ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)

ಬೆಂಗಳೂರು,ಸೆ.3:ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಆರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ನೀಡಿರುವ 96 ರನ್‌ಗಳ ನೆರವಿನಲ್ಲಿ ಟೀಮ್ ಇಂಡಿಯಾ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೆ ಮತ್ತು ಅಂತಿಮ ಟೆಸ್ಟ್‌ನಲ್ಲಿ ಪ್ರವಾಸಿ ನ್ಯೂಝಿಲೆಂಡ್ ವಿರುದ್ಧ ಐದು ವಿಕೆಟ್‌ಗಳ ಜಯ ಗಳಿಸಿದೆ.ಈ ಗೆಲುವಿನೊಂದಿಗೆ ಭಾರತ ನ್ಯೂಝಿಲೆಂಡ್ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಿಂದ ಜಯಿಸಿದೆ.

ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಇಂದು ಗೆಲ್ಲಲು ಎರಡನೆ ಇನಿಂಗ್ಸ್‌ನಲ್ಲಿ 261 ರನ್‌ಗಳ ಗುರಿ ಪಡೆದ ಭಾರತ 63.2ಓವರ್‌ಗಳಲ್ಲಿ ಐದು ವಿಕೆಟ್ ನಷ್ಟದಲ್ಲಿ 262 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಭಾರತ ಒಂದು ಹಂತದಲ್ಲಿ 166ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಸೊಗಸಾದ ಇನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಮತ್ತು ಸ್ಪಿನ್ನರ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು.

ನಾಯಕ ಧೋನಿ ಅವರು ಸ್ಪಿನ್ನರ್ ಜೀತನ್ ಪಟೇಲ್ ಅವರ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಎತ್ತುವ ಮೂಲಕ ತಂಡದ ಗೆಲುವಿನ ರನ್ ಪೂರೈಸಿದರು. ಇದರೊಂದಿಗೆ ನಾಯಕ ಧೋನಿ ನೇತೃತ್ವದಲ್ಲಿ ಭಾರತ ತವರಿನಲ್ಲಿ 14ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿದೆ. ಮಾಜಿ ನಾಯಕ ಮುಹಮ್ಮದ್ ಅಝರುದ್ಧಿನ್ ದಾಖಲೆಯನ್ನು ಧೋನಿ ಮುರಿದಿದ್ದಾರೆ. ಅಝರುದ್ದೀನ್ ನಾಯಕತ್ವದಲ್ಲಿ ಭಾರತ ತವರಲ್ಲಿ 13ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿತ್ತು.

ನಾಯಕ ಧೋನಿ ಇಂದು ಜೀತನ್ ಪಟೇಲ್ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುತ್ತಿದ್ದಂತೆ ಅದುವರೆಗೂ ಉಸಿರು ಬಿಗಿ ಹಿಡಿದು ಪಂದ್ಯವನ್ನು ವೀಕ್ಷಿಸುತ್ತಿದ್ದ ತಂಡದ ಸಹ ಆಟಗಾರರು ಕ್ರೀಡಾಂಗಣಕ್ಕೆ ಆಗಮಿಸಿ ವಿಜಯೋತ್ಸವದಲ್ಲಿ ಪಾಲ್ಗೊಂಡರು.ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ಕೊಹ್ಲಿ ಎರಡನೆ ಇನಿಂಗ್ಸ್‌ನಲ್ಲೂ ಉತ್ತಮ ಆಟ ಪ್ರದರ್ಶಿಸಿ ಔಟಾಗದೆ 51ರನ್(82ಎ, 9ಬೌ) ಮತ್ತು ನಾಯಕ ಧೋನಿ ಔಟಾಗದೆ 48ರನ್(60ಎ, 3ಬೌ, 2 ಸಿ) ಕೊಡುಗೆ ನೀಡಿದರು.

ರವಿವಾರ ದಿನದಾಟದ ಅಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟದಲ್ಲಿ 232 ರನ್ ಮಾಡಿದ್ದ ನ್ಯೂಝಿಲೆಂಡ್ ಆಟ ಮುಂದುವರಿಸಿ 248ರನ್ ತಲುಪುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.10ರನ್ ಗಳಿಸಿದ್ದ ಜೀತನ್ ಪಟೇಲ್ ಮತ್ತು ಖಾತೆ ತೆರೆಯದೆ ಇದ್ದ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್ ಮುಂದುವರಿಸಿ ಅಂತಿಮ ವಿಕೆಟ್‌ಗೆ 26 ರನ್‌ಗಳ ಕೊಡುಗೆ ನೀಡಿದರು.

ಪಟೇಲ್ 27 ಎಸೆತಗಳಲ್ಲಿ 3ಬೌಂಡರಿಗಳ ನೆರವಿನಲ್ಲಿ 22 ರನ್ ಗಳಿಸಿ ಝಹೀರ್ ಖಾನ್ ಎಸೆತದಲ್ಲಿ ನಾಯಕ ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಇದರೊಂದಿಗೆ ಭಾರತಕ್ಕೆ ಎರಡನೆ ಇನಿಂಗ್ಸ್‌ನಲ್ಲಿ ಗೆಲ್ಲಲು 261 ರನ್‌ಗಳ ಸಾಧಾರಣ ಸವಾಲು ದೊರೆಯಿತು.

ಎರಡನೆ ಇನಿಂಗ್ಸ್ ಆರಂಭಿಸಿದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಮೊದಲ ವಿಕೆಟ್‌ಗೆ 77 ರನ್‌ಗಳ ಕೊಡುಗೆ ನೀಡಿದರು. ಸೆಹ್ವಾಗ್ 38 ರನ್ ಗಳಿಸಿ ಜೀತನ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ಗಂಭೀರ್ (34)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು.

ಮೂರನೆ ವಿಕೆಟ್‌ಗೆ ಚೇತೇಶ್ವರ ಪೂಜಾರ ಮತ್ತು ಸಚಿನ್ ತೆಂಡುಲ್ಕರ್ 69 ರನ್‌ಗಳ ಕೊಡುಗೆ ನೀಡಿ ತಂಡದ ಸ್ಕೋರ್‌ನ್ನು 152ಕ್ಕೆ ತಲುಪಿಸಿದರು.ತೆಂಡುಲ್ಕರ್ 27 ರನ್ ಗಳಿಸಿ ಸೌಥಿ ಎಸೆತಕ್ಕೆ ಬೌಲ್ಡ್ ಆಗಿ ಹಿಂದಿರುಗಿದರು.39.3ನೆ ಓವರ್‌ನಲ್ಲಿ ಪೂಜಾರ (48)ಅವರು ಪಟೇಲ್ ಎಸೆತದಲ್ಲಿ ಫ್ಲೆನ್‌ಗೆ ಕ್ಯಾಚ್ ನೀಡುವುದರೊಂದಿಗೆ 2 ರನ್‌ಗಳಿಂದ ಅರ್ಧ ಶತಕ ವಂಚಿತಗೊಂಡರು.

ಆ ಬಳಿಕ ಸುರೇಶ್ ರೈನಾ(0) ಖಾತೆ ತೆರೆಯದೆ ನಿರ್ಗಮಿಸುವ ಮೂಲಕ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಧೋನಿ ಮತ್ತು ಕೊಹ್ಲಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಕಿವೀಸ್‌ನ ಜೀತನ್ ಪಟೇಲ್ 68ಕ್ಕೆ 3, ಬೌಲ್ಟ್ ಮತ್ತು ಸೌಥಿ ತಲಾ 1 ವಿಕೆಟ್ ಹಂಚಿಕೊಂಡರು.

ಸಚಿನ್ ಹ್ಯಾಟ್ರಿಕ್ ಬೌಲ್ಡ್
ಸ್ವದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 14ನೆ ಗೆಲುವು ಪಡೆದ ಎಂಎಸ್ ಧೋನಿ ಭಾರತದ ಯಶಸ್ವಿ ನಾಯಕನೆನಿಸಿದರು. ಮುಹಮ್ಮದ್ ಅಝರುದ್ದೀನ್ ಹೆಸರಲ್ಲಿರುವ ದಾಖಲೆಯನ್ನು (13 ಗೆಲುವು) ಮುರಿದರು.

ಬೆಂಗಳೂರಿನಲ್ಲಿ 261 ರನ್ ಗರಿಷ್ಠ ಗೆಲುವಿನ ಗುರಿಯಾಗಿದೆ. ಭಾರತ ಬೆಂಗಳೂರಿನಲ್ಲಿ 4ನೆ ಇನಿಂಗ್ಸ್‌ನಲ್ಲಿ ಗರಿಷ್ಠ ಮೊತ್ತವನ್ನು ದಾಖಲಿಸಿದೆ.

ನ್ಯೂಝಿಲೆಂಡ್ ವಿರುದ್ಧದ ಇನಿಂಗ್ಸ್‌ನಲ್ಲಿ ಶತಕ ಹಾಗೂ ಅರ್ಧಶತಕವನ್ನು ಸಿಡಿಸಿದ ಆರನೆ ಭಾರತದ ಬ್ಯಾಟ್ ್ಸಮನ್ ವಿರಾಟ್ ಕೊಹ್ಲಿ. ರಾಹುಲ್ ದ್ರಾವಿಡ್ ಮಾತ್ರ ನ್ಯೂಝಿಲೆಂಡ್ ವಿರುದ್ಧದ ಎರಡೂ ಇನಿಂಗ್ಸ್‌ನಲ್ಲಿ ಶತಕವನ್ನು ಸಿಡಿಸಿದ್ದಾರೆ.
 ಸಚಿನ್ ತೆಂಡುಲ್ಕರ್ ಸತತ 3 ಇನಿಂಗ್ಸ್‌ನಲ್ಲಿ ಬೌಲ್ಡಾಗಿದ್ದಾರೆ.

ಆರ್. ಅಶ್ವಿನ್ ಸರಣಿಯಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೆ ಭಾರತೀಯ ಬೌಲರ್ ಎನಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-04

Tell a Friend
ಇತರ ಸಂಭಂದಪಟ್ಟ ವರದಿಗಳು
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ
»ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...
»ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್
»ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ
» ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...
»ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ
»ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್
»Iranian athlete refuses to 'shake hands' with Duchess of Cambridge during medal ceremony over 'cultural reasons'
»ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ
»ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ
» `ಸತ್ಯಾಗ್ರಹ'ದಲ್ಲಿ ಕರೀನಾ?...
»ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ
» ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ
»ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್
»ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
»‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’
» ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
»ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ
»ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ
»ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ
»ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ
»ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್
»ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್
»ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri