ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಉಡುಪಿ ಜಿಲ್ಲೆಯ ದೇವಸ್ಥಾನಗಳಿಗೆ 38 ಲಕ್ಷ ರೂ.ಬಿಡುಗಡೆ: ಜಿಲ್ಲೆಯ ಧಾರ್ಮಿಕ ಪರಿಷತ್‌ನ ವಿಶೇಷ ಸಭೆಯಲ್ಲಿ ಕೋಟ

ಉಡುಪಿ,ಸೆ.3:ಜಿಲ್ಲೆಯಲ್ಲಿ ಎ ಪ್ರವರ್ಗದ 21,ಬಿ ಪ್ರವರ್ಗದ 23ಹಾಗೂ ಸಿ ಪ್ರವರ್ಗದ 759 ಸೇರಿದಂತೆ ಒಟ್ಟು 803 ದೇವಸ್ಥಾನಗಳಿದ್ದು, ಇವುಗಳಲ್ಲಿ ಎ ಪ್ರವರ್ಗದ 8, ಬಿ ಪ್ರವರ್ಗದ 7ಮತ್ತು ಸಿ ಪ್ರವರ್ಗದ 13ಅನುವಂಶೀಯ ಆಡಳಿತ ಹೊಂದಿದ ದೇವಸ್ಥಾನಗಳೆಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಪ್ರವರ್ಗ ಎ ಮತ್ತು ಬಿ ದೇವಸ್ಥಾನಗಳ ಆಡಳಿತದಾರರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿರುವ ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಭಜನಾ ಸಪ್ತಾಹವನ್ನು(ಬೇಸಿಗೆ ಶಿಬಿರ)ನಡೆಸುವ ಬಗ್ಗೆ ಇಲಾಖೆಯಿಂದ ಸುತ್ತೋಲೆ ಹೊರಡಿಸುವುದಾಗಿ ಹೇಳಿದ ಅವರು,ಸೆ.15ರಂದು ಬೆಂಗಳೂರಿನಲ್ಲಿ ಎಲ್ಲಾ ಜಿಲ್ಲೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರನ್ನೊಳಗೊಂಡ ಸಭೆಯನ್ನು ಕರೆಯುವುದಾಗಿ ಸಭೆಗೆ ತಿಳಿಸಿದರು.

ರಾಜ್ಯದಲ್ಲಿ ಮುಜರಾಯಿ ದೇವಸ್ಥಾನಗಳ ಒಟ್ಟು ಆದಾಯ 250ಕೋಟಿ ರೂ.ಗಳಿದ್ದು,ಇದನ್ನು1000ಕೋಟಿ ರೂ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.366 ಅಧಿಕಾರಿಗಳನ್ನು ಸದ್ಯದಲ್ಲಿ ನೇಮಕ ಮಾಡುವುದಾಗಿ ಸಚಿವರು ತಿಳಿಸಿದರು.

ಅನುವಂಶೀಯ ಆಡಳಿತ ಹೊಂದಿದ ದೇವಸ್ಥಾನ ಹೊರತುಪಡಿಸಿ ಇನ್ನುಳಿದ ದೇವಸ್ಥಾನಗಳ ಪೈಕಿ ಎ ಪ್ರವರ್ಗದ ಒಂದು ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ತಿನಿಂದ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಒಟ್ಟು 1015ದೇವಸ್ಥಾನಗಳಿಗೆ ತಸ್ತೀಕು ನಿಗದಿಪಡಿಸಲಾಗಿದೆ.ಇವುಗಳ ವಾರ್ಷಿಕ ಬೇಡಿಕೆ 1.21ಕೋಟಿ ರೂ.ಗಳಾಗಿದ್ದು,2011-12ನೆ ಸಾಲಿನ ಬಾಕಿ ಮೊತ್ತ ಸೇರಿ ಪ್ರಸಕ್ತ ಸಾಲಿನಲ್ಲಿ ಒಟ್ಟು ಬೇಡಿಕೆ 1.92ಕೋಟಿ ರೂ.ಆಗಿದೆ.ಈ ಪೈಕಿ ಧಾರ್ಮಿಕ ದತ್ತಿ ಆಯುಕ್ತರಿಂದ 38ಲಕ್ಷ ರೂ.ಜಿಲ್ಲೆಗೆ ಬಿಡುಗಡೆಯಾಗಿದ್ದು,ಇದನ್ನು ಸಂಬಂಧಿತ ತಹಶೀಲ್ದಾರ್‌ಗೆ ಬಿಡುಗಡೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.

ಈಗಾಗಲೇ ನಿಗದಿಪಡಿಸಿರುವ ತಸ್ತೀಕ್‌ನ್ನು 12ಸಾವಿರ ರೂ.ನಿಂದ 24ಸಾವಿರ ರೂ.ಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಸಚಿವರು ಅನುವಂಶೀಯ ದೇವಸ್ಥಾನಗಳ ಪೈಕಿ ಉಡುಪಿ,ದ.ಕ.ಮತ್ತು ಮಡಿಕೇರಿ ದೇವಸ್ಥಾನಗಳಲ್ಲಿ ಸಂಪರ್ಕಾಧಿಕಾರಿಗಳ ನೇಮಕ ಮಾಡುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಂದಿನ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಯನ್ನು ದೇವಳದ ವತಿಯಿಂದ ನಿರ್ವಹಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಚಿವರು ದೇವಸ್ಥಾನದ ಆಡಳಿತಾಧಿಕಾರಿಗೆ ಸೂಚಿಸಿದರು. ಕೊಲ್ಲೂರು ದೇವಳದ ನೌಕರರ ಸಮಯ ಪರಿಪಾಲನೆಯ ಬಗ್ಗೆ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಒಂದು ವಾರದೊಳಗೆ ಜಾರಿಗೊಳಿಸಲು ಸೂಚಿಸಿದರು.

ಸಭೆಯಲ್ಲಿ ಧಾರ್ಮಿಕ ದತ್ತಿ ತಹಶೀಲ್ದಾರ್ ಎನ್.ಎಸ್.ದೊಡ್ಡಮನಿ,ಕುಂದಾಪುರ ಉಪವಿಭಾ ಗಾಧಿಕಾರಿ ಸದಾಶಿವ ಪ್ರಭು,ಉಡುಪಿ ತಹಶೀಲ್ದಾರ್ ಅಭಿಜಿನ್,ಕಾರ್ಕಳ ತಹಶೀಲ್ದಾರ್ ಜಗನ್ನಾಥ್ ರಾವ್ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : varthabharthi
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-04

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri