ಆದಿತ್ಯವಾರ, 26-01-2020
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item 

 
ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'

ಮುಂಬಯಿ ಮಹಾನಗರದಲ್ಲಿ ಸದ್ದು ಗದ್ದಲಗಳಿಲ್ಲದೆ, ಪ್ರಚಾರವನ್ನು ಬಯಸದೇ ಜನ ಸೇವಾ ನಿರತವಾದ ಸಂಘಟನೆಗಳು ಹಲವು. ಇವುಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾತ್ರವಲ್ಲ ಸಮಾಜಿಕ ಕಾರ್ಯಕ್ರಮಗಳೊಂದಿಗೆ ಗುರುತಿಸಿಕೊಂಡಿರುವ ಸಂಘಟನೆ “ರಂಗಚಾವಡಿ, ಮುಂಬಯಿ” ಒಂದಾಗಿದೆ. "ರಂಗಚಾವಡಿ" ಕಲಾ ಸಂಸ್ಥೆಯು ಮುಂಬಯಿ ಮಹಾನಗರದಲ್ಲಿ ಒಂದು ದಶಕದ ತನ್ನ ಸಾರ್ಥಕ ಕಲಾ ಪ್ರಯಾಣವನ್ನು ಸಮಸ್ತ ತುಳು ಕನ್ನಡಿಗರೊಂದಿಗೆ ಅರ್ಥಪೂರ್ಣವಾಗಿ ಹಂಚಿಕೊಂಡಿದೆ. ಕಲೆ ಮತ್ತು ಸಂಸ್ಕೃಯನ್ನು ಪ್ರೀತಿಸಿ ಆರಾಧಿಸುವ ಸಮಾನ ಮನಸ್ಸಿನ ತುಳು ಕನ್ನಡಿಗರ ಪರಿಶ್ರಮದಿಂದ ರೂಪುತಾಳಿದ ಸಂಘಟನೆಯಾಗಿದ್ದು 2002 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

ರತ್ನಾಕರ ಶೆಟ್ಟಿ ಮುಂಡ್ಕೂರು  ಇವರ ಘನ ಅಧ್ಯಕ್ಷತೆಯಲ್ಲಿ ಇದೇ ಸೆ. 8 ಮತ್ತು 9 ರಂದು ಮುಂಬಯಿಯ ಮಾಟುಂಗಾದ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ದಶಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಿದೆ. ಅಂದು ನಾಟಕಗಳ ಸ್ಪರ್ಧೆಗಳು ನಡೆಯಲಿದೆ. ಈ ಸಂಘಟನೆಯು ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆಗಳು ಹಲುವು.

2001 ರಿಂದ ನಿರಂತರವಾಗಿ "ಕಲಾ ಸಂಗಮ ನಾಟಕ ತಂಡ ಕುಡ್ಲ" ಇವರನ್ನು ಮುಂಬಯಿಗೆ ಆಹ್ವಾನಿಸಿ ನೀತಿಭೋದಕ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲು ಸಾರಥ್ಯ.

ಕಲಾವಿದರಿಗೆ ಅರ್ಥಪೂರ್ಣ ಸನ್ಮಾನ - ಪ್ರತಿಭಾ ಪುರಸ್ಕಾರ - ನಿಧಿ ಸಮರ್ಪಣೆ.

ಖ್ಯಾತ ಕಲಾವಿದ, ಚಿತ್ರನಟ ಸದಾಶಿವ ಸಾಲಿಯಾನ್ ಅವರಿಗೆ ಧನ ಸಹಾಯ.

ಇನ್ನಂಜೆ ಚಂದ್ರಹಾಸ ಗುರುಸ್ವಾಮೀಜಿಯವರ ಸಹಕಾರದೊಂದಿಗೆ ರಂಗನಟ ಚಂದ್ರಶೇಖರ ಸಿದ್ದಕಟ್ಟೆಯವರಿಗೆ ಐವತ್ತು ಸಾವಿರದ ನಿಧಿ ಅರ್ಪಣೆ.

ಅಶೋಕ್ ರಾವ್ ಅವರ ಕ್ಯಾನ್ಸರ್ ಕಾಯಿಲೆಗೆ ನೆರವು.

ಅನೇಕ ಆಶಕ್ತ ಕಲಾವಿದರಿಗೆ ತಲಾ ಹತ್ತು ಸಾವಿರ ದಂತೆ ಧನ ಸಹಾಯ.

ಶ್ರೀ ದುರ್ಗಾಪರಮೇಶ್ವರಿ ಶಾಲೆ ಕುಕ್ಕೂಂದೂರು ಇದರ ಶತಮಾನೋತ್ಸವಕ್ಕೆ ಸಹಕಾರ. ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಇತರ ಸಹಾಯ

ತವರೂರ ಕಲಾಸಂಘಟನೆಗಳನ್ನು ಮುಂಬಯಿಗೆ ಅಹ್ವಾನಿಸಿ ಅವರಿಂದ ನಾಟಕ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸಿ ನಿರಂತರವಾಗಿ ಕಲೆಗೆ ಪ್ರೋತ್ಶಾಹ ನೀಡುತ್ತಾ ಬಂದಿದೆ.

ನಾಟಕ ರಂಗದಲ್ಲಿ ಪ್ರಸಿದ್ದಿ ಪಡೆದ ಕಲಾವಿದರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಆನಾರೋಗ್ಯ ಪೀಡಿತ ರಂಗಕಲಾವಿದರಿಗೆ ವೈದ್ಯಕೀಯ ನೆರವು, ಬಡ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ಇತ್ಯಾದಿ.

ಕಲಾರಾಧಕರಿಗಾಗಿ, ಕಲಾರಾಧಕರಿಂದ, ಕಲಾರಾಧಕರೇ ತುಂಬಿರುವ ರಂಗಚಾವಡಿ ನಿರಂತರ ಸ್ಪಂದಿಸುವ ಕಲಾಸಂಸ್ಥೆಯಾಗಿರಲು ಸಹಕರಿಸಿದವರು ಮೂಳೂರು ಸಂಜೀವ ಡಿ. ಕಾಂಚನ್, ಪೊಲ್ಯ ಅಕ್ಷೀನಾರಾಯಣ ಶೆಟ್ಟಿ ಭಾಗವತರು, ರಂಗನಿರ್ದೇಶಕ ಜಗದೀಶ ಶೆಟ್ಟಿ ಕೆಂಚನಕೆರೆ ಹಾಗೂ ನಗರದ ಅನೇಕ ಗಣ್ಯರು.

ಕುಕ್ಕುಂದೂರು ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ರಂಗಚಾವಡಿಯು ದಶಮಾನೋತ್ಸವವನ್ನು ಆಚರಿಸುತ್ತಿದ್ದು ದಶಮಾನೋತ್ಸವದ ಸವಿನೆನಪು "ಸ್ಮರಣ ಸಂಚಿಕೆ" ಯಾಗಿ ಕಲಾಭಿಮಾನಿಗಳ ಕೈ ಸೇರಲಿದೆ. ಈ ಎರಡು ದಿನಗಳಲ್ಲಿ ಅನೇಕ ನಾಟಕಗಳ ಪ್ರದರ್ಶನ ಮಾತ್ರವಲ್ಲದೆ ಕೆಲವು ಕಲಾವಿದರನ್ನು ಆರ್ಥಿಕ ನಿಧಿಯೊಂದಿಗೆ ಗೌರವಿಸಲಾಗುವುದು.  ಈ ವೈವಿಧ್ಯಮಯ ಕಾರ್ಯಕ್ರಮಕ್ಕೆ ತುಳು ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ರಂಗ ಚಾವಡಿಯ ಪರವಾಗಿ ಗೌರವ ಅಧ್ಯಕ್ಷ, ಚಂದ್ರಶೇಖರ ಗುರು ಸ್ವಾಮಿ ಇನ್ನಂಜೆ,  ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಮುಂಡ್ಕೂರು ಉದ್ಯಮಿ, ಭಾಸ್ಕರ ಸುವರ್ಣ ಸಸಿಹಿತ್ಲು ಗೌ. ಪ್ರಧಾನ ಕಾರ್ಯದರ್ಶಿ, ವಸಂತಿ ಕೆ. ಶೆಟ್ಟಿ, ಕೋಶಾಧಿಕಾರಿ ಅವರು ವಿನಂತಿಸಿದ್ದಾರೆ.

ಈ ಸಂಘಟನೆಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳೆಂದರೆ, ಪ್ರಕಾಶ್ ಎಂ. ಶೆಟ್ಟಿ, ಸುರತ್ಕಲ್, ಸದಾನಂದ ಆಚಾರ್ಯ, ಕುಕ್ಕುಂದೂರು, ಕಾರ್ನೂರು ಮೋಹನ್ ರೈ, ವಿಕ್ರಮ ಸುವರ್ಣ, ಪ್ರೇಮ್ ಶೆಟ್ಟಿ, ಸುರತ್ಕಲ್, ನವೀನ್ ಶೆಟ್ಟಿ ಇನ್ನ, ಕಳತ್ತೂರು ವಿಶ್ವಾನಾಥ ಶೆಟ್ಟಿ, ಗುಣಪಾಲ ಶೆಟ್ಟಿ, ಕುಕ್ಕುಂದೂರು, ಶ್ರೀರಾಜ್ ರೈ, ಬೆಂಗಳೂರು, ನಂದಕುಮಾರ್ ಶೆಟ್ಟಿ, ಕುಕ್ಕುಂದೂರು, ನಿಶಾಂತ್ ಶೆಟ್ಟಿ ಕಿನ್ನಿಗೋಳಿ, ಗೋಪಾಲಕೃಷ್ಣ ಶೆಟ್ಟಿ, ಅಶೋಕ ಪಕ್ಕಳ, ಕೃಶ್ಣ ಶೆಟ್ಟಿ, ಪ್ರಕಾಶ್ ರೈ ಕಯ್ಯಾರ್, ರಮೇಶ್ ಶೆಟ್ಟಿ ಕಯ್ಯಾರ್, ರವಿ ಶೆಟ್ಟಿ, ಕುಕ್ಕುಂದೂರು, ಶಂಕರ್ ಪೂಜಾರಿ, ನಾಗೇಶ್ ನಾಯಕ್ ಹೊನ್ನಾವರ, ಪ್ರಾಕಾಶ್ ಶೆಟ್ಟಿ, (ಆಡ್ವಕೇಟ್), ಸುಧೀರ್ ಶೆಟ್ಟಿ, ಸಂತೂರು, ದಿನೇಶ್ ಕುಲಾಲ್, ಕರುಣಾಕರ ಶೆಟ್ಟಿ, ಪ್ರಕಾಶ ಕುಂಟನಿ, ಚಂದ್ರಶೇಖರ ಶೆಟ್ಟಿ, ಕುಕ್ಕುಂದೂರು, ಸುಭಾಶ್ ಶಿರಿಯಾ, ಸುಧಾಕರ ಕುಮಾರ್ ಕುಕ್ಕುಂದೂರು, ಪೂರ್ಣಿಮಾ ಸುಧಾಕರ ಶೆಟ್ಟಿ ಮತ್ತು ಸಂತೋಷ ಶೆಟ್ಟಿ, ಕುಕ್ಕೂಂದೂರು. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಕ್ರಮಾಂಕ 9792770076 ನ್ನು ಸಂಪರ್ಕಿಸಬಹುದು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಈಶ್ವರ ಎಂ. ಐಲ್
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-02

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri