ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಮೂಡಬಿದ್ರಿಯಲ್ಲಿ ನಡೆದ ಅಖಿಲ ಭಾರತ ತುಳು ಒಕ್ಕೂಟ (ರಿ.) ವಾರ್ಷಿಕ ಮಹಾಸಭೆ: ತುಳುಭಾಷೆಯ ಅಸ್ತಿತ್ವ ಎಲ್ಲರ ಹೊಣೆಗಾರಿಕೆ ಆಗಲಿ:ದಿವಾಕರ್ ಸಾಂಗ್ಲಿ

ಮೂಡಬಿದ್ರಿ, ಸೆ.೦2: ತುಳುಭಾಷೆಯ ಮಾನ್ಯತೆಗೆ ತುಳುವರು ಒಕ್ಕೊರಳ ಧ ನಿಗೂಡಿಸಿ ಭವ್ಯ ಭಾರತದ ೮ನೇ ಪರಿಚ್ಛೇದದಲ್ಲಿ ಸ್ಥಾನಮಾನ ಪಡೆಯುವಲ್ಲಿ ಶ್ರಮಿಸಬೇಕು. ಇದು ಕೇವಲ ತೌಳವರ ಕರ್ತವ್ಯವಾಗದೆ ಪರಶುರಾಮನ ಸೃಷ್ಠಿಯಲ್ಲಿ ಜನಿತ ಎಲ್ಲರ ಹೊಣೆಗಾರಿಕೆ ಆಗಬೇಕು. ಮಕ್ಕಳನ್ನು ತುಳು ಮಾತೃಭಾಷೆಯ ವ್ಯಾಮೋಹದತ್ತ ಆಕರ್ಷಿಸಿ ಭವಿಷ್ಯತ್ತಿನ ಪೀಳಿಗೆಯಲ್ಲಿ ತುಳುಭಾಷೆಯ ಅಸ್ತಿತ್ವ ರೂಪಿಸಲು ಇಂತಹ ವೇದಿಕೆಗಳ ಜೊತೆ ಎಲ್ಲಾ ತುಳುವ ಸಂಘಟನೆಗಳು ಸಹಭಾಗಿಗಳಾಗುವ ಅವಶ್ಯವಿದೆ. ಏಕತೆಯ ಮೂಲಕ ತುಳುಭಾಷೆಯ ಪೋಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಅಖಿಲ ಭಾರತ ತುಳು ಒಕ್ಕೂಟ (ರಿ.) ಇದರ ಅಧ್ಯಕ್ಷ ಲ| ದಿವಾಕರ್ ಎಸ್.ಶೆಟ್ಟಿ ಸಾಂಗ್ಲಿ ಕರೆಯಿತ್ತರು.


ಕಳೆದ ಶನಿವಾರ ಸಂಜೆ ಮೂಡಬಿದ್ರಿಯ ಸಮಾಜ ಮಂದಿರದ ಸಭಾಗೃಹದಲ್ಲಿ ನಡೆಸಲಾಗಿದ್ದ ಒಕ್ಕೂಟದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಲ| ದಿವಾಕರ್ ಮಾತನಾಡಿದರು.




ಶ್ರೀಮತಿ ಸರಸ್ವತಿ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಮಹಾಸಭೆಯಲ್ಲಿ ಕಾರ್ಯದರ್ಶಿ ರತ್ನ ಕುಮಾರ್ ಎಂ. ಅವರು ಗತ ವಾರ್ಷಿಕ ಸಭೆಯ ವರದಿಯನ್ನು ಮಂಡಿಸಿ ನಂತರ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಗೆ ತಿಳಿಸಿದರು. 



ನಂತರ ೨೦೧೨-೧೫ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಮುಂಬಯಿನ ಉದ್ಯಮಿ, ಸಮಾಜ ಸೇವಕ ವಿಶ್ವತುಳು ಸಮ್ಮೇಳನೋ ಸಮಿತಿಯ ಉಪಾಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.



ಗೌರವಾಧ್ಯಕ್ಷರುಗಳಾಗಿ ದಿವಾಕರ ಎಸ್.ಶೆಟ್ಟಿ ಸಾಂಗ್ಲಿ ಮತ್ತು ದಾಮೋದರ ನಿಸರ್ಗ, ಕಾರ್ಯದರ್ಶಿಯಾಗಿ  ಮಂಗಳೂರು ರತ್ನ ಕುಮಾರ್ ಎಂ., ಕೋಶಾಧಿಕಾರಿಯಾಗಿ ಜಯಕರ ಶೆಟ್ಟಿ ಇಂದ್ರಾಳಿ, ಸಹ ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ವಾಳ್ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ನಿಟ್ಟೆ ಶಶಿಧರ್ ಶೆಟ್ಟಿ, ಚಂದ್ರಹಾಸ ದೇವಾಡಿಗ ಬೆದ್ರ, ಶ್ರೀನಿವಾಸ ಮಂಕುಡೆ ಸಾಂಗ್ಲಿ, ವಿಜಯಕುಮಾರ್ ಕುಲಶೇಖರ ಮತ್ತು ಶ್ರೀಮತಿ ಜಯಂತಿ ಎಸ್.ಬಂಗೇರಾ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.




ನಿರ್ಗಮನ ಅಧ್ಯಕ್ಷ ಲ| ದಿವಾಕರ್ ಎಸ್.ಶೆಟ್ಟಿ ಅವರು ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ, ಪುಷ್ಫಹಾರವನ್ನಿತ್ತು, ಪೇಟ ಧರಿಸಿ ಧರ್ಮಪಾಲ್ ಯು.ದೇವಾಡಿಗ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿ ಶುಭಹಾರೈಸಿದರು. ಬಳಿಕ ತುಳು ಲಿಪಿ ಮೂಲಕ ಮದ್ರಾಸ್‌ನಲ್ಲಿ ಮಕ್ಕಳಿಗೆ ತುಳುಭಾಷೆಯನ್ನು ಅಭ್ಯಾಸಿಸುವ ಹಾಗೂ ತುಳು ಮಾತೆಯ ಅನನ್ಯ ಸೇವೆಗೈಯುವ ಶ್ರೀಮತಿ ಸರಸ್ವತಿ ಭಟ್ ಅವರನ್ನು ಶ್ರೀಮತಿ ಸಹನಾ ಚಂದ್ರಹಾಸ್ ಅವರು ಒಕ್ಕೂಟದ ಪರವಾಗಿ ಸನ್ಮಾನಿಸಿದರು.


ಈ ಮುನ್ನ ಅಗಲಿದ ಶ್ರೇಷ್ಠ ತುಳು ಸಾಹಿತಿ ವೆಂಕಟ್ರಾಯ ಪುಂಚಿತ್ತಾಯ ಅವರ ಸೇವೆಯನ್ನು ಸ್ಮರಿಸಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಒಕ್ಕೂಟದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಧರ್ಮಪಾಲ್  ದೇವಾಡಿಗ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯನೀಯ ಡಾ| ಡಿ.ವಿರೇಂದ್ರ ಹೆಗ್ಗಡೆ ಅವರ ಅನುಗ್ರಹದಿಂದ ವಿಶ್ವ ತುಳು ಸಮ್ಮೇಳನೋ ಸಂಭ್ರಮದ ವೇಳೆ ಕರ್ಮಭೂಮಿಯ ಮಹಾರಾಷ್ಟ್ರ ರಾಜ್ಯದಾದ್ಯಂತ ತುಳುವರ ಏಕತೆಗೆ ಶ್ರಮಿಸುವ ಭಾಗ್ಯ ನನ್ನ ಪಾಲಿಗೆ ಒದಗಿತ್ತು. ಅದನ್ನೇ ಮತ್ತೆ ಪುಣ್ಯಧಿ ಕೆಲಸವಾಗಿರಿಸಿ ಭವಿಷ್ಯತ್ತಿನ ದಿನಗಳಲ್ಲಿ ತುಳು ಭಾಷಾ ಸಂಸ್ಕೃತಿ, ಭಾಷಾ ಗೌರವದ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ. ತುಳುಭಾಷೆಯ ಸೇವೆಗೆ ಈ ಉನ್ನತ ಸ್ಥಾನವನ್ನು ನನ್ನ ಹೆಗಲಮೇಲಿರಿಸಿದ ನಿಮ್ಮೆಲ್ಲರಿಗೂ ಅಭಾರಿಯಾಗಿದ್ದೇನೆ. ತಾವೆಲ್ಲರೂ ನನ್ನ ಮೇಲಿರಿಸಿದ ವಿಶ್ವಾಸಕ್ಕೆ ತುಳುಮಾತೆಯ ಸೇವೆಗೈದು ಋಣ ತೀರಿಸುವಲ್ಲಿ ಶ್ರಮಿಸುತ್ತೇನೆ ಎಂದರು.


ರಾಜೇಶ್ ಆಳ್ವ ಬದ್ಯಡ್ಕ, ರವಿ ಕುಮಾರ್, ಗಂಗಾಧರ್ ಕಿದಿಯೂರು, ದಾಮೋದರ ಸುವರ್ಣ, ಉಗ್ಗಪ್ಪ ಪೂಜಾರಿ, ವಿಜಯಕುಮಾರ್ ಹೆಬ್ಬಾರ್, ಬಿ.ಪಿ ಶ್ರೇಣಿ ಕಾಸರಗೋಡು, ಮೋಹನ್‌ದಾಸ್ ಭಂಡಾರಿ, ಶ್ರೀಮತಿ ಜಯಂತಿ ಎಸ್.ಬಂಗೇರಾ, ಎಸ್.ಕೆ ಶ್ರೀಯಾನ್, ಜೆ.ಕೆ ಮೊಲಿ ಮುಂಬಯಿ, ಶ್ರೀನಿವಾಸ ಮಂಕುಡೆ ಸಾಂಗ್ಲಿ, ಕೆ.ಎಸ್.ಪೂಜಾರಿ ಬರೋಡಾ, ಎಸ್.ಕೆ.ಬೆಳುವಾಯಿ ಸೇರಿದಂತೆ ಹಲವಾರು ತುಳುಭಾಷಾ ಮಹಾನೀಯರು ಉಪಸ್ಥಿತರಿದ್ದು, ತುಳು ಕೂಟ (ರಿ.) ಮೂಡಬಿದ್ರೆ ಸಂಸ್ಥೆಯ ಆತಿಥ್ಯದಲ್ಲಿ ನಡೆಸಲಾದ ಸಭೆಯಲ್ಲಿ ಅಡ್ಯಾರು ಮಹಾಬಲ ಶೆಟ್ಟಿ, ಸುಭಾಶ್ಚದ್ರ ಪಡಿವಾಳ್ ಸ್ವಾಗತಿಸಿದರು. ವೇಣುಗೋಪಾಲ್ ಶೆಟ್ಟಿ ಸಭಾ ಕಲಾಪವನ್ನು ನಿರ್ವಹಿಸಿದರು. ಚಂದ್ರಹಾಸ ದೇವಾಡಿಗ ಬೆದ್ರ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-02

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕೊಂಕಣಿ ಕವಿ ಜೆ.ಬಿ.ಸಿಕ್ವೇರಾ ವಿಧಿವಶ
»‘ಬ್ಯಾರಿ ಗಾದೆರೊ ಚೆಲ್ತ್’ ಕಾರ್ಯಕ್ರಮ
»ಪಶು ಸಂಗೋಪನಾ ಇಲಾಖೆಯಿಂದ ಎಣಿಕೆದಾರರು, ಮೇಲ್ವಿಚಾರಕರಿಗೆ ತರಬೇತಿ
»ಪೊಲೀಸ್ ವ್ಯವಸ್ಥೆ ಎಬಿವಿಪಿಯೊಂದಿಗೆ ಶಾಮೀಲು: ಬೆಳ್ಳಾರೆ ಕಾಲೇಜ್ ವಿದ್ಯಾರ್ಥಿನಿಗೆ ಹಲ್ಲೆ ಖಂಡಿಸಿ ಪ್ರತಿಭಟನೆಯಲ್ಲಿ ಜಿ. ರಾಜಶೇಖರ್
»‘ವೈಟ್‌ಸ್ಟೋನ್ ಶಮಾ ಕೋರ್ಟ್’ ವಸತಿ ಸಮುಚ್ಚಯ ಉದ್ಘಾಟನೆ
»ವಿಶ್ವಾಸದ ಮನೆಗೆ ಕಾನೂನುಬದ್ಧ ಪರವಾನಿಗೆ ನೀಡಲು ಮನವಿ
»ಕರಂದಕ್ಕಾಡ್: ಸಾವಯವ ಫಾರ್ಮ್ ಸ್ಕೂಲ್‌ಗೆ ಶಿಲಾನ್ಯಾಸ
»ಅಂತಾರಾಷ್ಟ್ರೀಯ ಸಾಧಕಿಗೆ ಪ್ಲಾಸ್ಟಿಕ್ ನಿಷೇಧದ ಆತಂಕ!
»ಮೆಲ್ಕಾರ್-ರಂಗೇಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ
»ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
»ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
»ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
»ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
»ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
»ಸೆ.9.,ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಷ - ಮೈಸೂರು ವಿಭಾಗೀಯ ಮಟ್ಟದ ವಿಕ್ಷಕ,ಸಚಿವ ಕೆ.ಎಚ್ ಮುನಿಯಪ್ಪರಿಂದ ಮಾರ್ಗದರ್ಶನ
»ಸೆ9. ರ೦ದು ಜಿಲ್ಲಾ ಬಿ.ಜೆ.ಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಟ್ಲ್ಪಿಂಡಿಯ ಪ್ರಯುಕ್ತ ‘ಆಲಾರೆ ಗೋವಿಂದ’ ಕಾರ್ಯಕ್ರಮ
»ಮಡಿಕೇರಿ ದಸರಾ: ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧಾರ
»ನಕ್ಸಲರಿಗಾಗಿ ಮುಂದುವರಿದ ಕಾರ್ಯಾಚರಣೆ: ಎಎನ್‌ಎಫ್‌ನಿಂದ ವ್ಯಾಪಕ ಕೂಂಬಿಂಗ್; ಅಲೋಕ್‌ಕುಮಾರ್
»ಶಿಕ್ಷಣದ ಹೆಸರಿನಲ್ಲಿ ಭಾವನೆ ಚಿವುಟುವ ಕೆಲಸವಾಗದಿರಲಿ: ಡಾ. ಎಚ್. ಮಾಧವ ಭಟ್
»ಗುರುವಿನಲ್ಲಿ ಮುಗ್ಧ್ದತೆ, ಅಂತಃಕರಣವಿರಬೇಕು: ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ
»ಶಿಕ್ಷಣ ಸಾಮೂಹಿಕ ಜವಾಬ್ದಾರಿ: ಡಾ.ಬಿ.ಜೆ. ಸುವರ್ಣ
»ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
»ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
»ಕುಂದಾಪುರ: ಶಿಕ್ಷಕ -ಶಿಕ್ಷಣ ಸಪ್ತಾಹ ಉದ್ಘಾಟನೆ
»ಮಕ್ಕಳ ಮೇಲೆ ವೌಲ್ಯಗಳ ಹೇರಿಕೆ ಬೇಡ: ಡಾ.ಮಹಾಬಲೇಶ್ವರ ರಾವ್ (updated news)

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri