಣ


೪೮-ಲಕ್ಷ ಕೋಟಿಥೋರಿಯಂ ಲೂಟಿ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-04

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಕಠಿಣ ಕ್ರಮ ತೆಗೆದುಕೊಳ್ಳಲು ಶಿಂಧೆ ಆಗ್ರಹ
»ನಾಳೆ ಏರ್ ಇಂಡಿಯಾಕ್ಕೆ ಡ್ರೀಮ್‌ಲೈನರ್
»ವಿಶ್ವದ ಅತ್ಯಂತ ದ್ವೇಷಿಸುವ ನಗರಗಳ ಸಾಲಿಗೆ ದಿಲ್ಲಿ
»ಮನಮೋಹನ್ ಸಿಂಗ್ ದುರಂತ ನಾಯಕ: ವಾಷಿಂಗ್ಟನ್ ಪೋಸ್ಟ್‌ನ ಪತ್ರಕರ್ತನಿಗೆ ಪ್ರಧಾನಿ ಕಾರ್ಯಾಲಯ ತರಾಟೆ
»ಮಹಿಳಾ ಸಬಲೀಕರಣಕ್ಕೆ ಎನ್‌ಜಿಒದಿಂದ ‘ಉಮ್ಮೀದ್ ಕಿ ರಿಕ್ಷಾ’ ಯೋಜನೆಗೆ ಚಾಲನೆ
»ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣ: ಸಮಸ್ಯೆಯ ಸುಳಿಯಲ್ಲಿ ಮತ್ತಷ್ಟು ಪೊಲೀಸರು, ರಾಜಕಾರಣಿಗಳು
»ಪ.ಬಂಗಳಾದಲ್ಲಿ ದಿಢೀರ್ ಪ್ರವಾಹ: ಕೊಚ್ಚಿ ಹೋದ ಬಸ್, 100 ಮಂದಿ ನಾಪತ್ತೆ
»ಶಾಕಿಂಗ್ ರ್ಯಾಗಿಂಗ್‌ ವಿಡಿಯೋ: ಕೇಸ್‌ ದಾಖಲಿಸದ ಪೊಲೀಸ್‌
»ಸೆ 26ರಿಂದ ಯುಎಸ್ ವೀಸಾ ಶುಲ್ಕ ಪಾವತಿ ಸರಳ
»‘ಕೋಲ್’ಹಲ: ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ
»ಶಿವಕಾಶಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೂರು ಪ್ರತ್ಯೇಕ ತಂಡಗಳಿಂದ ತನಿಖೆ; ಆರು ಮಂದಿಯ ಬಂಧನ
»ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
»ಎಸ್ಸಿ-ಎಸ್ಟಿ ಭಡ್ತಿ ಮೀಸಲು ಮಸೂದೆ ಮಂಡನೆ:ರಣರಂಗವಾದ ರಾಜ್ಯಸಭೆ
»ಪ್ರಧಾನಿ ಸಿಂಗ್ ದುರಂತ ನಾಯಕ: ವರದಿಗೆ ಗಂಟುಬಿದ್ದ ವಾಷಿಂಗ್ಟನ್ ಪೋಸ್ಟ್
»ಹಿರಿಯರ ಕಿತ್ತಾಟ:ಸದಸ್ಯರಿಂದಲೇ ಮೇಲ್ಮನೆ ಗೌರವ ಮಣ್ಣುಪಾಲು| ಎಸ್‌ಪಿ-ಬಿ‌ಎಸ್‌ಪಿ ಸಂಸದರ ನಡುವೆ ಗುದ್ದಾಟ
»ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
»23 ಭಾರತೀಯ ನಾವಿಕರಿದ್ದ 'ಅಬುಧಾಬಿ ಸ್ಟಾರ್‌' ನೌಕೆ ಅಪಹರಣ: ನೈಜೀರಿಯಾ ನೌಕಾಪಡೆ ಕಾರ್ಯಾಚಾರಣೆ - ನಾವಿಕರ ಸುರಕ್ಷಿತ ಬಿಡುಗಡೆ
»ಶ್ರೀಲಂಕಾ ಪ್ರವಾಸಿಗರ ಮೇಲಿನ ದಾಳಿಗೆ ಜಯಾ ಹೊಣೆ: ಕರುಣಾನಿಧಿ
»ಬಳ್ಳಾರಿ ಲೋಕಸಭಾ ಕ್ಷೇತ್ರ: ಸೆ.15ರಂದು ಮರು ಮತ ಎಣಿಕೆ
»ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ದುರಂತ: 52ಮಂದಿ ಬಲಿ, 70ಗಾಯಾಳು
»ಉದ್ಬವ್ ಹೇಳಿಕೆಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ
»ರಾಜ್ಯಸಭೆಯಲ್ಲಿ ಕೈ ಕೈ ಮಿಲಾಯಿಸಿದ ಸಂಸದರು
»ತೆಲಂಗಾಣ ರಾಜ್ಯ ರಚನೆಗೆ ಬಿಜೆಪಿ ಬದ್ಧ: ಸುಷ್ಮಾ
»ಭಾರತದ 'ಮೌನ' ಪ್ರಧಾನಿ ದುರಂತ ವ್ಯಕ್ತಿ: ವಾಷಿಂಗ್ಟನ್ ಪೋಸ್ಟ್
»ಪ್ರಜಾಪತಿ ನಕಲಿ ಎನ್‌ಕೌಂಟರ್ : ಅಮಿತ್‌ಶಾ ಸಹಿತ 20 ಮಂದಿಯ ವಿರುದ್ಧ ಆರೋಪ ಪಟ್ಟಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri