ಶುಕ್ರವಾರ, 06-12-2019
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದಾತ ಕನ್ನಡಿಗನೇ..?
Latest news item ನಂದಿನಿಯ ಮೇವು ತಿಂದವರು ಯಾರು?;ತನಿಖೆಗೆ ಆದೇಶ
Latest news item ಶಾಸಕ ರಘುಪತಿ ಭಟ್‌ ರಿಗೆ ಬೆದರಿಕೆ ಕರೆ
Latest news item ಕಡೇಶ್ವಾಲ್ಯದಲ್ಲಿ ನರೇಗಾದಡಿ ಸಾಲು ಮರ ಗಿಡ ನೆಡುವ ಕಾಮಗಾರಿಗೆ ಚಾಲನೆ
Latest news item ಖ್ಯಾತ ಕಲಾವಿದ ನೆಬ್ಬೂರು ನಾರಾಯಣ ಭಾಗವತರಿಗೆ ದೇರಾಜೆ ಪ್ರಶಸ್ತಿ
Latest news item ದ.ಕ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ
Latest news item ಅಂದು ಸ್ವಾತಂತ್ರಕ್ಕಾಗಿ... ಇಂದು ತುಂಡು ಭೂಮಿಗಾಗಿ!: ಕರುಣಾಕರ ಉಚ್ಚಿಲ್‌ರ ಮುಗಿಯದ ಹೋರಾಟ
Latest news item ಶಿರೂರು: ‘ಗ್ರೀನ್ ವ್ಯಾಲಿ’ಯಲ್ಲಿ ಶಿಕ್ಷಕರ ದಿನಾಚರಣೆ
Latest news item ಕುದಿ ವಸಂತ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನಿಸಿದ ರಾಷ್ಟ್ರಪತಿ
Latest news item ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
Latest news item ಎಂಜಿ ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಕೊಳ, ಕಾರಂಜಿ ಸೊಬಗು
Latest news item ಉದ್ಯಾನ ನಗರಿಯಲ್ಲಿ ನಕಲಿ ವೈದ್ಯರು: ರಹಸ್ಯ ಕಾರ್ಯಾಚರಣೆಯಲ್ಲಿ ವಿವರ ಬಯಲು
Latest news item ವಿದ್ಯಾರ್ಥಿನಿ ಮೇಲಿನ ಎಬಿವಿಪಿ ಹಲ್ಲೆ ಖಂಡಿಸಿ ಬೆಳ್ಳಾರೆಯಲ್ಲಿ ಸಿಎಫ್‌ಐ ಪ್ರತಿಭಟನೆ
Latest news item ಹೆಚ್ಚಾಯ್ತು ಸಿಂಗ್ ಸಂಪುಟದ ಕುಬೇರರ ಸಂಪತ್ತು: ರಾಜೀವ್ ಶುಕ್ಲಾ ಸಂಪತ್ತಿನಲ್ಲಿ ಗಣನೀಯ ಏರಿಕೆ, ಖರ್ಗೆ, ಕೃಷ್ಣ ಕೋಟ್ಯಧಿಪತಿಗಳು, ಮೊಯ್ಲಿ ಲಕ್ಷಾಧೀಶ್ವರ... ಪತ್ನಿ ಕೋಟ್ಯಧೀಶೆ
Latest news item ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ವಿದೇಶಕ್ಕೆ ಹಾರಲು ಮತ್ತೊಂದು ತಂಡ ತಯಾರಿ: 16 ಶಾಸಕರು, 7 ಅಧಿಕಾರಿಗಳ ವಿದೇಶ ಪ್ರವಾಸ ಪಟ್ಟಿ ಸಿದ್ಧ
Latest news item ಡಾ.ಜಾಫರ್ ಪಾಸ್‌ಪೋರ್ಟ್ ಪೊಲೀಸ್ ವಶಕ್ಕೆ | ಗೋವಾ ನಂಟಿನ ತನಿಖೆ | ನಯೀಮ್ ಸಿದ್ದಿಕಿ ವಿಚಾರಣೆ ಸ್ಥಳ ಬದಲು | ಕಾರವಾಳಿ ಪ್ರದೇಶಕ್ಕೆ ಹೊರಟ ಸಿಸಿಬಿ ತಂಡ
Latest news item ನಕ್ಸಲ್ ನಿಗ್ರಹ ಪಡೆ ಗುಂಡಿಗೆ ನಕ್ಸಲ್ ಬಲಿ
Latest news item



 

 
158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್

ಮುಂಬಯಿ: “ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕವಾಗಿದ್ದು, ಮಾನವ ಧರ್ಮವೇ ಶ್ರೇಷ್ಠ ಎನ್ನುವುದನ್ನು ಸಾರಿದ ಮಹಾನ್ ಜೀವಂತ ಸಂತ ಆಗಿದ್ದರು. ಜಯ ಸಿ.ಸುವರ್ಣರು ಸಮಾಜ ಸೇವಕರಿಗೆ ಪ್ರೇರಕ ಶಕ್ತಿಯಾಗಿದೆ. ಶ್ರೇಷ್ಠ ಸಮಾಜ ಸೇವಕ ಸುವರ್ಣರ ಬದುಕು ಮತ್ತು ಸಾಧನೆಯ ಬಗ್ಗೆಯು ಇಂಗ್ಲೀಷ್ ಆವೃತ್ತಿ ಬಿಡುಗಡೆಗೊಳಿಸಿರುವುದು ಅಭಿನಂದನೀಯ ಹಾಗೂ ಅರ್ಥಪೂರ್ಣವಾದುದು. ಮುಂದಿನ ದಿನಗಳಲ್ಲಿ ಇದನ್ನು ಹಿಂದಿ ಭಾಷೆಯಲ್ಲಿ ಪ್ರಕಟಿಸುವಂತೆ ನಾನು ಪ್ರಯತ್ನಿಸುತ್ತೇನೆ”ಎಂದು ಮಹಾರಾಷ್ಟ್ರ ರಾಜ್ಯದ ಮಾಜಿ ಗೃಹ ಸಚಿವ, ಹಾಲಿ ಶಾಸಕ ಕೃಪಾಶಂಕರ್ ಸಿಂಗ್ ತಿಳಿಸಿದರು.






ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಸಂಸ್ಥೆಯು ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ೧೫೮ನೇ ಜಯಂತ್ಯೋತ್ಸವವನ್ನು ಸಂಭ್ರಮಿಸಿದ್ದು, ಬಳಿಕ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಎಸೋಸಿಯೇಶನ್ ಅಧ್ಯಕ್ಷ ಎಲ್.ವಿ.ಅವಿನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದ  ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೃಪಾಶಂಕರ್ ಮಾತನಾಡಿದರು.





ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಡುಪಿ ನಗರ ಸಭೆಯ ಅಧ್ಯಕ್ಷ ಕಿರಣ್ ಕುಮಾರ್, ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ   ಇದರ ಅಧ್ಯಕ್ಷ  ಚಂದ್ರಶೇಖರ ಪಾಲೆತ್ತಾಡಿ, ಪೊವಾಯಿ ಪಂಚಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದ ಜಗಧೀಶ್ ಸುವರ್ಣ  ಉಪಸ್ಥಿತರಿದ್ದು ಗುರುವರ್ಯರ ಸಂದೇಶವನ್ನಿತ್ತು ಶುಭಹಾರೈಸಿದರು. 





ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಸಮಾಜ ಸೇವಕ ಉಮೇಶ್ ಬಂಗೇರ ಕಲ್ಯಾಣ್,ಹಿರಿಯ ಸಾಹಿತಿ ಬಿ.ಟಿ.ಸಾಲ್ಯಾನ್ ಮತ್ತು ಡಾ| ಅನುಸೂಯ ಬಿ.ಸಾಲ್ಯಾನ್ ದಂಪತಿ ಮಂಗಳೂರು, ಜಯ ಸಿ.ಸುವರ್ಣ ಮತ್ತು ಶ್ರೀಮತಿ ಲೀಲಾವತಿ ಜೆ.ಸುವರ್ಣ ದಂಪತಿ ಅವರನ್ನೊಳಗೊಂಡು ಗುರು ಪಬ್ಲಿಕೇಷನ್ ಪ್ರಕಟಿಸಿದ  Glance at the Life of Jaya C.Suvarnaಇಂಗ್ಲೀಷ್   ಕೃತಿಯನ್ನು ಕೃಪಾಶಂಕರ್ ಸಿಂಗ್ ಬಿಡುಗಡೆ ಗೊಳಿಸಿದರು.





ಕೃತಿಯ ಬಗ್ಗೆ ಎಸೋಸಿಯೇಶನ್‌ನ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಭಿನಂದನಾ ಭಾಷಣಗೈದು, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾ, ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದ ಸಾಧಕ ಜಯ ಸಿ.ಸುವರ್ಣ ಅವರ ಸಾಧನೆಯನ್ನು ಮನಗಂಡ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ೨೦೦೭ರಲ್ಲಿ ಬಿಲ್ಲವರ ಎಸೋಸಿಯೇಶನಿನ ಅಮೃತ ಮಹೋತ್ಸವದ ಸಂದರ್ಭದಲ್ಲಿ ಜಯ ಸಿ.ಸುವರ್ಣರ ಬದುಕು ಮತ್ತು ಸಾಧನೆ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅವರನ್ನು ಗೌರವಿಸಿತ್ತು. ಜಯ ಸುವರ್ಣ ಅವರ ಒಟ್ಟು ಸಾಧನೆಯ ಬಗ್ಗೆ ಯುವ ಪೀಳಿಗೆಯು ತಿಳಿಯಬೇಕು. ಯುವಜನಾಂಗವು ಮುಂದೆ ಬಂದು ಸಮಾಜ ಪರ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಗ್ರಂಥದ ಇಂಗ್ಲೀಷ್ ಕೃತಿಯನ್ನು ಇಂದಿಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಗುರು ಕಾಣಿಕೆಯ ಕೃತಿಯಾಗಿದೆ ಎಂದರು.



ನಾರಾಯಣ ಗುರುಗಳು ಅಸೃರ್ಶತೆ ನಿವರಣೆಗೆ ಮೌನ ಕ್ರಾಂತಿ ಮಾಡಿದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ನಾವೆಲ‌ಆ ಈಗ ಪ್ರಬುದ್ಧರೂ, ಪ್ರಬಲರೂ ಆಗಿದ್ದೇವೆ. ಸಾಮಾಜಿಕ  ಸಂಸ್ಥೆ ಹಾಗೂ ಸಾಮಾಜಿಕ ಕರ್ಯಕರ್ತರು ಒಂದೇ ಜಾತಿಗೆ ಸೀಮಿತವಾಗಿರಬಾರದು. ಕ್ರೀಯಾಶೀಲತೆ, ಮನಸ್ಸನ್ನು ಶುದ್ಧವಾಗಿಟ್ಟು ಮಾಡುವ ಕೆಲಸಕ್ಕೆ ಜಯ ಸಿಗಿತ್ತದೆ ಎಂಬುದನ್ನು ಜಯ ಸಿ.ಸುವರ್ಣರು ತೋರಿಸಿ ಕೊಟ್ಟಿದ್ದಾರೆ   ಎಂದು ಕಟಪಾಡಿ ಶಂಕರ ಪೂಜಾರಿ ನುಡಿದರು.



ಕಿರಣ್ ಕುಮಾರ್ ಮಾತನಾಡಿ ನಾರಾಯಣ ಗುರುಗಳ ಸೂತ್ರಗಳನ್ನು ಪಾಲಿಸಿದರೆ ದೇಶದ ಹಾಗೂ ಸಮಾಜದ ಅಭಿವೃದ್ಧಿಯಾಗಬಹುದು. ನಾರಾಯಣ ಗುರುಗಳು ಕೇವಲ ಬಿಲ್ಲವರಿಗೆ ಗುರುಗಳಲ್ಲ, ಕೇರಳದಲ್ಲಿ ಎಲ್ಲಾ ಸಮಾಜದವರು ಗುರುಗಳನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾರಾಯಣ ಗುರುಗಳನ್ನು ಕೇವಲ ಓಟ್ ಬ್ಯಾಂಕ್‌ಗಾಗಿ ಬಳಸಿಕೊಂಡಿದ್ದಾರೆ. ರಾಜಕೀಯಕ್ಕೆ ನಾರಾಯಣ ಗುರುಗಳ ಭಾವಚಿತ್ರದ ಬ್ಯಾನರ್‌ಗಳ ಬಳಕೆ ಹೆಚ್ಚಾಗುತ್ತಿರುವುದು ವಿಪರಿತ ಸಂಗತಿ ಎಂದರು.




ಎಲ್.ವಿ.ಅವಿನ್  ಅಧ್ಯಕ್ಷೀಯ ಭಾಷಣಗೈದು,  ಸಮಾಜ ಪರ ಸೇವೆಯಲ್ಲಿ ಒಗ್ಗಟ್ಟು ಅಗತ್ಯ. ನಾರಾಯಣ ಗುರುಗಳ ತತ್ವಾಗಳಂತೆ ನಾವೆಲ್ಲಾ ಜಾತಿ-ಭೇದ ಮರೆತು ಸಮಾಜ ಸೇವೆ ಮಾಡಬೇಕು. ನಾರಾಯಣ ಗುರು ಜಯಂತಿಯ ಈ ಸುಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೂಡಿ ಸಮಾಜಸೇವೆ ಮಾಡುತ್ತಿದ್ದೇವೆ. ನಮ್ಮ ನಾಯಕ ಜಯ ಸಿ.ಸುವರ್ಣರು ತೋರಿಸಿದ ಹಾದಿಯಲ್ಲಿ ಅವರ ಮಾರ್ಗದರ್ಶನದೊಂದಿಗೆ ನಾವು ಜವಾಬ್ದಾರಿಯಿಂದ ಸಮಾಜ ಸೇವೆ ಮಾಡಬೇಕಿದೆ. ರಾಜಕೀಯ ನೇತಾರರು ಕೂಡ ಪಕ್ಷ ಭೇದ ಮರೆತು ಸಮಾಜ ಪರ ಕೆಲಸ ಮಾಡಬೇಕು    ಎಂದ ಕರೆಯಿತ್ತರು.


ಇದೇ ವೇಳೆ ಭಾರತ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ.ಆರ್ ಮುಲ್ಕಿ ಸೇರಿದಂತೆ ಮಹಾದಾನಿಗಳು ಮತ್ತಿತರ ಗಣ್ಯರನ್ನು ಅಧ್ಯಕ್ಷರು ಗೌರವಿಸಿದರು.


ಕಳೆದ ಗುರುವಾರ ಮುಂಜಾನೆಯಿಂದ ದ್ವಿದಿನಗಳ ಕಾರ್ಯಕ್ರಮವನ್ನಾಗಿಸಿ ಆಚರಿಸಲಾದ ಉತ್ಸವದಲ್ಲಿ ಪ್ರಭಾಕರ ಸಸಿಹಿತ್ಲು ಮತ್ತು ಸಂಗಡಿಗರು ೨೪ತಾಸುಗಳ ‘ಓಂ ನಮೋ ನಾರಾಯಣಾಯ ನಮಃ ಶಿವಾಯಃ’ ಜಪಯಜ್ಞ ನೆರವೇರಿಸಿದರು. ಎಸೋಸಿಯೇಶನ್‌ನ ಶ್ರೀ ಧನಂಜಯ ಶಾಂತಿ ಅವರು ಮಂಗಳಾರತಿ ನೆರವೇರಿಸಿ ಸದ್ಭಕ್ತರುಗಳನ್ನು ಹರಸಿದರು.


ಉತ್ಸವದಲ್ಲಿ ಶ್ರೀಮತಿ ಸುಧಾ ಎಲ್ ಅವಿನ್, ಉದ್ಯಮಿಗಳಾದ ದಾಮೋದರ್ ಸಿ.ಕುಂದರ್, ಬೆರ್ಮ ಸುವರ್ಣ, ಸುರೇಂದ್ರ ಎ.ಪೂಜಾರಿ, ಬಿ.ಆರ್ ಪೂಂಜಾ, ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ಆರ್.ಸುವರ್ಣ, ಸೇವಾದಳದ  ಮುಖ್ಯಸ್ಥ ಗಣೇಶ್ ಕೆ.ಪೂಜಾರಿ ಸೇರಿದಂತೆ ಮಹಾದಾನಿಗಳು  ಮತ್ತಿತರ ಅನೇಕ ಮಹಾನೀಯರು ಹಾಜರಿದ್ದರು.





ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಸಿ.ಟಿ.ಸಾಲ್ಯಾನ್, ಚಂದ್ರಶೇಖರ್ ಎಸ್.ಪೂಜಾರಿ ಮತ್ತು ಭಾಸ್ಕರ್ ಎಂ. ಸಾಲ್ಯಾನ್, ಗೌ| ಪ್ರ| ಕೋಶಾಧಿಕಾರಿ ಭಾಸ್ಕರ್  ವಿ.ಬಂಗೇರಾ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. 

ಸಾಮಾಜಿಕ ಹಾಗೂ ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್‌ದಾಸ್ ಜಿ.ಪೂಜಾರಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಜ್ಯೋತಿ ಕೆ.ಸುವರ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಧರ್ಮೇಶ್ ಸಾಲ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಾಹಿಸಿದರು. ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಧನಂಜಯ ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಧಾರ್ಮಿಕ ಸಮಿತಿಯ ಗೌ| ಕಾರ್ಯದರ್ಶಿ ರವೀಂದ್ರ ಎ. ಅವಿನ್ ದಾನಿಗಳನ್ನು ಪರಿಚಯಿಸಿ ವಂದನಾರ್ಪಣೆಗೈದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : (ವರದಿ / ಚಿತ್ರ: ರೋನ್ಸ್ ಬಂಟ್ವಾಳ್)
ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2012-09-01

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಬಿಲ್ಲವ ಜಾಗೃತಿ ಬಳಗದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ
»ರಜಕ ಸಂಘ ಮೀರಾರೋಡ್ - ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಕಾರ್ಯಕ್ರಮ
»ಮಳೆ ನೀರು ತಡೆಗೆ ರೂ. 70 ಕೋಟಿ ವೆಚ್ಚವಾದರೂ ಮಳೆ ಬಂದಾಗ ತಪ್ಪದ ಮುಂಬೈವಾಸಿಗಳ ಬವಣೆ
»ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ರಂಗ ತರಬೇತಿ ಶಿಭಿರ
»ಮುಂಬೈಯಲ್ಲಿ ಮುಸಲಧಾರೆ; ವಾಹನ ಸಂಚಾರ ಅಸ್ತವ್ಯಸ್ತ
»ನೂತನ ಕಲಾ ಸಂಸ್ಥೆ, ಚಿನ್ಮಯ ಆರ್ಟ್ಸ್ ಮುಂಬೈ ಉದ್ಘಾಟನೆ
»ಪಂಜ ನಲ್ಯಗುತ್ತು ಗುತ್ತಿನಾರು ಮಹಾಬಲ ಶೆಟ್ಟಿ ನಿಧನ
»ದಶಮಾನೋತ್ಸವದ ಸಡಗರದಲ್ಲಿ ಮುಂಬಯಿಯ 'ರಂಗ ಚಾವಡಿ'
»ತೀಯಾ ಸಮಾಜ ಮುಂಬಯಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ
»ಠಾಕ್ರೆ ಕುಟುಂಬದ ಮೂಲ ಬಿಹಾರ!: ದಿಗ್ವಿಜಯ್
»ಬಹುಮುಖ ಪ್ರತಿಭೆಯ ಕ್ರೀಡಾ ಪಟು - ಅಶ್ವಿತಾ ಲಿಂಗಪ್ಪ
»ಮುಂಬಯಿ: ಗಣೇಶ ಹಬ್ಬದ ಆಚರಣೆಯ ಸಂಭ್ರಮಕ್ಕೆ ಭರದ ಸಿದ್ದತೆ
»158ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಂಭ್ರಮಿಸಿದ ಬಿಲ್ಲವರ ಎಸೋಸಿಯೇಶನ್: ಬ್ರಹ್ಮಶ್ರೀ ನಾರಾಯಣ ಗುರುಗಳು ಸರ್ವ ಧರ್ಮದ ಪ್ರತೀಕರು: ಕೃಪಾಶಂಕರ್
»ಶಿವಸೇನಾ ಕಾರ್ಪೊರೇಟರ್ ಕೊಲೆ ಪ್ರಕರಣ:ಅರುಣ್ ಗಾವ್ಲಿಗೆ ಜೀವಾವಧಿ
»ಕಸಬ್ ಭದ್ರತೆಗೆ ರೂ. 50 ಕೋಟಿ, ಗಲ್ಲಿಗೇರಿಸಲು ಕೇವಲ 50 ರೂಪಾಯಿ
»ನೇತ್ರಾವತಿ ಎಸ್.ಕೋಟ್ಯಾನ್ ನಿಧನ
»ಶಿವಸೇನಾ ಪಾಲಿಕೆ ಸದಸ್ಯನ ಹತ್ಯೆ :ಮಾಜಿ ಭೂಗತ ಪಾತಕಿ ಅರುಣ್ ಗಾವ್ಳಿಗೆ ಜೀವಾವಧಿ
»ಮುಂಬಯಿ: ಬಿಲ್ಲವರ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 158ನೇ ಜಯಂತಿ ಉತ್ಸವಕ್ಕೆ ಚಾಲನೆ
»ದಹಿಸರ್ ಕಾಶಿಮಠದಲ್ಲಿ ಹೃದಯ ಹವನ ಆಚರಣೆ
»ಸಾಯನ್ ಗೋಕುಲದಲ್ಲಿ ಮಹಾಗಣಪತಿ ಯಾಗ
» ಮಹಾರಾಷ್ಟ್ರ ರಾಜ್ಯ ಆಂಗ್ಲಿಂಗ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ವಿಲಿಯಂ ಮಸ್ಕರೇನ್ಹಸ್ ಶಿರ್ತಾಡಿ ಆಯ್ಕೆ
» ಯುದ್ದ ಸ್ಮಾರಕ ಧ್ವಂಸ: ಒಬ್ಬನ ಬಂಧನ
»ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ) 2012 -15ರ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಗೌ.ಪ್ರ.ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ಟಾಳ್ ಆಯ್ಕೆ
»ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು ....
»ಹಣ ಗಳಿಕೆಯಲ್ಲೂ ಏಕ್ ಹೇ‘ಟೈಗರ್’!...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri