ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ಕೃಷ್ಣ ಜನ್ಮಾಷ್ಟಮಿ- ವಿಟ್ಲಪಿಂಡಿ ಮಹೋತ್ಸವದ ಉದ್ಘಾಟನೆ; ಡಾ. ಎಂ. ಬಾಲಮುರಳಿಕೃಷ್ಣರವರಿಗೆ ಶ್ರೀಕೃಷ್ಣ ವಾದಿರಾಜ ಅನುಗ್ರಹ ಪ್ರಶಸ್ತಿ ಪ್ರಧಾನ |
ಪ್ರಕಟಿಸಿದ ದಿನಾಂಕ : 2012-09-04
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ಸೆ. 3ರಂದು ಸಂಜೆ 7.10ಕ್ಕೆ ಹಮ್ಮಿಕೊಂಡ 'ಅಷ್ಟ ದಿನೋತ್ಸವ'ದ ಉದ್ಘಾಟನಾ ಸಮಾರಂಭವು ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ನೆರವೇರಿಸಿದರು.
ಸಮಾರ೦ಭದಲ್ಲಿ ಉಪಸ್ಥಿತರಿದ್ದ ಶ್ರೀಪರ್ಯಾಯ ಶ್ರೀಸೋದೆ ಮಾಠಾಧೀಶರಾದ ಶ್ರೀವಿಶ್ವವಲ್ಲಭ ಶ್ರೀಪಾದರು ಅಂತಾರಾಷ್ಟ್ರೀಯ ಖ್ಯಾತಿಯ, ಪದ್ಮಭೂಷಣ ಡಾ. ಎಂ. ಬಾಲಮುರಳಿಕೃಷ್ಣ ಅವರಿಗೆ ಶ್ರೀಕೃಷ್ಣ ವಾದಿರಾಜ ಅನುಗ್ರಹ ಪ್ರಶಸ್ತಿಯನ್ನು ನೀಡಿ ವಿಶೇಷ ಸಮ್ಮಾನಿಸಿದರು.
ಎ.ಈಶ್ವರಯ್ಯರವರು ಅಭಿನ೦ದನಾ ಭಾಷಣಾವನ್ನು ಮಾಡಿದರು. ನ೦ತರ ಬಾಲಮುರಳಿಕೃಷ್ಣರವರಿ೦ದ ಕರ್ನಾಟಕ ಸಂಗೀತ ಕಛೇರಿ ನಡೆಯಿತು.
ಪ್ರೋ.ಎ೦ ಎಲ್ ಸಾಮಗರವರು ಸ್ವಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2012-09-04
|
|
|
|
|