ಶುಕ್ರವಾರ, 15-11-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ

ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ

ಅಟ್ಲಾಂಟಾ (ಅಮೆರಿಕ) : ಕನ್ನಡದಲ್ಲಿ ಶಾಸ್ತ್ರಭಾಷೆಯನ್ನು ಬೆಳೆಸಲು ವಿಜ್ಞಾನದ ಆರಾಧಕರಾದ ಅಮೆರಿಕದ ಕನ್ನಡಿಗರು ಸಹಾಯ ಮಾಡಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಚಂದ್ರಶೇಖರ ಕಂಬಾರ ಶುಕ್ರವಾರ ಸಂಜೆ (ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ) ಇಲ್ಲಿ ಕರೆ ನೀಡಿದರು.

ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ ಇಲ್ಲಿನ ಭವ್ಯ ಜಾರ್ಜಿಯಾ ಸಮ್ಮೇಳನ ಸಭಾಂಗಣದಲ್ಲಿ ಆರಂಭಗೊಂಡ ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕನ್ನಡದಲ್ಲಿ ಕಥೆ, ಕಾದಂಬರಿ, ಕಾವ್ಯ ಸಾಹಿತ್ಯ ಕೃಷಿ ಅಗಾಧವಾಗಿ ನಡೆದಿದೆ. ಅದಕ್ಕೆ ಕೊರತೆಯೇನೂ ಇಲ್ಲ. ಆದರೆ ಶಾಸ್ತ್ರಸಾಹಿತ್ಯದ ಕೊರತೆ ತುಂಬ ಇದೆ. ಅದನ್ನು ತುಂಬಬೇಕಾದ ಅಗತ್ಯ ಇದೆ. ಆ ಕೆಲಸವನ್ನು ಅಮೆರಿಕದಲ್ಲಿನ ಕನ್ನಡಿಗರು ಮಾಡಬೇಕು ಎಂದು ಅವರು ಬಯಸಿದರು.

ತಾವು 1968ರಲ್ಲಿ ಅಮೆರಿಕಕ್ಕೆ ಬಂದುದನ್ನು ನೆನಪಿಸಿಕೊಂಡ ಅವರು, `ಆಗ ಅಮೆರಿಕದಲ್ಲಿ ಕೆಲವೇ ನೂರು ಕನ್ನಡಿಗರು ಇದ್ದರೆ ಈಗ ಅವರ ಸಂಖ್ಯೆ ಸಾವಿರ ಸಾವಿರ ಇದೆ. ಜತೆಗೆ ಅವರು ಸಂಘಟಿತರಾಗಿ ಹೀಗೆ ಕನ್ನಡ ಸಮ್ಮೇಳನ ಏರ್ಪಡಿಸುವುದನ್ನು ನೋಡಿದರೆ ಹೆಮ್ಮೆ ಆಗುತ್ತದೆ` ಎಂದರು.

`ಭದ್ರ ಭವಿಷ್ಯವನ್ನು ಹುಡುಕಿಕೊಂಡು ಅಮೆರಿಕಕ್ಕೆ ಬರುವ ಜನರಿಗೆ ನೆನಪುಗಳು ಇಲ್ಲ. ಅವರಿಗೆ ಬರೀ ಭವಿಷ್ಯದ ಯೋಚನೆ. ಹಾಗಾಗಿ ಅಮೆರಿಕ ಭೌತಿಕವಾದವನ್ನು ಪ್ರತಿಪಾದಿಸಿದರೆ ಭಾರತ ಮೌಲಿಕ ಬದುಕನ್ನು ಪ್ರತಿಪಾದಿಸುತ್ತದೆ. ಅಲ್ಲಿ ಬೆಳೆದ ಧರ್ಮಗಳು, ಮತಗಳು, ಮಹಾಕಾವ್ಯಗಳು ಇದನ್ನೇ ಹೇಳುತ್ತವೆ` ಎಂದು ಕಂಬಾರರು ನುಡಿದರು.

ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ಮನುಷ್ಯನಲ್ಲಿ ಧರ್ಮ, ದೇಶ ಮತ್ತು ಭಾಷೆಯ ಸೆಳೆತ ಅಗಾಧವಾದುದು ಎಂಬುದಕ್ಕೆ ಈ ಸಮ್ಮೇಳನ ದೊಡ್ಡ ಉದಾಹರಣೆ` ಎಂದರು. `ಅಮೆರಿಕದಲ್ಲಿ ಇರುವವರಿಗೆ ಕನ್ನಡದ ಧ್ಯಾನ, ಕನ್ನಡ ನಾಡಿನಲ್ಲಿ ಇರುವವರಿಗೆ ಅಮೆರಿಕೆಯ ಧ್ಯಾನ` ಎಂದರು.

ಕನ್ನಡ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ` ಚಂದ್ರು ಅವರು, `ಕರ್ನಾಟಕದಲ್ಲಿ ಕನ್ನಡ ಉಳಿಸುವುದಕ್ಕೆ ನಿಮ್ಮಿಂದ ಕಲಿಯುವುದು ಬಹಳ ಇದೆ` ಎಂದು ಅಮೆರಿಕದ ಕನ್ನಡಿಗರ ಬಗ್ಗೆ  ಪ್ರಶಂಸೆ ವ್ಯಕ್ತಪಡಿಸಿದರು.

 `ಕಳೆದ ಸಾರಿ ನಡೆದ ಅಕ್ಕ ಸಮ್ಮೇಳನದ ಬಗೆಗೆ ಅಸಮಾಧಾನದ ಮಾತು ಆಡಿದ ಸರ್ಕಾರದ ಅಧಿಕಾರಿಗಳ ಸಲುವಾಗಿ` ಅವರು ಇಲ್ಲಿ ವಿಷಾದ ವ್ಯಕ್ತಪಡಿಸಿದರು. `ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುವಂಥದು ಏನೂ ಆಗಿರಲಿಲ್ಲ. ಆಗಲೂ ಸಮ್ಮೇಳನವನ್ನು ಚೆನ್ನಾಗಿಯೇ ಏರ್ಪಡಿಸಲಾಗಿತ್ತು` ಎಂದು  ಸ್ಪಷ್ಟಪಡಿಸಿದರು.

 ಆದಿಚುಂಚನಗಿರಿ ಮಠದ ಕಿರಿಯ ಸ್ವಾಮಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ, `ಅಮೆರಿಕದ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡದ ಪ್ರೀತಿಯನ್ನು ಕಲಿಸಬೇಕು, ಇಲ್ಲವಾದರೆ ಮುಂದೆ ಇಂಥ ಸಮ್ಮೇಳನಗಳು ನಡೆಯದೇ ಹೋಗಬಹುದು` ಎಂದು ಆತಂಕ ವ್ಯಕ್ತಪಡಿಸಿದರು.

ರಾಮಕಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ, ತುಮಕೂರಿನ ರಾಮಕಷ್ಣ ಮಠದ ವೀರೇಶಾನಂದ ಸ್ವಾಮೀಜಿ ಮತ್ತು ವಚನಾನಂದ ಸ್ವಾಮೀಜಿ, ವಿದ್ಯಾಭೂಷಣರು, ಅಕ್ಕ ಸಂಘಟನೆ ಕಾರ್ಯಾಧ್ಯಕ್ಷ ಅಮರನಾಥಗೌಡ, ಅಧ್ಯಕ್ಷ ದಯಾಶಂಕರ ಅಡಪ್ಪ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಎಸ್. ವಿ.ರಾಮಚಂದ್ರಯ್ಯ, ಸಮ್ಮೇಳನದ ಪ್ರಮುಖ ಪ್ರಾಯೋಜಕ ಯುಎಲ್‌ಬಿ ರಿಯಾಲ್ಟಿ ಸಂಸ್ಥೆಯ ಪ್ರದೀಪ ಕುಮಾರ್ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಕ್ಕ ಕಾರ್ಯದರ್ಶಿ ನಾಗಶಂಕರ್ ಸ್ವಾಗತಿಸಿದರು. ನೃಪತುಂಗ ಕನ್ನಡ ಕೂಟದ ಅಧ್ಯಕ್ಷ ಎಸ್.ರಾಮಸ್ವಾಮಿ ವಂದಿಸಿದರು.

 ಕಾರ್ಯಕ್ರಮ ಆರಂಭ ಆಗುವುದಕ್ಕಿಂತ ಮುಂಚೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. `ಕರ್ನಾಟಕ ಸಂಪ್ರದಾಯದಿಂದ ಸಮಕಾಲೀನದವರೆಗೆ` ಎಂಬ ವಸ್ತು ಇಟ್ಟುಕೊಂಡು ಡಾ. ಮಾಯಾ ರಾವ್ ನೃತ್ಯ ಸಂಯೋಜನೆ ಮಾಡಿದ ಮಧು ನಟರಾಜ್ ನಿರ್ದೇಶನದ ನೃತ್ಯ ರೂಪಕ ಸಭೀಕರ ಮನ ಗೆದ್ದಿತು. ಶ್ವೇತಾ ವೆಂಕಟೇಶ್ ಅವರು ಕುವೆಂಪು ಅವರ `ಆನಂದಮಯ ಈ ಜಗವು` ಗಾಯನಕ್ಕೆ ಪೂರಕವಾಗಿ ಪ್ರದರ್ಶಿಸಿದ ನೃತ್ಯ ರೂಪಕ ಮತ್ತು ಅರ್ಚನಾ ಉಡುಪ ಅವರು ಶರೀಫರ ಹಾಡು ಪ್ರಸ್ತುತಪಡಿಸಿದ್ದು ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದವು. ಅಟ್ಲಾಂಟಾದ ಸ್ಥಳೀಯ ಕಲಾವಿದರಾದ ಪದ್ಮಜಾ  ಕೀಲಂ ಅವರ ಗಣೇಶ ವಂದನೆ ನೃತ್ಯದ ಮೂಲಕ ವೇದಿಕೆ ಕಾರ್ಯಕ್ರಮ ಆರಂಭಗೊಂಡವು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-02

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅನಿವಾಸಿ ಕನ್ನಡಿಗರು ಭಾರತದ ವಕ್ತಾರರು
»ಏಳನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ: ಶಾಸ್ತ್ರಭಾಷೆ ಬೆಳೆಸಲು ಕಂಬಾರ ಕರೆ
»ಥೈಲ್ಯಾಂಡ್‌ನಲ್ಲಿ ಜರುಗಿದ 7ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮ್ಮೇಳನ: ಕನ್ನಡಿಗರು ಎಂದರೆ ನಂಬಿಕಸ್ಥರು: ಡಿ.ಎಸ್. ವೀರಯ್ಯ
»ಕರ್ನಾಟಕ ರಾಜ್ಯದಲ್ಲಿ ಭಂಡವಾಳ ಹೂಡಿಕೆಗೆ ಬ್ರಿಟನಿನ್ನಲ್ಲಿ ಆಹ್ವಾನ
»ನ್ಯೂಜೆರ್ಸಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾನ ಮಹೂತ್ಸವ
»ಇಸ್ರೇಲ್ : ಕೊಂಕಣಿ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ
»ಶಿಕ್ಷಕಿ ಡೇನಿಯಲ್‌ ಮೆಹಲ್ಮನ್‌ ಕೊಲೆ ಪ್ರಕರಣ: ಬೆಂಗಳೂರು ಟೆಕ್ಕಿ ನ್ಯೂಜೆರ್ಸಿಯಲ್ಲಿ ಆತ್ಮಹತ್ಯೆ - ಕೊಲೆ ಶಂಕೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»Dr. Austin Prabhu Elected as the State Vice Council Chairman
»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri