ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಅಳುವಿನ ಕಾರಣ...

ಪುಟ್ಟನಿಗೆ ಈಗ ಮೂರು ವರ್ಷ. ಅವನು ತಂದೆ ತಾಯಿಯರಿಗೆ ಒಬ್ಬನೇ ಮಗ. ಮದುವೆಯಾಗಿ ಹತ್ತು ವರ್ಷಗಳ ನಂತರ ಹುಟ್ಟಿದ ಸುಪುತ್ರನಾದ್ದರಿಂದ ಅವನನ್ನು ಸಾಕಷ್ಟು ಮುದ್ದು ಮಾಡಿ ಬೆಳೆಸುತ್ತಿದ್ದರು.

ಮುದ್ದು ಸ್ವಲ್ಪ ಹೆಚ್ಚೇ ಆದಂತೆ ತೋರುತ್ತಿತ್ತು. ಮನೆಯಲ್ಲಿ ಪುಟ್ಟನ ದೊಡ್ಡಪ್ಪ ಕೂಡ ಇದ್ದರು. ಅವರಿಗೆ ಈಗಾಗಲೇ ಸುಮಾರು ನಲವತ್ತೈದು ವರ್ಷ. ಅದೇಕೋ ಮದುವೆಯಾಗದೇ ಹಾಗೆಯೇ ಉಳಿದುಬಿಟ್ಟಿದ್ದರು.

ಆತ ಸ್ವಭಾವತ: ನಿರ್ಲಪ್ತ ವ್ಯಕ್ತಿ. ಯಾವುದರಲ್ಲಿಯೂ ಆಸಕ್ತಿ ತೋರದ ಮನುಷ್ಯ.
ಒಂದು ದಿನ ಪುಟ್ಟನ ತಂದೆ-ತಾಯಿಯರು ಯಾರದೋ ಮದುವೆಗೆ ಪಕ್ಕದ ನಗರಕ್ಕೆ ಹೋಗಿದ್ದರು. ಈ ಹುಡುಗನನ್ನು ಕರೆದುಕೊಂಡು ಹೋಗಲಿಲ್ಲ.

ಅಲ್ಲಿಯ ಗದ್ದಲ, ಆಶುಚಿತ್ವ, ಅಶುದ್ಧ ಕುಡಿಯುವ ನೀರು ಇವೆಲ್ಲ ಎಲ್ಲಿ ಮಗುವಿಗೆ ತೊಂದರೆ ಮಾಡಿಯಾವೋ ಎಂಬ ಹೆದರಿಕೆಯಿಂದ ಅವನನ್ನು ದೊಡ್ಡಪ್ಪನೊಡನೆ ಬಿಟ್ಟು ಹೋದರು. ದೊಡ್ಡಪ್ಪ ಪುಟ್ಟನಿಗೆ ಊಟ ಮಾಡಿಸಿ, ಮಧ್ಯಾನ್ಹ ನಿದ್ರೆ ಮಾಡಿಸಿ ನೋಡಿಕೊಂಡರು.

ಸಂಜೆ ಪುಟ್ಟ ಮನೆಯ ಮುಂದೆ ಆಟಮಾಡುತ್ತಿದ್ದ. ದೊಡ್ಡಪ್ಪ ಪುಸ್ತಕ ಓದುತ್ತ ಅಲ್ಲಿಯೇ ಕುಳಿತಿದ್ದರು. ಏನೋ ಹೇಳಬೇಕೆಂದು ಪುಟ್ಟ ಓಡೋಡಿ ಬರುತ್ತಿದ್ದವನು ಕಾಲು ತೊಡಕಿಕೊಂಡು ಧೊಪ್ಪನೇ ಬಿದ್ದ. ಮೇಲೆ ಎದ್ದು ಅಳು ಮುಖ ಮಾಡಿ ದೊಡ್ಡಪ್ಪನನ್ನು ನೋಡಿದ.

ದೊಡ್ಡಪ್ಪ ಅವನನ್ನು ಅತ್ಯಂತ ನಿರ್ಲಪ್ತತೆಯಿಂದ ನೋಡಿದರು. ಅವರ ಮುಖದಲ್ಲಿ ಗಾಬರಿ, ಆತಂಕ ಯಾವುದೂ ಕಾಣಲಿಲ್ಲ. ಅಯ್ಯೋ ಬಿದ್ದೆಯಾ ಪುಟ್ಟಾ ಎಂದೂ ಕೇಳಲಿಲ್ಲ. ಹುಬ್ಬು ಕೂಡ ಏರಲಿಲ್ಲ. ಪುಟ್ಟನ ಅಳುಮುಖ ಬದಲಾಯಿತು. ತಾನೇ ತನ್ನ ಶರ್ಟು ಕೊಡವಿಕೊಂಡು ಆಟ ಮುಂದುವರೆಸಿದ.

ಇದಾಗಿ ಒಂದು ತಾಸಿನ ಮೇಲೆ ಪುಟ್ಟನ ತಂದೆ-ತಾಯಿಯರು ಮನೆಗೆ ಬಂದರು. ಪುಟ್ಟನ ಶರ್ಟು ಕೊಳೆಯಾದದ್ದನ್ನು ಕಂಡು ತಾಯಿ ಯಾಕೋ ಪುಟ್ಟ ಏನಾಯ್ತು ಎಂದು ಕೇಳಿದರು. ಅವರು ಕೇಳುವುದೇ ತಡ ಪುಟ್ಟ ಹೋ ಎಂದು ದೊಡ್ಡ ಧ್ವನಿಯಲ್ಲಿ ಅಳತೊಡಗಿದ. ಅಮ್ಮನಿಗೆ ಇನ್ನೂ ಗಾಬರಿ. ಇವನ ಅವಸ್ಥೆ ಕಂಡು ಅವರ ಕಣ್ಣಲ್ಲಿ ನೀರು!

ಈತ ಬಿಕ್ಕಿ ಬಿಕ್ಕಿ ಅಳುತ್ತಾ ತಾನು ಹೇಗೆ ಬಿದ್ದೆ. ಎಷ್ಟು ನೋವಾಯಿತು ಎಂದು ವರ್ಣಿಸಿ ಹೇಳಿದ. ತಾಯಿ ಅವನಿಗೆ ಮುಲಾಮು ಹಚ್ಚಿದ್ದೇ ಹಚ್ಚಿದ್ದು. ಅಪ್ಪ ಪಟ್ಟಣದಿಂದ ತಂದ ಸಿಹಿತಿಂಡಿಯನ್ನು ತೊಡೆಯ ಮೇಲೆ ಕೂಡ್ರಿಸಿಕೊಂಡು ತಿನ್ನಿಸಿದ್ದೇ ತಿನ್ನಿಸಿದ್ದು. ದೊಡ್ಡಪ್ಪ ಈ ತಮಾಷೆ ನೋಡುತ್ತಲೇ ಇದ್ದರು.

ಮರುದಿನ ಬೆಳಿಗ್ಗೆ ದೊಡ್ಡಪ್ಪ ಪುಟ್ಟನನ್ನು ಕರೆದು, ಲೋ ಪುಟ್ಟಾ, ನೀನು ನಿನ್ನೆ ಸಂಜೆ ಬಿದ್ದಾಗ ಅಳಲಿಲ್ಲ, ಆದರೆ ಅಪ್ಪ ಅಮ್ಮ ಬಂದಾಗ ಏಕೆ ಅತ್ತೆ? ಬಿದ್ದಾಗ ಆಗದ ನೋವು ಒಂದು ತಾಸಿನ ಮೇಲೆ ಆಯಿತೇ? ಎಂದು ಕೇಳಿದರು.

ಆಗ ಪುಟ್ಟ ನಕ್ಕು ಹೇಳಿದ, ಆಗ ಅತ್ತರೆ ಏನು ಪ್ರಯೋಜನ? ನೀವೇನೂ ಎದ್ದು ಬಂದು ನನ್ನನ್ನು ಮಾತನಾಡಿಸುವಂತೆ ಕಾಣಲಿಲ್ಲ. ಸುಮ್ಮನೇ ಅತ್ತು ಪ್ರಯೋಜನವೇನು? ಅಪ್ಪ ಅಮ್ಮನ ಮುಂದೆ ಅತ್ತರೆ ಏನಾದರೂ ಸಿಗುತ್ತದೆ. ದೊಡ್ಡಪ್ಪ ಪುಟ್ಟನ ವ್ಯವಹಾರಿಕ ಜ್ಞಾನಕ್ಕೆ ಬೆರಗಾದರು.

ಇದನ್ನು ನಾವೆಲ್ಲ ಮನೆಯಲ್ಲಿ ನೋಡಿದ್ದೇವೆ. ಆಗ ತಾನೆ ನಡೆಯತೊಡಗುವ ಮಗು ದಿನಕ್ಕೆ ಹತ್ತಾರು ಬಾರಿ ಬೀಳುತ್ತದೆ. ಯಾರೂ ಇಲ್ಲದಿದ್ದರೆ ಸುಮ್ಮನೆ ಎದ್ದು ನಡೆಯತೊಡಗುತ್ತದೆ.

ಯಾರಾದರೂ ಆತಂಕದಿಂದ ಧಾವಿಸಿದರೆ ಜೋರಾಗಿ ಅಳುತ್ತದೆ. ಜನರ ಗಮನವನ್ನು ಸೆಳೆದುಕೊಳ್ಳುವ, ಸಹಾನುಭೂತಿಯ ಪ್ರಯೋಜನ ಪಡೆಯುವ ಬುದ್ಧಿ ಆಗಿನಿಂದಲೇ ಪ್ರಾರಂಭವಾಗುತ್ತದೆ. ಅದಕ್ಕೆಂದೇ, ಅಳುವ ಮಗುವಿಗೆ ಮಾತ್ರ ಹಾಲು ಎಂಬ ಗಾದೆ ಬಂದಿದೆ.

ಆದರೆ ನಮ್ಮಲ್ಲಿ ಬಹಳಷ್ಟು ಜನ ಬಾಲ್ಯದಿಂದ ಮೇಲಕ್ಕೆ ಬೆಳೆಯುವುದೇ ಇಲ್ಲ. ಜೀವನದುದ್ದಕ್ಕೂ ತಮ್ಮ ಗೋಳನ್ನೇ ಹೇಳಿಕೊಂಡು ಅಳುಬುರುಕ ಮುಖ ಮಾಡಿಕೊಂಡು ಸಹಾನುಭೂತಿ ಪಡೆಯುವುದರಿಂದಲೇ ಸಂತೋಷ ಪಡುತ್ತಾರೆ.

ಅವರಿಗೆ ಒಂದು ವಿಷಯ ಅರ್ಥವಾಗಬೇಕು. ಅಳುಬುರುಕು ಮುಖವನ್ನು ಯಾರೂ ಇಷ್ಟಪಡುವುದಿಲ್ಲ. ಯಾರೂ ಏಕೆ, ಕನ್ನಡಿಯಲ್ಲಿ ನೋಡಿದರೆ ತಮಗೇ ಇಷ್ಟವಾಗುವುದಿಲ್ಲ. ಅತ್ತು ಜನರ ಗಮನ ಸೆಳೆಯುವುದಕ್ಕಿಂತ ಸಾಧನೆಯಿಂದ ಗುರುತಿಸಿಕೊಳ್ಳುವುದು ಸಾರ್ಥಕತೆಯ ಲಕ್ಷಣ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಗುರುರಾಜ ಕರ್ಜಗಿ-ಪ್ರಜಾವಾಣಿ
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-03

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಶಿಕ್ಷಕರ ದಿನಾಚರಣೆ ಮತ್ತು ಡಾ. ಎಸ್ ರಾಧಾಕೃಷ್ಣನ್
» ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !
»ಹಣೆಬರಹಕ್ಕೆ ಹೆದರಲಿಲ್ಲ, ಅದಕ್ಕೇ ಎತ್ತಿದಳು ಮಂಗಳಾರತಿ!
» ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ...
»ಅಳುವಿನ ಕಾರಣ...
»ಕುಟ್ಟ ಬ್ಯಾರಿಯ ಪಂಜ ಪೇಟೆ...
» ವರ್ಣ ವ್ಯವಸ್ಥೆ: ಸಂಪೂರ್ಣ ಅವ್ಯವಸ್ಥೆ...
» ನಮ್ಮತಾರೆಯರಿಗೆ ಮೇಲ್ಮನೆಯಲ್ಲಿ ಏನು ಕೆಲಸ?...
»ವಧುವಿನ ದಕ್ಷಿಣೆ - 'ವರದಕ್ಷಿಣೆ'....
» ಗರುಡನ ಮಾರ್ಗ...
» ಹೃದಯದಾಳದ ಮಾತು....
»ಹೆಗಡೆ 86, ನೆನಪು ನೂರಾರು: ಜಾತಿ-ಹಣ ಮುಖ ನೋಡದೆ, ರಾಜಕೀಯ ಮಾಡಿದ್ರು...
» ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ
» ಬೇರು ಒಣಗಿದ ಮರ ಗಟ್ಟಿಯಾಗಿ ನಿಂತೀತೇ?....
»ಜೆಪಿ ಹಾದಿಯಲ್ಲಿ ಅಣ್ಣಾ ನಡಿಗೆ ಸಾಧ್ಯವೇ? ...
»ಜಯಕಿರಣ ಪತ್ರಿಕೆಯಲ್ಲಿ ಬ೦ದತಹ ಯುವತಿಯೊಬ್ಬಳ ಮನದಾಳದ ಮಾತು...
»ಅಂತರಂಗದ ದನಿಗೆ ಕಿವುಡಾದವರ ನಡುವೆ...
»ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?...
»ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?...
» ಪಾತ್ರೆಯೊಳಗಿನ ಮೀನು....
»ಸಮಾನತೆ...
» ಹರ್ಷದ ದಾರಿ
»ವೈಧವ್ಯವೆಂಬ ವಿಷವರ್ತುಲದಿಂದ ಇವರಿಗೆ ಬಿಡುಗಡೆ ಎಂದು?
»ಅಂಗಡಿಯಲ್ಲಿ ದೊರಕಿದ ಪವಾಡ...
»ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri