ಬೆಂಗಳೂರು ಟೆಸ್ಟ್ :ಭಾರತ 5ಕ್ಕೆ 283 ರನ್ ;ಶತಕದಂಚಿನಲ್ಲಿ ವಿರಾಟ್ ಕೊಹ್ಲಿ |
ಪ್ರಕಟಿಸಿದ ದಿನಾಂಕ : 2012-09-02
ಬೆಂಗಳೂರು,
ಸೆ.1: ವಿರಾಟ್ ಕೊಹ್ಲಿಯವರ ವಿರಾಟ್ ಪ್ರದರ್ಶನದ (ಅಜೇಯ 93)ನೆರವಿನಿಂದ ಆರಂಭಿಕ
ಆಘಾತದಿಂದ ಚೇತರಿಸಿಕೊಂಡ ಭಾರತ ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ 5
ವಿಕೆಟ್ಗಳ ನಷ್ಟಕ್ಕೆ 283 ರನ್ ಕಲೆಹಾಕಿದೆ. ಇಲ್ಲಿ ಶನಿವಾರ ನಡೆದ ಎರಡನೆ
ದಿನದಾಟದಲ್ಲಿ ನ್ಯೂಝಿಲೆಂಡ್ನ್ನು ಮೊದಲ ಇನಿಂಗ್ಸ್ನಲ್ಲಿ 365 ರನ್ಗೆ ನಿಯಂತ್ರಿಸಿ
ಬ್ಯಾಟಿಂಗ್ ಮಾಡಿದ ಭಾರತೀಯರು ಒಂದು ಹಂತದಲ್ಲಿ 80 ರನ್ಗೆ 4 ವಿಕೆಟ್ನ್ನು
ಕಳೆದುಕೊಂಡಿದ್ದರು.
ಹೋರಾಟಕಾರಿ ಪ್ರದರ್ಶನ ನೀಡಿದ ಕೊಹ್ಲಿ ಎರಡನೆ ದಿನದಾಟದಂತ್ಯಕ್ಕೆ ತಂಡ ಉತ್ತಮ ಮೊತ್ತ
ಗಳಿಕೆಗೆ ಕಾರಣರಾದರು. ಸುರೇಶ್ರೈನಾ(55) ಹಾಗೂ ಎಂಎಸ್ ಧೋನಿ(46 ನಾಟೌಟ್) ಭಾರತ
ಚೇತರಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದರು. ಭಾರತ ತಂಡ ಕಿವೀಸ್ನ ಮೊದಲ
ಇನಿಂಗ್ಸ್ಗಿಂತ 82 ರನ್ಗಳ ಹಿನ್ನೆಡೆಯಲ್ಲಿದ್ದು 5 ವಿಕೆಟ್ನ್ನು ಹೊಂದಿದೆ.
ಶತಕದಂಚಿನಲ್ಲಿ ಕೊಹ್ಲಿ:
ಭಾರತಕ್ಕೆ ಆಸರೆಯಾದ ವಿರಾಟ್ ಕೊಹ್ಲಿಗೆ ಎರಡನೆ ಟೆಸ್ಟ್ ಶತಕಕ್ಕೆ ಇನ್ನು 7 ರನ್ಗಳ
ಅಗತ್ಯವಿದೆ. 4ನೆ ವಿಕೆಟ್ಗೆ ರೈನಾರೊಂದಿಗೆ 99 ರನ್ಗಳ ಜೊತೆಯಾಟವನ್ನು ನಡೆಸಿದ
ಕೊಹ್ಲಿ, ನಾಯಕ ಧೋನಿಯೊಂದಿಗೆ 6ನೆ ವಿಕೆಟ್ಗೆ ಮುರಿಯದ 104 ರನ್ ಜೊತೆಯಾಟವನ್ನು
ನಡೆಸಿದ್ದಾರೆ.
ವೇಗದ
ಬೌಲರ್ ಟಿಮ್ ಸೌಥಿ ಎಸೆತವನ್ನು ಬೌಂಡರಿಗೆ ಅಟ್ಟಿದ ದಿಲ್ಲಿ ದಾಂಡಿಗ ಕೊಹ್ಲಿ 5ನೆ
ಅರ್ಧಶತಕವನ್ನು ಪೂರೈಸಿದರು. ಭಾರತ 179 ರನ್ಗೆ 5 ವಿಕೆಟ್ ಕಳೆದುಕೊಂಡಿದ್ದಾಗ
ಕ್ರೀಸ್ಗಿಳಿದ ಧೋನಿ ಕಿವೀಸ್ ಸ್ಪಿನ್ನರ್ ಜೀತನ್ ಪಟೇಲ್ರನ್ನು ಗುರಿಯಾಗಿಸಿ ಬ್ಯಾಟ್
ಬೀಸಿದರು.
ಗಂಭೀರ್,
ಪೂಜಾರ ಹಾಗೂ ತೆಂಡುಲ್ಕರ್ ಅಲ್ಪ ಮೊತ್ತಕ್ಕೆ ಔಟಾದಾಗ ಜವಾಬ್ದಾರಿಯುತ ಬ್ಯಾಟಿಂಗ್
ಮಾಡಿದ ಕೊಹ್ಲಿ-ರೈನಾ ಜೋಡಿ ಕಿವೀಸ್ ಬೌಲರ್ಗಳನ್ನು ಬೆಂಡತ್ತಿ ತಂಡಕ್ಕೆ ಬಲ ನೀಡಿದರು.
7ನೆ ಅರ್ಧಶತಕ ಸಿಡಿಸಿದ ರೈನಾ(55ರನ್, 90 ಎ, 9 ಬೌ. 1 ಸಿ.) ಸೌಥಿಗೆ ಮೂರನೆ
ಬಲಿಯಾದರು.
ಕಿವೀಸ್ 365:
ಇದಕ್ಕೂ ಮೊದಲು ಕಿವೀಸ್ ತಂಡ 365 ರನ್ಗಳಲ್ಲಿ ತನ್ನ ಮೊದಲ ಇನಿಂಗ್ಸ್ನ್ನು
ಮುಗಿಸಿತು. 6ಕ್ಕೆ 328 ರನ್ನಿಂದ ಆಟ ಆರಂಭಿಸಿದ ಪ್ರವಾಸಿಗರು ಕ್ಷಿಪ್ರವಾಗಿ 4
ವಿಕೆಟ್ಗಳನ್ನು ಕಳೆದುಕೊಂಡರು.ವ್ಯಾನ್ವಿಕ್(71) ಮೊದಲಿಗೆ ಔಟಾದರೆ, ಡೌಗ್
ಬ್ರೇಸ್ವೆಲ್43 ರನ್ಗೆ ರನೌಟಾದರು. ಜೀತನ್ ಪಟೇಲ್ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಟಿಮ್ ಸೌಥಿ ವಿಕೆಟ್ ಪಡೆದ ಸ್ಪಿನ್ನರ್ ಪ್ರಗ್ಯಾನ್ ಓಜಾ 99 ರನ್ಗೆ 5ನೆ ವಿಕೆಟ್ನ್ನು
ಪಡೆದರು. ಸ್ಕೋರ್ ವಿವರ
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್90.1 ಓವರ್ಗಳಲ್ಲಿ 365 ರನ್ ಗಪ್ಟಿಲ್
ಸಿ ಗಂಭೀರ್ ಬಿ ಓಜಾ 53, ಮೆಕಲಂ ಎಲ್ಬಿಡಬ್ಲೂ ಝಹೀರ್ 0, ವಿಲಿಯಮ್ಸನ್ ಎಲ್ಬಿಡಬ್ಲೂ
ಓಜಾ 17, ಟೇಲರ್ ಎಲ್ಬಿಡಬ್ಲೂ ಓಜಾ 113, ಫ್ಲಿನ್ ಎಲ್ಬಿಡಬ್ಲೂ ಅಶ್ವಿನ್ 33,
ಫ್ರಾಂಕ್ಲಿನ್ ಸಿ ರೈನಾ ಬಿ ಓಜಾ 8, ವ್ಯಾನ್ವಿಕ್ ಸಿ ರೈನಾ ಬಿ ಖಾನ್ 71,
ಬ್ರೇಸ್ವೆಲ್ ರನೌಟ್ 43, ಸೌಥಿ ಎಲ್ಬಿಡಬ್ಲೂ ಓಜಾ 14, ಪಟೇಲ್ ಸಿ ಗಂಭೀರ್ ಬಿ ಯಾದವ್
0, ಬೌಲ್ಟ್ ನಾಟೌಟ್ 2, ಇತರ 11.
ವಿಕೆಟ್ಪತನ:
1-0, 2-63, 3-89, 4-196, 5-215, 6-246, 7-345, 8-353, 9-353, 10-365
ಬೌಲಿಂಗ್: ಓಜಾ 28.1-10-99-5, ಝಹೀರ್ 22-2-83-2, ಯಾದವ್ 16-1-90-1, ಅಶ್ವಿನ್
24-5-82-1.
ಭಾರತ ಪ್ರಥಮ ಇನಿಂಗ್ಸ್78 ಓವರ್ಗಳಲ್ಲಿ 5ಕ್ಕೆ 283 ರನ್ ಗೌತಮ್
ಗಂಭೀರ್ ಬಿ ಸೌಥಿ 2, ವೀರೇಂದ್ರ ಸೆಹ್ವಾಗ್ ಸಿ ಫ್ಲೈನ್ ಬಿ ಬ್ರೇಸ್ವೆಲ್ 43,
ಚೇತೇಶ್ವರ ಪೂಜಾರ ಸಿ ಬೌಲ್ಟ್ ಬಿ ಸೌಥಿ 9, ಸಚಿನ್ ತೆಂಡುಲ್ಕರ್ ಸಿ ಬ್ರೆಸ್ವೆಲ್ 17,
ವಿರಾಟ್ಕೊಹ್ಲಿ 93 ನಾಟೌಟ್, ಸುರೇಶ್ರೈನಾ ಸಿ ವ್ಯಾನ್ವಿಕ್ ಬಿ ಸೌಥಿ 55,
ಎಂಎಸ್ಧೋನಿ 46 ನಾಟೌಟ್, ಇತರ 18. ವಿಕೆಟ್ಪತನ: 1-5, 2-27, 3-67, 4-80, 5-179 ಬೌಲಿಂಗ್: ಬೌಲ್ಟ್ 19-2-75-0, ಸೌಥಿ 15-4-35-3, ಬ್ರೇಸ್ವೆಲ್ 15-4-66-2, ಫ್ರಾಂಕ್ಲಿನ್ 10-4-17-0, ಪಟೇಲ್ 19-5-78-0.
ಹೈಲೈಟ್ಸ್
- ವಿರಾಟ್ಕೊಹ್ಲಿ
ಕಳೆದ 5 ಇನಿಂಗ್ಸ್ ಗಳಲ್ಲಿ ನಾಲ್ಕು ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ.
ಆಸ್ಟ್ರೇಲಿಯದ ವಿರುದ್ಧ 75, 116, 22 ರನ್ ಹಾಗೂ ನ್ಯೂಝಿಲೆಂಡ್ ವಿರುದ್ಧ 58 ಹಾಗೂ 93
ನಾಟೌಟ್ ಸ್ಕೋರ್ ದಾಖಲಿಸಿದ್ದಾರೆ. ಕೊಹ್ಲಿ ನ್ಯೂಝಿಲೆಂಡ್ ವಿರುದ್ಧ 2ನೆ ಹಾಗೂ
ಟೆಸ್ಟ್ನಲ್ಲಿ 5ನೆ ಅರ್ಧಶತಕವನ್ನು ಸಿಡಿಸಿದರು. 93 ನಾಟೌಟ್ ಕೊಹ್ಲಿಯ ಎರಡನೆ ಗರಿಷ್ಠ
ಸ್ಕೋರ್. 2010ರ ಜನವರಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಅಡಿಲೇಡ್ನಲ್ಲಿ 116 ರನ್
ಗರಿಷ್ಠ ಸ್ಕೋರಾಗಿದೆ. ಸುರೇಶ್ರೈನಾ(55ರನ್) ಟೆಸ್ಟ್ ನಲ್ಲಿ 7ನೆ ಹಾಗೂ ನ್ಯೂಝಿಲೆಂಡ್
ವಿರುದ್ಧ ಮೊದಲ ಅರ್ಧಶತಕವನ್ನು ಸಿಡಿಸಿದರು.
- ಟಿಮ್ ಸೌಥಿ(3/35) ಭಾರತದ ವಿರುದ್ಧ ಶ್ರೇಷ್ಠ ಬೌಲಿಂಗ್ ನಡೆಸಿದರು.
- ನ್ಯೂಝಿಲೆಂಡ್ (365ರನ್) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಭಾರತದ ವಿರುದ್ಧ ಗರಿಷ್ಠ ಸ್ಕೋರನ್ನು ದಾಖಲಿಸಿತು.
- ಪ್ರಗ್ಯಾನ್
ಓಜಾ(5/99) ಟೆಸ್ಟ್ ನಲ್ಲಿ ಮೂರನೆ ಬಾರಿ ಐದು ವಿಕೆಟ್ಗಳನ್ನು ಕಬಳಿಸಿದರು. ಓಜಾ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿವೀಸ್ ವಿರುದ್ಧ 5 ವಿಕೆಟ್ ಗೊಂಚಲು ಪಡೆದ ಮೂರನೆ
ಭಾರತದ ಬೌಲರ್. ನರೇಂದ್ರ ಹಿರ್ವಾನಿ(1988, 6/59), ಅನಿಲ್ ಕುಂಬ್ಳೆ(1995, 5/81)
ಐದಕ್ಕಿಂತ ಹೆಚ್ಚು ವಿಕೆಟ್ನ್ನು ಪಡೆದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : varthabharthi ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-09-02
|
|
|