ಶನಿವಾರ, 14-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ

ಬೆಂಗಳೂರು (ಐಎಎನ್‌ಎಸ್): ಭಾರತ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.

ಮೂರನೇ ದಿನದ ಅಂತ್ಯಕ್ಕೆ ಒಂಭತ್ತು ವಿಕೆಟ್ ಕಳೆದುಕೊಂಡು 232 ರನ್ ಗಳಿಸಿದ್ದ ನ್ಯೂಜಿಲೆಂಡ್ ತಂಡ ಸೋಮವಾರ 248 ರನ್‌ಗಳಿಗೆ ಸರ್ವಪತನ ಕಂಡಿತು. ರವಿಚಂದ್ರನ್ ಅಶ್ವಿನ್ ಐದು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಒಟ್ಟಾರೆ 261 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಒಂದು ಹಂತದಲ್ಲಿ 166 ರನ್ನುಗಳಿಗೆ ಐದು ವಿಕೆಟ್ ಕಳೆದುಕೊಂಡು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ನಾಯಕ ಮಹೇಂದ್ರಸಿಂಗ್ ದೋನಿ ಹಾಗೂ ವಿರಾಟ್ ಕೋಹ್ಲಿ ಅವರು ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕೊಹ್ಲಿ ಶತಕ, ರೋಚಕ ಕ್ಷಣದತ್ತ ಬೆಂಗಳೂರು ಟೆಸ್ಟ್

* ಮೈಲಾರಲಿಂಗ ದಿಂಡಲಕೊಪ್ಪ ಬೆಂಗಳೂರು
ಮೂರನೇ ದಿನದ ಬೆಳಗ್ಗೆ ಭಾರತದ ದಾಂಡಿಗರು ಉರುಳಿದ ಹಾಗೆ ಸಂಜೆಯಾಗುತ್ತಲೇ ನ್ಯೂಜಿಲೆಂಡ್ ದಾಂಡಿಗರೂ ಸಹ ಹಾಗೆಯೇ ಪೆವಿಲಿಯನ್ ಸೇರಿದರು. ಇದರೊಂದಿಗೆ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಇನ್ನೂ ಎರಡು ದಿನಗಳ ಆಟ ಉಳಿದಿರುವಂತೆಯೇ ರೋಚಕತೆ ಸೃಷ್ಟಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರದ ಆಟದಲ್ಲಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಸಿಕ್ಕಿತು. ರಜೆ ದಿನವಾಗಿದ್ದರಿಂದ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಒಟ್ಟು 14 ವಿಕೆಟ್‌ಗಳು ಪತನವಾಗುವುದನ್ನು ಕಂಡರು. ಅಲ್ಲದೇ, ವಿರಾಟ್ ಕೊಹ್ಲಿ ಶತಕ ಬಾರಿಸಿದ್ದನ್ನೂ ನೋಡಿ ಆನಂದಪಟ್ಟರು.

ಭಾರತದ ಮೊದಲ ಇನಿಂಗ್ಸ್‌ನ್ನು 353 ರನ್‌ಗಳಿಗೆ ನಿಯಂತ್ರಿಸಿ 12 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಆಟ ನಿಂತಾಗ 9 ವಿಕೆಟ್ ನಷ್ಟಕ್ಕೆ 232 ರನ್‌ಗಳಿಸಿತ್ತು. ನ್ಯೂಜಿಲೆಂಡ್ ಇದೀಗ ಒಟ್ಟಾರೆ 244 ರನ್‌ಗಳಿಸಿದ್ದು, ಜೀತನ್ ಪಟೇಲ್ ಮತ್ತು ಟ್ರೆಂಟ್ ಬೌಲ್ಟ್ ಕೊನೆಯ ಜೋಡಿಯಾಗಿ ಕ್ರೀಸ್‌ನಲ್ಲಿದೆ.

ಮೊದಲ ಇನಿಂಗ್ಸ್‌ನಲ್ಲಿ ಭಾರತ ಕೊಂಚ ಮೇಲುಗೈ ಸಾಧಿಸಿದ್ದರೂ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಾಗಿತ್ತು. ಆದರೀಗ ಕನಿಷ್ಠ 250ರ ಗಡಿಯ ಆಸು-ಪಾಸಿನಲ್ಲಿ ಗುರಿ ಹೊಂದಲಿದ್ದು, ಕೊನೆಯ ಎರಡು ದಿನ ಪಿಚ್ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆಯಿರುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಈ ಲಕ್ಷ್ಯವನ್ನೂ ಬೆಂಬತ್ತುವುದು ಕಷ್ಟವಾಗಬಹುದು. ಉಪಾಂತ್ಯ ದಿನದ ಬೆಳಗಿನ ಒಂದು ಗಂಟೆಯ ಆಟ ಬಹುಮುಖ್ಯವಾಗಿದೆ. ಒಂದು ವೇಳೆ ವಾತಾವರಣ ತೇವದಿಂದ ಕೂಡಿದ್ದರೆ, ಕಿವೀಸ್ ಬೌಲರ್‌ಗಳು ಮೇಲುಗೈ ಸಾಧಿಸಬಲ್ಲರು. ಉತ್ತಮ ಬಿಸಿಲು ಬಿದ್ದಿದ್ದರೆ ಭಾರತದ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಗುರಿಯೆಡೆಗೆ ಸಾಗಲು ಅನುಕೂಲವಾಗುತ್ತದೆ. ಸೋಮವಾರದ ವಾತಾವರಣದ ಮೇಲೆಯೇ ಯಾರಿಗೆ ವಿಜಯಲಕ್ಷ್ಮಿ ಒಲಿಯಬಹುದೆಂಬುದು ನಿರ್ಧಾರವಾಗಲಿದ್ದು, ನಿಚ್ಚಳ ಫಲಿತಾಂಶ ಹೊರಹೊಮ್ಮುವುದು ಸದ್ಯ ಖಚಿತವಾಗಿದೆ.

2010ರ ಅಕ್ಟೋಬರ್‌ನಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ 207 ರನ್‌ಗಳ ಗುರಿ ಬೆಂಬತ್ತಿದ್ದ ಭಾರತ ತಂಡ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತ್ತು. ಆಗ ಚೇತೇಶ್ವರ್ ಪೂಜಾರ ಮತ್ತು ಸಚಿನ್ ತೆಂಡೂಲ್ಕರ್ ಅರ್ಧಶತಕ ಬಾರಿಸಿ ತವರಿಗೆ ಜಯ ತಂದುಕೊಟ್ಟಿದ್ದರು. ಈಗ ನ್ಯೂಜಿಲೆಂಡ್ ಎದುರಿನ ಗುರಿ ಸ್ವಲ್ಪ ಕಷ್ಟವಾಗಿದ್ದರೂ, ಸಾಧಿಸಿ ತೋರಿಸಬಹುದಾಗಿದೆ.

ಭಾನುವಾರ ಬೆಳಗ್ಗೆ ಸುಮಾರು ಒಂದೂವರೆ ಗಂಟೆ ಆಟದಲ್ಲಿಯೇ ಭಾರತವನ್ನು ಆಲೌಟ್ ಮಾಡಿ ತಮ್ಮ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಆಟಗಾರರಿಗೆ ಭದ್ರ ಅಡಿಪಾಯವಾಗಲಿ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಚೇತರಿಕೆಯಾಗಲಿ ಸಿಗಲಿಲ್ಲ. ಆರಂಭಿಕರಾದ ಗುಪ್ಟಿಲ್ ಮತ್ತು ಮೆಕಲಂ 31 ರನ್‌ಗಳ ಅಂತರದಲ್ಲಿಯೇ ಪೆವಿಲಿಯನ್ ಸೇರಿದರು. ಮಧ್ಯಮ ಹಂತದಲ್ಲಿ ರಾಸ್ ಟೇಲರ್ (35ರನ್, 66 ಎಸೆತ, 4 ಬೌಂಡರಿ), ಡೇನಿಯಲ್ ಫ್ಲಿನ್ (31ರನ್, 65 ಎಸೆತ, 6 ಬೌಂಡರಿ), ಜೇಮ್ಸ್ ಫ್ರಾಂಕ್ಲಿನ್ (41ರನ್, 90 ಎಸೆತ, 3 ಬೌಂಡರಿ) ಮತ್ತು ವಿಕೆಟ್ ಕೀಪರ್ ಕ್ರುಗರ್ ವ್ಯಾನ್ ವಿಕ್ (31ರನ್, 48 ಎಸೆತ, 3 ಬೌಂಡರಿ) ತಂಡವನ್ನು ಮೇಲೆತ್ತಲು ಪ್ರಯತ್ನ ಮಾಡಿದರೂ ವೈಯಕ್ತಿಕವಾಗಿ ಬೃಹತ್ ಮೊತ್ತ ಪೇರಿಸಲು ಮಾತ್ರ ವಿಫಲರಾದರು.

ಈ ಮಧ್ಯೆ ಮತ್ತೊಮ್ಮೆ ಭಾರತದ ದಾಳಿ ಮಿಂಚಿತು. ಅದರಲ್ಲೂ ಸ್ಪಿನ್ನರುಗಳ ಕೈಚಳಕ ಪರಿಣಾಮಕಾರಿಯಾಗಿತ್ತು. ಆರ್. ಅಶ್ವಿನ್ 8ನೇ ಟೆಸ್ಟ್‌ನಲ್ಲಿ ಐದನೇ ಬಾರಿಗೆ 5 ವಿಕೆಟ್ ಉರುಳಿಸಿದ ಸಾಧನೆ ಮಾಡಿದರೆ, ಓಜಾ 2 ವಿಕೆಟ್ ಪಡೆದರು. ಉಳಿದ ಎರಡು ವಿಕೆಟ್‌ಗಳನ್ನು ಯಾದವ್ ಕಬಳಿಸಿದರು. ಭೋಜನ ವಿರಾಮಕ್ಕೆ ನ್ಯೂಜಿಲೆಂಡ್ 5 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 29 ರನ್‌ಗಳಿಸಿ ಶುಭಾರಂಭ ಮಾಡಿತ್ತು. ಆದರೆ ಎರಡನೇ ಅವಧಿಯ ಆಟದ ಮೊದಲ ಹಾಗೂ ಮೂರನೇ ಓವರುಗಳಲ್ಲಿ ಗುಪ್ಟಿಲ್ ಮತ್ತು ಬ್ರೆಂಡನ್ ಕ್ರಮವಾಗಿ ವಿಕೆಟ್ ಕೈಚೆಲ್ಲಿದರು. ತಮ್ಮ ಎರಡು ಓವರುಗಳಲ್ಲೇ ಈ ಎರಡೂ ವಿಕೆಟ್‌ಗಳನ್ನು ಉರುಳಿಸಿದ ಯಾದವ್, ಭಾರತ ಹಿಡಿತ ಸಾಧಿಸುವಂತೆ ಮಾಡಿದರು. ನಂತರದಲ್ಲಿ ಅಶ್ವಿನ್ ಮತ್ತು ಓಜಾ ಕೈಚಳಕ ಕಿವೀಸ್ ದಾಂಡಿಗರನ್ನು ಹಿಡಿದಿಟ್ಟಿತು.

ಕೊಹ್ಲಿ ಶತಕದ ಮಧ್ಯೆಯೂ ತವರಿಗೆ ಸಿಗದ ಮುನ್ನಡೆ
ನ್ಯೂಜಿಲೆಂಡ್‌ನ ಮೊದಲ ಸರದಿಯ 365 ರನ್‌ಗಳಿಗೆ ಉತ್ತರವಾಗಿ ಭಾರತ ತಂಡಕ್ಕೆ 353 ರನ್‌ಗಳಿಸಲಷ್ಟೇ ಸಾಧ್ಯವಾಗುವುದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಸ್ವಲ್ಪ ಹಿನ್ನಡೆ ಉಂಟಾಯಿತು. ಐದನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ವಿರಾಟ್ ಕೊಹ್ಲಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಶತಕ ಬಾರಿಸಿದರೂ ಸಹ ಕೆಳಕ್ರಮಾಂಕದ ದಾಂಡಿಗರು ಬೇಗನೆ ವಿಕೆಟ್ ಕೈಚೆಲ್ಲಿದ್ದು, ಆತಿಥೇಯರ ಮುನ್ನಡೆಗೆ ಮುಳುವಾಯಿತು.

ಎರಡನೇ ದಿನದ ಮೊತ್ತ 5 ವಿಕೆಟ್‌ಗೆ 283 ರನ್‌ಗಳೊಂದಿಗೆ ಆಟ ಮುಂದುವರಿಸಿದ ವಿರಾಟ್ ಕೊಹ್ಲಿ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಿನ್ನೆ ನ್ಯೂಜಿಲೆಂಡ್ ಬೌಲರ್‌ಗಳನ್ನು ಬಹುತೇಕ ಕಾಡಿದ್ದ ಕೊಹ್ಲಿ ಮತ್ತು ಧೋನಿಗೆ ಬೆಳಗಿನ ಅವಧಿಯ ಆಟದಲ್ಲಿ ಹೊಸ ಚೆಂಡನ್ನು ಅಷ್ಟೇ ಸಲೀಸಾಗಿ ಎದುರಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಬೌಲರ್‌ಗಳು 81ನೇ ಓವರಿನಲ್ಲಿ ಹೊಸ ಚೆಂಡು ತೆಗೆದುಕೊಂಡು ದಾಳಿಗೆ ನಿಂತಾಗ ಭಾರತೀಯರಿಗೆ ಮೈಚಳಿ ಬಿಟ್ಟು ಆಡಲಾಗಲಿಲ್ಲ. ಬೌಲ್ಟ್‌ರ ಮೊದಲ ಎಸೆತವನ್ನು ಧೋನಿ ಬೌಂಡರಿಗಟ್ಟಿ ಅರ್ಧಶತಕ ಬಾರಿಸಿದರು. ಇದೇ ಓವರಿನ ಕೊನೆಯ ಎಸೆತದಲ್ಲಿ ಕೊಹ್ಲಿ ಬೌಂಡರಿ ಸಿಡಿಸಿ ಎರಡನೇ ಟೆಸ್ಟ್ ಶತಕ ಬಾರಿಸಿ ಸಂಭ್ರಮಿಸಿದರು.

ಆದರೆ ಮುಂದೆ ಮೂರು ಓವರುಗಳು ಕಳೆಯುವಷ್ಟರಲ್ಲಿ ಇಬ್ಬರೂ ಪೆವಿಲಿಯನ್ ಸೇರುವಂತಾಯಿತು. ನಿನ್ನೆಯ ಮೊತ್ತಕ್ಕೆ ಇಂದು ಕೇವಲ ಹತ್ತು ರನ್ ಸೇರಿಸಿದ್ದ ಕೊಹ್ಲಿ (103 ರನ್, 193 ಎಸೆತ, 14 ಬೌಂಡರಿ, 1 ಸಿಕ್ಸರ್), ಎದುರಾಳಿ ತಂಡದ ಮಧ್ಯಮ ವೇಗಿ ಟಿಮ್ ಸೌಥಿ ದಾಳಿಯಲ್ಲಿ ಎಲ್‌ಬಿಯಾಗಿ ಹೊರನಡೆದರು. ಇದರೊಂದಿಗೆ ಕೊಹ್ಲಿ ಮತ್ತು ಧೋನಿ ನಡುವೆ 122 ರನ್‌ಗಳ ಆರನೇ ವಿಕೆಟ್ ಜತೆಯಾಟಕ್ಕೆ ತೆರೆಬಿದ್ದಿತು.

ಇನ್ನು ತಂಡದ ಖಾತೆಗೆ ಕೇವಲ 11 ರನ್ ಸೇರುವಷ್ಟರಲ್ಲಿ ಧೋನಿ (62ರನ್, 94 ಎಸೆತ, 8 ಬೌಂಡರಿ, 2 ಸಿಕ್ಸರ್) ವಿಕೆಟ್ ಕೂಡ ಉರುಳಿತು. ಧೋನಿ ಇಂದು ಮತ್ತೆ ತಮ್ಮ ಖಾತೆಗೆ 16 ರನ್‌ಗಳನ್ನಷ್ಟೇ ಸೇರಿದರು. ಉಳಿದಂತೆ ಬಾಲಂಗೋಚಿಗಳ ಪೈಕಿ ಅಶ್ವಿನ್ (ಅಜೇಯ 32, 40 ಎಸೆತ, 5 ಬೌಂಡರಿ) ಬಿಟ್ಟರೆ, ಇತರೆ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್‌ಗೆ ಮರಳಿದರು. ಇಂದು ಭಾರತ 70 ರನ್ ಸೇರಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಅದರಲ್ಲೂ 19 ರನ್‌ಗಳ ಅಂತರದಲ್ಲೇ ಕೊಹ್ಲಿ, ಧೋನಿ, ಜಹೀರ್ ಮತ್ತು ಓಜಾ ಈ ನಾಲ್ವರೂ ಆಟಗಾರರು ಔಟಾದರು. ಯಾದವ್‌ರನ್ನು ಜತೆಗೂಡಿಸಿಕೊಂಡು ಅಶ್ವಿನ್ ಕೆಲ ಉತ್ತಮ ಹೊಡೆತಗಳನ್ನು ಬಾರಿಸಿ ಹತ್ತನೇ ವಿಕೆಟ್ ಜತೆಯಾಟದಲ್ಲಿ 33 ರನ್ ಸೇರಿಸಿಕೊಡುವ ಮೂಲಕ ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್‌ನ ಗಡಿಯ ಸಮೀಪ ಬಂದು ನಿಲ್ಲಲು ಕಾರಣರಾದರು.

ನ್ಯೂಜಿಲೆಂಡ್ ಬೌಲರ್‌ಗಳ ಪೈಕಿ ಸೌಥಿ ತೀರ ಅಪಾಯಕಾರಿಯಾದರು. ಇಂದು ಬಿದ್ದ ವಿಕೆಟ್‌ಗಳಲ್ಲಿ ಅವರೇ ನಾಲ್ಕು ಬಲಿ ಪಡೆದರು. ಮತ್ತೊಂದು ವಿಕೆಟ್ ಬೌಲ್ಟ್‌ಗೆ ಲಭಿಸಿತು. ಪ್ರವಾಸಿಗರ ದಾಳಿ ಮೂರನೇ ದಿನವೂ ಶಿಸ್ತುಬದ್ಧವಾಗಿತ್ತು.

ಸ್ಕೋರ್ ವಿವರ
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 365
ಭಾರತ ಮೊದಲ ಇನಿಂಗ್ಸ್ 96.5 ಓವರುಗಳಲ್ಲಿ 353
(ನಿನ್ನೆ 5ಕ್ಕೆ283ರಿಂದ ಮುಂದುವರಿದಿದೆ)

ವಿರಾಟ್ ಕೊಹ್ಲಿ ಎಲ್‌ಬಿ ಬಿ ಸೌಥಿ 103
ಮಹೇಂದ್ರ ಸಿಂಗ ಧೋನಿ ಎಲ್‌ಬಿ ಬಿ ಸೌಥಿ 62
ರವಿಚಂದ್ರನ್ ಅಶ್ವಿನ್ ಅಜೇಯ 32
ಜಹೀರ್ ಖಾನ್ ಸಿ ವ್ಯಾನ್ ವಿಕ್ ಬಿ ಸೌಥಿ 07
ಪ್ರಗ್ಯಾನ್ ಓಜಾ ಸಿ ವ್ಯಾನ್ ವಿಕ್ ಬಿ ಸೌಥಿ 00
ಉಮೇಶ್ ಯಾದವ್ ಬಿ ಬೌಲ್ಟ್ 04
ಇತರೆ: (ಬೈ-11, ಲೆಗ್‌ಬೈ-2, ವೈಡ್-1, ನೋಬಾಲ್-5) 19.
ವಿಕೆಟ್ ಪತನ: 1-5, 2-27, 3-67, 4-80, 5-179, 6-301, 7-312, 8-320, 9-320.

ಬೌಲಿಂಗ್ ವಿವರ:
ಟ್ರೆಂಟ್ ಬೌಲ್ಟ್ 23.5-2-90-1
ಟಿಮ್ ಸೌಥಿ 24-6-64-7
ಡಗ್ ಬ್ರೇಸ್‌ವೆಲ್ 20-4-91-2
ಜೇಮ್ಸ್ ಫ್ರಾಂಕ್ಲಿನ್ 10-4-17-0
ಜೀತನ್ ಪಟೇಲ್ 19-5-78-0.

ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 69 ಓವರುಗಳಲ್ಲಿ 9 ವಿಕೆಟ್‌ಗೆ 232
ಬ್ರೆಂಡನ್ ಮೆಕಲಂ ಸಿ ಧೋನಿ ಬಿ ಯಾದವ್ 23
ಮಾರ್ಟಿನ್ ಗುಪ್ಟಿಲ್ ಬಿ ಉಮೇಶ್ ಯಾದವ್ 07
ಕೇನ್ ವಿಲಿಯಮ್ಸನ್ ಸಿ ಸೆಹವಾಗ್ ಬಿ ಅಶ್ವಿನ್ 13
ರಾಸ್ ಟೇಲರ್ ಎಲ್‌ಬಿ ಬಿ ಪ್ರಗ್ಯಾನ್ ಓಜಾ 35
ಡೇನಿಯಲ್ ಫ್ಲಿನ್ ಸಿ ಸೆಹವಾಗ್ ಬಿ ಅಶ್ವಿನ್ 31
ಜೇಮ್ಸ್ ಫ್ರಾಂಕ್ಲಿನ್ ಸ್ಟಂಪ್ ಧೋನಿ ಬಿ ಅಶ್ವಿನ್ 41
ಕ್ರುಗರ್ ವ್ಯಾನ್ ವಿಕ್ ಎಲ್‌ಬಿ ಬಿ ಅಶ್ವಿನ್ 31
ಡಗ್ ಬ್ರೇಸ್‌ವೆಲ್ ಎಲ್‌ಬಿ ಬಿ ಪ್ರಗ್ಯಾನ್ ಓಜಾ 22
ಟಿಮ್ ಸೌಥಿ ಬಿ ರವಿಚಂದ್ರನ್ ಅಶ್ವಿನ್ 02
ಜೀತನ್ ಪಟೇಲ್ ಬ್ಯಾಟಿಂಗ್ 10
ಟ್ರೆಂಟ್ ಬೌಲ್ಟ್ ಬ್ಯಾಟಿಂಗ್ 00
ಇತರೆ: (ಬೈ-4, ಲೆಗ್‌ಬೈ-12, ವೈಡ್-1) 17.
ವಿಕೆಟ್ ಪತನ: 1-30, 2-31, 3-69, 4-111, 5-140, 6-195, 7-216, 8-222, 9-222.

ಬೌಲಿಂಗ್ ವಿವರ:
ಜಹೀರ್ ಖಾನ್ 12-2-37-0
ಉಮೇಶ್ ಯಾದವ್ 14-0-62-2
ಪ್ರಗ್ಯಾನ್ ಓಜಾ 20-6-48-2
ರವಿಚಂದ್ರನ್ ಅಶ್ವಿನ್ 22-1-69-5

ಲಕ್ಷ್ಮಣ್, ಜೋಶಿಗೆ ಸನ್ಮಾನ
ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವ ಕಲಾತ್ಮಕ ಶೈಲಿಯ ಹೊಡೆತಗಾರ ವೆಂಗಿಪರಪ್ಪು ವೆಂಕಟಸಾಯಿ ಲಕ್ಷ್ಮಣ್ ಹಾಗೂ ನಮ್ಮವರೇ ಆದ ಕನ್ನಡಿಗ ಸುನೀಲ್ ಜೋಶಿ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಚಹಾ ವಿರಾಮದ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಸುನೀಲ್ ಜೋಶಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೆ ಕೆಲವೇ ದಿನಗಳು ಉಳಿದಿರುವಂತೆ ಹೈದರಾಬಾದ್‌ನ ಲಕ್ಷ್ಮಣ್ ನಿವೃತ್ತಿ ಘೋಷಿಸಿದ್ದರು. ಲಕ್ಷ್ಮಣ್ ಅವರಿಗೆ ಕೆಎಸ್‌ಸಿಎ ಖಜಾಂಚಿ ತಲ್ಲಂ ವೆಂಕಟೇಶ್ ಮತ್ತು ಕ್ರಿಕೆಟ್ ದಂತಕತೆ, ಗುಂಡಪ್ಪ ಆರ್. ವಿಶ್ವನಾಥ್ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅದೇ ರೀತಿ ಸುನೀಲ್ ಜೋಶಿಗೆ ಕೆಎಸ್‌ಸಿಎ ಉಪಾಧ್ಯಕ್ಷ ಸದಾನಂದ ಮಯ್ಯ ಕಾಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಅವರು, ಕರ್ನಾಟಕದ ಜನತೆಯ ಹಾಗೂ ಸಂಸ್ಥೆಯ ವತಿಯಿಂದ ಲಕ್ಷ್ಮಣ್ ಮತ್ತು ಜೋಶಿ ಅವರನ್ನು ಸನ್ಮಾನಿಸಲಾಗುತ್ತಿದ್ದು, ಇದು ನಮಗೆ ಹೆಮ್ಮೆಯ ವಿಷಯ ಎಂದರು.

ಗುರಿಯೆಡೆಗೆ ಸಾಗಲು ಸಮಯವಿದೆ, ಕಷ್ಟವಾಗದು: ಕೊಹ್ಲಿ
ಇನ್ನೂ ಎರಡು ದಿನಗಳ ಆಟ ಉಳಿದಿದೆ. ಹಾಗಾಗಿ, ನ್ಯೂಜಿಲೆಂಡ್ ಸುಮಾರು 250ರ ಆಸು-ಪಾಸಿನಲ್ಲಿ ಗುರಿ ನೀಡಿದರೂ ಅದನ್ನು ಯಶಸ್ವಿಯಾಗಿ ಸೇರಬಲ್ಲೆವು ಎಂದು ಭಾರತ ತಂಡದ ಉಪನಾಯಕ ವಿರಾಟ್ ಕೊಹ್ಲಿ ವಿಶ್ವಾಸದಿಂದ ಪ್ರತಿಕ್ರಿಯಿಸಿದರು.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೂರನೇ ದಿನದಾಟದ ಕೊನೆಗೆ ಸುದ್ದಿಗಾರರ ಜತೆ ಮಾತನಾಡಿದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್‌ನ ಕೊನೆಯ ವಿಕೆಟ್ ಅನ್ನು ಬೇಗನೆ ಪಡೆಯಬೇಕಾಗಿದೆ. ನಂತರ ನಮ್ಮ ಬಳಿ ಸಾಕಷ್ಟು ಸಮಯ ಇರುವುದರಿಂದ ಗುರಿಯತ್ತ ನಡೆಯಲು ಸಾಧ್ಯವಾಗುತ್ತದೆ ಎಂದರು.

ಎರಡು ದಿನಗಳ ಆಟ ಉಳಿದಿರುವುದರಿಂದ ಗುರಿ ಬಗ್ಗೆ ಯೋಚಿಸುವ ಅಗತ್ಯ ಇರುವುದಿಲ್ಲ. ನೈಜ ಆಟವನ್ನೇ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ಸದ್ಯ ಆತಂಕಪಡುವ ಪರಿಸ್ಥಿತಿ ನಮಗಿಲ್ಲ ಎಂದು ಕೊಹ್ಲಿ ಹೇಳಿದರು.

ನನಗೆ ಒತ್ತಡದಲ್ಲಿ ಆಡಲು ಖುಷಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿದ್ದಾಗಲೇ ನಾನು ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದೆ. ಟೆಸ್ಟ್ ಶತಕ ಎಂದರೆ ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಇಲ್ಲಿ ನಮ್ಮೊಳಗಿನ ನಿಜವಾದ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಹಾಗಾಗಿ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.

ಈ ಶತಕ ನನ್ನಲ್ಲಿ ಹೊಸ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ ಎಂದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲೂ ಸಹ ನಮಗೆ ಗೆಲ್ಲುವ ಅವಕಾಶವಿದೆ. ಅದಕ್ಕಾಗಿ ಎಚ್ಚರಿಕೆಯಿಂದ ದಡದತ್ತ ಸಾಗಲು ಸಾಕಷ್ಟು ಸಮಯವೂ ನಮ್ಮ ಬಳಿ ಇರುವುದರಿಂದ ಯಶಸ್ಸು ದಕ್ಕಿಸಿಕೊಳ್ಳಲಿದ್ದೇವೆ ಎಂದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-03

Tell a Friend

ಪ್ರತಿಸ್ಪಂದನ
SHAMEEM, MANGALORE
2012-09-04
Dhoni guys Congragulation
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸಚಿನ್ ಇನ್ನಿಂಗ್ಸ್ ಮುಗಿದಿಲ್ಲ: ಮಂಜ್ರೇಕರ್ ಬೆಂಬಲ
»ನಟ ಪವನ್ ಕಲ್ಯಾಣ 2ನೇ ವಿಚ್ಛೇ'ದನ' 40 ಕೋಟಿಗೆ...
»ನೆಹರೂ ಕಪ್ ಗೆದ್ದರೂ ಫಿಫಾ ರ‌್ಯಾಂಕಿಂಗ್‌ನಲ್ಲಿ ಭಾರತ ಡೌನ್
»ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ
» ಚಿಕ್ಕರಂಗಪ್ಪ, ಖಾಲಿನ್ ಜೋಶಿಗೆ ಸನ್ಮಾನ...
»ನಂಬರ್ ವನ್ ಸ್ಥಾನಕ್ಕೆ ನನ್ನ ಪೈಪೋಟಿಯಿಲ್ಲ: ರಾಗಿಣಿ
»ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ 'ಕಿಕ್' ಸಾಜಿದ್
»Iranian athlete refuses to 'shake hands' with Duchess of Cambridge during medal ceremony over 'cultural reasons'
»ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಗಿರೀಶ್‌ಗೆ 5 ಲಕ್ಷ ಬಹುಮಾನ
»ಚೈತ್ರಾ ಇಳಿದ ಗಣೇಶ್ 'ಆಟೋ'ಗೆ ದೀಪಿಕಾ ಕಾಮಯ್ಯ
» `ಸತ್ಯಾಗ್ರಹ'ದಲ್ಲಿ ಕರೀನಾ?...
»ಅಜರುದ್ದೀನ್ ಮೀರಿಸಿದ ಧೋನಿಯೇ ಟೆಸ್ಟ್‌ನಲ್ಲೂ ಶ್ರೇಷ್ಠ ನಾಯಕ
» ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ತಂದಿತ್ತ ಕರ್ನಾಟಕದ ಸ್ಪರ್ಧಿ
»ಗಂಡನಿಗೆ ವಿಚ್ಛೇದನ...ಬಾಡಿಗಾರ್ಡ್ ಜೊತೆ ರೋಮ್ಯಾನ್ಸ್
»ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
»‘ನನ್ನ ನಿರ್ದೇಶನದ ಸಲ್ಲು ಫಿಲ್ಮ್ ಫ್ಲಾಪ್ ಆಗುತ್ತೆ ’
» ಮಹೀ ಪಡೆಗೆ ಸರಣಿ ವಿಜಯ ಕೊಹ್ಲಿ -ಧೋನಿ ಸಾಹಸ : ಅಂತಿಮ ಟೆಸ್ಟ್‌ನಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಗೆಲುವು ( Updated)
»ಕ್ರಿಕೆಟ್: ಕೊಹ್ಲಿ ಶತಕ- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸರಣಿ
»ಲಂಕಾ ಫುಟ್‌ಬಾಲ್ ತಂಡವನ್ನು ವಾಪಾಸ್ ಕಳುಹಿಸಿ: ಜಯಾ ಆದೇಶ
»ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ
»ಸುದೀಪ್ @39 ಸ್ಪೆಷಲ್: ಅನಾಥರಿಗೆ ದಿಕ್ಕು, ಅಬಲರಿಗೆ ಆಸರೆ
»ಟೈಗರ್ ಸಲ್ಲೂ 'ಶೇರ್ ಖಾನ್' ನ್ಯೂ ಲುಕ್ ನೋಡಿ
»ಬಿದಿತಾ! ಬಂಗಾಳಿ ಚೆಲುವೆಯ ಸ್ಟಾರ್‌ವಾರ್
»ನೆಹರೂ ಕಪ್‌ ಫುಟ್ಬಾಲ್‌: ಹ್ಯಾಟ್ರಿಕ್ ಚಾಂಪಿಯನ್ ಆದ ಭಾರತ: *ಶೂಟೌಟ್‌ನಲ್ಲಿ ಕ್ಯಾಮರೂನ್ ಔಟ್
»ರ‌್ಯಾಂಪ್ ಮೇಲೆ ಮೇರಿ ಕಾಮ್ ಕ್ಯಾಟ್ ವಾಕ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri